ದಿನೇದಿನೇ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ನಡುವೆ ನಿಮ್ಮ ಚರ್ಮದ ಸೌಂದರ್ಯ/ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ…..?
ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯದಿಂದಾಗಿ ಧೂಳು, ಕೊಳೆ ನಮ್ಮನ್ನು ಆರಿಸಿ ಹಿಂಸಿಸುವುದು ಮಾಮೂಲಾಗಿದೆ. ಮುಖ್ಯವಾಗಿ ನಗರವಾಸಿಗಳಿಗೆ ಇದರ ನಕಾರಾತ್ಮಕ ಪ್ರಭಾವ ತಪ್ಪಿದ್ದಲ್ಲ. ಇದರ ಸೂಕ್ಷ್ಮ ಹಾನಿಕಾರಕ ಕಣಗಳು ನಮ್ಮ ಚರ್ಮದ ರೋಮರಂಧ್ರಗಳನ್ನು ಕ್ಲೋಸ್ ಮಾಡಿಸಿ, ಮೊಡವೆ, ಆ್ಯಕ್ನೆ, ಬ್ಲ್ಯಾಕ್ ಹೆಡ್ಸ್, ಡಾರ್ಕ್ ಸರ್ಕಲ್ಸ್, ವಯಸ್ಸಿಗೆ ಮುನ್ನ ವೃದ್ಧಾಪ್ಯದ ಲಕ್ಷಣಗಳು…. ಇತ್ಯಾದಿ ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತವೆ.
ಹೀಗಾಗಿ ಇಂಥ ಹಾನಿಕಾರಕ ಅಂಶಗಳಿಂದ ಚರ್ಮವನ್ನು ಕಾಪಾಡಿಕೊಳ್ಳಬೇಕಾದುದು, ಅದರ ನೈಸರ್ಗಿಕ ಹೊಳಪು ಉಳಿಸಿಕೊಳ್ಳುವುದು ಅನಿವಾರ್ಯ.
ಮೊದಲ ಕೆಲಸ ಸ್ಕಿನ್ ಕ್ಲೆನ್ಸಿಂಗ್ : ಇಂಥ ಮಾಲಿನ್ಯದಿಂದ ದೂರಾಗಲು ಮೊದಲಿಗೆ ಕ್ಲೆನ್ಸಿಂಗ್ ಮಾಡಿಕೊಳ್ಳಬೇಕು. ಚಳಿಗಾಲದಲ್ಲಿ ಕನಿಷ್ಠ ದಿನಕ್ಕೆ 2 ಸಲವಾದರೂ ಇದು ಬೇಕು. ಇದಕ್ಕಾಗಿ ಒಂದು ಜೆಂಟಲ್, ನ್ಯಾಚುರಲ್ ಕ್ಲೆನ್ಸರ್‌ನ್ನು ಬಳಸಿಕೊಳ್ಳಿ. ಅದರಿಂದ ನಿಮ್ಮ ಚರ್ಮದ ಧೂಳು, ಕೊಳೆ, ಹೆಚ್ಚುವರಿ ಜಿಡ್ಡಿನಂಶ ತೊಲಗುವಂತಿರಬೇಕು.
ಅರಿಶಿನ–ಬೇಸನ್ ಫೇಸ್ ವಾಶ್ : ಅರಿಶಿನ-ಕಡಲೆಹಿಟ್ಟಿನ ಮಿಶ್ರಣದ ಪೇಸ್ಟ್ ಚರ್ಮದ ಆಳಕ್ಕಿಳಿದು ಕ್ಲೀನ್ ಮಾಡುತ್ತದೆ. ಅರಿಶಿನದ ಆ್ಯಂಟಿಸೆಪ್ಟಿಕ್/ಆ್ಯಂಟಿ ಬ್ಯಾಕ್ಟೀರಿಯಲ್ ಗುಣಗಳು ಚರ್ಮವನ್ನು ಮಾಲಿನ್ಯದ ವಿರುದ್ಧ ರಕ್ಷಿಸುವಲ್ಲಿ ಫಲಕಾರಿ.
