ನಮ್ಮ ದೇಶ ಭಾರತವೊಂದು ಪ್ರಜಾಪ್ರಭುತ್ವ ದೇಶವಾಗಿದ್ದು ಇಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ದೇಶದ ಆಗುಹೋಗುಗಳ ಕುರಿತಾಗಿ ಪ್ರಶ್ನಿಸುವ, ಪ್ರತಿಭಟಿಸುವ ಸರ್ಕಾರದ ನಿಲುವನ್ನು ಟೀಕಿಸುವ ಹಕ್ಕನ್ನು ನಮ್ಮ ಸಂವಿಧಾನವೇ ಕೊಟ್ಟಿದೆ. ಆದರೆ ಹಾಗೆ ನಡೆಸುವ ಹೋರಾಟ ಇಲ್ಲವೇ ಚಳುವಳಿಯ ಹಿಂದೆ ಸಾರ್ವಜನಿಕ ಹಿತಾಸಕ್ತಿ ಇದೇಯೇ ಇಲ್ಲವೇ ಸ್ವಾರ್ಥವಿದೆಯೇ ಎಂಬುದು ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎನ್ನುವುದಕ್ಕೆ ಕಳೆದ ಮೂರು ವಾರಗಳಿಂದಲೂ ದೆಹಲಿಯಲ್ಲಿ ಸೋನಂ ವಾಂಗ್ಚುಕ್ ಎಂಬ ವ್ಯಕ್ತಿಯು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವೇ ಜ್ವಲಂತ ಸಾಕ್ಷಿಯಾಗಿದೆ,
ಸೋನಂ ವಾಂಗ್ಚುಕ್ ಯಾರು? ಅತನ ಹಿನ್ನಲೆ ಏನು?

ಸೋನಂ ವಾಂಗ್ಚುಕ್ ಎಂದರೆ ಬಹುತೇಕರು ಅತನೊಬ್ಬ ದೊಡ್ಡ ವಿಜ್ಞಾನಿ, ಆತನ ಕೆಲವು ಆವಿಷ್ಕಾರಗಳು ಭಾರತೀಯ ಸೇನೆಗೆ ನೆರವಾಗಿವೆ. ಅಷ್ಟೇ ಲಡಾಕ್ ಪ್ರದೇಶಕ್ಕೆ ಸ್ವತಂತ್ರರಾಜ್ಯದ ಸ್ಥಾನಮಾನ ನೀಡಬೇಕು ಎಂದು ಹೋರಾಟದ ಪರ ಉಪವಾಸ ಸಹಾ ಮಾಡಿರುವ ವಿಷಯ ತಿಳಿಸುತ್ತಾರೆ. ಅದೇ ರೀತಿ ಸಾಮಾನ್ಯ ಜನರು ನಟ ಅಮೀರ್ ಖಾನ್‌ನ ತ್ರಿ ಇಡಿಯಟ್ಸ್ ಚಲನಚಿತ್ರದಲ್ಲಿ ಅಮೀರ್ ಖಾನ್ ನಿರ್ವಹಿಸಿದ್ದ ಫುನ್ಸುಖ್ ವಾಂಗ್ಡು ಪಾತ್ರದ ನಿಜವಾದ ವ್ಯಕ್ತಿತ್ವವೇ ಲಡಾಕ್ ಪ್ರದೇಶದಲ್ಲಿ ತನ್ನದೇ ಆದ ಶಿಕ್ಷಣ ಸಂಸ್ಥೆಯೊಂದನ್ನು ಕಟ್ಟಿಕೊಂಡು ದರ ಮೂಲಕ ಒಬ್ಬ ಶಿಕ್ಷಣ ಸುಧಾರಕರಾಗಿ, ಶಿಕ್ಷಣ ಎನ್ನುವುದು ಕೇವಲ ಅಂಕಪಟ್ಟಿಯಾಗಿರದೇ, ಮಕ್ಕಳಿಗೆ ಎಂತಹ ಸಮಯದಲ್ಲೂ ಧೈರ್ಯವಾಗಿ ಬದುಕಲು ಕಲಿಸುವ ಸಾಧನ ಆಗಬೇಕು. ಸುಶಿಕ್ಷಿತರಾದ ಮಕ್ಕಳು ತಮ್ಮ ಬದುಕನ್ನು ತಾನೇ ಕಟ್ಟಿಕೊಳ್ಳುವಷ್ಟರ ಮಟ್ಟಿಗೆ ಬೆಳೆಯಬೇಕು ಎಂದು ಬಯಸಿದವರೇ ಸೋನಂ ವಾಂಗ್ಚುಕ್ ಎನ್ನುತ್ತಾರೆ. ಆದರೆ ಇತ್ತೀಚೆಗೆ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ತಿಳಿಸಿದಂತೆ ಅಮೀರ್ ಖಾನ್ ಮತ್ತು ಆ ಚಿತ್ರದ ಚಿತ್ರಕಥೆ ಬರೆದ ವ್ಯಕ್ತಿಗೆ ಆ ಸಮಯದಲ್ಲಿ ಸೋನಂ ವಾಂಗ್ಚುಕ್ ಬಗ್ಗೆ ತಿಳಿದಿರಲ್ಲಿಲ್ಲ ಎಂದಿರುವುದು ಗಮನಾರ್ಹವಾಗಿದೆ.

