ಸಂದರ್ಶಕರು: ಭಾರ್ಗವಿ ಜಿ. ಆರ್. (ಪತ್ರಿಕೋದ್ಯಮ ವಿದ್ಯಾರ್ಥಿ, ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ)
ಸಂದರ್ಶನ ಪಡೆದವರು: ಲೋಲಾಕ್ಷಿ ಎಂ. (ಶಿಕ್ಷಕಿ, ವಯಸ್ಸು: 51 ವರ್ಷ)
ಪೀಠಿಕೆ:
ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸಾಧನೆ ಮಾಡಿರುವ ಲೋಲಾಕ್ಷಿ ಎಂ. ಅವರು ಭುವನೇಶ್ವರಿ ಶಾಲೆಯನ್ನು ಸತತ 25 ವರ್ಷಗಳಿಂದ ತಮ್ಮ ಶ್ರಮಕ್ಕೂ ಮೀರಿ ನಡೆಸುತ್ತಾ ಬಂದಿದ್ದಾರೆ. 51 ವರ್ಷದ ಮಹಿಳೆಯಾಗಿದ್ದರೂ, ಮೂಲತಃ ಭದ್ರಾವತಿ ತಾಲೂಕಿನ ಅರದೋಟ್ಲು ಗ್ರಾಮದಲ್ಲಿ ವಾಸವಾಗಿದ್ದುಕೊಂಡು ಈ ಸಾಧನೆ ಮಾಡಿದ್ದಾರೆ. ಅವರೊಂದಿಗಿನ ಸಂದರ್ಶನದ ವಿವರ ಇಲ್ಲಿದೆ:
1) ಪ್ರಶ್ನೆ: ಶಿಕ್ಷಣ ವೃತ್ತಿಯ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಲಾಕ್ಷಿ ಎಂ.: ಶಿಕ್ಷಕ ವೃತ್ತಿಯು ಸಮಾಜ ಸೇವಾ ಕೆಲಸವು ಮತ್ತು ಉತ್ತಮ ಪ್ರಜೆಗಳನ್ನು ತಯಾರಿಸುವ ಹಾಗೂ ಮನಸ್ಸಿಗೆ ಸಂತೋಷವನ್ನು ನೀಡುವ ವೃತ್ತಿಯಾಗಿರುತ್ತದೆ. ಯಾವುದೇ ಭೇದ-ಭಾವವಿಲ್ಲದೆ ಮುಗ್ಧ ಮನಸುಗಳೊಂದಿಗೆ ಕಳೆಯುವ ಕ್ಷಣವು ಜೀವನದ ಎಲ್ಲ ಸಂಕಷ್ಟಗಳನ್ನು ಕಳೆದುಹಾಕಿ ಬಿಡುತ್ತದೆ. ವಯಸ್ಸಿನ ಮಿತಿಯನ್ನು ಮೀರಿ ಸೇವೆ ಸಲ್ಲಿಸಬಹುದಾದ ಒಂದು ಸೇವೆ ಇದಾಗಿದೆ.
2) ಪ್ರಶ್ನೆ: ಪ್ರಸ್ತುತದಲ್ಲಿರುವ ಶಿಕ್ಷಣದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಲಾಕ್ಷಿ ಎಂ.: ಹಿಂದಿನ ಶಿಕ್ಷಣಕ್ಕಿಂತ ಇಂದಿನ ಶಿಕ್ಷಣದಲ್ಲಿ ಅನೇಕ ಬದಲಾವಣೆ ಕಾಣಬಹುದಾಗಿದೆ. ವಿದ್ಯಾರ್ಥಿ ಹಾಗೂ ಗುರುಗಳ ನಡುವಿನ ನಡವಳಿಕೆ – ಬಾಂಧವ್ಯ ಎಲ್ಲವೂ ಭಿನ್ನವಾಗಿ ಸಾಗುತ್ತಿದೆ. ಮೌಲ್ಯಯುತ ಹಾಗೂ ಸಾಮಾಜಿಕವಾಗಿ ಬೇಕಾದ ವಿಷಯಗಳನ್ನಾಧರಿಸಿ ಹೇಳಿಕೊಡುತ್ತಿದ್ದ ಶಿಕ್ಷಣಕ್ಕಿಂತ ವಿಭಿನ್ನವಾಗಿ ಇದೀಗ ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗುತ್ತಿದೆ.
