ನೀತಿ ಆಯೋಗದ ಮೀಟಿಂಗ್ ನಲ್ಲಿ ಪ್ರಧಾನಿ ಬಲು ಹೆಮ್ಮೆಯಿಂದ ಹೇಳಿದ್ದು ಎಂದರೆ, ಸ್ತ್ರೀಶಕ್ತಿಯ ಬಳಸಿಕೊಳ್ಳುವ ಪಾಲಿಸಿಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ಹೆಚ್ಚಿಸಿಕೊಳ್ಳಬೇಕು. ಆದರೆ ಅವರದೇ ಪಕ್ಷ ಹಿಂದೂ ಹಿಂದೂ ಪೂಜೆ ಪುನಸ್ಕಾರ ಎನ್ನುತ್ತಾ ಹೆಂಗಸರನ್ನು ಮತ್ತೆ ಮಂದಿರಗಳಲ್ಲಿ ಕಳಸ ಹೊತ್ತೊಯ್ಯಲು, ಗಂಟೆಗಟ್ಟಲೆ ವ್ರತಪೂಜೆ ನಡೆಸಲು, ದಿನವಾರಗಟ್ಟಲೆ ನಡೆಯುವ ಧಾರ್ಮಿಕ ಪ್ರವಚನಗಳಿಗೆ, ಹರಿಕಥೆಗಳ ಕಡೆ ತಳ್ಳುತ್ತಿದೆ. ಎಲ್ಲಿ ಹೊಸ ದೇವಾಲಯ ಏಳುತ್ತದೋ, ಅಲ್ಲಿ ಹೊಸ ಗ್ರಾಹಕರಾಗಿ ಹೆಂಗಸರೇ ತುಂಬಿ ತುಳುಕಾಡುತ್ತಾರೆ. ಅವರಿಂದಲೇ ಮಂದಿರದ ಪುರೋಹಿತರ ಮನೆ ಬೆಳಗುತ್ತದೆ, ದಾನದಕ್ಷಿಣೆಗಳ ಮಳೆಗರೆಯುತ್ತಾರೆ.
ವಿಶ್ವ ದೃಷ್ಟಿಯಿಂದ ಭಾರತವೇನೋ ಎಲ್ಲಕ್ಕಿಂತ ನಾಲ್ಕನೇ ದೊಡ್ಡ ಅರ್ಥ ವ್ಯವಸ್ಥೆ ಆಗಿದೆ. ಆದರೆ ಯಾವ ದೇಶದಲ್ಲಿ ಪ್ರತಿ ವ್ಯಕ್ತಿಯ ಆದಾಯ ಕೇವಲ 2,500 ಡಾಲರ್ ಆಗಿದೆಯೋ, ಅಮೆರಿಕನ್ ಪ್ರಜೆಗಿಂತ 30 ಪಟ್ಟು ಕಡಿಮೆ ಇದೆಯೋ, ಯಾವ ದೇಶದಲ್ಲಿ 84 ಕೋಟಿಗಳಲ್ಲಿ ಅರ್ಧ ಪಾಲು ಹೆಂಗಸರು, 5 ಕಿಲೋ ಧಾನ್ಯವನ್ನು ಸರ್ಕಾರದಿಂದ ಉಚಿತವಾಗಿ ಪಡೆಯುತ್ತಿದ್ದಾರೋ, ಅಂಥ ಕಡೆ ಎಲ್ಲಿಂದ ಸ್ತ್ರೀಶಕ್ತಿ ಒಗ್ಗೂಡಲು ಸಾಧ್ಯ? ಇಲ್ಲಿ ಪ್ರತಿ ಹೆಣ್ಣನ್ನೂ ಗಂಡ, ಮಕ್ಕಳನ್ನು ನೋಡಿಕೊಳ್ಳಲೆಂದೇ ತಳ್ಳಲ್ಪಟ್ಟಿರುವಾಗ, ಅವಳನ್ನು ಮೈಲುಗಟ್ಟಲೇ ನಡೆಸಿ ಪೂಜೆಗಳಲ್ಲಿ ಮುಳುಗಿಸಿದರೆ, ಅವಳು ಪೂಜೆಯಿಂದ ಮನೆ ಉದ್ಧರಿಸುತ್ತಾಳಾ ಅಥವಾ ನಮ್ಮ ದೇಶಕ್ಕೆ ನಾಲ್ಕನೇ ಸ್ಥಾನ ಕೊಡಿಸಲು ನೆರವಾಗುತ್ತಾಳಾ?
