ಕನ್ನಡ ಕಿರುತೆರೆಯ `ಕುಲವಧು, ಲಕ್ಷ್ಮೀ ನಿವಾಸ’ ಧಾರಾವಾಹಿಗಳ ಮೂಲಕ ಮನೆಮಾತಾದ ನಟಿ ದಿಶಾ ಮದನ್, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಈಕೆಗೆ ಇನ್ ಸ್ಟಾಗ್ರಾಮ್ ನಲ್ಲೇ 9.5 ಲಕ್ಷಕ್ಕೂ ಅಧಿಕ ಮಂದಿ ಫಾಲೋಯರ್ಸ್ ಇದ್ದಾರೆ. ದಿಶಾ ಉತ್ತಮ ಡ್ಯಾನ್ಸರ್ ಕೂಡ ಹೌದು. `ಕುಲವಧು’ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು, ಪ್ರಸ್ತುತ `ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕನ್ನಡದ `ಫ್ರೆಂಚ್ ಬಿರಿಯಾನಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಕನ್ನಡ ಕಿರುತೆರೆಗೆ ಬರುವ ಮುನ್ನ ಹಿಂದಿ ಕಿರುತೆರೆಯ ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ ಸೀಸನ್-4ರಲ್ಲಿ ಸ್ಪರ್ಧಿಯಾಗಿದ್ದರು. ಇತ್ತೀಚೆಗಷ್ಟೇ ಫ್ರಾನ್ಸ್ ನಲ್ಲಿ ನಡೆದ ವಿಶ್ವದ ಪ್ರತಿಷ್ಠಿತ 7-8ನೇ ಕಾನ್ಸ್ ಫಿಲ್ಮಂ ಫೆಸ್ಟಿವಲ್ ನಲ್ಲೂ ಮಿಂಚಿದ್ದರು.

`ನಮ್ಮ ವೀಟ್ಟು ಪೊಣ್ಣು‘ ಅಶ್ವಿನಿ ಆನಂದಿತಾ
ಅಶ್ವಿನಿ ಆನಂದಿತಾ ಮಾಡೆಲ್ ಆಗಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ಕನ್ನಡ ಮತ್ತು ತಮಿಳು ಕಿರುತೆರೆಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದರು. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಹಳ್ಳಿ ಹೈದ ಪ್ಯಾಟೆಗ್ ಬಂದಾ’ ಸೀಸನ್3 ಮತ್ತು ತಮಿಳಿನ ಡ್ಯಾನ್ಸ್ ಜೋಡಿ ಡ್ಯಾನ್ಸ್ ಸೀಸನ್-1ರ ನಂತರ, ರಿಯಾಲಿಟಿ ಶೋಗಳ ಮೂಲಕ ಜನಮನ ಗೆದ್ದರು. ತಮಿಳಿನ `ಉಪ್ಪು ಪುಳಿ ಕಾರಂ, ಕುಕ್‌ವಿತ್ ಕೋಮಾಳಿ, ನಮ್ಮ ವೀಟ್ಟು ಪೊಣ್ಣು’ನಲ್ಲಿ ಮೀನಾಕ್ಷಿ ಕಾರ್ತಿಕ್ ಮತ್ತು ತಂಗಮಹಲ್ ನಲ್ಲಿ ಹಾಸಿನಿ ಪಾತ್ರದ ಮೂಲಕ ಪ್ರಸಿದ್ಧರಾದರು.

`ಲಗ್ನಪತ್ರಿಕೆ‘ ಖ್ಯಾತಿಯ ಸಂಜನಾ ಬುರ್ಲಿ
ಕಿರುತೆರೆ ಹಾಗೂ ಹಿರಿತೆರೆಯಲ್ಲಿ ತಮ್ಮ ಅಮೋಘ ಅಭಿನಯದ ಮೂಲಕ ಗುರುತಿಸಿಕೊಂಡವರು ಸಂಜನಾ ಬುರ್ಲಿ. ಕಿರುತೆರೆಯ `ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಮೂಲಕ ಮನೆಮಾತಾದ ಸಂಜನಾ ಬುರ್ಲಿ, `ಲಗ್ನಪತ್ರಿಕೆ’ ಧಾರಾವಾಹಿ ಮೂಲಕ ಕಿರುತೆರೆಗೆ ಅಡಿಯಿಟ್ಟರು. ಇದಕ್ಕೂ ಮುನ್ನ `ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್, ನಾನ್ ವೆಜ್’ ಸಿಮಿಮಾಗಳಲ್ಲಿ ನಟಿಸಿದ್ದರು. ಬೆಂಗಳೂರಿನ ಡಾ. ಅಂಬೇಡ್ಕರ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ವಿದ್ಯಾಭ್ಯಾಸ ಮುಗಿಸಿರುವ ಇವರು `ವೀಕೆಂಡ್’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ.

