ಟೀಚರ್ : ರಾತ್ರಿ ಹೊತ್ತು ಸೊಳ್ಳೆ ಕಚ್ಚಿದರೆ ಏನು ಮಾಡುವುದು?
ಗುಂಡ : ನಿದ್ದೆಯಿಂದ ಎದ್ದು ಅದನ್ನು ಬಡಿದುಹಾಕಿ ಮತ್ತೆ ಮಲಗೋದು. ಅದಕ್ಕಿಂತ ಇನ್ನೇನು ಮಾಡಲಾದೀತು? ಅದನ್ನು ಎಡಗೈಲಿ ಹಿಡಿದು ಹಾಡು ಹೇಳಿಸಲು ನಾವೇನು ರಜನೀಕಾಂತಾ…..?
ಟೀಚರ್ : ಯಾಕಪ್ಪ ಎಗ್ಸಾಮ್ ಹಾಲ್ ನಲ್ಲಿ ವಿಸ್ಕಿ ಬಾಯಲ್ಲಿ ಹಿಡ್ಕೊಂಡು ಕೂತಿದೀಯಾ….?
ಸ್ಟೂಡೆಂಟ್ : ಮೇಡಂ, ಪ್ರತಿ ಎಗ್ಸಾಮ್ ನಲ್ಲೂ ಮಿನಿಮಮ್ 90 ತಗೋಬೇಕು ಅಂತ ನೀವೇ ಹೇಳಿದ್ರಲ್ಲ……
ಟೀಚರ್ : ಬಸ್ ಡ್ರೈವರ್ ಗೂ, ಕಂಡೆಕ್ಟರ್ ಗೂ ವ್ಯತ್ಯಾಸವೇನು?
ಗುಂಡ : ಮೇಡಂ, ಕಂಡಕ್ಟರ್ ಮಲಗಿದ್ರೆ ಯಾರೂ ಟಿಕೆಟ್ ತಗೊಳೋಕೆ ಆಗಲ್ಲ… ಆದರೆ ಡ್ರೈವರ್ ಮಲಗಿದ್ರೆ ಎಲ್ಲಾರೂ ಟಿಕೆಟ್ ತಗೋತಾರೆ……
ಇತ್ತೀಚೆಗೆ ತಮ್ಮ ವಠಾರಕ್ಕೆ ಹೊಸದಾಗಿ ಒಬ್ಬ ವಯೋವೃದ್ಧ ವ್ಯಕ್ತಿ ಮೂಲೆ ಮನೆಗೆ ಬಂದುದನ್ನು ರವಿ ಗಮನಿಸಿದ. ಅವರು ಬಹಳ ಹಸನ್ಮುಖಿ, ಲವಲವಿಕೆಯ ಹಾಗೂ ಈಸಿ ಗೋಯಿಂಗ್ ನೇಚರ್ ಸ್ವಭಾವದವರಾಗಿದ್ದರು. ಒಮ್ಮೆ ಅವರನ್ನು ಭೇಟಿಯಾಗಿ ರವಿ ಉತ್ಸಾಹದಿಂದ ಅವರ ಬಗ್ಗೆ ವಿವರಗಳನ್ನು ಕಲೆಹಾಕಿದ.
ರವಿ : ನಿಮ್ಮ ಹಿರಿಯ ವಯಸ್ಸನ್ನು ಗಮನಿಸಿದರೆ, ನಿಮ್ಮ ಬಾಡಿ ಅದಕ್ಕಿಂತ ಎಷ್ಟೋ ಭಿನ್ನವಾಗಿದೆ. ನಿಮ್ಮ ಸುಖೀ ಹಾಗೂ ಸ್ವಸ್ಥ ಜೀವನದ ರಹಸ್ಯವೇನು? ಬಹುಶಃ ತುಂಬಾ ವ್ಯಾಯಾಮ ಮಾಡ್ತೀರಿ ಅನ್ಸುತ್ತೆ. ಸಿಗರೇಟ್, ಹೆಂಡ ಮುಟ್ಟುವುದೇ ಇಲ್ಲ ಅನ್ಸುತ್ತೆ…..
ವೃದ್ಧ : ಹಾಗೇನಿಲ್ಲ ಬಿಡಿ, ನಾನು ಪ್ರತಿದಿನ 3 ಪ್ಯಾಕೆಟ್ ಸಿಗರೇಟ್ ಸೇದ್ತೀನಿ, ಪ್ರತಿ ರಾತ್ರಿ ತಪ್ಪದೆ ಒಂದೊಂದು ಬಾಟಲ್ ಸ್ಕಾಚ್ ಕುಡಿಯುತ್ತೀನಿ. ಮಸಾಲೆಭರಿತ ನಾನ್ ವೆಜ್ ಇಲ್ಲದಿದ್ದರೆ ನನಗೆ ಆಗುವುದೇ ಇಲ್ಲ. ಮತ್ತೆ…..ವ್ಯಾಯಾಮ, ಜಾಗಿಂಗ್, ವಾಕಿಂಗ್ ಇದಕ್ಕೆಲ್ಲ ನನಗೆ ಪುರಸತ್ತೇ ಇಲ್ಲ….