ಹೆಂಗಸರು ಇಂದು ಎರಡು ಪಟ್ಟು ಹೆಚ್ಚಿನ ಜವಾಬ್ದಾರಿ ಹೊರುತ್ತಿದ್ದಾರೆ. ಅವರು ಪತಿ, ತಂದೆಯ ಗುಲಾಮಗಿರಿಯಿಂದ ಮುಕ್ತರಾಗಿದ್ದಾರೆ ಎನಿಸುತ್ತಿಲ್ಲ. ತುಳಿಸದಾಸರ ತರಹ ಜಪಮಾಲೆ ಎಣಿಸುತ್ತಾ ಇರು, ಪಶುವಿನಂತೆ ನಡೆಸಲ್ಪಡುತ್ತಿಲ್ಲ ಎಂದೆನಿಸದು. ಕಾರ್ಖಾನೆ, ಕಛೇರಿಗಳಲ್ಲಿ ದುಡಿಯುವ ಹೆಚ್ಚಿನ ಹೆಂಗಸರ ಸಂಪಾದನೆ ಪತಿ, ತಂದೆ, ಅಣ್ಣ ತಮ್ಮಂದಿರ ಪಾಲಾಗುತ್ತದೆ. ಹೊರಗೆ ಬಂದು ಹೀಗೆ ದುಡಿಯುತ್ತಾ, ಮನೆಗೆ ಹೋಗಿಯೂ ಅವರು ಎಲ್ಲಾ ಕೆಲಸ ಮಾಡಬೇಕಾಗುತ್ತದೆ.
ಹೆಣ್ಣು ಸಂಪಾದಿಸುತ್ತಿದ್ದರೂ, ಇಂದಿಗೂ ಸಹ ವರದಕ್ಷಿಣೆ ತೆರಬೇಕಾಗಿರುವುದೇ ಇದಕ್ಕೆ ಸಾಕ್ಷಿ. ವಿಚ್ಛೇದನದ ಪ್ರತಿ ಕೇಸ್ ನಲ್ಲೂ, ಪತ್ನಿ ಹೇಳುವುದು, ಅವಳ ಹೆತ್ತವರು ದೊಡ್ಡ ಮೊತ್ತದ ವರದಕ್ಷಿಣೆ ಕೊಟ್ಟಿದ್ದರು, ಡೈವೋರ್ಸ್ ನಂತರ ಅದು ವಾಪಸ್ ಬೇಕು ಅಂತ.
