ದಕ್ಷಿಣ ದೆಹಲಿಯ ಐಶಾರಾಮಿ ಮಾಳವೀಯ ನಗರದ ರೆಸ್ಟೋರೆಂಟ್​ವೊಂದರಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದ್ದು, ವಿದೇಶಗರು ಸೇರಿದಂತೆ 21 ಮಂದಿ ಮೃತಪಟ್ಟಿದ್ದಾರೆ. ಬೆಂಕಿ ಅವಘಢದಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹೋಟೆಲ್ ಫ್ಲೋರಿಸ್ ಸ್ಟೇ ಎಂಬ ಹೋಟೆಲ್-ಕಮ್-ರೆಸ್ಟೋರೆಂಟ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, 21 ಮಂದಿ ಜೀವಂತವಾಗಿ ಸುಟ್ಟುಹೋಗಿದ್ದು, 37 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯಿಂದ ಅಲ್ಲಿನ ಜನರಲ್ಲಿ ಭಯ ಉಂಟುಮಾಡಿದೆ. ಕೆಲವೇ ನಿಮಿಷಗಳಲ್ಲಿ ಕಟ್ಟಡದ ಸುತ್ತಮುತ್ತ ದಟ್ಟ ಹೊಗೆ, ಉರಿಯುವ ಜ್ವಾಲೆಗಳು, ಒಳಗಿರುವವರ ಕೂಗು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

21 ಜನ ಬಲಿ: ಹೋಟೆಲ್​ನಲ್ಲಿ ಸಣ್ಣ ಮಟ್ಟದಲ್ಲಿ ಕಾಣಿಸಿಕೊಂಡ ಬೆಂಕಿ, ಕೆಲವು ಕ್ಷಣಗಳಲ್ಲಿ ದೊಡ್ಡ ಜ್ವಾಲೆಗಳಾಗಿ ಕಟ್ಟಡದ ಹೊರಗೆ ಕಾಣಿಸಿಕೊಳ್ಳಲು ಆರಂಭಿಸಿತು. ಬೆಂಕಿ ಮತ್ತು ಹೊಗೆ ವೇಗವಾಗಿ ಹರಡಿ, ಇಡೀ ಕಟ್ಟಡವೇ ಕಪ್ಪು ಹೊಗೆಯಲ್ಲಿ ಮುಳುಗಿತ್ತು. ಮೂರನೇ ಮಹಡಿಯಲ್ಲಿ ಇದ್ದವರು ದೊಡ್ಡ ಅಪಾಯಕ್ಕೆ ಸಿಲುಕಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.ಬೆಂಕಿ ತೀವ್ರವಾಗುತ್ತಿದ್ದಂತೆ, ಜನರು ಮೇಲ್ಮಹಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಹಲವರು ತಮ್ಮ ಜೀವ ಉಳಿಸಿಕೊಳ್ಳಲು ಕಿಟಕಿಗಳತ್ತ, ಕೆಲವರು ಸೀಲಿಂಗ್‌ನಿಂದ, ಕಿಟಕಿಗಳಿಂದ ಕೆಳಗೆ ಜಿಗಿಯಲು ಪ್ರಯತ್ನಿಸಿದರು. ಅವರ ಕಿರುಚಾಟ, ಸಹಾಯಕ್ಕಾಗಿ ಕೂಗು, ಸುತ್ತಮುತ್ತಲಿನವರಲ್ಲಿ ಭೀತಿ ಹೆಚ್ಚಿಸಿತ್ತು.

37 ಜನರನ್ನು ಬದುಕಿಸಿದ ರಕ್ಷಣಾ ತಂಡ: ಅಗ್ನಿಶಾಮಕ ದಳಕ್ಕೆ ಮಾಹಿತಿ ಸಿಗುತ್ತಿದ್ದಂತೆಯೇ ತಂಡಗಳು ಸ್ಥಳಕ್ಕೆ ಧಾವಿಸಿದವು. ಬೆಂಕಿಯ ಮಧ್ಯದಲ್ಲೇ ಅವರು ಕಟ್ಟಡದ ಒಳಗೆ ಪ್ರವೇಶಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಸಿಕ್ಕಿಹಾಕಿಕೊಂಡಿದ್ದವರನ್ನು ಹೊರತೆಗೆದು, ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲು ಸಾಕಷ್ಟು ಹೋರಾಡಬೇಕಾಯಿತು. ಅವರ ಪ್ರಯತ್ನದ ಫಲವಾಗಿ ಸುಮಾರು 37 ಜನರನ್ನು ಬದುಕುಳಿಸಲು ಸಾಧ್ಯವಾಯಿತು. ಆದರೆ ಆ ಹೊತ್ತಿಗಾಗಲೇ 21 ಜನರು ಬೆಂಕಿಯಲ್ಲಿ ಸಾವನ್ನಪ್ಪಿದ್ದರು.

