ದಿನೇದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ನಡುವೆ ನಿಮ್ಮ ಚರ್ಮದ ಸೌಂದರ್ಯ/ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ.....?

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದಿಂದಾಗಿ ಧೂಳು, ಕೊಳೆ ನಮ್ಮನ್ನು ಆರಿಸಿ ಹಿಂಸಿಸುವುದು ಮಾಮೂಲಾಗಿದೆ. ಮುಖ್ಯವಾಗಿ ನಗರವಾಸಿಗಳಿಗೆ ಇದರ ನಕಾರಾತ್ಮಕ ಪ್ರಭಾವ ತಪ್ಪಿದ್ದಲ್ಲ. ಇದರ ಸೂಕ್ಷ್ಮ ಹಾನಿಕಾರಕ ಕಣಗಳು ನಮ್ಮ ಚರ್ಮದ ರೋಮರಂಧ್ರಗಳನ್ನು ಕ್ಲೋಸ್‌ ಮಾಡಿಸಿ, ಮೊಡವೆ, ಆ್ಯಕ್ನೆ, ಬ್ಲ್ಯಾಕ್‌ ಹೆಡ್ಸ್, ಡಾರ್ಕ್‌ ಸರ್ಕಲ್ಸ್, ವಯಸ್ಸಿಗೆ ಮುನ್ನ ವೃದ್ಧಾಪ್ಯದ ಲಕ್ಷಣಗಳು.... ಇತ್ಯಾದಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.

ಹೀಗಾಗಿ ಇಂಥ ಹಾನಿಕಾರಕ ಅಂಶಗಳಿಂದ ಚರ್ಮವನ್ನು ಕಾಪಾಡಿಕೊಳ್ಳಬೇಕಾದುದು, ಅದರ ನೈಸರ್ಗಿಕ ಹೊಳಪು ಉಳಿಸಿಕೊಳ್ಳುವುದು ಅನಿವಾರ್ಯ.

ಮೊದಲ ಕೆಲಸ ಸ್ಕಿನ್ಕ್ಲೆನ್ಸಿಂಗ್‌ : ಇಂಥ ಮಾಲಿನ್ಯದಿಂದ ದೂರಾಗಲು ಮೊದಲಿಗೆ ಕ್ಲೆನ್ಸಿಂಗ್‌ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ಕನಿಷ್ಠ ದಿನಕ್ಕೆ 2 ಸಲವಾದರೂ ಇದು ಬೇಕು. ಇದಕ್ಕಾಗಿ ಒಂದು ಜೆಂಟಲ್, ನ್ಯಾಚುರಲ್ ಕ್ಲೆನ್ಸರ್‌ನ್ನು ಬಳಸಿಕೊಳ್ಳಿ. ಅದರಿಂದ ನಿಮ್ಮ ಚರ್ಮದ ಧೂಳು, ಕೊಳೆ, ಹೆಚ್ಚುವರಿ ಜಿಡ್ಡಿನಂಶ ತೊಲಗುವಂತಿರಬೇಕು.

ಅರಿಶಿನ-ಬೇಸನ್ಫೇಸ್ವಾಶ್‌ : ಅರಿಶಿನ-ಕಡಲೆಹಿಟ್ಟಿನ ಮಿಶ್ರಣದ ಪೇಸ್ಟ್ ಚರ್ಮದ ಆಳಕ್ಕಿಳಿದು ಕ್ಲೀನ್‌ ಮಾಡುತ್ತದೆ. ಅರಿಶಿನದ ಆ್ಯಂಟಿಸೆಪ್ಟಿಕ್‌/ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮವನ್ನು ಮಾಲಿನ್ಯದ ವಿರುದ್ಧ ರಕ್ಷಿಸುವಲ್ಲಿ ಫಲಕಾರಿ.

ಮುಲ್ತಾನಿ ಮಿಟ್ಟಿ : ಇದರಿಂದ ಮುಖದಲ್ಲಿನ ಧೂಳು, ಹೆಚ್ಚುವರಿ ಜಿಡ್ಡನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಕೆಮಿಕಲ್ಸ್ ನ ಕಾಸ್ಮೆಟಿಕ್ಸ್ ಗೆ ಬದಲು ಈ ನ್ಯಾಚುರಲ್ ಕ್ಲೆನ್ಸರ್‌ ನ್ನು ಧಾರಾಳ ಬಳಸಿಕೊಳ್ಳಿ.