ಮುಲ್ತಾನಿ ಮಿಟ್ಟಿ : ಇದರಿಂದ ಮುಖದಲ್ಲಿನ ಧೂಳು, ಹೆಚ್ಚುವರಿ ಜಿಡ್ಡನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು. ಕೆಮಿಕಲ್ಸ್ ನ ಕಾಸ್ಮೆಟಿಕ್ಸ್ ಗೆ ಬದಲು ಈ ನ್ಯಾಚುರಲ್ ಕ್ಲೆನ್ಸರ್ ನ್ನು ಧಾರಾಳ ಬಳಸಿಕೊಳ್ಳಿ.
ಮಾಯಿಶ್ಚರೈಸಿಂಗ್ಹೈಡ್ರೇಶನ್ : ಮಾಲಿನ್ಯದ ಕಾರಣ ಚರ್ಮದ ಆರ್ದ್ರತೆ ತಂತಾನೇ ತಗ್ಗಿಹೋಗುತ್ತದೆ. ಇದರಿಂದ ಚರ್ಮ ನಿರ್ಜೀವವಾಗಿ, ಕಳಾಹೀನಾವಾಗಿ ಕಾಣುತ್ತದೆ. ಸೂಕ್ತ ಮಾಯಿಶ್ಚರೈಸರ್ ನ ಬಳಕೆಯಿಂದ ಮಾತ್ರ ಚರ್ಮದ ಆರ್ದ್ರತೆಯನ್ನು ರಕ್ಷಿಸಬಹುದು.
ಆ್ಯಲೋವೇರಾ ಜೆಲ್ : ಇದು ನಮ್ಮ ಚರ್ಮವನ್ನು ಹೈಡ್ರೇಟ್ ಮಾಡಿ ಶಾಂತಗೊಳಿಸುತ್ತದೆ. ಇದರ ಜೊತೆ ಅಗತ್ಯವಾಗಿ ವಿಟಮಿನ್ ಬೆರೆಸಿ ಹಚ್ಚಿಕೊಳ್ಳಿ.
ಕೊಬ್ಬರಿ ಎಣ್ಣೆ : ರಾತ್ರಿ ಮಲಗುವ ಮುನ್ನ, ಮುಖ, ಕೈಕಾಲಿಗೆ ಲೈಟಾಗಿ ಕೊಬ್ಬರಿ ಎಣ್ಣೆ ಹಚ್ಚಲು ಮರೆಯದಿರಿ. ಇದು ಆಳವಾಗಿ ಚರ್ಮದೊಳಗಿಳಿದು, ಉತ್ತಮ ಪೋಷಣೆ ಒದಗಿಸಿ, ಆರ್ದ್ರತೆಯನ್ನು ಲಾಕ್ ಮಾಡುತ್ತದೆ.
ಸನ್ ಸ್ಕ್ರೀನ್ ಅತ್ಯಗತ್ಯ : ಸೂರ್ಯನ ತೀಕ್ಷ್ಣ ಕಿರಣಗಳಾದ UVA/ UVB ಗಳಿಂದ ಮುಕ್ತರಾಗಲು, ಮಾಲಿನ್ಯದ ಪ್ರಕೋಪದಿಂದ ಡಲ್ ಆಗಿರುವ ಚರ್ಮವನ್ನು ಚೇತೋಹಾರಿ ಆಗಿಸಲು, ಮನೆಯಲ್ಲಿದ್ದಾಗ ಅಥವಾ ಹೊರಗೆ ಹೊರಡು ಮುನ್ನ, ಸದಾ SPF30+ ಯುಕ್ತ ಸನ್ ಸ್ಕ್ರೀನ್ ಬಳಸಲು ಮರೆಯದಿರಿ.
