ಸೀರೆಗೆ ಮಾಡರ್ನ್ ಟಚ್ ನೀಡಿ, ಲುಕ್ಸ್ಟೈಲ್ ಸುಧಾರಿಸಬಹುದಾಗಿದೆ, ಹೇಗೆಂದು ತಿಳಿಯೋಣವೇ…..?
ಇಂದಿನ ಫಾಸ್ಟ್ ಯುಗದ ದೈನಂದಿನ ಬಿಝಿ ಶೆಡ್ಯೂಲ್ ನಲ್ಲಿ ಹೆಂಗಸರು ನಿಧಾನವಾಗಿ ನೆರಿಗೆ ಹಿಡಿದು ಸಾಂಪ್ರದಾಯಿಕವಾಗಿ ಸೀರೆಯುಟ್ಟು ರೆಡಿ ಆಗುವುದು, ನಿಜಕ್ಕೂ ತ್ರಾಸದಾಯಕ. ಆದರೆ ಹಬ್ಬ, ಹರಿದಿನ, ಶುಭ ಸಮಾರಂಭಗಳಿಗೆ ಹೋಗಬೇಕಾದಾಗ ಇದಂತೂ ಅನಿವಾರ್ಯ. ಭಾರತೀಯ ನಾರಿಯ ಸ್ಟೇಟಸ್ ಸಿಂಬಲ್ ಆಗಿರುವ ಸೀರೆ, ಹಲವು ಶತಮಾನಗಳ ಹಿನ್ನೆಲೆ ಹೊಂದಿದೆ, ಹೀಗಾಗಿ ಇಂದಿಗೂ ಅದೇ ಭಾರತೀಯ ಹೆಣ್ಣಿನ ಮೊದಲ ಆಯ್ಕೆಯಾಗಿ ಉಳಿಯುತ್ತದೆ. ಪ್ರತಿ ಹಬ್ಬಕ್ಕೂ, ಇವೆಂಟ್ ಗೂ ಸೀರೆಯ ಅಂದಚೆಂದ ಬೇಕೇಬೇಕು.
ಆದರೆ ಇಂದಿನ ಬದಲಾಗುತ್ತಿರುವ ಆಧುನಿಕ ಫ್ಯಾಷನ್ನಿನ ದೃಷ್ಟಿಯಿಂದ ಸೀರೆ ಅನೇಕ ಟ್ರೆಂಡ್ ಗಳಲ್ಲಿ ಕಂಡುಬರುತ್ತಿವೆ. ಹೀಗಾಗಿ ಮಾಡರ್ನ್ ಝಮಾನಾಗೆ ತಕ್ಕಂತೆ ನೀವು ಸಹ ಈ ದೀಪಾವಳಿ ಹಬ್ಬದಲ್ಲಿ ಟ್ರೆಡಿಶನಲ್ ಸೀರೆಗೆ ಏಕೆ ಮಾಡರ್ನ್ ಟಚ್ ಕೊಡಬಾರದು? ಇದರಿಂದ ನಿಮ್ಮ ಲುಕ್ಸ್, ಸ್ಟೈಲ್, ಗ್ಲಾಮರ್ ನಲ್ಲಿ ಎಷ್ಟೋ ಸುಧಾರಣೆ ತಂದುಕೊಳ್ಳಬಹುದು. ಇಂಥ ಟ್ರೆಂಡಿಂಗ್ ಫ್ಯಾಷನ್ ಬಿಟ್ಟೋರಂಟೇ?
ಫ್ಯಾಷನ್ ಎಕ್ಸ್ ಪರ್ಟ್ಸ್ ಪ್ರಕಾರ, ಫೆಸ್ಟಿವ್ ಸೀಸನ್ ನಲ್ಲಿ ಪ್ರತಿ ಮಹಿಳೆಗೂ ಹೊಂದು ಏಕೈಕ ಔಟ್ ಫಿಟ್ ಅಂದ್ರೆ ಸೀರೆ! ಆದರೆ ಸಮಯ ಸಂದರ್ಭ, ಫ್ಯಾಷನ್ ಗೆ ತಕ್ಕಂತೆ ಸೀರೆಯಲ್ಲಿ ಅನೇಕ ಬದಲಾವಣೆಗಳಾಗಿವೆ. ಇತ್ತೀಚೆಗೆ ಫ್ಯೂಷನ್ ಸೀರೆಗಳ ಟ್ರೆಂಡ್ ಅಧಿಕವಾಗುತ್ತಿದೆ. ನೀವು ಸಹ ಈ ಬದಲಾವಣೆ ಫಾಲೋ ಮಾಡಿ, ಫೆಸ್ಟಿವಲ್ ಸೀಸನ್ ನಲ್ಲಿ ಬಲು ಸ್ಪೆಷಲ್, ಸ್ಟೈಲಿಶ್, ಗ್ಲಾಮರಸ್, ಟ್ರೆಂಡಿಂಗ್ ಆಗಿ ಮಿಂಚಿರಿ!