ಇಂದೂ ಸಹ ಹೆಣ್ಣು ಮನೆಯಿಂದ ಹೊರಡುವಾಗ ಭಯದಿಂದಲೇ ಹೊರಡುತ್ತಾಳೆ, ಬೀದಿ ಕಾಮಣ್ಣರು ಏನು ಮಾಡುತ್ತಾರೋ ಏನೋ ಅಂತ. ಖುಲ್ಲಂಖುಲ್ಲ ಇವರನ್ನು ರೇಪ್ ಮಾಡುವ ಬೆದರಿಕೆ ಬರುತ್ತದೆ. ವಿದೇಶ ಸಚಿವ ವಿಕ್ರಂ ಮಿಸ್ತ್ರೀಗೆ ಭಾರತ ಪಾಕ್ ಯುದ್ಧ, ಇದ್ದಕ್ಕಿದ್ದಂತೆ ಲಾಹೋರ್ ಕರಾಚಿಗಳ ಮೇಲೆ ನಡೆಸಲಾದ ಆಕ್ರಮಣ ಹೊರತುಪಡಿಸಿ, ಬಂದ್ ಮಾಡಿಸಿದ ದೋಷಿ ಎಂದಾಗ, ಕಂದಾಚಾರಿಗಳು ಅವರ ಹೆಣ್ಣುಮಕ್ಕಳನ್ನು ರೇಪ್ ಮಾಡುತ್ತೇವೆನ್ನುವ ಬೆದರಿಕೆ ಒಡ್ಡಿದರು. ಆದರೆ ಅಸಲಿಗೆ ಅವರು ಕೇವಲ ಸರ್ಕಾರದ ವತಿಯಿಂದ ಸಾಕ್ಷಿ ಹೇಳುತ್ತಿದ್ದರಷ್ಟೇ, ಸೂಚನೆ ನೀಡುತ್ತಿದ್ದರೇ ಹೊರತು ನೀತಿನಿರ್ಧಾರಗಳ ಡಿಸಿಶನ್ ಮೇಕರ್ ಆಗಿರಲಿಲ್ಲ. ಆನ್ ಲೈನ್ ನಲ್ಲಿ ಬೆದರಿಕೆ ಒಡ್ಡುವ ಒಬ್ಬರನ್ನೂ ಪೊಲೀಸರು ಬಂಧಿಸಲಿಲ್ಲ.
ಇಂದೂ ಸಹ ಸರ್ಕಾರ ಕೇವಲ ವೋಟ್ ಸಲುವಾಗಿ ಹೆಂಗಸರ ತಾಳಿ, ಸಿಂಧೂರದ ಮಾತನಾಡುತ್ತದೆ. ಇವೆರಡೂ ಹೆಂಗಸರ ಗುಲಾಮಗಿರಿ, ಪತಿಯ ಪ್ರಾಪರ್ಟಿ ಆಗಿರುವ ಚಿಹ್ನೆಗಳು. ದೊಡ್ಡ ಸಾಧನೆ ಮಾಡಿದ್ದರ ಮೆಡ್ ಅಲ್ಲ.
ಇಂದು ಸರ್ಕಾರ ಎಲ್ಲೂ ಸಹ ಒಬ್ಬಂಟಿ ಹೆಂಗಸರು ಸೇಫ್ ವಾಸಿಸಲು ಜಾಗ ಮಾಡಿಕೊಡುತ್ತಿಲ್ಲ. ಅವರು ಮನೆಯಿಂದ ಹೊರ ಹೊರಟಾಗ ಸೇಫ್ ಆಗಿ ಇರಿಸಿಕೊಳ್ಳುವ ಪ್ರಾಮಿಸ್ ಮಾಡುತ್ತಿಲ್ಲ, ಅವರಿಗೆ ಮನೆಯಿಂದ ಕೆಲಸದ ಸ್ಥಳಕ್ಕೆ ಹೊರಡಲು ಸುರಕ್ಷಿತ, ವಾಹನ ವ್ಯವಸ್ಥೆಯೂ ಇಲ್ಲ. ಇಂಥ ಸಂದರ್ಭದಲ್ಲಿ ಹೆಣ್ಣು ಕೆಲಸಕ್ಕೆ ಹೊರಟರೆ ಅದು ಮನಸ್ಸಿನಿಂದ ಅಲ್ಲ, ತಮ್ಮ ಪರ್ಸನಾಲ್ಟಿ ಸುಧಾರಿಸಲು ಅಲ್ಲ, ತಮ್ಮ ಸ್ಥಿತಿ ಉದ್ಧರಿಸಿಕೊಳ್ಳಲು ಅಲ್ಲ, ಕೇವಲ ವಿಧಿಯಿಲ್ಲದೆ ಹೋಗುತ್ತಾರೆ. ತಾಯಿತಂದೆ ಯಾವ ಪತಿ, ಸಂಪಾದಿಸಿ ತರಲೇಬೇಕು ಎಂದು ಒತ್ತಡ ಹೇರುವುದರಿಂದ ಅವರು ಕೆಲಸಕ್ಕೆ ಹೋಗುತ್ತಾರೆ.