ಆದರೆ ಶಿಕ್ಷಣ ವ್ಯವಸ್ಥೆಯಲ್ಲಿ ಸುಧಾರಣೆ, ಅಕ್ರಮಗಳನ್ನು ತಡೆಯಲು ಮತ್ತು ನೀಟ್ ಪರೀಕ್ಷೆಯ ಪಶ್ನಪತ್ರಿಕೆಗಳು ಲೀಕ್ ಆಗಿರುವ ಹಿನ್ನಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿ ದೆಹಲಿಯ ಜಂತರ್‌ಮಂತರ್‌ನಲ್ಲಿ ಗಾಂಧಿ ರೀತಿಯಲ್ಲಿ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಸೋನಂ ವಾಂಗ್ಚುಕ್ ಎಲ್ಲರೂ ತಿಳಿದಿರುವಂತೆ ಕೇವಲ ಲಡಾಖ್‌ನ ಶಿಕ್ಷಣ ತಜ್ಞ ಮತ್ತು ಸಾಮಾಜಿಕ ಕಾರ್ಯಕರ್ತನಷ್ಟೇ ಅಲ್ಲದೇ ರಾಜಕೀಯ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದಾನೆ ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ. ಅವನ ತಂದೆ ಸೋನಮ್ ವಾಂಗ್ಯಾಲ್ ಅವರು 1967ರಲ್ಲಿ ಕಾಂಗ್ರೇಸ್ ಪಕ್ಷದಿಂದ ಲಡಾಕ್ ಪ್ರಾಂತ್ಯದ ವಿಧಾನಸಭೆಗೆ ಆಯ್ಕೆಯಾಗಿ 1975ರಲ್ಲಿ ಜಮ್ಮು ಮತ್ತು ಕಾಶ್ಮೀರ ಸರ್ಕಾರದಲ್ಲಿ ಸಂಪುಟ ಸಚಿವರಾಗಿ ಸೇವೆ ಸಲ್ಲಿಸಿದ್ದರು.
ಕೇಂದ್ರ ಸರ್ಕಾರದ ವಿರುದ್ಧ ಸೋನಂ ವಾಂಗ್‌ಚುಕ್ ಗೆ ಏಕೆ ಅಸಮಧಾನ?
ಸೋನಂ SECMOL ಸಂಸ್ಥೆ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ವಿಶಿಷ್ಟವಾಗಿ ಸೇವೆ ಮಾಡುತ್ತಿದ್ದದ್ದಲ್ಲದೇ ಹಿಮಾಲಯದ ಹವಾಮಾನದ ಕುರಿತಾಗಿ ಅವರ ಮತ್ತೊಂದು ಸಂಸ್ಥೆಯಾದ HIAL (ಹಿಮಾಲಯನ್ ಇನ್‌ಸ್ಟಿಟ್ಯೂಟ್ ಆಫ್ ಆಲ್ಟರ್ನೇಟಿವ್ಸ್) ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅವರ ಸಂಸ್ಥೆಗೆ 135 ಎಕರೆ ಭೂಮಿಯನ್ನು ಗುತ್ತಿಗೆ ರೂಪದಲ್ಲಿ 2018 ರಲ್ಲಿ ಈ ಪ್ರದೇಶದಲ್ಲಿ ಪರ್ಯಾಯ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು ಮತ್ತು ಸುಸ್ಥಿರ ನಾವೀನ್ಯತೆಯನ್ನು ಉತ್ತೇಜಿಸಲು ನೀಡಿತ್ತು. ಆದರೆ ಈ ಭೂಮಿಯನ್ನು ಮೂಲತಃ ಉದ್ದೇಶಿಸಿದ ಉದ್ದೇಶಕ್ಕಾಗಿ (ಅಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯವನ್ನು ಸ್ಥಾಪಿಸಲು) ನಿಗಧಿತ ಸಮಯದಲ್ಲಿ ಬಳಸಲಿಲ್ಲ ಎಂದು ಸ್ಥಳೀಯ ಆಡಳಿತವು ಪ್ರತಿಪಾದಿಸಿದ್ದರಿಂದ ಆಗಸ್ಟ್ 2025 ರಲ್ಲಿ ಗುತ್ತಿಗೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿ HIAL ಸಂಸ್ಥೆಗೆ ನೀಡಿದ್ದ ಭೂಮಿಯನ್ನು ಹಿಂಪಡೆಯಲಾಯಿತು. 