3) ಪ್ರಶ್ನೆ: ಒಬ್ಬ ಹೆಣ್ಣುಮಗಳಾಗಿ ಸ್ವತಃ ಶಾಲೆಯನ್ನು ಪ್ರಾರಂಭಿಸುವಾಗ ಪ್ರೇರಣೆಯಾಗಿ ಅಥವಾ ಯಾವ ರೀತಿಯ ಸವಾಲುಗಳನ್ನು ಎದುರಿಸಿದ್ದೀರಿ?
ಲೋಲಾಕ್ಷಿ ಎಂ.: ಪ್ರೇರಣೆ ಎಂದರೆ – ವಕೀಲ ವೃತ್ತಿಯಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದ ನನಗೆ ಅನಿವಾರ್ಯ ಕಾರಣಗಳಿಂದ ಶಿಕ್ಷಣ ಕ್ಷೇತ್ರಕ್ಕೆ ಬರಲಾಯಿತು. ಅನೇಕ ಸವಾಲುಗಳ ಬಳಿಕ ಈ ಸೇವೆಯಲ್ಲಿಯೇ ನನ್ನನ್ನು ಗುರುತಿಸಿಕೊಳ್ಳಬೇಕೆಂಬ ನಿರೀಕ್ಷೆಯಿಂದ ಮುಂದುವರೆದೆ. ಪ್ರಾರಂಭದಲ್ಲಿ ಈ ಗ್ರಾಮದ ಮಕ್ಕಳ ಮೇಲೆ ಗುಲಾಮಗಿರಿತನ ಹಾಗೂ ಜೀತಪದ್ಧತಿಯಿಂದ ಮಕ್ಕಳನ್ನು ಶಿಕ್ಷಣದಿಂದ ದೂರ ಉಳಿಸಿದ್ದರು.
4) ಪ್ರಶ್ನೆ: ಸವಾಲುಗಳು ಯಾವುವು?
ಲೋಲಾಕ್ಷಿ ಎಂ.: ಮಕ್ಕಳನ್ನು ಗುರುತಿಸಿ ವಿದ್ಯಾಭ್ಯಾಸ ನೀಡಲು ಪ್ರಾರಂಭಿಸಿದೆ. ಅನೇಕ ಅಸಮಾನತೆಯ ವಾತಾವರಣದಿಂದ ವಿದ್ಯಾರ್ಥಿಗಳಿಗೆ ಶಿಕ್ಷಣದ ಮೂಲಕ ಜೀವನದಲ್ಲಿ ಬದಲಾವಣೆ ಕಂಡಿತು. ಒಬ್ಬಂಟಿ ಮಹಿಳೆ ಶಾಲೆಯನ್ನು ಪ್ರಾರಂಭಿಸುವುದು ಸಾಮಾನ್ಯವಾಗಿರಲಿಲ್ಲ. ಜೀವನವನ್ನು ಭಯ, ಒಂಟಿತನ ಮತ್ತು ಸಾಧಿಸಲೇ ಬೇಕೆಂಬ ಛಲದಿಂದ ಮುಂದುವರೆದೆ.
5) ಪ್ರಶ್ನೆ: ಇದುವರೆಗೂ ನೀವು ಪಡೆದ ಗೌರವಗಳು ಅಥವಾ ಪ್ರಶಸ್ತಿಗಳು ಯಾವುವು?
