ನೀತಿ ಆಯೋಗದ ಮೀಟಿಂಗ್‌ ನಲ್ಲಿ ಪ್ರಧಾನಿ ಬಲು ಹೆಮ್ಮೆಯಿಂದ ಹೇಳಿದ್ದು ಎಂದರೆ, ಸ್ತ್ರೀಶಕ್ತಿಯ ಬಳಸಿಕೊಳ್ಳುವ ಪಾಲಿಸಿಗಳನ್ನು ಕೇಂದ್ರ ರಾಜ್ಯ ಸರ್ಕಾರಗಳು ಹೆಚ್ಚಿಸಿಕೊಳ್ಳಬೇಕು. ಆದರೆ ಅವರದೇ ಪಕ್ಷ ಹಿಂದೂ ಹಿಂದೂ ಪೂಜೆ ಪುನಸ್ಕಾರ ಎನ್ನುತ್ತಾ ಹೆಂಗಸರನ್ನು ಮತ್ತೆ ಮಂದಿರಗಳಲ್ಲಿ ಕಳಸ ಹೊತ್ತೊಯ್ಯಲು, ಗಂಟೆಗಟ್ಟಲೆ ವ್ರತಪೂಜೆ ನಡೆಸಲು, ದಿನವಾರಗಟ್ಟಲೆ ನಡೆಯುವ ಧಾರ್ಮಿಕ ಪ್ರವಚನಗಳಿಗೆ, ಹರಿಕಥೆಗಳ ಕಡೆ ತಳ್ಳುತ್ತಿದೆ. ಎಲ್ಲಿ ಹೊಸ ದೇವಾಲಯ ಏಳುತ್ತದೋ, ಅಲ್ಲಿ ಹೊಸ ಗ್ರಾಹಕರಾಗಿ ಹೆಂಗಸರೇ ತುಂಬಿ ತುಳುಕಾಡುತ್ತಾರೆ. ಅವರಿಂದಲೇ ಮಂದಿರದ ಪುರೋಹಿತರ ಮನೆ ಬೆಳಗುತ್ತದೆ, ದಾನದಕ್ಷಿಣೆಗಳ ಮಳೆಗರೆಯುತ್ತಾರೆ.

ವಿಶ್ವ ದೃಷ್ಟಿಯಿಂದ ಭಾರತವೇನೋ ಎಲ್ಲಕ್ಕಿಂತ ನಾಲ್ಕನೇ ದೊಡ್ಡ ಅರ್ಥ ವ್ಯವಸ್ಥೆ ಆಗಿದೆ. ಆದರೆ ಯಾವ ದೇಶದಲ್ಲಿ ಪ್ರತಿ ವ್ಯಕ್ತಿಯ ಆದಾಯ ಕೇವಲ 2,500 ಡಾಲರ್‌ ಆಗಿದೆಯೋ, ಅಮೆರಿಕನ್‌ ಪ್ರಜೆಗಿಂತ 30 ಪಟ್ಟು ಕಡಿಮೆ ಇದೆಯೋ, ಯಾವ ದೇಶದಲ್ಲಿ 84 ಕೋಟಿಗಳಲ್ಲಿ ಅರ್ಧ ಪಾಲು ಹೆಂಗಸರು, 5 ಕಿಲೋ ಧಾನ್ಯವನ್ನು ಸರ್ಕಾರದಿಂದ ಉಚಿತವಾಗಿ ಪಡೆಯುತ್ತಿದ್ದಾರೋ, ಅಂಥ ಕಡೆ ಎಲ್ಲಿಂದ ಸ್ತ್ರೀಶಕ್ತಿ ಒಗ್ಗೂಡಲು ಸಾಧ್ಯ? ಇಲ್ಲಿ ಪ್ರತಿ ಹೆಣ್ಣನ್ನೂ ಗಂಡ, ಮಕ್ಕಳನ್ನು ನೋಡಿಕೊಳ್ಳಲೆಂದೇ ತಳ್ಳಲ್ಪಟ್ಟಿರುವಾಗ, ಅವಳನ್ನು ಮೈಲುಗಟ್ಟಲೇ ನಡೆಸಿ ಪೂಜೆಗಳಲ್ಲಿ ಮುಳುಗಿಸಿದರೆ, ಅವಳು ಪೂಜೆಯಿಂದ ಮನೆ ಉದ್ಧರಿಸುತ್ತಾಳಾ ಅಥವಾ ನಮ್ಮ ದೇಶಕ್ಕೆ ನಾಲ್ಕನೇ ಸ್ಥಾನ ಕೊಡಿಸಲು ನೆರವಾಗುತ್ತಾಳಾ?