ಸರ್ಕಾರಕ್ಕೆ ಘೋಷಣೆ ಕೊಡಲು ಗೊತ್ತು ಅಷ್ಟೆ, ಆದರೆ ಹೆಂಗಸರನ್ನು ಉದ್ಧರಿಸಲು ಅಲ್ಲ! ನಮ್ಮ ದೇಶದ ಹೆಂಗಸರು ಪುರಾಣಗಳಲ್ಲಿ ಬರೆದಂತೆ ಸದಾ ಋಷಿಮುನಿಗಳ ಸೇವೆ ಮಾಡುತ್ತಿರಬೇಕು, ಇದನ್ನು ಪ್ರಧಾನಿ ಸೇರಿದಂತೆ ಎಲ್ಲ ಸರ್ಕಾರಿ ಅಧಿಕಾರಿಗಳೂ ಹೇಳುತ್ತಲೇ ಇರುತ್ತಾರೆ. ಹೆಂಗಸರು ಎಂದರೆ ಈ ಪುರಾಣಗಳಲ್ಲಿ ಕೇವಲ ಗುಲಾಮರು ಎಂದಷ್ಟೇ ಭಾವಿಸಲಾಗಿದೆ. ವಿಡಂಬನೆ ಎಂದರೆ ಇಂಥ ಗ್ರಂಥಗಳನ್ನೇ ಸಂವಿಧಾನ ಹಾಗೂ ಕಾನೂನಿನಲ್ಲಿ ಬದಲಾಯಿಸುವ ಪ್ರಯತ್ನ ಮಾಡುತ್ತಿರುತ್ತೇವೆ.
ಸ್ಟ್ರೀಟ್ ಡಾಗ್ಸ್ ಕುರಿತು ಉತ್ತಮ ಜಜ್ ಮೆಂಟ್
ಮುಂಬೈನ ಒಂದು ಕೋರ್ಟ್ ಒಂದು ಸಾಕುನಾಯಿಯ ಮಾಲೀಕರಿಗೆ 4 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿದೆ. ಆ ನಾಯಿ ಲಿಫ್ಟ್ ನಲ್ಲಿ ಬರುತ್ತಿದ್ದ ಒಂದು ಮಗುವಿನ ಕಾಲು ಕಚ್ಚಿಹಾಕಿತು. ಈ ತೀರ್ಪು ಎಷ್ಟೋ ಉತ್ತಮ. ಸಾಕುನಾಯಿ ತಾನೇ, ಅವನೇನು ಮಾಡೀತು ಎಂದು ಒದರಿಕೊಳ್ಳುವ ಹಾಗಿಲ್ಲ.
ಈ ಪ್ರಕರಣ ನಡೆದದ್ದು ಒಂದು ಬಹುಮಹಡಿ ಅಪಾರ್ಟ್ ಮೆಂಟ್ ನಲ್ಲಿ. ಮುಂಬೈ ಮಾತ್ರವಲ್ಲದೆ ದೇಶದ ಯಾವುದೇ ದೊಡ್ಡ ಅಪಾರ್ಟ್ ಮೆಂಟ್ ನಲ್ಲೂ ಇದೇ ಗೋಳು. ಆ ನಾಯಿ ಬೊಗಳಿ, ಕಚ್ಚಿ, 1-2 ಮಾಡಿ ಕಾಟ ಕೊಟ್ಟರೂ, ಇತರರೆಲ್ಲ ಸಹಿಸಲೇಬೇಕು.