2025ರ ಸೆಪ್ಟೆಂಬರ್ ತಿಂಗಳಿನಲ್ಲಿಯೇ ಗೃಹ ಸಚಿವಾಲಯವು ಅವರ ಎನ್‌ಜಿಒ (NGO) ಆದ SECMOL ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (FCRA) ಪರವಾನಗಿಯನ್ನು ರದ್ದುಗೊಳಿಸಿದ ನಂತರವೂ, ಸರ್ಕಾರದ ಆದೇಶಕ್ಕೆ ಕವಡೆಯ ಬೆಲೆಯನ್ನೂ ನೀಡದೇ ತಮ್ಮ ಸಂಸ್ಥೆಗೆ ಅಮೆರಿಕಾ ಮತ್ತು ಚೀನಾದಿಂದ ವಿವಿಧ ಸಂಸ್ಥೆಗಳ ಹೆಸರಿನಲ್ಲಿ, ಕಾರ್ಡ್‌ಗಳು ಮತ್ತು ಅನಧಿಕೃತ ಜಾಲಗಳ ಮೂಲಕ ಹಣವನ್ನು ಸ್ವೀಕರಿಸುತ್ತಿದ್ದ ಆರೋಪವೂ ಇದೆ.
ಆದರೆ ತನ್ನ ಸಂಸ್ಥೆಯ ತಪ್ಪನ್ನು ಒಪ್ಪಿಕೊಳ್ಳದ ಸೋನಂ ಲಡಾಖ್‌ಗೆ ಸಾಂವಿಧಾನಿಕ ರಕ್ಷಣೆ (ಆರನೇ ಅನುಸೂಚಿ) ಮತ್ತು ಪೂರ್ಣ ರಾಜ್ಯದ ಸ್ಥಾನಮಾನವನ್ನು ಕೋರಿ ದೀರ್ಘಕಾಲದ ಪ್ರತಿಭಟನೆಗಳ ನೇತೃತ್ವ ವಹಿಸಿದ್ದಕ್ಕಾಗಿ ಮತ್ತು ಉಪವಾಸ ನಡೆಸಿದ್ದರ ವಿರುದ್ಧವಾಗಿ ಕೇಂದ್ರ ಸರ್ಕಾರ ಭೂಮಿಯನ್ನು ಹಿಂಪಡೆದಿದೆ ಎಂಬ ತಪ್ಪು ಸಂದೇಶವನ್ನು ರವಾನಿಸತೊಡಗಿದ್ದಲ್ಲದೇ, ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲು ಸೂಕ್ತ ಸಮಯವನ್ನು ಕಾಯುತ್ತಿದ್ದರು.
To know about you tell me about your friends

ಇದೇ ಸಮಯಕ್ಕೆ ರೊಟ್ಟಿ ಜಾರಿ ತುಪ್ಪಕ್ಕೆ ಬಿತ್ತು ಎನ್ನುವಂತೆ ವೈಚಾರಿಕವಾಗಿ ಮತ್ತು ಪ್ರಜಾಸತ್ತಾತ್ಮಕವಾಗಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸಲಾಗದೇ, ಸೋತು ಸುಣ್ಣವಾಗಿರುವ ಆಮ್ ಆದ್ಮಿ ಪಕ್ಷ (AAP), ಸಮಾಜವಾದಿ ಪಕ್ಷ (SP), ತೃಣಮೂಲ ಕಾಂಗ್ರೆಸ್ (TMC), ಶಿವಸೇನೆ (UBT), CPI ಮತ್ತು ರಾಷ್ಟ್ರೀಯ ಜನತಾ ದಳ (RJD) ಪಕ್ಷಗಳಿಗೆ 2026ರ NEET ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪ ಹೊರ ಬರುತ್ತಿದ್ದಂತೆಯೇ ಅಮೇರಿಕಾದಲ್ಲಿ ಓದುತ್ತಿದ್ದ ಆಮ್ ಆದ್ಮಿ ಪಕ್ಷ ಸಾಮಾಜಿಕ ಜಾಲತಾಣಗಳನ್ನು ನೋಡಿಕೊಳ್ಳುತ್ತಿದ್ದ ಕಾರ್ಯಕರ್ತನ ಮೂಲಕ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಕಾಕ್ರೋಚ್ ಜನತಾ ಪಾರ್ಟಿ (CJP) ಎಂಬ ಹೊಸಾ ಆಂದೋಳನವನ್ನು ಆರಂಭಿಸಿ ಚಾಟ್ ಬಾಟ್ ಗಳ ಮೂಲಕ ರಾತ್ರೋ ರಾತ್ರೀ ಲಕ್ಷಾಂತರ ಅಭಿಮಾನಿಗಳು/ಸಮರ್ಥಕರನ್ನು ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟು ಹಾಕಿ ನವದೆಹಲಿಯಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆಸಲು ಮುಂದಾದ ವಿಷಯ ಎಲ್ಲರಿಗೂ ತಿಳಿದೇ ಇದೆ.
