ಇತ್ತೀಚೆಗೆ ದಿನಪತ್ರಿಕೆಗಳಲ್ಲಿ ಪ್ರಕಟವಾದ ಕೆಲವು ಘಟನೆಗಳು ನನ್ನ ಮನಸ್ಸನ್ನು ಬಹಳವಾಗಿ ಕಾಡಿದವು. ಮೊದಲ ನೋಟಕ್ಕೆ ಇವು ಸಾಮಾನ್ಯ ಅಪರಾಧ ಅಥವಾ ಆತ್ಮಹತ್ಯೆಯ ಪ್ರಕರಣಗಳಂತೆ ಕಂಡರೂ, ಆಳವಾಗಿ ಪರಿಶೀಲಿಸಿದಾಗ ಇಂದಿನ ಶಿಕ್ಷಣ ವ್ಯವಸ್ಥೆ, ಕುಟುಂಬ ವ್ಯವಸ್ಥೆ ಮತ್ತು ಸಾಮಾಜಿಕ ಮೌಲ್ಯಗಳ ಬಗ್ಗೆ ಅನೇಕ ಪ್ರಶ್ನೆಗಳನ್ನು ಎತ್ತುತ್ತವೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ಬಂಡಲ ಗ್ರಾಮದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ಶಾಲೆಯೊಂದರಲ್ಲಿ 15 ವರ್ಷದ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯದಲ್ಲಿಯೇ ಮಗುವಿಗೆ ಜನ್ಮ ನೀಡಿ, ಬಳಿಕ ಆ ನವಜಾತ ಶಿಶುವನ್ನು ಕಿಟಕಿಯಿಂದ ಹೊರಗೆ ಎಸೆದಿದ್ದು, ಸುಮಾರು 2.8 ಕೆ.ಜಿ ತೂಕದ ಹೆಣ್ಣು ಹಸುಕೂಸು ದುರಾದೃಷ್ಟವಷಾತ್ ತನ್ನ ಜನ್ಮದಾತೆಯಿಂದಲೇ ಎಸೆಯಲ್ಪಟ್ಟಿದ್ದ ಕಾರಣ ಮೃತಪಟ್ಟಿರುವ ಪ್ರಕರಣ ಇಡೀ ಸಮಾಜವನ್ನೇ ಬೆಚ್ಚಿಬೀಳಿಸಿದೆ. ಆಕೆ ಗರ್ಭಿಣಿಯಾ

ಇನ್ನೊಂದು ಪ್ರಕರಣದಲ್ಲಿ, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಬಿ.ಸಿ.ಎ. (BCA) ಓದುತ್ತಿದ್ದ ಗಾಯತ್ರಿ ಎಂಬ ವಿದ್ಯಾರ್ಥಿನಿ, ಕಾಲೇಜು ಶುಲ್ಕ ಪಾವತಿಸಲು ಸಾಧ್ಯವಾಗದೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಂದೆಯಿಂದ ಪಡೆದಿದ್ದ 10,000/- ಕಾಲೇಜು ಶುಲ್ಕದ ಹಣವನ್ನು ಪರಿಚಯಸ್ಥನೊಬ್ಬನಿಗೆ ಸಾಲವಾಗಿ ನೀಡಿದ್ದ ಆಕೆ, ಸೂಕ್ತ ಸಮಯದಲ್ಲಿ ಆತ ಹಣ ಮರಳಿ ಕೊಡದ ಕಾರಣ ಆಕೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದೆ ಮನನೊಂದು ಬಾವಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇನ್ನು ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆಗಳು ಸೋರಿ ಹೋಗಿ ಇಡೀ ಪರೀಕ್ಷೆಯನ್ನೇ ರದ್ದು ಪಡಿಸಿ ಮತ್ತೊಮ್ಮೆ ಪರೀಕ್ಷೆ ಮಾಡಲು ಸರ್ಕಾರ ಆದೇಶ ನೀಡಿರುವಾಗ, ದೇಶದ ಅನೇಕ ಭಾಗಗಳಲ್ಲಿ ಮತ್ತೊಮ್ಮೆ ಪರೀಕ್ಷೆಯನ್ನು ಎದುರಿಸಲಾಗದೇ, ಕೆಲವು ವಿದ್ಯಾರ್ಥಿಗಳು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ಹಾಗೆ ನೋಡಿದರೆ, ಪಶ್ನೆಪತ್ರಿಕೆ ಸೋರಿಹೋಗಿರುವುದನ್ನು ಸಮಮರ್ಥನೆ ಮಾಡುತ್ತಿಲ್ಲವಾದರೂ, ನಿಜವಾಗಿಯೂ ನೀ
ಈ ಎಲ್ಲಾ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಓದಿ ಬೆಳೆಯಬೇಕಾದ ನಮ್ಮ ಯುವಜನತೆ ಜೀವನದ ಸವಾಲುಗಳನ್ನು ಎದುರಿಸುವ ಮಾನಸಿಕ ದೃಢತೆ ಮತ್ತು ನೈತಿಕ ಮಾರ್ಗದರ್ಶನದ ಕೊರತೆಯಿಂದ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವುದು ಸ್ಪಷ್ಟವಾಗುತ್ತದೆ.
ಬದಲಾಗುತ್ತಿರುವ ಸಾಮಾಜಿಕ ಪರಿಸರ
ಇಂದಿನ ಕಾಲದಲ್ಲಿ ಬಾಲ್ಯದಿಂದಲೇ ಮಕ್ಕಳು ದೂರದರ್ಶನ, ಸಿನಿಮಾಗಳು, ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ಗಳ ಪ್ರಭಾವಕ್ಕೆ ಒಳಗಾಗುತ್ತಿದ್ದಾರೆ. ಮಾಹಿತಿಯ ಜೊತೆಗೆ ಅಪರಿಪಕ್ವ ಮನಸ್ಸುಗಳಿಗೆ ಅಸಮರ್ಪಕ ವಿಷಯಗಳೂ ಸುಲಭವಾಗಿ ಲಭ್ಯವಾಗುತ್ತಿವೆ. ಪರಿಣಾಮವಾಗಿ ಪ್ರೀತಿ, ಸಂಬಂಧಗಳು ಮತ್ತು ಜೀವನದ ಜವಾಬ್ದಾರಿಗಳ ಬಗ್ಗೆ ಸಮರ್ಪಕ ಅರಿವು ಮೂಡುವ ಮುನ್ನವೇ ಹಲವರು ಭಾವನಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ.