ಇಂಥ ಸಾಕುಪ್ರಾಣಿಗಳು ಬಯಲಿನಲ್ಲಿ ವಾಸಿಸುವವರಿಗೆ ಸರಿ, ಮಹಾನಗರಗಳಿಗೆ ಅಲ್ಲ. ನಗರಗಳಲ್ಲಿ ಯಾವ ಪ್ರಾಣಿ ತನ್ನ ಅಸ್ತಿತ್ವ ತಾನೇ ಹುಡುಕಿಕೊಳ್ಳುವುದೋ ಅದಕ್ಕೇನೂ ಮಾಡಲಾಗದು. ಬೆಕ್ಕು, ಕೋತಿ, ಇನ್ನಿತರ ಪ್ರಾಣಿಗಳನ್ನು ನಾವು ಸಾಕಿಕೊಂಡಿದ್ದೇವೆ, ಇತರರು ಈ ಕಾಟ ಸಹಿಸಿಕೊಳ್ಳಿ ಎಂದು ಮಾಲೀಕರು ಹೇಳುವುದು ಎಷ್ಟು ಸರಿ?
ಇಡೀ ದೇಶದಲ್ಲಿ ಸರಿಸುಮಾರು 5 ಕೋಟಿಗೂ ಅಧಿಕ ಬೀದಿ ನಾಯಿಗಳು ಅಲೆದಾಡುತ್ತಿವೆ. ಇವು ನಗರವಾಸಿಗಳಿಗೆ ಎಂದಿದ್ದರೂ ತಲೆನೋವು. ರಾತ್ರಿ ಹೊತ್ತು ಹೊರಗೆ ಓಡಾಡುವವರಿಗೆ ಕಳ್ಳಕಾಕರ ಕಾಟಕ್ಕಿಂತ ಈ ಬೀದಿ ನಾಯಿಗಳ ರಂಪಾಟವೇ ಹೆಚ್ಚಾಗಿರುತ್ತದೆ. ನಗರದವರು ಎಸೆದ ಆಹಾರ ಸೇವಿಸಿ ಬದುಕುವ ಈ ಬೀದಿ ನಾಯಿಗಳು, ಒಮ್ಮೊಮ್ಮೆ ಹಸಿವು ತಡೆಯಲಾಗದೆ ಹುಚ್ಚು ಕೆರಳಿದರೆ, ಮಕ್ಕಳಿಂದ ಮುದುಕರವರೆಗೂ ಎಲ್ಲರ ಮೇಲೂ ಎರಗುತ್ತವೆ. ಎಷ್ಟೋ ವಿಡಿಯೋಗಳಲ್ಲಿ ತಾಯಿಯ ಮಡಿಲಲ್ಲಿದ್ದ ಮಗುವನ್ನು ಎಳೆತಂದು, ಕಚ್ಚಿಹಾಕಿ ಕೊಂದ ನಾಯಿಗಳ ಅವಾಂತರಕ್ಕೆ ಕೊನೆಯೇ ಇಲ್ಲ. ಹಿರಿಯರು ಇವುಗಳಿಂದ ತಪ್ಪಿಸಿಕ್ಳೊಲು ಓಡಿ, ಕೆಳಗೆ ಬಿದ್ದು ಮೂಳೆ ಮುರಿದುಕೊಂಡಿದ್ದಾರೆ, ಗಾಯ ರಕ್ತಧಾರೆಗೆ ಮಿತಿಯಿಲ್ಲ.
ಬಹು ಅಂತಸ್ತಿನ ಕಟ್ಟಡಗಳಲ್ಲಿ ಸದಾ ಸರ್ವದಾ ಈ ನಾಯಿ ಬೆಕ್ಕುಗಳ ದುರ್ನಾತ ಹರಡಿರುತ್ತದೆ. ಅವನ್ನು ಹೊರಗೆ ನಡೆದಾಡಿಸುವವರಿಲ್ಲದೆ ಹೋದಾಗ, ಸಿಕ್ಕ ಸಿಕ್ಕ ಕಡೆ ಹೀಗೆ ಗಲೀಜು ಮಾಡಿಕೊಳ್ಳುತ್ತವೆ. ವಾಕರ್ಸ್ ಕೂಡ ಇವನ್ನು ಜನ ನಡೆದಾಡುವ ಜಾಗಕ್ಕೇ ಕರೆದೊಯ್ಯುತ್ತಾರೆ. ಮಾರ್ನಿಂಗ್ ವಾಕ್ ಹೊರಟ ಆ ಪಾಪದವರು ಈ ಬೀದಿ ನಾಯಿಗಳ ಗಲೀಜು ತುಳಿದುಕೊಂಡೇ ಆರೋಗ್ಯ ಭಾಗ್ಯ ಗಿಟ್ಟಿಸಿಕೊಳ್ಳಬೇಕು. ಒಮ್ಮೊಮ್ಮೆ ವರ್ಗ ಮಾಡಿಸಿಕೊಂಡು ಬೇರೆ ಊರಿಗೆ ಹೊರಟರು ತಮ್ಮ ಸಾಕುಪ್ರಾಣಿಗಳನ್ನು ಅಲ್ಲೇ ಬಿಟ್ಟು ಹೊರಡುತ್ತಾರೆ, ಇದರಿಂದ ಇತರರಿಗೆ ಕಾಟ ತಪ್ಪದು.
