ಸುದೀರ್ಘ ಅವಧಿಗೆ ಪ್ರಧಾನಿಯಾಗಿ ದಾಖಲೆ‌ ಬರೆದ ಮೋದಿಗೆ ನಟ‌ ಕಿಚ್ಚ ಸುದೀಪ್, ರಿಷಬ್​ ಶೆಟ್ಟಿ ಶುಭಾಶಯ ತಿಳಿಸಿದ್ದಾರೆ.

ದೀರ್ಘಾವಧಿಯ ಚುನಾಯಿತ ಪ್ರಧಾನಿ ಆದ ಹಿನ್ನೆಲೆ‌‌‌ ಸ್ಯಾಂಡಲ್​ವುಡ್ ಸ್ಟಾರ್ ನಟರು ಪ್ರಧಾನಿ ಮೋದಿಗೆ ವಿಶ್ ಮಾಡಿದ್ದಾರೆ. ಪಿಎಂ ಮೋದಿಗೆ ಶುಭಕೋರಿರುವ ಕಿಚ್ಚ ಸುದೀಪ್​ ತಮ್ಮ ಎಕ್ಸ್​​ನಲ್ಲಿ ಪೋಸ್ಟ್ ಮಾಡಿದ್ದಾರೆ.

ನೆಹರು ದಾಖಲೆ ಮುರಿದ ಪ್ರಧಾನಿ ಮೋದಿ‌ ಕಂಡು ಸ್ಯಾಂಡಲ್ ವುಡ್ ಸ್ಟಾರ್ಗಳು ಸಂತಸ ವ್ಯಕ್ತಪಡಿಸಿದ್ದಾರೆ. ನಾವು ಈ ಸಾಧನೆಯನ್ನು ಹೆಮ್ಮೆಯಿಂದ ಒಪ್ಪಿಕೊಳ್ಳಬೇಕು. 12 ವರ್ಷಗಳು.. ಅದೇ ಶಕ್ತಿ, ಅದೇ ವೇಗ.. ನಿಧಾನಗತಿ ಇಲ್ಲ. ನರೇಂದ್ರ ಮೋದಿ ಅವರೇ ನಿಮ್ಮ ಸಮರ್ಪಣೆ ಮತ್ತು ಸಾಧನೆಗೆ ಹೃತ್ಪೂರ್ವಕ ನಮನ ಎಂದು ಬರೆದಿದ್ದಾರೆ.

ಇದು ನಮಗೆ ಹೆಮ್ಮೆಯ ಕ್ಷಣ ಸರ್. ನೀವು ನಿರಂತರವಾಗಿ ಯಶಸ್ಸು ಸಾಧಿಸಲಿ ಮತ್ತು ಮುಂದೆ ಬರುವ ಎಲ್ಲದರಲ್ಲೂ ಶುಭವಾಗಲಿ ಎಂದು ನಟ‌ ಸುದೀಪ್ ಶುಭಕೋರಿದ್ದಾರೆ. ಟ್ವೀಟ್ ಮೂಲಕ ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್ ಶುಭಾಶಯ ತಿಳಿಸಿದ್ದಾರೆ.

ಪ್ರಧಾನಿ ಮೋದಿಗೆ ನಟ ರಿಷಬ್ ಶೆಟ್ಟಿ‌ ಕೂಡ ಶುಭಾಶಯ ತಿಳಿಸಿದ್ದಾರೆ. ಐತಿಹಾಸಿಕ ನಾಯಕನಿಗೆ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದ್ದು ಭಾರತದ ಅತಿ ಹೆಚ್ಚು ಕಾಲ ಸತತವಾಗಿ ಆಯ್ಕೆಯಾದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ ಎಂದಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