ಪ್ರತಿಭಟನೆಯ ಮೊದಲನೇ ದಿನವೇ ಅಲ್ಲಿ ಬಂದಿದ್ದ ಜನರನ್ನು ಗಮನಿಸಿದಾಗ ಇದು ಆಮ್ ಆದ್ಮಿ ಪಕ್ಷದ ಬಿ ತಂಡವಾಗಿದ್ದು ಅಲ್ಲೂ ಸಹಾ ಅದೇ ಜೆ.ಎನ್.ಯು ನ ತುಕ್ಡೇ ಗ್ಯಾಂಗ್ ಮತ್ತು ಎಡಚರರು ಇದ್ದದ್ದನ್ನು ಕಂಡ ದೆಹಲಿಯ ರಾಜ್ಯ ಮತ್ತು ಕೇಂದ್ರ ಸರ್ಕಾರ ಅವರ ಹೋರಾಟಕ್ಕೆ ಯಾವುದೇ ಮನ್ನಣೆ ಕೊಡದೇ ಹೋದಾಗ, ಕೇಂದ್ರದ ಮೇಲೆ ಪ್ರತೀಕಾರ ತೀರಿಸಿಕೊಳ್ಳಲು ಕಾಯುತ್ತಿದ್ದ ಸೋನ ವಾಗ್ಚುಕ್ ಅಣ್ಣಾ ಹಜಾರೆ ಮಾದರಿಯಲ್ಲಿ ವಿದ್ಯಾರ್ಥಿ ಪರ ಹೋರಾಟಗಾರನ ಸೋಗಿನಲ್ಲಿ ಧುತ್ ಎಂದು ಪ್ರತ್ಯಕ್ಷರಾಗಿ ಅಮರಣಾಂತರ ಉಪಾವಾಸಕ್ಕೆ ಕುಳಿತುಕೊಂಡರು. ಸೋನಂ ವಾಂಗ್ಚುಕ್ ಉಪವಾಸಕ್ಕೆ ಬೆಂಬಲ ನೀಡಲು ಬಂದವರ ಪಟ್ಟಿಯನ್ನು ನೋಡಿದರೆ ಸಾಕು ಅವರ ಹೋರಾಟ ಎಂತಹದ್ದು ಎಂಬುದರ ಅರಿವಾಗುತ್ತದೆ.