ಕ್ಯಾರೆಟ್ ಬೀಜದ ಎಣ್ಣೆ : ಇದರಲ್ಲಿ ನೈಸರ್ಗಿಕ SPF ಅಡಗಿದ್ದು, ಸೂರ್ಯನ ತೀಕ್ಷ್ಣ ಕಿರಣಗಳ ಹಾನಿಯಿಂದ ರಕ್ಷಿಸುತ್ತದೆ, ಹೀಗಾಗಿ ದಿನ ಮುಖ, ಕೈಕಾಲುಗಳಿಗೆ ಇದನ್ನು ಹಚ್ಚಿಕೊಳ್ಳಿ.
ಶಿಯಾ ಬಟರ್ : ಇದು ನಮ್ಮ ಚರ್ಮದ ಮೇಲೆ ಒಂದು ನ್ಯಾಚುರಲ್ ಪ್ರೊಟೆಕ್ಟಿವ್ ಪದರವಾಗಿ ರಕ್ಷಿಸುತ್ತದೆ. ಇದು ಸೂರ್ಯನ ಹಾನಿಕಾರಕ ಕಿರಣಗಳಿಂದ ಚರ್ಮವನ್ನು ರಕ್ಷಿಸುವಲ್ಲಿ ಸಹಕಾರಿ.
ಎಕ್ಸ್ ಫಾಲಿಯೇಶನ್ : ಚರ್ಮದ ಮೇಲ್ಪದರದಲ್ಲಿನ ಡೆಡ್ ಸೆಲ್ಸ್ ತೊಲಗಿಸಲು ಇದು ಅನಿವಾರ್ಯ. ಹೀಗಾಗಿ ವಾರದಲ್ಲಿ ಕನಿಷ್ಠ 1 ಸಲವಾದರೂ ಇದನ್ನು ಮಾಡಿಸಿ. ಇದರಿಂದ ಡೆಡ್ ಸೆಲ್ಸ್ ಜೊತೆ ಚರ್ಮಕ್ಕೆ ತಗುಲಿದ ಕೊಳಕು ಸಹ ದೂರವಾಗುತ್ತದೆ.
ಓಟ್ ಮೀಲ್ ಜೇನಿನ ಸ್ಕ್ರಬ್ : ಕಾಫಿ ಪೌಡರ್‌ಸಕ್ಕರೆಯ ಸ್ಕ್ರಬ್ ಡೆಡ್ ಸ್ಕಿನ್ ತೊಲಗಿಸುವಲ್ಲಿ ಪೂರಕ. ಇದರಿಂದ ಚರ್ಮ ಸಹಜವಾಗಿ ಹೆಚ್ಚು ನುಣುಪಾಗಿ, ಹೊಳೆಯತೊಡಗುತ್ತದೆ.
ಆ್ಯಂಟಿಪೊಲ್ಯೂಶನ್ ಫೇಸ್ ಮಾಸ್ಕ್ ನ ಬಳಕೆ : ಈ ಡೀಟಾಕ್ಸಿಫೈಯಿಂಗ್ ಫೇಸ್ ಮಾಸ್ಕ್ ನ ಬಳಕೆಯು, ಮಾಲಿನ್ಯದ ಕಾರಣ ಮುಖಕ್ಕೆ ತಗುಲಿದ ಟಾಕ್ಸಿನ್ಸ್ ತೊಲಗಿಸುವಲ್ಲಿ ಬಲು ಸಹಕಾರಿ.
ಬೇವು ತುಳಸಿಯ ಫೇಸ್ ಪ್ಯಾಕ್: ಬೇವಿನಲ್ಲಿ ತುಂಬಿದ ಆ್ಯಂಟಿ ಬ್ಯಾಕ್ಟೀರಿಯಲ್ ನ ಅಂಶ ಹಾಗೂ ತುಳಸಿಯಲ್ಲಿನ ಉತ್ತಮಿಕೆಯು ಚರ್ಮದ ಡೀಟಾಕ್ಸಿಫಿಕೇಶನ್ ಗೆ ಹೆಚ್ಚು ನೆರವಾಗುತ್ತದೆ.