ಇಂಡೋವೆಸ್ಟರ್ನ್ ಪ್ಯಾಂಟ್ ಸ್ಟೈಲ್ಸೀರೆ
ಇದು ಇಂಡೋವೆಸ್ಟರ್ನ್ ಔಟ್ ಫಿಟ್ ಆಗಿದ್ದು, ಟ್ರೆಡಿಶನಲ್ ಇಂಡಿಯನ್‌ವೆಸ್ಟರ್ನ್ ಔಟ್ ಫಿಟ್ ಎರಡಕ್ಕೂ ಸೇತುವೆಯಾಗಿದೆ. ಪ್ಯಾಂಟ್ ಸ್ಟೈಲ್ ನ ಸೀರೆ ಎಷ್ಟೋ ಫ್ಯಾಷನ್ ಪ್ರಿಯ ಮಹಿಳೆಯರ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಇಂಡಿಯನ್ ಟ್ರೆಡಿಶನ್ ಡ್ರೆಸೆಸ್ ಮೆಚ್ಚುವವರಿಗೆ ಇದು ಬಹಳ ಇಷ್ಟವಾಗುತ್ತದೆ. ಈ ಸ್ಟೈಲ್ ನಲ್ಲಿ ನಾರ್ಮಲ್ ಪೆಟಿಕೋಟ್ ಬದಲು, ಪ್ಯಾಂಟ್ ಯಾ ಲೆಗ್ಗಿಂಗ್ ಮೇಲೆ ಸೀರೆ ಡ್ರೇಪ್ ಮಾಡಲಾಗುತ್ತದೆ. ಇದರಿಂದ ಒಂದು ಹೊಸ ಸ್ಟೈಲಿಶ್ ಫ್ಯೂಷನ್ ಲುಕ್ ಸಿಗುತ್ತದೆ. ಇದು ಎಲ್ಲಾ ಹೆಂಗಸರಿಗೂ ಇಷ್ಟವೆಂದರೂ ತಪ್ಪಲ್ಲ. ಈ ಸೀರೆ ಡ್ರೆಸ್ ನಲ್ಲಿ 3 ಮುಖ್ಯ ಅಂಶ ಎಂದರೆ ಪ್ಯಾಂಟ್, ಸೀರೆ ಹಾಗೂ ಟಾಪ್. ಸೊಂಟದಪಟ್ಟಿಯೊಂದಿಗೆ ಈ ಡ್ರೆಸ್ ಲಭ್ಯ. ಇದರಲ್ಲಿ ಸೀರೆಯನ್ನು ದೇಹದ ಎಲ್ಲಾ ಬದಿಗೂ ಬರುವಂತೆ ಅಳವಡಿಸಿ, ಭುಜದ ಮೇಲೆ ಸೆರಗಿನ ತರಹ ಸೆಟ್ ಮಾಡಲಾಗುತ್ತದೆ. ನಂತರ ಇದರಲ್ಲಿ ಒಂದು ಫಿಟೆಡ್ ಶಾರ್ಟ್ ಸ್ಲೀವ್ ಲೆಸ್ ಟಾಪ್ ನಂಥ ಬ್ಲೌಸ್ ನ್ನು ಸೀರೆ ಪ್ಯಾಂಟ್ ಗೆ ಮ್ಯಾಚ್ ಆಗುವಂತೆ ಕ್ಯಾರಿ ಮಾಡಲಾಗುತ್ತದೆ.