ಕಾಂಗ್ರೇಸ್ಸಿನ ಪವನ್ ಖೇರ, ತೃಣಮೂಲ ಕಾಂಗ್ರೆಸ್ಸಿನ ಮಹುವಾ ಮೊಯಿತ್ರಾ, ಆಮ್ ಆದ್ಮಿ ಪಕ್ಷದ ಸಂಜಯ್ ಸಿಂಗ್, ಅತೀಶಿ ಮತ್ತು ಅರವಿಂದ್ ಕೇಜ್ರೀವಾಲ್, ದೇಶ ವಿರೋಧಿ ಶಕ್ತಿಗಳೊಂದಿಗೆ ಸದಾಕಾಲವೂ ಗುರುತಿಸಿ ಕೊಳ್ಳುವ ಪ್ರಕಾಶ್ ರೈ, ರಾಕೇಶ್ ಟಿಕಾಯತ್, ಕುನಾಲ್ ಕಾಮ್ರಾ, ಸ್ವರಾ ಭಾಸ್ಕರ್, ಶಬಾನಾ ಆಜ್ಮಿ, ನಸೀರುದ್ದೀನ್ ಶಾ ಹೀಗೆ ಬಂದವರೆಲ್ಲರೂ, ಈ ಹಿಂದೆ CAA, NRC, ಕೃಷಿ ಕಾನೂನುಗಳು, ನೋಟು ಅಮಾನ್ಯೀಕರಣ, ಅಗ್ನಿಪಥ ಯೋಜನೆ, Uri ಅಟ್ಯಾಕ್, ಸರ್ಜಿಕಲ್ ಸ್ಟ್ರೈಕ್ ಪುಲ್ವಾಮಾ ಅಟ್ಯಾಕ್, ಆಪರೇಶನ್ ಸಿಂಧೂರ್ ಇದೆಲ್ಲವನ್ನೂ ಪ್ರಶ್ನಿಸಿ ಅದಕ್ಕೆ ದಾಖಲೆ ಕೇಳಿದವರಾಗಿದ್ದರು. ಅಷ್ಟೇ ಅಲ್ಲದೇ ಇತ್ತೀಚಿಗೆ ದೇಶಾದ್ಯಂತ ನಡೆಯುತ್ತಿರುವ SIR ಪ್ರಕ್ರಿಯೆಯನ್ನು ವಿರೋಧಿಸಿ ಅಕ್ರಮವಾಗಿ ಬಾಂಗ್ಲಾದೇಶದಿಂದ ಬಂದವರಿಗೆ ದೇಶದ ನಾಗರೀಕತೆ ಮತ್ತು ಮತದಾನದ ಹಕ್ಕನ್ನು ನೀಡಬೇಕೆಂದು ಸರ್ಕಾರವನ್ನು ಹೋದ ಬಂದ ಕಡೆಯಲ್ಲೆಲ್ಲಾ ಆಗ್ರಹಿಸುವವರೇ ಆಗಿದ್ದಾರೆ.
NEET ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧವಲ್ಲವೇ?
ಹಾಗಾದರೆ, NEET ಪ್ರಶ್ನೆಪತ್ರಿಕೆ ಸೋರಿಕೆ ಅಪರಾಧವಲ್ಲವೇ ಎಂದು ಕೇಳಿದರೆ, ಅದು ಖಂಡಿತವಾಗಿಯೂ ಅತ್ಯಂತ ಗಂಭೀರವಾದ ಅಪರಾಧವಾಗಿದ್ದು, ಇದರ ಹಿಂದೆ ದೇಶಾದ್ಯಂತ ನಾಯಿಕೊಡೆಯಂತೆ ಇರುವ ಕೋಚಿಂಗ್ ಸೆಂಟರ್ ಗಳ ಕೈವಾಡವೂ ಇದ್ದು ಕೇವಲ ಶಿಕ್ಷಣ ಮಂತ್ರಿಗಳ ರಾಜಿನಾಮೆಯ ಹೊರತಾಗಿ ಕೋಚಿಂಗ್ ಸೆಂಟರ್ ಗಳ ವಿರುದ್ಧವೂ ತನಿಖೆ ನಡೆಸಲು ಸರ್ಕಾರವನ್ನು ಕೇಳುವುದು ಸೂಕ್ತವಾಗಿರುತ್ತಿತ್ತು. ಅದೇ ರೀತಿಯಾಗಿ ಒಂದು ಬಾರಿ ಪರೀಕ್ಷೆ ಸಿದ್ಧರಾಗಿದ್ದವರಿಗೆ ಮತ್ತೊಂದು ಪರೀಕ್ಷೆ ಬರೆಯಲು ಅವಕಾಶ ಸಿಕ್ಕರೇ ಅದನ್ನೇ ಸುವರ್ಣಾವಕಾಶ ಎಂದು ಸದ್ಭಳಕೆ ನೋಡಿ ಕೊಂಡು ಮತ್ತಷ್ಟು ಉತ್ತಮ ಮಟ್ಟದಲ್ಲಿ ಸಾಧನೆ ಮಾಡಿಕೊಳ್ಳಲು ಬಯಸುವವರೇ ಹೆಚ್ಚಾಗಿರುವ ಇಂದಿನ ಕಾಲದಲ್ಲಿ, ಪುನಃ ನೀಟ್ ಪರೀಕ್ಷೆ ಬರೆಯಲು ಹೆದರಿ ಕೊಂಡು ಆತ್ಮಹತ್ಯೆ ಮಾಡಿ ಕೊಂಡರು ಎನ್ನಲಾದ 22 ವಿದ್ಯಾರ್ಥಿಗಳ ಮಾನಸಿಕತೆ ಮತ್ತು ಒತ್ತಡವನ್ನು ನಿಭಾಯಸಲು ಕಲಿಸಿ ಕೊಡದಿರುವ ಇಂದಿನ ಶಿಕ್ಷಣ ಪದ್ದತಿಯ ವಿರುದ್ಧ ಹೋರಾಡಿದ್ದರೂ ಭೇಷ್ ಎನ್ನಬಹುದಾಗಿತ್ತು. ಆದರೆ ಅಲ್ಲಿ ಉಪವಾಸದ ಹೆಸರಿನಲ್ಲಿ ನಡೆಯುತ್ತಿರುವುದು ಎಡಚರರು ಮತ್ತು ತುಕ್ಡೇ ಗ್ಯಾಂಗ್ ಮತ್ತು ಲಿಂಗ ಮತ್ತು ವಯಕ್ತಿಕ ಉಡುಪುಗಳ ಬಗ್ಗೆ ತಲೆ ಹರಟೆ ಮಾಡುವ ಶುದ್ಧ ಸ್ವಾರ್ಥ ರಾಜಕೀಯ ಎನ್ನುವುದು ಈಗ ಗುಟ್ಟಾಗಿ ಉಳಿದಿಲ್ಲ.