ಶಶಿರೇಖಾ ಪರಿಣಯಂನ ಮೇಘನಾ ಲೋಕೇಶ್
ಕನ್ನಡ ಹಾಗೂ ತೆಲುಗು ಕಿರುತೆರೆ ಧಾರಾವಾಹಿಗಳ ಮೂಲಕ ತಮ್ಮ ಛಾಪು ಮೂಡಿಸಿದವರು ಮೇಘನಾ ಲೋಕೇಶ್. ಬಾಲ್ಯದಿಂದಲೇ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಮೇಘನಾ, 270ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ವಹಿಸಿದರು. `ದೇವಿ’ ಧಾರಾವಾಹಿ ಮೂಲಕ ಕಿರುತೆರೆಗೆ ಅಡಿಯಿಟ್ಟರು. `ಪವಿತ್ರ ಬಂಧನ, ಪುರುಷೋತ್ತಮ’ ತೆಲುಗಿನ `ಶಶಿರೇಖಾ ಪರಿಣಯಂ, ಕಲ್ಯಾಣ ವೈಭೋಗಂ’ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ಇದಿ ಮಾ ಪ್ರೇಮಕಥಾ, ಭಾವನಾ, ಸುಂದರ ಜೀವನಂ, ಅಮೀರ್ ಪೇಟ್ ಟು ಅಮೆರಿಕಾ’ದಲ್ಲೂ ಅಮೋಘವಾಗಿ ಅಭಿನಯಿಸಿದ್ದಾರೆ.

ನಾಗರಾಣಿ ದೀಪಿಕಾ ದಾಸ್
ಕನ್ನಡ ಕಿರುತೆರೆಯ ಜನಪ್ರಿಯ ನಟಿ ದೀಪಿಕಾ ದಾಸ್, ಕಿರುತೆರೆಯಲ್ಲಿ ನಾಗಿಣಿಯಾಗಿ ಬುಸುಗುಟ್ಟಿ ಕನ್ನಡಿಗರ ಫೇವರಿಟ್ ನಾಗರಾಣಿ ಎನಿಸಿದ್ದಾರೆ. ಆ ಸೀರಿಯಲ್ ನಂತರ ಜನ ಅವರನ್ನು ನಾಗಿಣಿಯಾಗಿಯೇ ಇಷ್ಟಪಡುತ್ತಾರೆ. ಇದಾದ ನಂತರ ದೀಪಿಕಾ ದಾಸ್ ಗೆ ಹೆಸರು ತಂದು ಕೊಟ್ಟಿದ್ದು `ಬಿಗ್ ಬಾಸ್ ಸೀಸನ್.’ ತಮ್ಮ ಮಾತು, ಆಟ, ಸ್ಟೈಲ್ ಎಂತಹುದೇ ಸಂದರ್ಭ ಬಂದರೂ ಸ್ಟ್ರಾಂಗ್ ಆಗಿ ನಿಂತು ಹೋರಾಡುವ ಅವರ ಪರಿ, ಬೋಲ್ಡ್ ನೆಸ್ ಗೆ ಕನ್ನಡಿಗರು ಫಿದಾ ಆಗಿದ್ದರು. ಸದಾ ವಿದೇಶ ಸುತ್ತುವ ಬೆಡಗಿ ದೀಪಿಕಾ ದಾಸ್, `ಪಾರು ಪಾರ್ವತಿ’ ಸಿನಿಮಾದಲ್ಲೂ ನಟಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿರುವ ಅವರು, ಹೊಸ ಫೋಟೋ ಶೂಟ್ ಮೂಲಕ ಅಭಿಮಾನಿಗಳು ಹುಬ್ಬೇರಿಸುವಂತೆ ಮಾಡಿದ್ದಾರೆ.

