Sj*

ದಕ್ಷಿಣ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಕೆವಿಎನ್ ಸಾಲು ಸಾಲು ಸಿನಿಮಾಗಳನ್ನು ನಿರ್ಮಾಣ ಮಾಡ್ತಿದೆ. ಬಹುಕೋಟಿ ವೆಚ್ಚದಲ್ಲಿ ದೊಡ್ಡ ದೊಡ್ಡ ಸ್ಟಾರ್ಟ್ ಗೆ ಅದ್ದೂರಿ ಸಿನಿಮಾಗಳನ್ನು ನಿರ್ಮಾಣ ಮಾಡುವುದರ ಜೊತೆಯಲ್ಲಿ ಪ್ರತಿಭಾನ್ವಿತ ನಿರ್ದೇಶಕರಿಗೂ ಅವಕಾಶ ಕಲ್ಪಿಸುತ್ತಿದೆ. ಅದರ ಭಾಗವಾಗಿ 2024ರಲ್ಲಿ ತೆರೆಕಂಡ ಮಲಯಾಳದ ಹಿಟ್‌ ಸಿನಿಮಾ ‘ಮಂಜುಮ್ಮೆಲ್‌ ಬಾಯ್ಸ್‌’ನ ನಿರ್ದೇಶಕ ಚಿದಂಬರಂಗೆ ಕೆವಿಎನ್ ಅವಕಾಶ‌ ನೀಡಿದೆ.

ಚಿದಂಬರಂ ನಿರ್ದೇಶನದ ‘ಬಾಲನ್‌ ದಿ ಬಾಯ್‌’ ಚಿತ್ರಕ್ಕೆ ಕೆವಿಎನ್ ಹಣ ಹಾಕಿದೆ. ಅಲ್ಲದೇ ಈ ಸಿನಿಮಾವನ್ನು ಅಂತರಾಷ್ಟ್ರೀಯ ವೇದಿಕೆಯಾದ ಕಾನ್ಸ್ ಚಲನಚಿತ್ರೋತ್ಸವಕ್ಕೆ ತೆಗೆದುಕೊಂಡು ಹೋಗಿದೆ. ಇತ್ತೀಚಿನ ಈ ಸಿನಿಮೋತ್ಸವದಲ್ಲಿ ಬಾಲನ್ ದಿ ಬಾಯ್ಸ್ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡಿದೆ. ಇದರ ಬೆನ್ನಲ್ಲೇ ಚಿತ್ರತಂಡ ಕುತೂಹಲಕಾರಿ ಟ್ರೇಲರ್ ಬಿಡುಗಡೆ ಮಾಡಿದೆ.

balan 1

ಓರ್ವ ಬಾಲಕನ ಸುತ್ತ ಸಾಗುವ ಕಥೆಗೆ ಸಸ್ಪೆನ್ಸ್, ಥ್ರಿಲ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. ಮಲಯಾಳಂ, ಕನ್ನಡ, ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಟ್ರೇಲರ್ ಬಿಡುಗಡೆ ಮಾಡಲಾಗಿದೆ.

ಸಿನಿಮಾವನ್ನು ಕೆವಿಎನ್‌ ನಿರ್ಮಾಣ ಸಂಸ್ಥೆಯ ವೆಂಕಟ್‌ ಕೆ.ನಾರಾಯಣ್‌ ಹಾಗೂ ಶೈಲಜಾ ದೇಸಾಯಿ ಫೆನ್‌ ನಿರ್ಮಾಣ ಮಾಡಿದ್ದಾರೆ. ಚಿತ್ರವು ಮಲಯಾಳ, ಹಿಂದಿ, ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಇದೇ ತಿಂಗಳ 19ರಂದು ತೆರೆಗೆ ಬರಲಿದೆ. ‘ಆವೇಶಂ’ ನಿರ್ದೇಶಿಸಿದ್ದ ಜಿತು ಮಾಧವನ್‌ ‘ಬಾಲನ್‌’ ಕಥೆ ಬರೆದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