ಇವೆಲ್ಲದರ ಹಿಂದೆಯೂ ಖಂಡಿತವಾಗಿಯೂ ಭಾರತದ ನೆರೆ ರಾಷ್ಟ್ರ ನೇಪಾಳ, ಬಾಂಗ್ಲಾದೇಶ ಮತ್ತು ಶ್ರೀಲಂಕದಲ್ಲಿ ವಿದೇಶೀ ಪಟ್ಟಭದ್ರ ಹಿತಾಸಕ್ತಿಗಳ ಕುಯುಕ್ತಿ ಮತ್ತು ಆರ್ಥಿಕ ನೆರವಿನಿಂದ ಝೆನ್ ಜೀ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಂತೆ ಭಾರತದಲ್ಲೂ ಯುವ ಜನರು ಮತ್ತು ವಿದ್ಯಾರ್ಥಿಗಳಲ್ಲಿ ದ್ವೇಷವನ್ನು ಬಿತ್ತಿ ನೆರೆ ರಾಷ್ಟ್ರಗಳಂತೆ ಘರ್ಷಣೆಯನ್ನುಂಟು ಮಾಡುವ ಹುನ್ನಾರ ಇರುವುದು ಸ್ಪಷ್ಟವಾಗಿದೆ.
ವಾಂಗ್ಚುಕ್ ಆವಿಷ್ಕಾರಗಳ ಕುರಿತಾಗಿಯೂ ಅರೋಪಗಳಿವೆ

ಸೋನಂ ವಾಂಗ್ಚುಕ್ ಅವರು ಲಡಾಖ್‌ನ ತೀವ್ರ ಚಳಿಯಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಸೈನಿಕರು ಬೆಚ್ಚಗಿರಲು ಸಹಾಯವಾಗುವ ಸೌರಶಕ್ತಿಯನ್ನು ಬಳಸಿಕೊಂಡು ಟೆಂಟ್ ಗಳನ್ನು ಅಭಿವೃದ್ಧಿಪಡಿಸಿರುವುದು ಶ್ಲಾಘನೀಯವಾಗಿದೆ. ಆದರೆ ಈ ರೀತಿಯ ಟೆಂಟ್ ಗಳನ್ನು ಬಹಳ ಹಿಂದೆಯೇ ಅಮೇರಿಕಾದಲ್ಲಿ ಬಳಸಲಾಗುತ್ತಿತ್ತು ಎಂಬ ವಿಷಯ ಈಗ ತಡವಾಗಿ ತಿಳಿದು ಬಂದಿದೆ

ಅದೇ ಲಡಾಖ್‌ನಲ್ಲಿ ನೀರಿನ ಸಂರಕ್ಷಣೆಗಾಗಿ ನಿರ್ಮಿಸಲಾದ ಶಂಕುವಿನಾಕಾರದ ಐಸ್ ಸ್ಟೂಪಾ (Ice Stupa) ಕಲ್ಪನೆಗೆ 2016ರಲ್ಲಿ ಪಡೆದ Rolex Awards for Enterprise ಪ್ರಶಸ್ತಿ ಆವಿಷ್ಕಾರವು, ಮತ್ತೊಬ್ಬ ಲಡಾಖಿ ಇಂಜಿನಿಯರ್ ಚೆವಾಂಗ್ ನೋರ್ಫೆಲ್ (Chewang Norphel) ಅವರದ್ದಾಗಿದ್ದು, ನೋರ್ಫೆಲ್ ಅವರು 2012ರಲ್ಲೇ ಕೇವಲ ₹90,000 ವೆಚ್ಚದಲ್ಲಿ 12 ಕೃತಕ ಹಿಮನದಿಗಳನ್ನು ನಿರ್ಮಿಸಿದ್ದರ ಸಾಧನೆಗಾಗಿ ಗ್ರಾಮೀಣ ಅಭಿವೃದ್ಧಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಅನ್ವಯಿಕೆಗೆ ನೀಡುವ ಜಮನಾಲಾಲ್ ಬಜಾಜ್ ಪ್ರಶಸ್ತಿಯನ್ನು ಗಮನಿಸಬಹುದಾಗಿದೆ.