ರವಿ : ನಿಜಕ್ಕೂ ಆಶ್ಚರ್ಯ…. ಅದಿರಲಿ, ನಿಮ್ಮ ವಯಸ್ಸೆಷ್ಟು?
ವೃದ್ಧ : 38 ವರ್ಷ!
18ರ ಹರೆಯದ ಹಲವು ಹುಡುಗರು ಸಾಯಂಕಾಲ ಒಂದೆಡೆ ಕುಳಿತು ಹರಟುತ್ತಿದ್ದರು. ಅಲ್ಲಿಗೆ ಒಬ್ಬ ಕುಡುಕ ತೂರಾಡುತ್ತಾ ಬಂದ. ಆ ಮಬ್ಬುಗತ್ತಲಿನಲ್ಲಿಯೂ ಅವನು ಆ ಹುಡುಗರ ಮಧ್ಯೆ ಕುಳಿತಿದ್ದ ರಾಜುವನ್ನೇ ದಿಟ್ಟಿಸಿ, “ಏ ಕೇಳಿಲ್ಲಿ…. ನಿಮ್ಮಮ್ಮ ಈ ನಗರದ ಅತಿ ಸುಂದರ ಹೆಂಗಸು!” ಎಂದು ಹಲ್ಲುಕಿರಿದ. ಅಲ್ಲಿದ್ದ ಬೇರೆ ಹುಡುಗರು ಈಗ ದೊಡ್ಡ ಜಗಳ ನಡೆಯಲಿದೆ ಎಂದು ಕಾದರು. ಹಾಗೇನೂ ಆಗಲಿಲ್ಲ, ರಾಜು ಸುಮ್ಮನಿರುವುದನ್ನು ನೋಡಿ ಆ ಕುಡುಕ ಅಲ್ಲಿಂದ ತೂರಾಡಾತ್ತಾ ಹೋಗಿ ಮತ್ತೆ 2 ಬಾಟಲು ಕುಡಿದು ಬಂದಿದ್ದ.
ಈ ಸಲ ಮತ್ತೆ ರಾಜುವನ್ನೇ ದಿಟ್ಟಿಸುತ್ತಾ, “ಏ ಹುಡುಗ, ನಾನು ನಿಮ್ಮಮ್ಮನನ್ನು ಬಹಳ ಪ್ರೀತಿಸುತ್ತೇನೆ. ನಿಂಗೆ ಗೊತ್ತಾ?” ಎಂದ. ರಾಜು ಏನೂ ಉತ್ತರಿಸದೆ ಸುಮ್ಮನೆ ಕುಳಿತಾಗ, ಆ ಕುಡುಕ ಅಲ್ಲಿಂದ ಹೊರಟುಹೋದ.. ರಾಜು ಏಕೆ ಹಾಗೆ ಸುಮ್ಮನೆ ಕುಳಿತಿದ್ದಾನೋ ಎಂದು ಆ ಹುಡುಗರು ಬೇಸತ್ತರು.
ಸ್ವಲ್ಪ ಹೊತ್ತಿನ ನಂತರ ಬಂದ ಅದೇ ಕುಡುಕ ಈ ಸಲ ರಾಜುವಿಗೆ, “ಏ ಹುಡುಗ, ನಿಮ್ಮಮ್ಮ ಸಹ ನನ್ನನ್ನು ಅಷ್ಟೇ ಪ್ರೀತಿಸುತ್ತಾಳೆ. ನಿನಗದು ಗೊತ್ತಾ?” ಎಂದು ತೂರಾಡುತ್ತಾ ಅಲ್ಲೇ ನಿಲ್ಲಲು ಯತ್ನಿಸಿದ.
ರಾಜು ತನ್ನ ಜಾಗದಿಂದ ಎದ್ದು ಬಂದ. ಆ ಕುಡುಕನಿಗೆ ಏನು ಗತಿ ಕಾದಿದೆಯೋ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರೆ ರಾಜು, “ಅಪ್ಪ…. ಪ್ಲೀಸ್….. ಈಗ ಮನೆಗೆ ಹೋಗೋಣ. ನೀನು ಕುಡಿದಿದ್ದು ಜಾಸ್ತಿ ಆಯ್ತು,” ಎನ್ನುತ್ತಾ ಅವನ ಹೆಗಲ ಮೇಲೆ ಕೈ ಹಾಕಿ ಕರೆದೊಯ್ದ.
ಮಗರಾಯ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ರಜೆಯಲ್ಲಿ ಹಳ್ಳಿಗೆ ಹಿಂದಿರುಗಿದ್ದ.