1966-76ರವರೆಗೆ ಚೀನಾದಲ್ಲಿ ಮಾಲೇತ್ಸೆ ತುಂಗ್ ಇಂಥ ಸಾಕುಪ್ರಾಣಿಗಳನ್ನು `ಬುಜುರ್ ಲಾ ಸಂಸ್ಕೃತಿ’ಯ ಭಾಗವೆಂದು ಭಾವಿಸಿ, ಬ್ಯಾನ್ ಮಾಡಿಬಿಟ್ಟಿದ್ದ. ಅದರಿಂದ ತುಸು ಲಾಸ್ ಆಯಿತಾದರೂ, ನಗರ ಸ್ವಚ್ಛವಾಯಿತು. ಅವಕ್ಕಾಗಿ ನೀಡಲಾಗುತ್ತಿದ್ದ ಆಹಾರ, ಮಾನವರ ಪಾಲಾಯಿತು. 1983-93ರ ನಡುವೆ ರೇಬೀಸ್ ಹರಡಿದಂತೆ, ಮತ್ತೆ ಸಾಕುಪ್ರಾಣಿಗಳನ್ನು ಬ್ಯಾನ್ ಮಾಡಲಾಯಿತು.
ಇಂದು ಭಾರತದ ನಗರಗಳನ್ನು ಡಾಗ್ ಫ್ರೀ ಆಗಿಸುವುದು ಅತ್ಯಗತ್ಯವಾಗಿದೆ. ಪೆಟ್ ಥೆರಪಿಯಿಂದ ಲಾಭವಿದೆಯಾದರೂ, ಪೆಟ್ ಅತಿಯಾದರೆ ಸಹಿಸುವುದು ಹೇಗೆ?
ಹನೀ ಟ್ರಾಪ್ ಬಲಿಯಾಗುವವರು ಬೇರಾರೋ
ಹೆಂಗಸರ ಹಕ್ಕು ಯಾ ಮೇ 25, 2025ರ ಒಂದು ದಿನಪತ್ರಿಕೆಯ ತಲೆಬರಹ ನೋಡಿ : `ವುಮನ್ ಬಿಸ್ನೆಸ್ ವುಮೆನ್ ಫ್ರಂ ಹಿ.ಪ್ರ ಡೆಲ್ಲಿ, ಎಗ್ಸಾರ್ಟ್ಸ್ ರೂ.2 ಲಕ್ಷ!’ ಈ ತಲೆಬರಹದಿಂದ ಅಪರಾಧಿ ಹೆಣ್ಣು ಎಂಬುದು ಸುಸ್ಪಷ್ಟ, ಇದೀಗ ಸೋಶಿಯಲ್ ಮೀಡಿಯಾ ಬಳಸಿಕೊಳ್ಳುತ್ತಾ ಗಂಡಸರನ್ನು ಹಾಡುಹಗಲೇ ಕೊಳ್ಳೆ ಹೊಡೆಯುತ್ತಾರೆ. ಏಕೆಂದರೆ ಈ ನ್ಯೂಸ್ ನಲ್ಲಿ ಬರೆದಿರುವುದೆಂದರೆ, ಒಬ್ಬ ಹುಡುಗಿ ಹಿ.ಪ್ರ.ದ ಒಬ್ಬ ವ್ಯಾಪಾರಿಯನ್ನು ಸೋಶಿಯಲ್ ಮೀಡಿಯಾದಲ್ಲಿ ದೋಸ್ತ್ ಮಾಡಿಕೊಂಡು, ದೆಹಲಿಯ ನಜಫಗಢಕ್ಕೆ ಕರೆಸಿಕೊಂಡಿದ್ದಳು.