ಸ್ಟೈಲಿಶ್ ಧೋತಿ ಸೀರೆ
ಇದು ಮಾರ್ಕೆಟ್ ನಲ್ಲಿ ಬಗೆಬಗೆಯ ಬಣ್ಣ, ಪ್ಯಾಟರ್ನ್ ಹಾಗೂ ಡಿಸೈನ್ ಗಳಲ್ಲಿ ಲಭ್ಯ. ಧೋತಿ (ಪಂಚೆ) ಸೀರೆ ಧರಿಸಲು ಬಲು ಸ್ಟೈಲಿಶ್ ಎನಿಸುತ್ತದೆ. ಈ ಸೀರೆಯ ಒಳಭಾಗದಲ್ಲಿ ಪೆಟಿಕೋಟ್ ಧರಿಸುವ ಅಗತ್ಯವಿಲ್ಲ. ಬದಲಿಗೆ ನೀವು ಲೆಗ್ಗಿಂಗ್ ಯಾ ಪಾಜಾಮ ಧರಿಸಬಹುದು. ಗಂಡಸರು ಧರಿಸುವ ಟ್ರೆಡಿಶನಲ್ ಧೋತಿಯಿಂದ ಪ್ರಭಾವಿತ ಈ ಸ್ಟೈಲ್ ನಲ್ಲಿ ಸೀರೆಯನ್ನೇ ಧೋತಿ ತರಹ ಉಡಿಸಲಾಗುತ್ತದೆ. ಇದರಲ್ಲಿ ಕಾಲುಗಳ ನಡುವೆ ಪ್ಲೀಟ್ಸ್ (ಕಚ್ಚೆ) ಬರುವಂತೆ ಮಾಡಿ, ಟಕ್ ಗೊಳಿಸುತ್ತಾರೆ. ಸೆರಗನ್ನು ಹೆಗಲಿನ ಮೇಲೆ ಅಳವಡಿಸುತ್ತಾರೆ.
ಲೆಹಂಗಾ ಸ್ಟೈಲ್ ಸೀರೆ
ಲೆಹಂಗಾ ಸ್ಟೈಲ್ ಡ್ರೇಪಿಂಗ್ ಮಾಡರ್ನ್ ಸ್ಟೈಲ್ ಎನಿಸಿದೆ, ಇದು ಸೀರೆಯನ್ನು ಲೆಹಂಗಾದ ಸ್ಟೈಲ್ ಗೆ ಮ್ಯಾಚ್ ಮಾಡುತ್ತದೆ. ಸೀರೆಯನ್ನು ಲೆಹಂಗಾದ ಸ್ಕರ್ಟ್ ತರಹ ಡ್ರೇಪ್ ಮಾಡಲಾಗುತ್ತದೆ, ಇದರಲ್ಲಿ ಸೆರಗು ಲೆಫ್ಟ್ ಹೆಗಲಿನ ಮೇಲಿರುತ್ತದೆ. ವಿಶೇಷ ಸಂದರ್ಭಗಳಿಗೆ ಈ ಸ್ಟೈಲ್ ಪರ್ಫೆಕ್ಟ್ ಎನಿಸುತ್ತದೆ.
ಗೌನ್ ಸ್ಟೈಲ್ ಸೀರೆ
ನೀವು ಫ್ಲೋರ್ ಲೆಂತ್ ವುಳ್ಳ ಇಂಡೋವಸ್ಟರ್ನ್ ಸೀರೆಯನ್ನು ಟ್ರೈ ಮಾಡಬಹುದು. ಇದರಲ್ಲಿ `’ ಕಟ್ ಗೌನ್ ಇರುತ್ತದೆ. ಇದರ ಮೇಲಿನಿಂದ ಗೌನಿಗೆ ಮ್ಯಾಚ್ ಆಗುವಂಥ ಸೀರೆಯ ಸೆರಗನ್ನು, ಮೇಲುಭಾಗದಿಂದ ಹೆಗಲಿನ ಮೇಲೆ ಟಕ್ ಮಾಡಬೇಕು. ಸೊಂಟಕ್ಕೆ ಬೆಲ್ಟ್ ಸಿಕ್ಕಿಸಿ ಸ್ಟೈಲಿಶ್ ಲುಕ್ಸ್ ನೀಡಬಹುದು.
ಸ್ಲಿಟ್ ಕಟ್ ಸ್ಟೈಲ್ ಸೀರೆ
ಈ ಟ್ರೆಡಿಶನಲ್ ಔಟ್ ಫಿಟ್ ನಲ್ಲಿ ಥೈ ಹೈ ಸ್ಲಿಟ್ ನೀಡಿ, ಇದಕ್ಕೆ ಮತ್ತಷ್ಟು ಮಾಡರ್ನ್‌ಟ್ರೆಂಡಿ ಲುಕ್ ನೀಡಬಹುದು. ಈ ರೆಡಿಮೇಡ್ ಸೀರೆಗಳು ಬೇರೆ ಬೇರೆ ಪಾರ್ಟ್ ಗಳಾಗಿ ಲಭ್ಯ. ಇನ್ನು ಟಕ್ ಮಾಡಿ, ಥೈ ಹೈ ಸ್ಲಿಟ್ ಮಾಡಬಹುದಾಗಿದೆ. ಈ ಸೀರೆಯನ್ನು ನೀವು ಮತ್ತಷ್ಟು ಸ್ಟೈಲಿಶ್‌ಅಟ್ರಾಕ್ಟಿವ್ ಮಾಡಬಯಸಿದರೆ, ಬ್ರೋಕೆಟ್ ನ ಆಫ್ ಶೋಲ್ಡರ್ ಬ್ಲೌಸ್ ಜೊತೆ ಧರಿಸಿರಿ. ಹೆವಿ ಥೈಸ್ ಉಳ್ಳವರು ಸ್ಮಾಲ್ ಸ್ಲಿಟ್ ಇರಿಸಿಕೊಳ್ಳುವುದು ಲೇಸು.

