ಸ್ವದೇಶಿ ಜಾಗರಣ ಮಂಚ್ ಮತ್ತು ವಿಶ್ವಗುರು ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ದಿನಾಂಕ 24.07.2022 ರಂದು ಶ್ರೀಮತಿ ಪ್ರತಿಮಾ ಅಡಿಗರ ಸಾರಥ್ಯದಲ್ಲಿ ಅತ್ಯಂತ ಯಶಸ್ವಿಯಾಗಿ ತಾರಸಿ ತೋಟ ಕಾರ್ಯಾಗಾರವನ್ನು ನಡೆಸಲಾಯಿತು.

ಭಾರತ ಕೃಷಿ ಪ್ರಧಾನವಾದ ದೇಶವಾಗಿದ್ದು ರೈತನೇ ಈ ದೇಶದ ಬೆನ್ನಲುಬಾಗಿದ್ದಾನೆ. ಹಾಗಾಗಿ ಸ್ಥಳೀಯ ಚಿಂತನೆ, ಸ್ಥಳೀಯ ಮಾರುಕಟ್ಟೆ ಮತ್ತು ದೇಶದ ಸ್ಥಳೀಯ ಆರ್ಥಿಕ ಅಭಿವೃದ್ಧಿಯು ಎಂಬ ಸ್ವದೇಶಿ ಪರಿಕಲ್ಪನೆಯು ನಮ್ಮ ದೇಶದ ಆರ್ಥಿಕತೆಯ ಅವಿಭಾಜ್ಯ ಅಂಗವಾಗಿದೆ. ಬ್ರಿಟಿಷ್ ವಸಾಹತುಶಾಹಿಯಿಂದ ಸ್ವಾತಂತ್ರ್ಯ ಪಡೆದ ನಂತರವೂ ನಮ್ಮ ದೇಶ ಸಂಪೂರ್ಣ ಆರ್ಥಿಕ ಸ್ವಾತಂತ್ರ್ಯಗಳಿಸದೇ ಇನ್ನೂ ಸಹಾ ಬಹುರಾಷ್ಟ್ರೀಯ ಕಂಪನಿಗಳ ಆಶ್ರಯದಲ್ಲೇ ಇರುವುದು ನಿಜಕ್ಕೂ ದುಃಖಕರವಾದ ಸಂಗತಿಯಾಗಿದೆ. ಇದರಿಂದಾಗಿ ಭಾರತೀಯ ನಮ್ಮ ಪೂರ್ವಜರು ನಡೆಸಿಕೊಂದು ಬರುತ್ತಿದ್ದ ಸ್ವದೇಶಿ ಜೀವನಶೈಲಿಯನ್ನು ಸಂಪೂರ್ಣವಾಗಿ ತ್ಯಜಿಸಿ ಪಾಶ್ಚಾತ್ಯ ರೀತಿಯ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದೇ ದೇಶದ ಆರ್ಥಿಕ ಪರಿಸ್ಥಿಗೆ ಮತ್ತು ಜನರ ಆರೋಗ್ಯದ ಮೇಲೆ ಬಹಳಷ್ಟು ದುಷ್ಪರಿಣಾಮಗಳನ್ನು ಉಂಟು ಮಾಡಿರುವುದನ್ನು ಮನಗಂಡೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮತ್ತೊಂದು ಅಂಗ ಸಂಸ್ಥೆಯಾಗಿ ಸ್ವದೇಶೀ ಜಾಗರಣ ಮಂಚ್ ನವೆಂಬರ್ 22, 1991 ರಂದು ನಾಗಪುರದಲ್ಲಿ ಅಸ್ತಿತ್ವಕ್ಕೆ ಬಂದಿತು. 1992 ರ ಜನವರಿ 12 ರಂದು ಸ್ವಾಮಿ ವಿವೇಕಾನಂದರ ಜನ್ಮದಿನದಂದು ಕೇಂದ್ರ ಸರ್ಕಾರದ ಆರ್ಥಿಕ ನೀತಿಯ ವಿರುದ್ಧ ಡಾ.