ಮಾಯಿಶ್ಚರೈಸಿಂಗ್ಹೈಡ್ರೇಶನ್‌ : ಮಾಲಿನ್ಯದ ಕಾರಣ ಚರ್ಮದ ಆರ್ದ್ರತೆ ತಂತಾನೇ ತಗ್ಗಿಹೋಗುತ್ತದೆ. ಇದರಿಂದ ಚರ್ಮ ನಿರ್ಜೀವವಾಗಿ, ಕಳಾಹೀನಾವಾಗಿ ಕಾಣುತ್ತದೆ. ಸೂಕ್ತ ಮಾಯಿಶ್ಚರೈಸರ್‌ ನ ಬಳಕೆಯಿಂದ ಮಾತ್ರ ಚರ್ಮದ ಆರ್ದ್ರತೆಯನ್ನು ರಕ್ಷಿಸಬಹುದು.

ಆ್ಯಲೋವೇರಾ ಜೆಲ್ ‌: ಇದು ನಮ್ಮ ಚರ್ಮವನ್ನು ಹೈಡ್ರೇಟ್‌ ಮಾಡಿ ಶಾಂತಗೊಳಿಸುತ್ತದೆ. ಇದರ ಜೊತೆ ಅಗತ್ಯವಾಗಿ ವಿಟಮಿನ್ ಬೆರೆಸಿ ಹಚ್ಚಿಕೊಳ್ಳಿ.

ಕೊಬ್ಬರಿ ಎಣ್ಣೆ : ರಾತ್ರಿ ಮಲಗುವ ಮುನ್ನ, ಮುಖ, ಕೈಕಾಲಿಗೆ ಲೈಟಾಗಿ ಕೊಬ್ಬರಿ ಎಣ್ಣೆ ಹಚ್ಚಲು ಮರೆಯದಿರಿ. ಇದು ಆಳವಾಗಿ ಚರ್ಮದೊಳಗಿಳಿದು, ಉತ್ತಮ ಪೋಷಣೆ ಒದಗಿಸಿ, ಆರ್ದ್ರತೆಯನ್ನು ಲಾಕ್‌ ಮಾಡುತ್ತದೆ.

ಸನ್ಸ್ಕ್ರೀನ್ಅತ್ಯಗತ್ಯ : ಸೂರ್ಯನ ತೀಕ್ಷ್ಣ ಕಿರಣಗಳಾದ UVA/ UVB ಗಳಿಂದ ಮುಕ್ತರಾಗಲು, ಮಾಲಿನ್ಯದ ಪ್ರಕೋಪದಿಂದ ಡಲ್ ಆಗಿರುವ ಚರ್ಮವನ್ನು ಚೇತೋಹಾರಿ ಆಗಿಸಲು, ಮನೆಯಲ್ಲಿದ್ದಾಗ ಅಥವಾ ಹೊರಗೆ ಹೊರಡು ಮುನ್ನ, ಸದಾ SPF30+ ಯುಕ್ತ ಸನ್‌ ಸ್ಕ್ರೀನ್‌ ಬಳಸಲು ಮರೆಯದಿರಿ.

ಕ್ಯಾರೆಟ್ಬೀಜದ ಎಣ್ಣೆ  : ಇದರಲ್ಲಿ ನೈಸರ್ಗಿಕ SPF ಅಡಗಿದ್ದು, ಸೂರ್ಯನ ತೀಕ್ಷ್ಣ ಕಿರಣಗಳ ಹಾನಿಯಿಂದ ರಕ್ಷಿಸುತ್ತದೆ, ಹೀಗಾಗಿ ದಿನ ಮುಖ, ಕೈಕಾಲುಗಳಿಗೆ ಇದನ್ನು ಹಚ್ಚಿಕೊಳ್ಳಿ.

ಶಿಯಾ ಬಟರ್‌ : ಇದು ನಮ್ಮ ಚರ್ಮದ ಮೇಲೆ ಒಂದು ನ್ಯಾಚುರಲ್ ಪ್ರೊಟೆಕ್ಟಿವ್ ಪದರವಾಗಿ ರಕ್ಷಿಸುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಸಹಕಾರಿ.

ಎಕ್ಸ್ ಫಾಲಿಯೇಶನ್‌ : ಚರ್ಮದ ಮೇಲ್ಪದರದಲ್ಲಿನ ಡೆಡ್‌ ಸೆಲ್ಸ್ ತೊಲಗಿಸಲು ಇದು ಅನಿವಾರ್ಯ. ಹೀಗಾಗಿ ವಾರದಲ್ಲಿ ಕನಿಷ್ಠ 1 ಸಲವಾದರೂ ಇದನ್ನು ಮಾಡಿಸಿ. ಇದರಿಂದ ಡೆಡ್‌ ಸೆಲ್ಸ್ ಜೊತೆ ಚರ್ಮಕ್ಕೆ ತಗುಲಿದ ಕೊಳಕು ಸಹ ದೂರವಾಗುತ್ತದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