ಲೋಲಾಕ್ಷಿ ಎಂ.: 2021-22 ನೇ ಸಾಲಿನಲ್ಲಿ ಖಾಸಗಿ ಒಕ್ಕೂಟ ಹಾಗೂ ಸರ್ಕಾರಿ ಶಿಕ್ಷಕರ ಸಂಘದಿಂದ ‘ಉತ್ತಮ ಶಿಕ್ಷಕಿ ಪ್ರಶಸ್ತಿ’ ಲಭಿಸಿದೆ. ಸಂಸ್ಥೆಯ ಮಹಿಳಾ ಉಸ್ತುವಾರಿಯಾಗಿದ್ದರಿಂದ ತಾಲೂಕು ಮಟ್ಟದ ‘ಶಿಕ್ಷಣ ರತ್ನ ಪ್ರಶಸ್ತಿ’, ‘ಕೀರ್ತಿ ಪ್ರಕಾಶನ ಪ್ರಶಸ್ತಿ’, ‘ಕೀರ್ತಿ ವಿಕಾಸ ಪ್ರಶಸ್ತಿ’ ಹೀಗೆ ಒಟ್ಟು 8 ಕ್ಕೂ ಅಧಿಕ ಪ್ರಶಸ್ತಿಗಳು ಲಭಿಸಿವೆ.
6) ಪ್ರಶ್ನೆ: ಮಹಿಳೆಯ ಸಾಧನೆಗೆ ಕುಟುಂಬದ ಪ್ರೋತ್ಸಾಹದ ಬಗ್ಗೆ ನಿಮ್ಮ ಅಭಿಪ್ರಾಯವೇನು?
ಲೋಲಾಕ್ಷಿ ಎಂ.: ತಾಯಿಯೇ ನನ್ನ ಮೊದಲ ಗುರುವಾಗಿದ್ದರು. ಪ್ರತಿ ಹಂತದಲ್ಲೂ ನನ್ನನ್ನು ಪ್ರೋತ್ಸಾಹಿಸಿ ಈ ಕ್ಷೇತ್ರದಲ್ಲಿ ಸಾಧನೆ ಮಾಡಲು ಮುಂದಾದವರು. ವ್ಯಕ್ತಿತ್ವದ ಬೆಳವಣಿಗೆ ಹಾಗೂ ನನ್ನ ಮಕ್ಕಳು ಮತ್ತು ನನ್ನ ಪತಿಯು ಸಹ ನನ್ನೊಂದಿಗೆ ಸಹಕಾರಿಯಾಗಿ ನಿಂತಿದ್ದಾರೆ.
7) ಪ್ರಶ್ನೆ: ನೀವು ತಿಳಿದ ಹಾಗೆ ಶಿಕ್ಷಣದಲ್ಲಿ ಮಕ್ಕಳ ವರ್ತನೆ ಯಾವ ರೀತಿಯಲ್ಲಿ ಬದಲಾಗುತ್ತಿದೆ?
ಲೋಲಾಕ್ಷಿ ಎಂ.: ‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ’ ಎಂಬ ಮಾತುಗಳಳಿದು, ಇದೀಗ ಗುರುವನ್ನ ಕಂಡರೆ ಸ್ನೇಹಿತರ ರೀತಿ ಕಾಣುವ ವರ್ತನೆ ಬದಲಾಗಿದೆ. ಗುರುವಿಲ್ಲದೆ ಗುರಿ ತಲುಪಲು ಸಾಧ್ಯವೇ ಇಲ್ಲವೆಂಬ ನುಡಿಗಳಿಂದ ಇದೀಗ ಕೈನಲ್ಲೊಂದು ಮೊಬೈಲ್ ಇದ್ದರೆ ಎಲ್ಲವನ್ನು ನಾ ಗೆಲ್ಲಬಲ್ಲೆ ಎಂಬ ಭಾವನೆಯು ಮಕ್ಕಳ ಮನದಲ್ಲಿ ಮೂಡುತ್ತಿದೆ. ಕಾಲ ಅದೇಷ್ಟೇ ಬದಲಾದರೂ ಗುರು ಶಿಷ್ಯ ಸಂಬಂಧಗಳು ಪುಷ್ಟಿಯಾದಾಗ ಮಾತ್ರ ಸಮಾಜಕ್ಕೆ ಉತ್ತಮ ಪ್ರಜೆಗಳಾಗಬಹುದು ಎಂಬ ವಿಷಯವನ್ನು ಮಕ್ಕಳಿಗೆ ತಿಳಿಸಬೇಕಿದೆ.
8) ಪ್ರಶ್ನೆ: ಪ್ರಸ್ತುತ ಶಿಕ್ಷಣದ ಗುರಿ ಏನು?
