ಬ್ಯೂಟಿ ಎಕ್ಸ್ ಪರ್ಟ್ ಗಳಿಂದ ಈ 2 ಕ್ರೀಮುಗಳ ನಡುವಿನ ಅಂತರ ಹಾಗೂ ಬಳಸುವ ವಿಧಾನಗಳ ಬಗ್ಗೆ ವಿವರವಾಗಿ ತಿಳಿಯೋಣವೇ….?
ಇತ್ತೀಚೆಗೆ ಹೆಚ್ಚಿನ ತರುಣಿಯರು ಬಗೆಬಗೆಯ ಮೇಕಪ್ ಟ್ರೈ ಮಾಡಲು ಬಯಸುತ್ತಾರೆ. ಆದರೆ ಹೆವಿ ಬ್ಯೂಟಿ ಪ್ರಾಡಕ್ಟ್ಸ್ ಹೆಚ್ಚು ಬಳಸಬಾರದು ಎಂಬುದು ಅವರಿಗೆ ಗೊತ್ತಿದೆ. ಅತಿ ಕನಿಷ್ಠ ಪ್ರಾಡಕ್ಟ್ಸ್ ಬಳಸಿ ಮುಖದಲ್ಲಿ ಹೆಚ್ಚಿನ ಗ್ಲೋ, ಬೆಸ್ಟ್ ಲುಕ್ಸ್ ತಂದುಕೊಳ್ಳುವುದು ಇವರ ಮುಖ್ಯ ಗುರಿ. ನೀವು ಹೀಗೆ ಬಯಸಿದೆರೆ, ನೀವು ಫೌಂಡೇಶನ್ ಲೇಯರ್ ಬದಲಿಗೆ BB ಕ್ರೀಂ ಯಾ CC ಕ್ರೀಮನ್ನು ಅಗತ್ಯ ಬಳಸಿರಿ. ಏಕೆಂದರೆ ಇದು ನಿಮ್ಮ ಸ್ಕಿನ್ ಕೇರ್ ನ ಅಗತ್ಯಗಳನ್ನು ಗಮನದಲ್ಲಿರಿಸಿಕೊಂಡು ತಯಾರಿಸಲಾದ ಪ್ರಾಡಕ್ಟ್ಸ್. ಫೆಸ್ಟಿವ್ ಸಂದರ್ಭದಲ್ಲಿ ಹೆಂಗಸರ ಬಳಿ ಸಮಯವೇ ಇರುವುದಿಲ್ಲ. ಹೀಗಾಗಿ ಈ ಕ್ರೀಮುಗಳು ಉತ್ತಮ ಲುಕ್ಸ್ ಪಡೆಯಲು ಬಲು ಸಹಾಯಕ.
ಹಾಗಾದರೆ ಈ BB ಕ್ರೀಂ ಯಾ CC ಕ್ರೀಮುಗಳ ನಡುವೆ ಬಳಕೆಯ ವ್ಯತ್ಯಾಸವೇನು? ಇದನ್ನು ನಗರದ ಖ್ಯಾತ ಸೌಂದರ್ಯ ತಜ್ಞೆಯರ ಸಲಹೆಗಳ ಮೂಲಕ ತಿಳಿಯೋಣ.
ಬಿಸಿಲಿನ ತೀಕ್ಷ್ಣತೆ, ಬೇಸಿಗೆಯ ಕಾಟ, UV ಕಿರಣಗಳ ಹಾನಿ ತಪ್ಪಿಸಲು ಇವು ಬೇಕು. ಇದರಿಂದ ಚರ್ಮಕ್ಕೆ ಹಲವು ಬಗೆಯ ಹಾನಿ ತಪ್ಪಿದ್ದಲ್ಲ. ಇದರ ನಿವಾರಣೆಗಾಗಿ BB ಯಾ CC ಕ್ರೀಂ ಬಳಸಬಹುದು. ಇವೆರಡೂ ನಿಮ್ಮ ಚರ್ಮಕ್ಕೆ ಉತ್ತಮ ಪರಿಣಾಮ ನೀಡುತ್ತವೆ. ಆದರೆ ಇನ್ನು ನಿಮ್ಮ ಸ್ಕಿನ್ ಟೋನ್, ಸ್ಕಿನ್ ಪ್ರಾಬ್ಲಂ ಅನುಸರಿಸಿ ಆರಿಸಬೇಕು.