ಕಸ್ಟಮೈಸ್ಡ್ ಫಿಶ್ ಟೇಲ್ ಸೀರೆ
ಇಂತಹ ಸೀರೆಗೆ ಹೊಸ ಲುಕ್ಸ್ ಹಾಗೂ ಸ್ಪೆಷಲ್ ಸ್ಟೈಲ್ ನೀಡಲಿಕ್ಕಾಗಿ ನೀವು ಸ್ಟ್ರಾಪ್ ಲೆಸ್ ಬ್ಲೌಸ್ ಜೊತೆ ಕ್ಯಾರಿ ಮಾಡಿ ಹಾಗೂ ಬ್ಲೌಸ್ ಡಿಸೈನ್ ನ್ನು ಫ್ಲಾಂಟ್ ಮಾಡಲು ಕೌಲ್ ಸ್ಟೈಲ್ ನಲ್ಲಿ ಸೆರಗನ್ನು ಡ್ರೇಪ್ ಮಾಡಿ.
ನೀವು ನಿಮ್ಮ ಆಯ್ಕೆ ಪ್ರಕಾರ ಯಾವುದೇ ಸೀರೆ ಡಿಸೈನ್ ಮಾಡಿಸಬಯಸಿದರೆ, ನಿಮಗೆ ಮಾರ್ಕೆಟ್ ನಲ್ಲಿ ಕಸ್ಟಮೈಸ್ಡ್ ಸೀರೆ ಬೇಕಾದ ವೆರೈಟಿಗಳಲ್ಲಿ ಸುಲಭವಾಗಿ ಸಿಗುತ್ತದೆ. ಇಲ್ಲದಿದ್ದರೆ ನೀವೇ ನಿಮ್ಮ ಟೇಲರ್ ಗೆ ಡಿಸೈನ್ ನೀಡಿಯೂ ಮಾಡಿಸಬಹುದಾಗಿದೆ.
ಪ್ರೀಡ್ರೇಪ್ಡ್ ಸೀರೆಗಳ ಮಾಡರ್ನ್ ಟ್ವಿಸ್ಟ್
ಇಂದಿನ ತರುಣಿಯರು ಹಬ್ಬಗಳ ಸಂದರ್ಭದಲ್ಲಿ ಸೀರೆ ಉಟ್ಟು ಮಿಂಚಲು ಬಯಸುತ್ತಾರೆ, ಆದರೆ ಸಮಯದ ಕೊರತೆಯ ಅಭಾವದಿಂದಾಗಿ, ಸೀರೆ ಡ್ರೇಪ್ ಮಾಡಿಕೊಳ್ಳಲು ಅವರಿಗೆ ಬಲು ಕಷ್ಟ ಎನಿಸುತ್ತದೆ. ಇಂಥ ಹೆಂಗಸರಿಗೆಂದೇ ಮಾರ್ಕೆಟ್ ನಲ್ಲಿ ಪ್ರೀ ಡ್ರೇಪ್ಡ್ ಸೀರೆಗಳು ಲಭ್ಯವಿವೆ. ಇವೆಲ್ಲ ರೆಡಿಮೇಡ್ ಆಗಿದ್ದು, ಪ್ಲೀಟ್ಸ್ (ನೆರಿಗೆ) ತಯಾರಿಸಿ ಸ್ಟಿಚ್ ಮಾಡಿರುತ್ತಾರೆ. ಈ ಸೀರೆಗಳನ್ನು ನೀವು ಸುಲಭವಾಗಿ ಧರಿಸಬಹುದು. ಅದು ಕ್ಯಾಶುಯೆಲ್ ಔಟಿಂಗ್, ಪಿಕ್ನಿಕ್ ಯಾ ಫಂಕ್ಷನ್ ಇರಲಿ, ಎಲ್ಲದಕ್ಕೂ ಹೊಂದುತ್ತದೆ. ಸ್ಟೈಲಿಶ್ ಆಗಿ ಮಿಂಚಲು ಇದೊಂದು ಸುವರ್ಣಾವಕಾಶ!