ಎಂ.ಜಿ. ಬೋಕರೆ (ಮಾಜಿ ಉಪಕುಲಪತಿ, ನಾಗ್ಪುರ ವಿಶ್ವವಿದ್ಯಾಲಯ) ಅವರ ನೇತೃತ್ವದಲ್ಲಿ ಮೊದಲ ಬಾರಿಗೆ ಬೃಹತ್ ಅಭಿಯಾನ ಆರಂಭಿಸುವ ಮೂಲಕ ದೇಶದಲ್ಲಾಗುತ್ತಿರುವ ಆರ್ಥಿಕ ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟ ಆರಂಭವಾಗಿ ಇಂದು ದೇಶಾದ್ಯಂತ ಜಿಲ್ಲಾ ಮಟ್ಟದವರೆಗಿನ ಉಪ ಘಟಕಗಳ ಅಖಿಲ ಭಾರತ ಜಾಲವನ್ನು ಹೊಂದಿದೆ. ಇದೇ ನಿಟ್ಟಿನಲ್ಲಿ ಸಾವಯವ ಕೃಷಿ ಮತ್ತು ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದೇಶದ ವಿವಿಧ ಭಾಗಗಳಲ್ಲಿ ಸ್ದದೇಶೀ ಮೇಳ ಮತ್ತು ಸಾವಯವ ಸಂತೆಗಳನ್ನು ನಡೆಸಿಕೊಂಡು ಬರುತ್ತಿದ್ದು ಬೆಂಗಳೂರಿನಲ್ಲಿ ಅದರಲ್ಲೂ ವಿಶೇಷವಾಗಿ ವಿದ್ಯಾರಣ್ಯಪುರದಲ್ಲೂ ಪ್ರತೀ ತಿಂಗಳ 2 ಮತ್ತು 4ನೇ ಭಾನುವಾರ ಸಾವಯವ ಸಂತೆಯನ್ನು ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ.

ಹಿಂದಿನ ಕಾಲದಲ್ಲಿ ಬಹುತೇಕರ ಮನೆಗಳಲ್ಲಿ ದಿನ ನಿತ್ಯದ ದೇವರ ಪೂಜೆಗೆ ಹೂವು ಮತ್ತು ದೈನಂದಿನ ಬಳಕೆಗಾಗಿ ತರಕಾರಿ, ಹಣ್ಣುಗಳನ್ನು ಹೊರಗಿನಿಂದ ಕೊಳ್ಳದೇ ತಮ್ಮದೇ ಕೈತೋಟದಲ್ಲೋ ಇಲ್ಲವೇ ಮನೆಯ ಹಿಂದಿನ ಹಿತ್ತಲಿನಲ್ಲಿ ಬೆಳೆಸಿಕೊಂಡು ಆರೋಗ್ಯಕರವಾದ ಜೀವನವನ್ನು ನಡೆಸುತ್ತಿದ್ದರು. ಇನ್ನು ಅಡುಗೆ ಮನೆಯ ತ್ರಾಜ್ಯಗಳು ಮನೆಯಲ್ಲಿದ ದನಕರುಗಳಿಗೆ ಕಲಗಚ್ಚಿನ ಆಹಾರವಾಡರೆ, ಅವುಗಳ ಗೋಮೂತ್ರ ಮತ್ತು ಗೋಮಯಗಳು ಮನೆಯ ಪಕ್ಕದ ತಿಪ್ಪೆಯಲ್ಲಿ ಗೊಬ್ಬರವಾಗಿ ಸಾವಯವ ಕೃಷಿಗೆ ಮೂಲ ಉತ್ಪನ್ನವಾಗುತ್ತಿತ್ತು. ದುರಾದೃಷ್