ತಂದೆ : ಮಗ, ಹಿಂದೆ ನಿನಗೆ ಗೊತ್ತಿರದಿದ್ದ ಯಾವ 2 ಕಷ್ಟದ ಕೆಲಸಗಳನ್ನು ಈಗ ಕಾಲೇಜಿನಲ್ಲಿ ಕಲಿತು ಬಂದಿರುವೆ?
ಮಗ : ಹೌದಪ್ಪ…. ಉಳಿದದ್ದು ಹೇಗೋ ಏನೋ….. ಅಂತೂ 2 ಕಷ್ಟದ ಕೆಲಸಗಳನ್ನು ಕಲಿತು ಬಂದಿರುವುದಂತೂ ನಿಜ. ಅದು ನನಗೆ ಮೊದಲು ಬರುತ್ತಿರಲಿಲ್ಲ.
ತಂದೆ : ಶಭಾಷ್! ಯಾವುದಪ್ಪ ಆ 2 ಕೆಲಸಗಳು?
ಮಗ : ಹಲ್ಲಿನಿಂದಲೇ ಕಚ್ಚಿ ಬಿಯರ್ ಬಾಟಲ್ ಓಪನ್ ಮಾಡುವುದು ಹಾಗೂ ಬಿರುಗಾಳಿ ಬೀಸುತ್ತಿದ್ದರೂ ಒಂದೇ ಕಡ್ಡಿ ಬಳಸಿ ಸಿಗರೇಟ್ ಹಚ್ಚುವುದು…..
ಸೋಮಣ್ಣ ಆಫೀಸ್ ಗೆ ಹೊರಡುವ ಆತುರದಲ್ಲಿದ್ದರು. 3ನೇ ಮಹಡಿಯ ತಮ್ಮ ಮನೆಯಿಂದ ಇಳಿದು ಸರಸರನೆ ಕೆಳಗೆ ಬಂದರು, ಲಿಫ್ಟ್ ಬೇರೆ ಪೂರ್ತಿ ಕೆಟ್ಟುಹೋಗಿತ್ತು. ಆಮೇಲೆ ನೋಡುತ್ತಾರೆ…. ಮೊಬೈಲ್, ಕರ್ಚೀಫ್ ತೆಗೆದುಕೊಂಡಿರಲಿಲ್ಲ ಅಂತ ಗೊತ್ತಾಯಿತು. ಆಗ ಅವರು ಕೆಳಗಿನಿಂದಲೇ ಹೆಂಡತಿಗೆ, “ರತ್ನಾ…. ಸ್ವಲ್ಪ ಆ ಮೊಬೈಲ್, ಕರ್ಚೀಫ್ ಎರಡನ್ನು ಕೆಳಗೆ ಎಸಿ, ಮತ್ತೆ ಮೆಟ್ಟಿಲು ಹತ್ತಿ 3ನೇ ಮಹಡಿಗೆ ಬರಲಾರೆ,” ಎಂದರು.
ಆಕೆ ಬಾಲ್ಕನಿಗೆ ಬಂದು ಇಣುಕಿ ನೋಡುತ್ತಾ, “ಮೊದಲು ಯಾವುದನ್ನು ಎಸೆಯಲಿ?” ಎಂದರು.
“ಬಹುಶಃ ಬಾಸ್ ಕಾಲ್ ಮಾಡಬಹುದು, ಮೊದಲು ಆ ಮೊಬೈಲ್ ಎಸಿ!” ಎಂದರು.
ರತ್ನಮ್ಮ ಗುರಿಯಿಟ್ಟು ಇವರತ್ತ ಎಸೆದ ಮೊಬೈಲ್ ನ್ನು ಸೋಮಣ್ಣ ಹಿಡಿಯದೇ ಹೋದ್ದರಿಂದ ಅದು ಕೆಳಗೆ ಬಿದ್ದು ಚೂರು ಚೂರಾಯಿತು. ನಂತರ ರತ್ನಮ್ಮ ಕರ್ಚೀಫ್ ಎಸೆಯಲು ಸಿದ್ಧರಾದಾಗ, ಸೋಮಣ್ಣ ಕೆಳಗಿನಿಂದ ಕಿರುಚಿದರು, “ಇರು ಮಾರಾಯ್ತಿ! ಅದನ್ನೂ ಎಸೆಯಬೇಡ! ಅದೂ ಬಿದ್ದು ಹಾಳಾದ್ರೆ ಕಷ್ಟ. ನಾನು ಅಲ್ಲಿಗೇ ಬಂದು ತೆಗೆದುಕೊಳ್ತೀನಿ,” ಎಂದು ಸಾಲಕಾಶವಾಗಿ ಏದುಸಿರು ಬಿಡುತ್ತಾ, 3ನೇ ಮಹಡಿಯ ತಮ್ಮ ಮನೆಗೆ ನಡೆಯ ತೊಡಗಿದರು.