`ಹೋಮ್ ಮಿನಿಸ್ಟರ್’ ಲಾಸ್ಯಾ ನಾಗರಾಜ್
ದಕ್ಷಿಣ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಬಹುಭಾಷಾ ನಟಿ ಲಾಸ್ಯಾ ನಾಗರಾಜ್, ಬೆಂಗಳೂರಿನ ಮೌಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದರು. ಲಾಸ್ಯಾ ಆರಾಧನಾ ಭರತನಾಟ್ಯ ಸಂಸ್ಥೆಯಲ್ಲಿ ನೃತ್ಯ ನಿರ್ದೇಶಕಿಯಾಗಿದ್ದರು. ಕನ್ನಡದ `ಹೋಮ್ ಮಿನಿಸ್ಟರ್. ದೃಶ್ಯ-2, ಮಂಗಳವಾರ ರಜಾ ದಿನ, ಅಸತೋಮ ಸದ್ಗಮಯ,’ ಹೀಗೆ ಅನೇಕ ಚಿತ್ರಗಳಲ್ಲಿ ನಟಿಸಿದ್ದು, ಬಿಗ್ ಬಾಸ್ ಸೀಸನ್ ರ ವಿಶೇಷ ಸ್ಪರ್ಧಿಯಾಗಿದ್ದರು. ಕೆನಡಾದ ಟೊರಾಂಟೊ ಫಿಲ್ಮಂ ಮೇಕಿಂಗ್ ಸ್ಕೂಲ್ ನಲ್ಲಿ ಸಿನಿಮಾ ಮೇಕಿಂಗ್, ನಟನೆ, ನಿರ್ದೇಶನದ ಬಗ್ಗೆ ಕಲಿಯುತ್ತಿದ್ದಾರೆ. ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವದ ನೂರಾರು ಮಾಡೆಲ್ ಗಳ ಮಧ್ಯೆ ರಾಂಪ್ ವಾಕ್‌ಮಾಡಿ ಮಿಸ್ ಏಷ್ಯಾ ಪೆಸಿಫಿಕ್ ರನ್ನರ್ ಅಪ್ ಕಿರೀಟವನ್ನು ಕೂಡ ಮುಡಿಗೆ ಏರಿಸಿಕೊಂಡಿದ್ದಾರೆ.

ಬಹುಭಾಷಾ ನಟಿ ನವ್ಯಾ ಸ್ವಾಮಿ
ದಕ್ಷಿಣ ಭಾರತದ ಬಹುಭಾಷಾ ನಟಿ ನವ್ಯಾ ಸ್ವಾಮಿ ಕನ್ನಡದ `ತಂಗಾಳಿ’ ಧಾರಾವಾಹಿ ಮೂಲಕ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಮೈಸೂರಿನ ಈ ಬೆಡಗಿ ಕಿರುತೆರೆಯ `ಲಕುಮಿ, ತಲಂಬ್ರಾಲು’ ಮೂಲಕ ಕನ್ನಡಿಗರ ಮನಗೆದ್ದರು. ತಮಿಳಿನ `ವಾಣಿ ರಾಣಿ, ಅರಣ್ ಮನ್ನೈ ಕಿಳಿ,’ ತೆಲುಗಿನ `ಕಂಟೆ ಕೂತುರುನೆ ಕನಾಲಿ, ನಾ ಪೇರು ಮೀನಾಕ್ಷಿ, ಆಮೇ ಕಥಾ’ದಲ್ಲಿ ನಟಿಸಿದರು. ತೆಲುಗಿನ `ಇಂತಿಂಟಿ ರಾಮಾಯಣಂ’ ಚಲನಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟರು. `ಪುಟ್ಟ ಬೊಮ್ಮ ಮತ್ತು ರಾವಣಾಸುರ’ದಲ್ಲೂ ಅಭಿನಯದ ಮೂಲಕ ತಮ್ಮದೇ ಆದ ಛಾಪು ಮೂಡಿಸಿದರು.

ಅದ್ಭುತ ಪ್ರತಿಭೆ ಚಂದನಾ ಅನಂತಕೃಷ್ಣ
ಕಿರುತೆರೆ ನಟಿ, ಗಾಯಕಿ, ರಂಗಭೂಮಿ, ಭರತನಾಟ್ಯ ಕಲಾವಿದೆ ಚಂದನಾ ಅನಂತಕೃಷ್ಣ. `ರಾಜಾರಾಣಿ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಡ್ಯಾನ್ಸಿಂಗ್ ಚಾಂಪಿಯನ್ಸ್ ಎಂಬ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದರು. `ಹೂಮಳೆ, ಮುದ್ದುಮಣಿಗಳು’ ಧಾರಾವಾಹಿಯಲ್ಲೂ ಅಭಿನಯಿಸಿದರು. ಬಿಗ್ ಬಾಸ್ ಸೀಸನ್ ರಲ್ಲಿ ಸ್ಪರ್ಧಿಯಾಗಿ ಪಾಲ್ಗೊಂಡಿದ್ದರು. ತೆಲುಗಿನ `ರುಧಿನಿ ಪರಿಣಯಂ’ ಮೂಲಕ ತೆಲುಗಿನ ಕಿರುತೆರೆಯಲ್ಲೂ ತನ್ನ ನಟನಾ ವೃತ್ತಿ ಆರಂಭಿಸಿದರು. ನಟನೆ ಮಾತ್ರವಲ್ಲದೆ, ಹಾಡು ಕರ್ನಾಟಕ ಹಾಡು ಕಾರ್ಯಕ್ರಮದ ನಿರೂಪಕಿ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.





