ಕಥೆ ಜಗದೀಶ . ಹಾದಿಮನಿ

ಗಿರೆಪ್ಪಾ ಸಿದ್ದವ್ವ ಒಂದಾದ ಮೇಲೆ ಒಂದರಂತೆ ಐದೂ ಹೆಣ್ಣುಮಕ್ಕಳೇ ಹುಟ್ಟಿದಾಗ ಗಂಡು ಮಗುವಿಗಾಗಿ ತೀರದ ದುರಾಸೆಯ ಷಡ್ಯಂತ್ರ ಹೂಡಿದರು. ನಡೆದದ್ದಾದರೂ ಏನು....?

``ರೀ ಮಗಳಿಗ್ಯಾ ಐದ್‌ ವರುಸ್ಯಾನ ಆಗಾಕಬಂದ್ವು. ಇನಾ ಅದೇಟು ದಿನ ಮನ್ಯಾಗಿಟುಗೊಂದು ಕುಂದ್ರುತೀರಿ?''

``ಹೊಕ್ಕಿನಾಳ ಮಾರಾಯ್ತಿ, ಯಾಕಾಟು ಅಸ್ರು ಮಾಡ್ತಿ?''

``ಯಾಕಂದ್ರೆ, ಅಚಗೊಂಡ್ರ ಆಮ್ಯಾಗೇನ್ಮಾಡ್ತಿ? ಮೂರು ವರುಸುದ್ದಿನಾತು ಈಟಾ ಹೇಳಾಕತಿನಿ, ನೀಯೇನು ಕಿವ್ಯಾಗರ ಹಾಕ್ಕೊಂತಿಯೇನು?''

``ನೀನಾ ನೋಡ್ತಿಯಲ್ಲ, ನಾವೇನು ಕಾಲಿ ಅದಿವೇನು? ಹೊಟ್ಟಿ ತುಂಬಿಸಿಗಳ್ಳಾಕ ಯಾಸ್ಯಾಗಾರಂಗ ಊರೂರು ಸುತ್ತಾಡಕತಿವಿಲ್ಲ?''

``ನನಗು ಎಲ್ಲ ಅರ್ತವಾಗುತ್ತ ಮಾರಾಯ. ಆಮ್ಯಾಕ ಮನುಸೊಪ್ಪುದಾ ಹೋದೀತಂತಾ ಸಂಗ್ಟ, ಮತ್ತೇನಿಲ್ಲ.''

``ಅವ್ದು, ನೀ ಹೇಳಾದು ಖರೆ ಐತಿ. ಈಗ ಅದೇಟ ಅಚ್ಕೊಂಬಿಟ್ಟಾಳ. ಬಿಡಾದುಬಿಟ್ಟು ಬರಾ ಸುಕ್ರುವಾರ ಹೋಗ್ಯಾಬಿಡ್ತಿನಾಳ.''

``ಏನೊಕ್ಕೂವೆ, ಈಟ ಹೇಳ್ಕೊಂತಾ ಹೊಕ್ಕೂವೆ, ನಿನಗ ಬಿಟ್ಟಿದ್ದು ನೋಡು.''

``ಇಲ್ಲ ಮಾರಾಯ್ತಿ, ಅದೆಂದಿದ್ರು ತಪ್ಪುದು ಕರ್ಮ. ಈ ಸಲ ಮಾತ್‌ ತಪ್ಪ್ಲಾತಾ?''

``ಆತ್ಬರ್ರಿ ಉಣ್ಣಾಮ,'' ಅನ್ಕೋತನ ಸಿದ್ದವ್ವ ಬಾಗ್ಲುಕ ಬಂದು, ``ಚಂದ್ರಿ, ತಂಗಿನೂ ಕರ್ಕಂಬಾರಮ್ಮ ಉಣ್ಣಾಕಂತ್ರಿ,'' ಅಂತ ಅಂಗಳದಾಗ ಆಡ್ತಿದ್ದ ಮಕ್ಳಿಗ್ಯಾ ಕೂಗಿ, ಮನ್ಯಾಕ ಹೋದ್ಲು.