ಹೆಂಗಸರು ಇಂದು ಎರಡು ಪಟ್ಟು ಹೆಚ್ಚಿನ ಜವಾಬ್ದಾರಿ ಹೊರುತ್ತಿದ್ದಾರೆ. ಅವರು ಪತಿ, ತಂದೆಯ ಗುಲಾಮಗಿರಿಯಿಂದ ಮುಕ್ತರಾಗಿದ್ದಾರೆ ಎನಿಸುತ್ತಿಲ್ಲ. ತುಳಿಸದಾಸರ ತರಹ ಜಪಮಾಲೆ ಎಣಿಸುತ್ತಾ ಇರು, ಪಶುವಿನಂತೆ ನಡೆಸಲ್ಪಡುತ್ತಿಲ್ಲ ಎಂದೆನಿಸದು. ಕಾರ್ಖಾನೆ, ಕಛೇರಿಗಳಲ್ಲಿ ದುಡಿಯುವ ಹೆಚ್ಚಿನ ಹೆಂಗಸರ ಸಂಪಾದನೆ ಪತಿ, ತಂದೆ, ಅಣ್ಣ ತಮ್ಮಂದಿರ ಪಾಲಾಗುತ್ತದೆ. ಹೊರಗೆ ಬಂದು ಹೀಗೆ ದುಡಿಯುತ್ತಾ, ಮನೆಗೆ ಹೋಗಿಯೂ ಅವರು ಎಲ್ಲಾ ಕೆಲಸ ಮಾಡಬೇಕಾಗುತ್ತದೆ.

ಹೆಣ್ಣು ಸಂಪಾದಿಸುತ್ತಿದ್ದರೂ, ಇಂದಿಗೂ ಸಹ ವರದಕ್ಷಿಣೆ ತೆರಬೇಕಾಗಿರುವುದೇ ಇದಕ್ಕೆ ಸಾಕ್ಷಿ. ವಿಚ್ಛೇದನದ ಪ್ರತಿ ಕೇಸ್‌ ನಲ್ಲೂ, ಪತ್ನಿ ಹೇಳುವುದು, ಅವಳ ಹೆತ್ತವರು ದೊಡ್ಡ ಮೊತ್ತದ ವರದಕ್ಷಿಣೆ ಕೊಟ್ಟಿದ್ದರು, ಡೈವೋರ್ಸ್‌ ನಂತರ ಅದು ವಾಪಸ್‌ ಬೇಕು ಅಂತ.

ಇಂದೂ ಸಹ ಹೆಣ್ಣು ಮನೆಯಿಂದ ಹೊರಡುವಾಗ ಭಯದಿಂದಲೇ ಹೊರಡುತ್ತಾಳೆ, ಬೀದಿ ಕಾಮಣ್ಣರು ಏನು ಮಾಡುತ್ತಾರೋ ಏನೋ ಅಂತ. ಖುಲ್ಲಂಖುಲ್ಲ ಇವರನ್ನು ರೇಪ್‌ ಮಾಡುವ ಬೆದರಿಕೆ ಬರುತ್ತದೆ. ವಿದೇಶ ಸಚಿವ ವಿಕ್ರಂ ಮಿಸ್ತ್ರೀಗೆ ಭಾರತ ಪಾಕ್ ಯುದ್ಧ, ಇದ್ದಕ್ಕಿದ್ದಂತೆ ಲಾಹೋರ್‌ ಕರಾಚಿಗಳ ಮೇಲೆ ನಡೆಸಲಾದ ಆಕ್ರಮಣ ಹೊರತುಪಡಿಸಿ, ಬಂದ್‌ ಮಾಡಿಸಿದ ದೋಷಿ ಎಂದಾಗ, ಕಂದಾಚಾರಿಗಳು ಅವರ ಹೆಣ್ಣುಮಕ್ಕಳನ್ನು ರೇಪ್‌ ಮಾಡುತ್ತೇವೆನ್ನುವ ಬೆದರಿಕೆ ಒಡ್ಡಿದರು. ಆದರೆ ಅಸಲಿಗೆ ಅವರು ಕೇವಲ ಸರ್ಕಾರದ ವತಿಯಿಂದ ಸಾಕ್ಷಿ ಹೇಳುತ್ತಿದ್ದರಷ್ಟೇ, ಸೂಚನೆ ನೀಡುತ್ತಿದ್ದರೇ ಹೊರತು ನೀತಿನಿರ್ಧಾರಗಳ ಡಿಸಿಶನ್‌ ಮೇಕರ್ ಆಗಿರಲಿಲ್ಲ. ಆನ್‌ ಲೈನ್‌ ನಲ್ಲಿ ಬೆದರಿಕೆ ಒಡ್ಡುವ ಒಬ್ಬರನ್ನೂ ಪೊಲೀಸರು ಬಂಧಿಸಲಿಲ್ಲ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