ಸೋನಂ ವಾಗ್ಚುಕ್ ಉಪವಾಸಕ್ಕೆ ಯಾವುದೇ ಪ್ರತಿಕ್ರಿಯೆ ನೀಡದ ಕೇಂದ್ರ ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಕ್ಕೆ, ಕೋರ್ಟ್ ಸೋನಂ ವಾಂಗ್ಚುಕ್ ಆರೋಗ್ಯದ ಏರು ಪೇರನ್ನು ಗಮನಿಸಿ ಬಲವಂತವಾಗಿಯಾದರೂ ಆಹಾರವನ್ನು ಕೊಡಬೇಕು ಎಂದು ನೀಡಿದ ಆಜ್ಞೆಯಂತೆ ಮತ್ತು ಈಗಾಗಲೇ ಉಪವಾಸದಿಂದಾಗಿ 9 ಕೆಜಿ ತೂಕ ಕಳೆದುಕೊಂಡಿದ್ದು, ಹಾಗೆಯೇ ಮುಂದುವರೆದಲ್ಲಿ, ಅವರ ಆರೋಗ್ಯ ಹದಗೆಟ್ಟು ಅಂಗಾಂಗ ವೈಫಲ್ಯ ಆಗಬಹುದು ಎಂಬ ಕಾರಣದಿಂದ ದೆಹಲಿ ಪೊಲೀಸರು ಅವರನ್ನು ಜಂತರ್ ಮಂತರ್‌ನ ಪ್ರತಿಭಟನಾ ಸ್ಥಳದಿಂದ ಸಫ್ದರ್‌ಜಂಗ್ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ಅವರ 20 ದಿನಗಳ ಉಪವಾಸ ಬಲವಂತವಾಗಿ ಕೊನೆಯಾಗಿದೆ.
ಶತ್ರುವಿನ ಶತ್ರು ಮಿತ್ರ

ಕೆಲ ವರ್ಷಗಳ ಹಿಂದೆ ಚೀನೀ ಆಕ್ರಮಣದ ಕುರಿತಾಗಿ ಇದೇ ಸೋನಂ ವಾಂಗ್ದುಕ್ ಭಾರತೀಯರು ತಮ್ಮ “ವ್ಯಾಲೆಟ್ ಪವರ್” ಅನ್ನು ಬಳಸಿಕೊಂಡು ಚೀನೀ ಉತ್ಪನ್ನಗಳನ್ನು ಮತ್ತು ಚೀನೀ ಅಪ್ಲಿಕೇಶನ್‌ಗಳನ್ನು ಬಹಿಷ್ಕರಿಸಲು ಒತ್ತಾಯಿಸಿದಾಗ, ಇಡೀ ದೇಶವೇ ಅತನ ಪರವಾಗಿತ್ತು. ಆದರೆ ಇತ್ತೀಚೆಗೆ ಅದೇ ಸೋನಂ ಲಡಾಖ್‌ನ ಗಡಿ ಭಾಗದಲ್ಲಿ ಭಾರತ ಸರ್ಕಾರ ನಿರ್ಲಕ್ಷ್ಯ ತೋರಿದರೆ ಸ್ಥಳೀಯರು ಚೀನಾ ಪಡೆಗಳಿಗೆ ದಾರಿ ಬಿಡುತ್ತಾರೆ ಎಂಬ ಹೇಳಿಕೆಯನ್ನು ನೀಡುವ ಮೂಲಕ ಅವರ ಇಬ್ಬಂದಿತನ ತೋರಿರುವುದು ಅನುಮಾನಾಸ್ಪದವಾಗಿದೆ.