ಅಸಲಿಗೆ ಈ ಹುಡುಗಿಯನ್ನು ಗಂಡಸರೇ ಕಂಟ್ರೋಲ್ ಮಾಡಿ ಹೀಗೆ ಮಾಡಿದ್ದರು. ಆಕೆಗೆ ಪ್ರೀತಿಯ ಮಾತನಾಡಿ, ಆ ಶ್ರೀಮಂತ ವ್ಯಾಪಾರಿಯನ್ನು ಪುಸಲಾಯಿಸುವ ಐಡಿಯಾ ನೀಡಿದರು. ದೆಹಲಿಯ ಒಂದು ಮನೆಗೆ ಕರೆಸಿಕೊಂಡು, ಪೊಲೀಸ್ ಸಮವಸ್ತ್ರದಲ್ಲಿದ್ದ ಇಬ್ಬರು ಆತನಿಂದ 2 ಲಕ್ಷ ರೂ. ಹೊಡೆದುಕೊಂಡಿದ್ದರು!
ಇದನ್ನೇ ಹನೀಟ್ರಾಪ್ ಅಂತಾರೆ. ಇಂಥ 28 ಪ್ರಕರಣಗಳು ದಿನೇ ದಿನೇ ವರದಿಯಾಗುತ್ತಲೇ ಇರುತ್ತವೆ. ಇವೆಲ್ಲದರ ಹಿಂದೆ ಅಸಲಿ ಕೇಡಿನ ಬುದ್ಧಿ ಗಂಡಿನದೇ ಆಗಿರುತ್ತದೆ. ಹೆಣ್ಣನ್ನು ಬಳಸಿ ಹೀಗೆ ಮಾಡಲಾಗುತ್ತದೆ. ಅಡಕತ್ತರಿಗೆ ಸಿಕ್ಕ ಅವಳು ಅವರ ಮಾತಿನಂತೆ ನಡೆದುಕೊಳ್ಳಬೇಕಾಗುತ್ತದೆ. ಇಡೀ ಲೂಟಿ ಆ ಗಂಡಸರದಾಗುತ್ತದೆ. ಹೆದರಿಸುವ ಕೆಲಸ ಆ ಕಿಡಿಗೇಡಿಗಳದ್ದು, ಪೊಲೀಸ್ ಸಮವಸ್ತ್ರ ಧರಿಸಿ ಅವರು ಬರುತ್ತಾರೆ, ಲೂಟಿ ಮಾಡಿ ಅವಳಿಗೊಂದಿಷ್ಟು ಕೊಟ್ಟು ಪರಾರಿಯಾಗುತ್ತಾರೆ.
