ಗಾನಸರಸ್ವತಿ ಎಸ್. ಜಾನಕಿ ಅವರನ್ನು ಸಾಮಾನ್ಯವಾಗಿ ದಕ್ಷಿಣ ಭಾರತದ ಖ್ಯಾತ ಗಾಯಕಿ ಎಂದೇ ಗುರುತಿಸಲಾಗುತ್ತದೆ. ಆದರೆ ಕನ್ನಡಿಗರ ಪಾಲಿಗೆ ಅವರು ಕೇವಲ ಗಾಯಕಿಯಲ್ಲ. ನಮ್ಮ ಮನೆಯ ಸದಸ್ಯೆಯಂತಿದ್ದರು. ಅದಕ್ಕಿಂತಲೂ ವಿಶೇಷವೆಂದರೆ, ಅವರ ಜೀವನದ ಆರಂಭದ ಸಂಗೀತಯಾನಕ್ಕೂ, ಅಂತಿಮ ದಿನಗಳಿಗೂ ಸಾಕ್ಷಿಯಾದ ನಗರ ಮೈಸೂರು ಎಂಬುದು ಬಹುಶಃ ಅನೇಕರಿಗೆ ತಿಳಿದಿಲ್ಲ. ಕನ್ನಡದಲ್ಲಿ ತಮ್ಮ ಮೊದಲ ಹಾಡನ್ನೂ ಮೈಸೂರಿನಲ್ಲೇ ಹಾಡಿದ ಜಾನಕಮ್ಮ, ತಮ್ಮ ಜೀವನದ ಕೊನೆಯ ದಿನಗಳನ್ನೂ ಇದೇ ಸಾಂಸ್ಕೃತಿಕ ನಗರಿಯಲ್ಲಿ ಕಳೆಯುವುದರ ಮೂಲಕ ಮೈಸೂರಿನೊಂದಿಗೆ ಒಂದು ಅಳಿಸಲಾಗದ ಭಾವನಾತ್ಮಕ ಸಂಬಂಧವನ್ನು ಬೆಸೆದುಕೊಂಡ ಗಾನಸರಸ್ವತಿಯ ಭಾವುಕ ಬದುಕಿನ ಮಧುರ ಸಂಬಂಧವನ್ನು ಮೆಲುಕು ಹಾಕೋಣ ಬನ್ನಿ

ಒಬ್ಬ ಅಭಿಮಾನಿಯ ನಿರೀಕ್ಷೆಯನ್ನು ಗು ರುತಿಸಿದ ನಿರ್ಮಾಪಕ ಎಂ.ಪಿ. ಶಂಕರ್

ಜೀವನದಲ್ಲಿ ಕೆಲವೊಂದು ಸಂಬಂಧಗಳಿಗೆ ರಕ್ತಸಂಬಂಧದ ಅಗತ್ಯವೇ ಇರುವುದಿಲ್ಲ. ಅವು ಹುಟ್ಟುವುದು ಪ್ರೀತಿ, ಗೌರವ, ನಿಷ್ಕಲ್ಮಷ ಅಭಿಮಾನ ಮತ್ತು ಮಾನವೀಯತೆಯಿಂದ. ಅಂತಹ ಅಪರೂಪದ ಸಂಬಂಧವೊಂದು ಮೂಡಿದ್ದು ಗಾನಸರಸ್ವತಿ ಎಸ್. ಜಾನಕಿ ಮತ್ತು ಮೈಸೂರಿನ ನವೀನ್ ಎಂಬ ಯುವಕನ ನಡುವೆ. ಸುಮಾರು ಮೂರು ದಶಕಗಳ ಹಿಂದೆ ಕೇವಲ 13 ವರ್ಷದ ಬಾಲಕನಾಗಿದ್ದ ನವೀ
ತಾಯಿಯ ಚಿನ್ನ ಅಡವಿಟ್ಟು ಚೆನ್ನೈಗೆ ಹೊರಟ ಇಬ್ಬರು ಮಕ್ಕಳು