BB ಕ್ರೀಂ ಮಹತ್ವ
ಇದರ ಅರ್ಥ ಬ್ಲೆಮಿಶ್ ಬಾಮ್ ಕ್ರೀಂ. ಬ್ಯೂಟಿ ಬಾಮ್ ಅಂದ್ರೂ ನಡೆಯುತ್ತವೆ. ಮುಖದಲ್ಲಿ ಸನ್ ಬರ್ನ್ ಯಾ ಆ್ಯಕ್ನೆಗಳ ಕಾರಣ ಉಂಟಾಗುವ ಸ್ಪಾಟ್ಸ್ ಮಾರ್ಕ್ಸ್ ಗೆ ಬ್ಲೆಮಿಶ್ ಅಂತಾರೆ. ಇಂಥ ಮಾರ್ಕ್ಸ್ ನ್ನು ಅಡಗಿಸಲು ಈ ಕ್ರೀಂ ಬಲು ಸಹಕಾರಿ. ಉದ್ಯೋಗಸ್ಥ ವನಿತೆಯರು ಬೆಳಗಿವ ಅವಸರದಲ್ಲಿ ಬೇಗ ಬೇಗ ಆಫೀಸಿಗೆ ರೆಡಿಯಾಗುವಾಗ, ಕಡಿಮೆ ಟೈಂನಲ್ಲಿ ತಮ್ಮ ಸ್ಕಿನ್ ಟೋನ್ ಗೆ ಇವೆನ್ ಲುಕ್ ನೀಡಲು ಇದು ಬಲು ಸಹಾಯಕಾರಿ. ಇದಕ್ಕಿಂತ ಬೆಟರ್ ಅಂದ್ರೆ ನೋ ಮೇಕಪ್ ಲುಕ್ ಸಿಗುತ್ತದೆ, ಅದೂ ಕೆಮಿಕಲ್ ಸಹಿತ ಕಾಸ್ಮೆಟಿಕ್ಸ್ ಬಳಸದೆಯೇ ಕೆಲಸವಾಗುತ್ತದೆ.
ಯಾರಿಗೆ ಡ್ರೈ ಸ್ಕಿನ್ ಸಮಸ್ಯೆ ಇರುತ್ತದೋ ಅಂಥವರು BB ಕ್ರೀಂ ಹಚ್ಚಿಕೊಂಡ ನಂತರ ಮಾಯಿಶ್ಟರೈಸರ್ ಬಳಸಬೇಕಾಗುತ್ತದೆ, ಏಕೆಂದರೆ ಈ ಕ್ರೀಂ ಡ್ರೈ ಸ್ಕಿನ್ ನವರಿಗೆ ಬೇಕಾಗುವಷ್ಟು ಮಾಯಿಶ್ಚರ್ ಒದಗಿಸಲಾಗದು. ಅಷ್ಟು ಮಾತ್ರವಲ್ಲ, ಈ ಕ್ರೀಂ UV ಕಿರಣಗಳಿಂದಲೂ ರಕ್ಷಣೆ ಒದಗಿಸದು. ಹೀಗಾಗಿ ಜೊತೆಜೊತೆಗೆ ಸನ್ ಸ್ಕ್ರೀನ್ ಲೋಶನ್ ಸಹ ಅನಿವಾರ್ಯವಾಗುತ್ತದೆ.
BB ಕ್ರೀಂ ಒಂದು ಅತ್ಯುತ್ತಮ ಆಲ್ ಇನ್ ಒನ್ ಸ್ಕಿನ್ ಕೇರ್ ಬ್ಯೂಟಿ ಪ್ರಾಡಕ್ಟ್ ಆಗಿದ್ದು, ಮುಖದ ಸ್ಟೆಯನ್ಸ್ ಸ್ಪಾಟ್ಸ್ ನ್ನು ಸುಲಭವಾಗಿ ಕವರ್ ಮಾಡಿ, ನ್ಯಾಚುರಲ್ ಲುಕ್ಸ್ ನೀಡುತ್ತದೆ. ಜೊತೆಗೆ ಇದು ಚರ್ಮವನ್ನು ಮಾಯಿಶ್ಟರೈಸ್ ಮಾಡಿ, ರಿಂಕಲ್ಸ್ ಕಡಿಮೆ ಮಾಡಿ, ಸನ್ ಸ್ಕ್ರೀನ್ ನಂಥ ಎಫೆಕ್ಟ್ ಅಂದ್ರೆ SPF ಪ್ರೊಟೆಕ್ಷನ್ ಒದಗಿಸುತ್ತದೆ, ಇದರಿಂದ ಚರ್ಮ ಎಷ್ಟೋ ಮೃದುವಾಗುತ್ತದೆ. ಕೇವಲ ಈ ಒಂದು BB ಕ್ರೀಂ ಚರ್ಮದ ಮೇಲೆ ಪ್ರಾಡಕ್ಟ್ ನ ಯಾವ ಪದರವನ್ನೂ ಉಳಿಸುವುದಿಲ್ಲ, ಇದರಿಂದ ಚರ್ಮ ಸಹಜವಾಗಿ ಉಸಿರಾಡಲು ಅನುಕೂಲ.
