– ರಾಘವೇಂದ್ರ ಅಡಿಗ ಎಚ್ಚೆನ್.

ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಸಮಾರಂಭ ಅದ್ಧೂರಿಯಾಗಿ ನೆರವೇರಿತು

FB_IMG_1783669679748

ಈ ಚಲನಚಿತ್ರದ ಪೋಸ್ಟರ್ ಬಿಡುಗಡೆ ಸಮಾರಂಭವನ್ನು ಅಂಬೇಡ್ಕರ್ ಸೇನೆ ಕಚೇರಿಯಲ್ಲಿ ಅದ್ದೂರಿಯಾಗಿ ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಉಪಾಧ್ಯಕ್ಷರು ಭಾರತೀಯ ಜನತಾ ಪಾರ್ಟಿ , ಬೆಂಗಳೂರು ದಕ್ಷಿಣ ಜಿಲ್ಲೆ , ಡಾ. ಅರುಣ್ ಸೋಮಣ್ಣನವರು ಆಗಮಿಸಿ ಪ್ರೋತ್ಸಾಹಿಸಿದರು.

FB_IMG_1783669673387

ಪರಿಸರ ಸಂರಕ್ಷಣೆಯ ಪ್ರತೀಕವಾಗಿರುವ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಜೀವನಾಧಾರಿತ “ವೃಕ್ಷಮಾತೆ ಸಾಲುಮರದ ತಿಮ್ಮಕ್ಕ” ಚಲನಚಿತ್ರದ ಪೋಸ್ಟರ್‌ ಬಿಡುಗಡೆ ಸಮಾರಂಭವು ಅದ್ಧೂರಿಯಾಗಿ ನಡೆಯಿತು.

FB_IMG_1783669670741

ವೃಕ್ಷಗಳನ್ನು ಬೆಳೆಸುವುದನ್ನೇ ತಮ್ಮ ಬದುಕಿನ ಧ್ಯೇಯವನ್ನಾಗಿಸಿಕೊಂಡು, ಸಾವಿರಾರು ಮರಗಳನ್ನು ನೆಟ್ಟು ದೇಶಕ್ಕೆ ಪರಿಸರದ ಮಹತ್ವವನ್ನು ಸಾರಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಅವರ ಸ್ಫೂರ್ತಿದಾಯಕ ಜೀವನಗಾಥೆಯನ್ನು, ಡಾ. ನೆಲ್ಲಿಕಟ್ಟೆ ಹೆಚ್. ಸಿದ್ದೇಶ್ ಅವರ ಕೃತಿಯನ್ನು ಆಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಈ ಚಿತ್ರವು ಸಮಾಜಕ್ಕೆ ಪರಿಸರ ಜಾಗೃತಿ ಮೂಡಿಸುವ ಜೊತೆಗೆ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.

FB_IMG_1783669668067

ಈ ಸಂದರ್ಭದಲ್ಲಿ ಅಂಬೇಡ್ಕರ್‌ ಸೇನೆಯ ರಾಜ್ಯಾಧ್ಯಕ್ಷರು ಹಾಗೂ ಮುಖಂಡರಾದ ಶ್ರೀ ಪಿ. ಮೂರ್ತಿಯವರು, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀ ದಾಸೇಗೌಡ್ರು, ಚಿತ್ರದ ನಿರ್ಮಾಪಕಿ ಹಾಗೂ ನಿರ್ದೇಶಕಿಯಾದ ಸೌಜನ್ಯ ಡಿ.ವಿ., ಸಾಲುಮರದ ತಿಮ್ಮಕ್ಕ ಅವರ ಮೊಮ್ಮಗ ಶ್ರೀ ಬಿಕ್ಕಳ ಚಿಕ್ಕಯ್ಯ, ಮುಖಂಡರಾದ ಶ್ರೀ ಪಿ. ಚಲುವರಾಜ್, ಶ್ರೀ ಮುರುಗೇಶ್, ಶ್ರೀ ಪಾಪಾನ್ನಿ, ಶ್ರೀ ಮಂಜು, ಶ್ರೀ ಮುನ್ನ, ಶ್ರೀ ಅಂಬೇಡ್ಕರ್ ರಾಜು, ಶ್ರೀ ಭಾಸ್ಕರ್, ಶ್ರೀ ನಟರಾಜ್ ಸೇರಿದಂತೆ ಚಿತ್ರದ ತಂತ್ರಜ್ಞರ ತಂಡ ಹಾಗೂ ಎಲ್ಲಾ ಕಲಾವಿದರು ಉಪಸ್ಥಿತರಿದ್ದು, ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