ಇವಿಷ್ಟರ ಮಧ್ಯೆ ಇದೇ ಸೋನಮ್ ವಾಂಗ್‌ಚುಕ್ ಫೆಬ್ರವರಿ 2025 ರಲ್ಲಿ ಇಸ್ಲಾಮಾಬಾದ್‌ನಲ್ಲಿ ಡಾನ್ ಮೀಡಿಯಾ ಗ್ರೂಪ್ ಆಯೋಜಿಸಿದ್ದ ಅಂತರರಾಷ್ಟ್ರೀಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಭಾಗವಹಿಸಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಲ್ಲದೇ, ಇತ್ತೀಚೆಗೆ ಬಾಂಗ್ಲಾದೇಶಕ್ಕೂ ಸಹಾ ಭೇಟಿ ನೀಡಿರುವುದು ಮೇಲ್ನೋಟಕ್ಕೆ ಅಧಿಕೃತ ಕಾರ್ಯಕ್ರಮಗಳಿಗಾಗಿ ಎನಿಸುತ್ತದಾದರೂ

2026ರ ಜುಲೈ 20ರಂದು ಲೋಕಸಭೆಯಲ್ಲಿ ಆರಂಭವಾಗುತ್ತಿರುವ ಮಹತ್ತರ ಸದನಕ್ಕೂ ಮುಂಚೆ ಅಕಸ್ಮಾತ್ ಸೋನಂ ವಾಂಗ್‌ಚುಕ್ ಪರಿಸ್ಥಿತಿ ಹದೆಗೆಟ್ಟಿದ್ದಲ್ಲಿ ಅದನ್ನೇ ಮುಂದು ಮಾಡಿಕೊಂಡು ಸಂಸತ್ ಮೇಲೆ ಧಾಳಿ ನಡೆಸಲು ಹುನ್ನಾರ ನಡೆಸಿದ್ದ ವಿರೋಧ ಪಕ್ಷಗಳು ಮತ್ತು ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಸ್ಥಾಪಕ ಅಭಿಜೀತ್ ದಿಪ್ಕೆ ಅವರ ಉಪಾಯ ಮತ್ತೊಮ್ಮೆ ಠುಸ್ ಆಗಿದೆ.

ಜಟ್ಟಿ ಬಿದ್ದರೂ ಮಣ್ಣಾಗಲಿಲ್ಲಾ ಎಂದು ಸೋನಂ ಅವರನ್ನು ಬಲವಂತವಾಗಿ ಪೋಲೀಸರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಂತೆಯೇ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ಮುಂದುವರೆಸುವುದಾಗಿ ಅಭಿಜಿತ್ ದೀಪ್ಕೆ ಹೇಳಿರುವುದು, ಈ ಹಿಂದೆ ಆತ ನಡೆಸಿದ ಪ್ರತಿಭಟನೆ ಮತ್ತು ಉಪವಾಸ ಮಾಡಿದ ರೀತಿಯನ್ನು ನೋಡಿರುವ ಭಾರತೀಯರಿಗೆ ಈತ ಮತ್ತು ಅರವಿಂದ ಕೇಜ್ರೀವಾನ್ ನಡುವೆ ಯಾವುದೇ ವೆತ್ಯಾಸವಿಲ್ಲಾ ಎಂದು ಮುಸಿ ಮುಸಿ ನಗುತ್ತಿದ್ದಾರೆ.
ಹೀಗೆ ಹಾದಿ ಬೀದಿಯಲ್ಲಿ ಮಕ್ಕಳಾಟದಂತೆ ರಂಪ ರಾಮಾಯಣ ಮಾಡುವವರ ಸ್ವಾರ್ಥಕ್ಕೆಲ್ಲಾ ಕೇಂದ್ರ ಸರ್ಕಾರ ತಲೆ ಬಾಗುವಂತಾದರೆ, ಅದು ವಿಶ್ವದಲ್ಲೇ ಅತ್ಯಂತ ದೊದ್ಡ ಪ್ರಜಾಪ್ರಭುತ್ವ ದೇಶ ಎಂಬ ಖ್ಯಾತಿ ಹೊಂದಿರುವ ಮತ್ತು 140-150 ಕೋಟಿ ಜನಸಂಖ್ಯೆಗೆ ಮಾಡುವ ಅವಮಾನವಾಗಿರುವ ಕಾರಣ, ಈಸ ಬೇಕು ಇದ್ದು ಜಯಿಸಬೇಕು ಎಂಬ ದಾಸರ ವಾಣಿಯಂತೆ ಇಂತಹವರನ್ನು ಮಟ್ಟ ಹಾಕುವ ಶಕ್ತಿ ಖಂಡಿತವಾಗಿಯೂ ನಾವು ಆಯ್ಕೆ ಮಾಡಿಕಳುಹಿಸಿದ ಕೇಂದ್ರ ಸರ್ಕಾರಕ್ಕೆ ಇದೆ ಅಲ್ವೇ?
ಏನಂತೀರೀ?
ನಿಮ್ಮವನೇ
ಉಮಾಸುತ