CC ಕ್ರೀಂ ಮಹತ್ವ
ಕ್ರೀಮನ್ನು ಕಲರ್ ಕರೆಕ್ಷನ್ ಯಾ ಕಾಂಪ್ಲೆಕ್ಷನ್ ಕೇರ್ ಕ್ರೀಂ ಎಂದು ಗುರುತಿಸಲಾಗುತ್ತದೆ. ಭಾರತೀಯರ ಚರ್ಮದ ದೊಡ್ಡ ಪ್ರಾಬ್ಲಂ ಎಂದರೆ, ಮುಖದಲ್ಲಿ ಪ್ಯಾಚಿನೆಸ್ ಉಳಿದುಬಿಡುತ್ತದೆ, ಅಂದ್ರೆ ಮುಖದ ಚರ್ಮದಲ್ಲಿ ಅನ್ ಇವೆನ್ ಕಾಂಪ್ಲೆಕ್ಷನ್ ಹೆಚ್ಚಾಗುತ್ತದೆ. ಫೇಸ್ ರೆಡ್ ನೆಸ್ ಹೆಚ್ಚುತ್ತದೆ. ಈ ಕ್ರೀಂ ನಿಮ್ಮ ಫೇಸ್ ಪ್ರಾಬ್ಲಂ ದೂರ ಮಾಡಿ, ಕಾಂಪ್ಲೆಕ್ಷನ್ ಒಂದೇ ಸಮ ಆಗುವಂತೆ ಮಾಡುತ್ತದೆ.
ಇವೆರಡನ್ನೂ ಬಳಸುವುದು ಹೇಗೆ?
CC ಕ್ರೀಂ ನಿಮ್ಮ ಚರ್ಮವನ್ನು ಸೆಮಿ ಮ್ಯಾಟ್‌ನ್ಯಾಚುರಲ್ ಎನಿಸುವ ಎಫೆಕ್ಟ್ ಒದಗಿಸುತ್ತದೆ. ಇದರ ಟೆಕ್ಸ್ ಚರ್ಸ್ ಕ್ರೀಂಗಿಂತ ಲೈಟ್ ಆಗುತ್ತದೆ. CC ಕ್ರೀಂ ರೆಡ್ ನೆಸ್ ಹೆಚ್ಚುಳ್ಳ ಚರ್ಮದವರಿಗೆ ಅತ್ಯಗತ್ಯ, ಅನ್ ಇವೆನ್ ಸ್ಕಿನ್ ಟೋನ್ ನವರಿಗೂ ಸಹ. ಹೀಗಾಗಿ ನೀವು ನಿಮ್ಮ ಚರ್ಮದ ಬೇಡಿಕೆಗೆ ತಕ್ಕಂತೆ BB ಯಾ CC ಕ್ರೀಂ ಆರಿಸಬೇಕು.
BB ಕ್ರೀಂ ನಿಮಗೆ ಮ್ಯಾಟ್, ಮಾಯಿಶ್ಚರೈಸ್ ಹಾಗೂ ಶೈನ್ ಲುಕ್ ನೀಡುತ್ತದೆ. BB ಕ್ರೀಂ ಗುಡ್ ಬೇಸ್ ನ ಕೆಲಸ ಮಾಡಲಾಗುತ್ತದೆ, ನಿಮ್ಮ ಡೇಲಿ ಲುಕ್ಸ್ ಗೆ ಬೆಸ್ಟ್ ಎನಿಸಿದೆ. ಇದರ ಬಳಕೆಯೂ ಸುಲಭ BB ಯಾ CC ಕ್ರೀಂ ಎರಡೂ ನಿಮ್ಮ ಚರ್ಮದಲ್ಲಿ ಬಲು ಸಹಜವಾಗಿ ಬೇಗ ವಿಲೀನಗೊಳ್ಳುತ್ತವೆ. ಇದರಿಂದ ನಿಮ್ಮ ಮುಖ ಸಿಮಿಲರ್, ಸಾಫ್ಟ್ ಹಾಗೂ ಬ್ರೈಟ್ ಕಾಂಪ್ಲೆಕ್ಷನ್ ಪಡೆಯುತ್ತದೆ. ಹೀಗಾಗಿ ನಿಮ್ಮ ಅಗತ್ಯಕ್ಕೆ ತಕ್ಕಂತೆ ಇವನ್ನು ಬಳಸಿಕೊಳ್ಳಿ.
– ಪ್ರತಿನಿಧಿ