ಭೇಟಿಗೆ ಅವಕಾಶ ಸಿಕ್ಕಿತೇ ಹೊರತು…ಹೋಗಲು ಹಣವಿರಲಿಲ್ಲ. ಕೊನೆಗೆ ನವೀನ್, ಯಾರಿಗೂ ಹೇಳದೆ ತಾಯಿಯ ಚಿನ್ನಾಭರಣವನ್ನು ಅಡವಿಟ್ಟು ಹಣ ಹೊಂದಿಸಿಕೊಂಡು ತನ್ನ ಸಹೋದರ ಪ್ರವೀಣ್ ಜೊತೆ ರೈಲು ಹತ್ತಿ ಚೆನ್ನೈಗೆ ಹೊರಟ. ಅಪರಿಚಿತ ನಗರದಲ್ಲಿ ದಿನವಿಡೀ ಹುಡುಕಾಡಿ ಕೊನೆಗೆ ಜಾನಕಿ ಅವರ ಮನೆ ತಲುಪಿದಾಗ, ಚಿತ್ರೀಕರಣ ಮುಗಿಸಿ ಮನೆಗೆ ಬಂದಿದ್ದ ಜಾನಕಮ್ಮ ಎದುರು ನಿಂತಿದ್ದದ್ದು ಕೇವಲ ಇಬ್ಬರು ಪುಟ್ಟ ಹುಡುಗರು. “ನಿಮ್ಮನ್ನು ನೋಡಲೆಂದೇ ಮೈಸೂರಿನಿಂದ ಬಂದಿದ್ದೇವೆ...” ಎಂಬ ಮಾತು ಕೇಳುತ್ತಿದ್ದಂತೆಯೇ ಜಾನಕಿ ಅವರ ಕಣ್ಣು ತುಂಬಿಕೊಂಡಿತು. ಆ ದಿನದಿಂದ ಆರಂಭವಾದ ಸಂಬಂಧವೇ… ಮುಂದೆ ತಾಯಿ-ಮಗನ ಸಂಬಂಧವಾಗಿ ಬೆಳೆದಿತು.
ಮೈಸೂರಿಗೆ ಬಂದಾಗಲೆಲ್ಲಾ ನವೀನ್ ಮನೆ ಗೇ

ಜಾನಕಿ ಅವರು ಮೈಸೂರಿಗೆ ಬಂದಾಗಲೆಲ್ಲಾ ನವೀನ್ ಅವರನ್ನು ಭೇಟಿಯಾಗುವುದು ತಪ್ಪುತ್ತಿರಲಿಲ್ಲ. ವರ್ಷಗಳು ಕಳೆಯುತ್ತಿದ್ದಂತೆ ಅವರ ನಡುವಿನ ಸಂಬಂಧ ಇನ್ನಷ್ಟು ಗಟ್ಟಿಯಾಯಿತು. ದೂರದ ಚೆನ್ನೈ ನಿಂದ ತಮ್ಮ ಸ್ವಂತ ಮಗನ ಮನೆಗೇ ಬರುವಂತೆಯೇ ಜಾನಕಿಯವರು ಕಳೆದ ಎರಡೂ ದಶಕಗಳಿಂದ ನವೀನ್ ಆವರ ಮನೆಗೆ ಬರುತ್ತಿದ್ದದ್ದಲ್ಲದೇ ತಿಂಗಳಾನುಗಟ್ಟಲೆ ಅವರ ಮನೆಯಲ್ಲೇ ಕುಟುಂಬದ ಸದಸ್ಯರಂತೆಯೇ ಇರುತ್ತಿದ್ದರು. ಜಾನಕಿಯವರ ಅಪ್ಪಟ್ಟ ಅಭಿಮಾನಿಯಾಗಿದ್ದ ನವೀನ್ ಸಹಾ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಜಾನಕಿಯವರ ಹೆಸರಿನಲ್ಲಿಯೇ ಫರ್ನಿಚರ್ ಅಂಗಡಿ ತೆರೆದು ಜೀವನವನ್ನು ನಡೆಸುತ್ತಿದ್ದರು..