ಸ್ಟೈಲಿಶ್‌ಎಲಿಗೆಂಟ್ ಸೀರೆಗಳು
ಇತ್ತೀಚೆಗೆ ಸೀರೆಗಳನ್ನು ವಿಭಿನ್ನ ಸ್ಟೈಲ್ ಗಳಲ್ಲಿ ಡ್ರೇಪ್ ಮಾಡಿಸಲಾಗುತ್ತದೆ. ಇದರ ಹೊರತಾಗಿಯೂ ನಿಮಗೆ ಸೀರೆ ಡ್ರೇಪ್ ಮಾಡಿಕೊಳ್ಳುವುದು ಕಷ್ಟ ಎನಿಸಿದರೆ, ನಿಮಗೆ ಇಂಥ ಪ್ರೀಡ್ರೇಪ್ಡ್ ಸ್ಟೈಲಿಶ್‌ಎಲಿಗೆಂಟ್ ಸೀರೆಗಳು ಮಾರ್ಕೆಟ್ ನಲ್ಲಿ ಲಭ್ಯವಿದ್ದು, ಬೇಕೆನಿಸಿದ್ದನ್ನು ಆರಿಸಿ ಸುಲಭವಾಗಿ ಧರಿಸಿರಿ.
ಮಾಡರ್ನ್ ಪ್ಲೇಟಿಂಗ್ ವುಳ್ಳ ಸೀರೆಗಳು
ನೀವು ಸಾಂಪ್ರದಾಯಿಕವಾಗಿ ಸೀರೆ ಉಟ್ಟುಕೊಳ್ಳಲು ಬಯಸಿದರೆ ಹಾಗೇ ಮಾಡಿ. ಬದಲಿಗೆ ಹೊಸತೇನಾದರೂ ಬಯಸಿದರೆ, ಮಾಡರ್ನ್ ಪ್ಲೇಟಿಂಗ್ ಟೆಕ್ನಿಕ್ಸ್ ನಿಂದ ತಯಾರಾದ ಸೀರೆಗಳನ್ನು ಕ್ಯಾರಿ ಮಾಡಬಹುದು. ಈ ಲುಕ್ ನಲ್ಲಿ ನೀವು ಸೆರಗನ್ನು `ಆಫ್ ಸೆಂಟರ್’ ಮಾಡಿ, ತಿರುಚಬಹುದು. ಈ ಮಾಡರ್ನ್, ಗ್ಲಾಮರಸ್ ಲುಕ್ ನ್ನು ಮತ್ತಷ್ಟು ಸುಧಾರಿಸಲು, ಸೆರಗನ್ನು ಪಿನ್ ಅಪ್‌ಮಾಡಿ.

ಜ್ಯಾಕೆಟ್ ಸ್ಟೈಲ್ ಸೀರೆ
ಇತ್ತೀಚೆಗೆ ಇಂಥ ಸೀರೆಗಳು ಹೆಚ್ಚು ಟ್ರೆಂಡ್ ನಲ್ಲಿವೆ. ಇದರಲ್ಲಿ ಸೀರೆಗೆ ಓವರ್ ಆಲ್ ಒಂದು ಡ್ರೆಸ್ ನಂಥ ಲುಕ್ ನೀಡಲು ಯತ್ನಿಸಲಾಗಿರುತ್ತದೆ. ಇದರಲ್ಲಿ ನೀವು ಹೆವಿ ಲುಕ್ಸ್ ಬಯಸಿದರೆ, ಜೊತೆಗೆ ಬ್ರೊಕೇಡ್ ಯಾ ಸಿಲ್ಕ್, ರಾ ಸಿಲ್ಕ್ ಯಾ ಹೆವಿ ಎಂಬ್ರಾಯಿಡರಿಯ ಜ್ಯಾಕೆಟ್ ಧರಿಸಬಹುದಾಗಿದೆ. ಸಿಂಪಲ್ ಲುಕ್ಸ್ ಗಾಗಿ ಜಾರ್ಜೆಟ್, ಶಿಫಾನ್, ಪ್ರಿಂಟೆಡ್ ಸಿಲ್ಕ್ ಯಾ ಕಾಟನ್ ನ ಶ್ರಗ್ ನಂಥ ಜ್ಯಾಕೆಟ್ಸ್ ನ್ನು ಆರಿಸಬಹುದು.
– ಜಿ. ಪ್ರಭಾ