ಸೂಳೆಗೇರಿ, ಆರ್ಕೆಸ್ಟ್ರಾ, ಡ್ಯಾನ್ಸ್, ಪೋರ್ನ್ ಮೂವೀಸ್, ಸೆಕ್ಸಿ ಕಾಮರ್ಸ್ ಎಲ್ಲದರಲ್ಲೂ ಹುಡುಗಿಯರನ್ನು ಹೀಗೆ ಬಳಸಲಾಗುತ್ತದೆ. ಆಕೆ ತನ್ನ ಯೌವನದ 5-6 ವರ್ಷಗಳನ್ನು ಈ ದಂಧೆಗಾಗಿಯೇ ಹಾಳು ಮಾಡಿಕೊಳ್ಳುತ್ತಾಳೆ. ನಂತರ ಯಾರಿಗೂ ತಿಳಿಯದಂತೆ ಎಲ್ಲೋ ಕಣ್ಮರೆಯಾಗುತ್ತಾಳೆ. ಓದುಬರಹ, ಸ್ವಾತಂತ್ರ್ಯ, ಸಮಾನತೆ ಮಾತುಗಳೇನೇ ಇರಲಿ, ಅಪರಾಧದ ಲೋಕದಲ್ಲಿ ಹುಡುಗಿಯರು ಇನ್ನೂ ತಳದ ಮೆಟ್ಟಿಲಲ್ಲೇ ನಿಂತಿದ್ದಾರೆ. ಸಾಮಾನ್ಯವಾಗಿ ಇವರು ಆ ಕಿಡಿಗೇಡಿಗಳ ಕೈಗೊಂಬೆ ಆಗಿರುತ್ತಾರಷ್ಟೆ, ಅಂಥವರ ಯೌವನದೊಂದಿಗೆ ಆಟವಾಡಿ ಹೀಗೆ ಬೀದಿಗೆ ತಳ್ಳಲಾಗುತ್ತದೆ.
ಇದರಲ್ಲಿ ದೋಷಿ ಅಂದ್ರೆ ಮೀಡಿಯಾ ಕೂಡ ಹೌದು. ಇಲ್ಲಿನ ತಲೆಬರಹ, ಅಪರಾಧ ಮಾಡುವವರಲ್ಲಿ ಹುಡುಗಿಯರೇ ಮುಂದೆ ಎಂಬಂತೆ ತೋರಿಸಿದೆ. ಅದೇ ಮೀಡಿಯಾ ಹುಡುಗಿಯರಿಗೆ ಸಮಾನತೆ, ಗೌರವಾದರ ತೋರಲು ಎಂದೂ ಮುಂದಾಗದು.
ಇನ್ ಸ್ಟಾಗ್ರಾಮ್ ಹಾಗೂ ಯೂಟ್ಯೂಬ್ ಶಾರ್ಟ್ ರೀಲ್ಸ್ ನಿಂದ ತುಂಬಿವೆ. ಇದರಲ್ಲಿ ಹುಡುಗಿಯರನ್ನು ಇನ್ ಫ್ಲೂಯೆನ್ಸರ್ಸ್ ಆಗಿ ಹೆಸರು ಗಳಿಸಲು ಲಾಲಸೆ ತೋರಲಾಗುತ್ತದೆ. ನಂತರ ಜ್ಯೋತಿ ಮಲ್ಹೋತ್ರಾರ ತರಹ ವಿದೇಶಿ ಸಪ್ಲೈ ಎಂದು ಘೋಷಿಸಲಾಗುತ್ತದೆ. ಯಾವ ಹುಡುಗಿಯರು ಎಂಜಿನಿಯರಿಂಗ್, ಮೆಡಿಸಿನ್, ಕಂಪ್ಯೂಟರ್ ಸೈನ್ಸ್, ಮ್ಯಾನೇಜ್ ಮೆಂಟ್ ಡಿಗ್ರಿ ಪಡೆಯುತ್ತಿದ್ದಾರೋ ಅವರಲ್ಲಿ ಕೆಲವರಿಗೆ ಮಾತ್ರ ಐಡೆಂಟಿಟಿ ಸಿಗುತ್ತದೆ. ಪರೀಕ್ಷೆಗಳಲ್ಲಿ ಸದಾ ಮುಂದಿರುವ ಹುಡುಗಿಯರು ಕೆಲವೇ ವರ್ಷಗಳಲ್ಲಿ ಮನೆಯ ಗಂಡಸರಿಗೆ ಬಲಿಯಾಗಿ ಹೋಗುತ್ತಾರೆ. ಇದಕ್ಕೆ ಮೇಲೆ ತಿಳಿಸಲಾದ ಅದೇ ತಲೆಬರಹ ದೋಷಿ ಎಂಬುದು ನಿರ್ವಿವಾದ.