ಲೋಲಾಕ್ಷಿ ಎಂ.: ವಿದ್ಯಾರ್ಥಿಗಳಿಗೆ ಮೌಖಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆಧುನಿಕತೆಗೆ ಹೊಂದಿಕೊಂಡು ಹೋಗಬೇಕಾದ ರೀತಿಯಲ್ಲಿ ಶಿಕ್ಷಣ ವ್ಯವಸ್ಥೆ ಜಾರಿಗೊಳ್ಳುತ್ತಿದೆ. ನಿರುದ್ಯೋಗ ಸಮಸ್ಯೆ – ಬಡತನ – ಅಸಮಾನತೆ ದೂರ ಉಳಿಯಬೇಕೆಂಬ ಇಚ್ಛೆಯಿಂದ ತನ್ನ ಗುರಿಯತ್ತ ಶಿಕ್ಷಣ ಸರ್ಕಾರವು ದಾಪು ಹೆಜ್ಜೆಯಾಕುತ್ತಿದೆ.
9) ಪ್ರಶ್ನೆ: ಶಾಲೆಗಳಲ್ಲಿ ಮಾಧ್ಯಮ ವಿಚಾರದಿಂದಾಗಿ ಸರ್ಕಾರದ ನಿರ್ಧಾರದ ಬಗ್ಗೆ ನಿಮ್ಮ ನಿಲುವುಗಳೇನು?
ಲೋಲಾಕ್ಷಿ ಎಂ.: ಸರ್ಕಾರಿ ಶಾಲೆಯ ಮಕ್ಕಳಿಗಾಗಿ ಇತ್ತೀಚೆ ಪ್ರಮುಖೃತೆ (ಪ್ರಮುಖತೆ) ನೀಡುತ್ತಿದೆ. ಇದರಿಂದಾಗಿ ಎಲ್ಲ ರೀತಿಯ ಸೌಲಭ್ಯಗಳನ್ನು ನೀಡಿ ಕನ್ನಡ ಭಾಷೆಯನ್ನು ಉಳಿಸಲು ಪ್ರಯತ್ನಿಸುತ್ತಿದೆ. ಇಂಗ್ಲಿಷ್ ಭಾಷೆಯ ವ್ಯಾಮೋಹ ಹೆಚ್ಚಿದ ಘಳಿಗೆಯಲ್ಲೂ ಸಹ ತನ್ನ ನಿಲುವನ್ನು ಸರ್ಕಾರವು ಕ್ರಮ ಕೈಗೊಳ್ಳುತ್ತಿದೆ. 14 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರಿಗೂ ಉಚಿತ ಮತ್ತು ಕಡ್ಡಾಯ ಶಿಕ್ಷಣ ಲಭಿಸಬೇಕೆಂಬ ಪ್ರಯತ್ನದಲ್ಲಿದೆ.
10) ಪ್ರಶ್ನೆ: ಸಾಂಪ್ರದಾಯಿಕ ಮತ್ತು ವರ್ತಮಾನದ ಶಿಕ್ಷಣದ ವ್ಯತ್ಯಾಸ ಹೇಳಬಹುದೇ?
ಲೋಲಾಕ್ಷಿ ಎಂ.: ಸಾಂಪ್ರದಾಯಿಕ ಶಿಕ್ಷಣದಲ್ಲಿ ಹಿಂದೆ ಗುರುಗಳಿಗೆ ಶಿಕ್ಷಣದಲ್ಲಿ ಯಾವುದೇ ವಿಷಯಗಳ ಮಿತಿ, ಸಮಯದ ನಿರ್ಬಂಧವಿರಲಿಲ್ಲ. ಆದರೆ ವರ್ತಮಾನದ ಶಿಕ್ಷಣದಲ್ಲಿ ಅನೇಕ ನಿಯಮಗಳು ಹಾಗೂ ನಿರ್ಮೂಬಂಧಗಳನ್ನೂ (ನಿಬಂಧನೆಗಳನ್ನೂ) ಕಾಣಬಹುದಾಗಿದೆ