ಬಹುಶಃ… ಕೊನೆಯ ದಿನಗಳನ್ನು ಮೈಸೂರಿನಲ್ಲೇ ಕಳೆಯಬೇಕೆಂಬುದು ಅವರ ಮನದಾಳದ ಆಸೆಯಾಗಿತ್ತೋ ಏನೋ

ಜೀವನದ ಕೊನೆಯ ಹಂತದಲ್ಲಿ ಜಾನಕಿ ಅವರಿಗೆ ನೆಮ್ಮದಿಯ ಜೀವನ ಬೇಕೆನಿಸಿದಾಗ, ಆವರಿಗೆ ಮತ್ತೆ ನೆರವಾದದ್ದೇ ಅವರ ಅಭಿಮಾನಿ ನವೀನ್. ಅವರನ್ನು ಚೆನ್ನೈನಿಂದ ಮೈಸೂರಿಗೆ ಕರೆತಂದ ನವೀನ್, ಮೊದಲು ಎನ್.ಆರ್. ಮೊಹಲ್ಲಾದ ತಮ್ಮ ನಿವಾಸದಲ್ಲಿ ಇರಿಸಿಕೊಂಡರು. ನಂತರ ಸ್ನೇಹಿತರ ತೋಟದ ಮನೆ, ದಟ್ಟಗಳ್ಳಿ ಹಾಗೂ ಕೊನೆಗೆ ಬೋಗಾದಿಯ ಮನೆಯಲ್ಲಿ ಅವರಿಗೆ ಶಾಂತ ವಾತಾವರಣ ಕಲ್ಪಿಸಿದರು. ನವೀನ್ ಅವರ ತಾಯಿ ಶಾಂತಾ ಅವರು ಸ್ವಂತ ಸಹೋದರಿಯಂತೆ ಜಾನಕಿ ಅವರನ್ನು ಆರೈಕೆ ಮಾಡಿದರು. ನವೀನ್ ಕುಟುಂಬದ ಎಲ್ಲ ಸದಸ್ಯರೂ ಜಾನಕಿ ಅವರ ಸೇವೆಯಲ್ಲೇ ನಿರತರಾಗಿದ್ದರು. ಮೈಸೂರಿನ ತಮ್ಮ ಅಭಿಮಾನಿ ನವೀನ್ ಮನೆಯಲ್ಲಿ ಇರುವಾಗಲೇ ಜಾನಕಿಯವರ ಕಾಲಿಗೆ ಆದ ಗಾಯ ಗ್ಯಾಂಗ್ರಿನ್ ರೂಪಕ್ಕೆ ಹೊರಳಿಗಾಗ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆಯುತ್ತಿದ್ದ ಜಾನಕಿಯವರ ದೇಹಾರೋಗ್ಯದಲ್ಲಿ ಇದ್ದಕ್ಕಿದ್ದಂತೆಯೇ ಅಸ್ವಸ್ಥತೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೇ ದಾಖಲಿಸಿದರೂ, ವೈದ್ಯರ ಚಿಕಿತ್ಸೆ ಪ್ರಯೋಜನವಾಗದೆ ನಿಧನರಾಗಿರುವುದು ವಿಷಾಧನೀಯವಾಗಿದೆ.