ಶಾರ್ಟ್​​ ಸರ್ಕ್ಯೂಟ್​​ನಿಂದ ಬೆಂಕಿ ಶಂಕೆ: ಪ್ರಾಥಮಿಕ ಮಾಹಿತಿಗಳ ಪ್ರಕಾರ, ಬೆಂಕಿ ಹೋಟೆಲ್ ಒಳಗೆ ನಡೆದ ಶಾರ್ಟ್ ಸರ್ಕ್ಯೂಟ್‌ನಿಂದ ಪ್ರಾರಂಭವಾಗಿದೆ ಎಂದು ಶಂಕಿಸಲಾಗಿದೆ. ವಿದ್ಯುತ್ ಸಂಪರ್ಕದಲ್ಲಿ ಬಂದ ದೋಷದಿಂದ ಬೆಂಕಿ ಹೊತ್ತಿಕೊಂಡು, ಕೆಲವೇ ಕ್ಷಣಗಳಲ್ಲಿ ಕೊಠಡಿಗಳಿಂದ ಹಿಡಿದು ಇಡೀ ಕಟ್ಟಡಕ್ಕೆ ಹರಡಿದೆ. ಹೋಟೆಲ್‌ನ ವಿನ್ಯಾಸ, ಸುರಕ್ಷತಾ ವ್ಯವಸ್ಥೆಗಳ ಕೊರತೆ, ತುರ್ತು ನಿರ್ಗಮನ ಮಾರ್ಗಗಳು ಇವುಗಳ ಕಾರಣದಿಂದ ಬೆಂಕಿಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಲಾಗುತ್ತಿದೆ.

ಬೆಳಗಿನ ಸಮಯವಾಗಿದ್ದರಿಂದ, ಬಹಳಷ್ಟು ಅತಿಥಿಗಳು ತಮ್ಮ ಕೊಠಡಿಗಳಲ್ಲಿ ನಿದ್ರಿಸುತ್ತಿದ್ದರು. ಅವರಿಗೆ ಬೆಂಕಿ ಹೊತ್ತಿಕೊಂಡಿರುವುದರ ಬಗ್ಗೆ ಸಮಯಕ್ಕೆ ಮುನ್ನ ಅರಿವು ಬಂದಿರಲಿಲ್ಲ ಎನ್ನಲಾಗಿದೆ. ಕೆಲವರು ಹೊಗೆಯಿಂದಲೇ ಮೂರ್ಛೆ ಹೋಗಿದ್ದಿರಬಹುದು, ಕೆಲವರು ಬಾಗಿಲು ತೆರೆಯುವಷ್ಟರಲ್ಲಿ ಬೆಂಕಿ ಅವರನ್ನು ಸುತ್ತಿಕೊಂಡಿರಬಹುದು. ಹಲವರು ಕೊಠಡಿಗಳೊಳಗೇ ಸಿಕ್ಕಿಹಾಕಿಕೊಂಡು ಜೀವಂತವಾಗಿ ಸುಟ್ಟುಹೋಗಿರಬಹುದು ಎಂಬ ಭೀತಿ ವ್ಯಕ್ತವಾಗಿದೆ.

ಪ್ರಧಾನ ಮಂತ್ರಿ ಕಚೇರಿಯು ಮೃತರ ಕುಟುಂಬಗಳಿಗೆ ಪರಿಹಾರ ಘೋಷಿಸಿದೆ. ಮೃತರ ಪ್ರತಿ ಸಂಬಂಧಿಕರಿಗೆ PMNRF ನಿಂದ 2 ಲಕ್ಷ ರೂ. ಪರಿಹಾರ ನೀಡಲಾಗುವುದು, ಗಾಯಾಳುಗಳಿಗೆ 50,000 ರೂ. ನೀಡಲಾಗುವುದು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