ಅಣ್ತಮ್ರುಗೂಡ ಜಗಳ ಮಾಡ್ಕೊಂಡ ಗಿರೆಪ್ಪ ಹಾರಿ, ಗುದ್ಲಿ, ಪಿಕಾಸಿ, ಪುಟ್ಟಿ, ಹೆಗಲಿಗೇರಿಸ್ಕೊಂಡು, ಹೆಂಡ್ತಿ ಜೊತಿ ಊರ್ಬಿಟ್ಟು ಐದು ವರುಸ್ಯಾನ ಆಗಾಕಬಂತು. ಆಗ ಚಂದ್ರಿ ಹೆಚ್ಚುಕಡಿಮಿ ಮೂರು ವರುಸದಾಕಿದ್ಲು, ಭೂಮಿ ಇವನ ಹೊಟ್ಟ್ಯಾಗಿದ್ಲು. ಅಲ್ಲಿ ಇಲ್ಲಿ ಚಾರುಚೂರು ಕೆಲಸ ಮಾಡ್ಕೊಂತಾ ಬದುಕಿನ ಬಂಡಿ ಕಟಗೊಂಡ್ರೂ ರೋಡು, ಗಟಾರ ಮಾಡಾಗ, ಟೆಲಿಫೋನ್‌ ಲೈನ್‌ ಹಾಕಾಗ, ಸ್ವರ್ಗಕ್ಕ ಮೂರ ಗೇಣನ್ನುಂಗ ಗಂಡಹೆಂಡ್ತಿ ಕಟಿ ದುಡಿತಿದ್ರು. ತೆಗ್ಗು ಕಡಿಯೋದಂದ್ರ ಇಬ್ರಿಗೂ ಅದೇನೋ ಹುರುಪು ಹುಮ್ಮಸ್ಸು. ಗಂಡ ಹಾರೆಯಿಂದನೋ ಪಿಕಾಸಿಯಿಂದನೋ ನೆಲ ಅಗುದ್ರು, ಹೆಣ್ತಾದಾಕಿ ಸಲಕಿಲ್ಯಾ ಯಾ ಎಳುದು ಪುಟ್ಟ್ಯಾಗ ತುಂಬಿ ಮ್ಯಾಗ ಒಗಿತಿದ್ಲು. ಇಲ್ಲಿ ಸ್ವಲ್ಪ ಕೆಲಸ ಕಡಿಮ್ಯಾದ್ವು ಅಂದಕೊಡ್ಯಾ ಮಂಗಳೂರಿಗೂ ಹೋಗಿ ಟೆಂಗಿನಬುಡ ಬಿಡಿಸ್ತಿದ್ರು. ಆ ಕೆಲಸನೂ ಸಿಗದಾಗ, ಎಲ್ಲಿಂದನೋ ಬಂದು ನಿಂದ್ರ ಬೋಟಿಗೆ ಗೊಬ್ರ ಹೇರಾಕ ಇಳಸಾಕ ಗಂಡ ಹೊಕ್ಕಿದ್ರ, ಹೆಂಡ್ತಿ ಕೂಲಿನಾಲಿಗ್ಯಾರ, ಇಲ್ಲ ಯಾರಾದ್ರೂ ಗೌಂಡಿ ಕೈಯಾಗ ಇಟ್ಟಂಗಿ ಕೊಡಕಾರ, ಗಾರೆ ಕೆಲಸಕ್ಕಾರ ಹೊಕ್ಕಿದ್ಲು. ದುಡಿಯ ಉಮೇದಿದ್ರೂ ಕೆಲಸ ನಿಶ್ಚಿತಾಗಿರ್ಲಿಲ್ಲ. ಹಿಂಗಾಗಿ, ಊರಲ್ದ ಊರು ಕೆಲಸ ಹುಡುಕ್ಕೊಂಡು ತಿರುಗಾಡ್ತಿದ್ರು. ಐದು ವರ್ಷದಾಗನಾ ಐವತ್ತೂರರ ನೋಡಿದ್ರು.

ಕೆಲಸಕ್ಕೇನು ಬರ ಇರ್ಲಿಲ್ಲ. ಹೊಲ ಮನ್ಯಾಗ ದುಡುದ್ರ ಕೂಲಿ ಗಿಟ್ಟಲ್ಲಂತ ಒಜ್ಜ್ಯಾ ಕೆಲಸಾನ ಹುಡುಕ್ತಿದ್ರು, ಅದರಾಗ ತೆಗ್ಗು ಕಡ್ಯಾವಿದ್ರಂತೂ ನೀರು ಕುಡಿದಷ್ಟು ಸಲೀಸಾಗಿತ್ತು. ಇತ್ತಿತ್ಲಾಗಿ ಮನಿತರ ತೋಡಾ ಸಿಕ್ಕಾ ಸಿಗ್ತಿದ್ವು. ಅ ಬಿಟ್ರ ಕಂಪೌಂಡು, ನೀರಿನ ಪೈಪ್‌ ಲೈನು, ಇಂಗ್ಬಚ್ಲಾ ತೆಗ್ಗು ತಗ್ಯಾ, ಹಳೆಮನಿ ಕೆಡಾ, ಹೊಲದಾಗ ಕಟ್ಟೆ ಕಡ್ಯಾ ಇದ್ದ ಇರ್ತಿದ್ವು. ಹಗ್ಯಾದೋ ರಾತ್ರ್ಯಾದೋ ಹಿಂಗ ದುಡುದುಡುದು ಆಟೋ ಈಟೋ ಕೈಯಾಗ ನಾಕ್‌ ದುಡ್ಡು ಮಾಡ್ಕೊಂಡಿದ್ರು, ಆಪತ್ಕಾಲದಾಗ ಬರ್ತಾಂತ ಚೂರ್‌ ಗಂಟ್ ಮಾಡ್ಕೊಂಡು ಪೆಟಿಗಿನೂ ತುಂಬ್ಕೊಂಡಿದ್ರು.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