ತಾಯಿಯ ಚಿನ್ನಾಭರಣವನ್ನೇ ಅಡವಿಟ್ಟು
ಮುಖ್ಯಮಂತ್ರಿಗಳಿಗೂ ಅಚ್ಚರಿ ಮೂಡಿಸಿದ ಎಸ್. ಜಾನಕಿ ಮತ್ತರವರ ಕುಟುಂಬದ ಮೈಸೂರು ಪ್ರೀತಿ
ಭಾರತದ ಅಪ್ರತಿಮ ಗಾಯಕಿ ಮತ್ತು ಗಾನಕೋಗಿಲೆ ಜಾನಕಿಯವರ ಅಂತಿಮ ಸಂಸ್ಕಾರ ನಡೆಸಲು ವಿಶೇಷ ಆಸ್ಥೆಯನ್ನು ವಹಿಸಿದ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಆವರು ಜಾನಕಿಯವರ ಕುಟುಂಬದವರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಅವರ ಅಂತ್ಯ ಸಂಸ್ಕಾರಕ್ಕೆ ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದಿದ್ದಲ್ಲದೇ, ಅಗತ್ಯವಿದ್ದಲ್ಲಿ ಅವರ ಪಾರ್ಥೀವ ಶರೀರವನ್ನು ಚೆನ್ನೈ ಅಥವಾ ಹೈದರಾಬಾದ್ ಹೋಗಬೇಕೆಂದರೆ ಏರ್ ಲಿಫ್ಟ್ ಮಾಡಿಸುವುದಾಗಿ ತಿಳಿಸಿದಾಗ, ಮೈಸೂರಿನ ಬಗ್ಗೆ ಕೇವಲ ಜಾನಕಿಯವರಿಗಷ್ಟೇ ಅಲ್ಲದೇ ಅವರ ಕುಟುಂಬದವರಿಗೆ ಇದ್ದ ನಂಟಿನ ಕುರಿತಾಗಿ ಅಚ್ಚರಿ ಮೂಡಿಸುತ್ತದೆ.

ಕಳೆದ ಹಲವಾರು ವರ್ಷದಿಂದ ಮೈಸೂರಿನಲ್ಲಿ ಅವರು ವಾಸವಾಗಿದ್ದ ಕಾರಣ, ಮೈಸೂರು ಆವರ ಎರಡನೆಯ ಮನೆಯಂತಾಗಿದೆ. ಮೈಸೂರಿನಲ್ಲೇ ಇರಬೇಕು ಎಂಬುದು ನಮ್ಮ ಅಜ್ಜಿಯ ಕೊನೆಯ ಆಸೆಯೆಂದು ಎಂದು ಮೊಮ್ಮಗಳಾದ ಅಪ್ಸರಾ ಮತ್ತು ಉಳಿದ ಕುಟುಂಬಸ್ಥರು ತಿಳಿಸಿ, ಅವರ ಅಂತಿಮ ಸಂಸ್ಕಾರ ಮೈಸೂರಿನಲ್ಲೇ ನಡೆಯಲಿ ಎಂದರು ಅತ್ಯಂತ ಸರಳ ವ್ಯಕ್ತಿತ್ವದ ಮೇರು ಗಾಯಕಿಯಾಗಿದ್ದ ಜಾನಕಿಯವರಿಗೆ ಮತ್ತು ಅವರ ಕುಟುಂಬದವರಿಗೆ ಕರ್ನಾಟಕ ಮತ್ತು ಮೈಸೂರಿನ ಮೇಲೆ ಇದ್ದ ಅಪಾರ ಪ್ರೀತಿ ವಿಶ್ವಾಸವನ್ನು ಮೆಚ್ಚಿಕೊಂಡ ಮುಖ್ಯಮಂತ್ರಿಗಳೂ. ಜಾನಕಿಯವರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಲಿದೆ ಎಂಬ ಭರವಸೆ ನೀಡಿರುವುದು ಉತ್ತಮ ಬೆಳೆವಣಿಯಾಗಿದೆ.
ಇದೇ ರೀತಿಯಾಗಿ ಕರ್ನಾಟಕವನ್ನು ಅಪಾರವಾಗಿ ಇಷ್ಟಪಡುತ್ತಿದ್ದ ಮತ್ತೊಬ್ಬ ಮಹಾನ್ ಗಾಯಕರಾಗಿದ್ದಂತಹ ಎಸ್. ಪಿ. ಬಾಲಸುಬ್ರಹ್ಮಣ್ಯರವರೂ ಸಹಾ ನನ್ನ ಮುಂದಿನ ಜನ್ಮ ಕರ್ನಾಟಕದಲ್ಲೇ ಕನ್ನಡಿಗನಾಗಿ ಹುಟ್ಟಬೇಕು ಎಂದು ಇಚ್ಚಿಸುತ್ತಿದ್ದದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ
ಮೊದಲ ಕನ್ನಡ ಹಾಡೂ ಮೈಸೂರಿನಲ್ಲಿ… ಕೊ ನೆಯ ವಿದಾಯವೂ ಮೈಸೂರಿನಲ್ಲೇ

ಬಹುತೇಕರಿಗೆ ಗೊತ್ತಿಲ್ಲದ ಸಂಗತಿಯೆಂದರೆ…ಜಾನಕಿ ಅವರು ಕನ್ನಡದಲ್ಲಿ ತಮ್ಮ ಮೊದಲ ಹಾಡನ್ನು ಹಾಡಿದ್ದೂ ಮೈಸೂರಿನಲ್ಲೇ. ವಿಧಿಯ ಲೀಲೆ ನೋಡಿ… ಕೊನೆಯ ಉಸಿರನ್ನೂ ಮೈಸೂರಿನಲ್ಲೇ ಬಿಟ್ಟರು. ಹೂವಿನಿಂದ ಅಲಂಕೃತಗೊಂಡ ವಾಹನದ ಮೂಲಕ ಮಹಾರಾಜ ಕಾಲೇಜು ಮೈದಾನದಿಂದ ಹೊರಟ ಎಸ್. ಜಾನಕಿ ಅವರ ಪಾರ್ಥಿವ ಶರೀರವು ಲತಾ ಮಂಗೇಷ್ಕರ್ ರಸ್ತೆಯುನ್ನು ದಾಟಿ ಎಚ್.ಡಿ.ಕೋಟೆ ತಾಲೂಕಿನ ಕಣಿಯನಹುಂಡಿ ತಲುಪುವ ರಸ್ತೆಯುದ್ದಕ್ಕೂ ಅಭಿಮಾನಿಗಳು ಗುಂಪಾಗಿ ಸೇರಿದ್ದಲ್ಲದೇ, ಮಕ್ಕಳು ಮಹಿಳೆಯರು ಸೇರಿದಂತೆ ಆಬಾಲವೃದ್ಧರಾದಿಯಾಗಿ ಎಲ್ಲರೂ ಕೈ ಮುಗಿದು, ಜಾನಕಿ ಅಮ್ಮನವರ ಕೊನೆ ಯಾತ್ರೆಯನ್ನು ಮೈಸೂರಿಗರು ಕಣ್ಣುಂಬಿಕೊಂಡು ಗೌರವದಿಂದ ನಮಿಸಿದರು. ಪಾರ್ಥಿವ ಶರೀರ ಕಣಿಯನ ಹುಂಡಿಗೆ ಬರುತ್ತಿದ್ದಂತೆ ಗ್ರಾಮಸ್ಥರೆಲ್ಲಾ ಗದ್ಗದಿತರಾಗಿ, ಕಣ್ಣೀರಿನಿಂದ ಬೀಳ್ಕೊಟ್ಟರು. ಇದೆಲ್ಲವನ್ನೂ ಸೂಕ್ಶ್ಮವಾಗಿ ಗಮನಿಸಿದಲ್ಲಿ, ಮೈಸೂರಿನ ಜನರು ಜಾನಕಿಯವರನ್ನು ಕೇವಲ ಒಬ್ಬ ಗಾ
ಈಡೇರದ ಕೊನೆಯ ಆಸೆ
ಜೀವನದುದ್ದಕ್ಕೂ ಸಂಗೀತವನ್ನೇ ಉಸಿರಾಗಿಸಿಕೊಂಡಿದ್ದ ಜಾನಕಿ ಅವರಿಗೆ ಕೊನೆಯ ಆಸೆಯೂ ಸಂಗೀತವೇ ಆಗಿತ್ತು. ಪುತ್ರ ಮುರಳಿಕೃಷ್ಣ ಅವರ ನಿಧನದ ಬಳಿಕ, ಅವರ ನೆನಪಿಗಾಗಿ ಮೈಸೂರಿನಲ್ಲಿ ಒಂದು ಸಂಗೀತ ಸಂಜೆ ಆಯೋಜಿಸುವ ಯೋಜನೆ ರೂಪಿಸಿದ್ದರು. ತಾವೇ ಹಾಡದೆ…ದೇಶದ ಖ್ಯಾತ ಗಾಯಕರಿಂದ ಕಾರ್ಯಕ್ರಮ ನಡೆಸಿಸಿ ಮಗನಿಗೆ ಸಂಗೀತದ ಮೂಲಕ ಶ್ರದ್ಧಾಂಜಲಿ ಸಲ್ಲಿಸಬೇಕೆಂದು ಬಯಸಿದ್ದರು. ಆದರೆ… ವಿಧಿ ಆ ಅವಕಾಶವನ್ನೇ ಕೊಡಲಿಲ್ಲ.
ಕನ್ನಡ ಚಿತ್ರರಂಗದ ಮೇರು ಸಂಗೀತಗಾರರೆಲ್ಲರೂ ಸೇರಿ, ಅತೀ ಶೀಘ್ರದಲ್ಲೇ ಜಾನಕಿ ಮತ್ತು ಅವರ ಮಗ ಮುರಳಿಕೃಷ್ಣ ಇಬ್ಬರ ನೆನಪಿನಾರ್ಥವಾಗಿ ಮೈಸೂರಿನಲ್ಲೊಂದು ಸುಂದರ ಸಂಗೀತ ರಸಸಂಜೆ ಕಾರ್ಯಕ್ರಮವನ್ನು ಏರ್ಪಡಿಸುವ ಮೂಲಕ ತಾಯಿ ಮಗನ ಆತ್ಮಕ್ಕೆ ಶಾಂತಿ ನೀಡಲಿ ಎನ್ನುವ ಆಶಾಭಾವನೆ ಕನ್ನಡಿಗರದ್ದಾಗಿದೆ.
ಮೈಸೂರನ್ನೇ ತನ್ನ ಮನೆಯನ್ನಾಗಿಸಿಕೊಂಡ, ಮೈಸೂರಿನ ಋಣ ತೀರಿಸಲಾಗದ ಗಾನಕೋಗಿಲೆಯ ಭಾವಯಾನ

ಜನ್ಮ ಆಂಧ್ರದಲ್ಲಿ… ಖ್ಯಾತಿ ದಕ್ಷಿಣ ಭಾರತದಲ್ಲಿ… ಆದರೆ ಬದುಕಿನ ಕೊನೆಯ ಅಧ್ಯಾಯ ಬರೆದದ್ದು ಮಾತ್ರ ಮೈಸೂರಿನಲ್ಲಿ. ಬಹುಶಃ ಅದಕ್ಕಾಗಿಯೇ ಜಾನಕಮ್ಮ ಹೇಳುತ್ತಿದ್ದರು… “ಮೈಸೂರಿನ ಜನರಿಗೆ
ಪ್ರತಿಯೊಂದು ಪ್ರೇಮಗೀತೆಯಲ್ಲೂ ಜೀವಂತವಾಗಿದೆ. ಪ್ರತಿಯೊಂದು ತಾಯಿಯ ಜೋಗುಳದಲ್ಲೂ ಉಸಿರಾಡುತ್ತಿದೆ. ಅಂತಹ ಮಹಾನ್ ಗಾನಸರಸ್ವತಿ… ಮತ್ತೆ ಹುಟ್ಟಿ ಬರಬಹು
ಏನಂತೀರೀ?
ನಿಮ್ಮವನೇ
ಉಮಾಸುತ