ಚಾರ್ ಕೋಲ್ ಮಾಸ್ಕ್ : ಇದ್ದಿಲಿನ ಅಂಶ ನಮ್ಮ ಚರ್ಮದ ಆಳಕ್ಕಿಳಿದು, ಅದನ್ನು ನೀಟಾಗಿ ಶುದ್ಧೀಕರಿಸುತ್ತದೆ. ಇದು ರೋಮರಂಧ್ರಗಳಲ್ಲಿ ಅಡಗಿದ ಕೊಳಕು, ಟಾಕ್ಸಿನ್ಸ್ ನ್ನು ತೊಲಗಿಸಲು ನೆರವಾಗುತ್ತದೆ.
ಆ್ಯರೋಮಾ ಥೆರಪಿ : ಚರ್ಮವನ್ನು ಪ್ರಾಕೃತಿಕವಾಗಿ ಸದಾ ಸ್ವಸ್ಥವಾಗಿಡಲು, ಇದರ ಆಯಿಲ್ಸ್ ನಲ್ಲಿ ಅನೇಕ ಉತ್ತಮ ಅಂಶಗಳಿದ್ದು, ಅದು ಚರ್ಮವನ್ನು ಸದಾ ತಾಜಾ ಆಗಿಡುವುದಲ್ಲದೆ, ರೀವೈಟೈಸ್ ಸಹ ಮಾಡುತ್ತದೆ. ಈ ಆಯಿಲ್ಸ್ ಕೇವಲ ತ್ವಚೆಗೆ ಮಾತ್ರವಲ್ಲದೆ, ಮಾಲಿನ್ಯದ ದುಷ್ಪ್ರಭಾವ ತಗ್ಗಿಸುವಲ್ಲಿಯೂ ಪ್ರಧಾನಪಾತ್ರ ವಹಿಸುತ್ತದೆ.
ಉಪಯುಕ್ತ ಆ್ಯರೋಮಾ ಥೆರಪಿ ಆಯಿಲ್ಸ್
ಟೀ ಟ್ರೀ ಆಯಿಲ್ : ಇದರಲ್ಲಿ ಆ್ಯಂಟಿಬ್ಯಾಕ್ಟೀರಿಯಲ್ ಆ್ಯಂಟಿ ಇನ್ ಫ್ಲಮೇಟರಿ ಗುಣಗಳು ಅಡಗಿವೆ. ಇದು ಆ್ಯಕ್ನೆ, ಮೊಡವೆ, ಸ್ಕಿನ್ ಇರಿಟೇಶನ್ ಓಡಿಸುತ್ತವೆ.
ಲ್ಯಾವೆಂಡರ್ ಆಯಿಲ್ : ಇದು ಚರ್ಮವನ್ನು ಶಾಂತಗೊಳಿಸುತ್ತದೆ ಡೀಟಾಕ್ಸಿಫಿಕೇಶನ್ ನಲ್ಲಿ ಬಲು ಸಹಕಾರಿ.
ಆ್ಯರೋಮಾ ಥೆರಪಿ ಟಿಪ್ಸ್ : ರಾತ್ರಿ ಮಲಗುವ ಮುನ್ನ, ನಿಮ್ಮ ಮುಖ, ಕೈಕಾಲು, ಮೈ ಪೂರ್ತಿ ಟೀ ಟ್ರೀ ಯಾ ಲ್ಯಾವೆಂಡರ್ ಆಯಿಲ್ ನ ಕೆಲವು ಹನಿಗಳನ್ನು ಸವರಿ, ಮಸಾಜ್ ಮಾಡಿ.
ರೋಜ್ ಮೆರಿ ಆಯಿಲ್ : ಇದು ಚರ್ಮವನ್ನು ನೀಟಾಗಿ ಟೋನ್ ಮಾಡಿ ರೀಫ್ರೆಶ್ ಮಾಡುತ್ತದೆ. ಇದು ಮಾಲಿನ್ಯದ ಕುಪ್ರಭಾವಗಳನ್ನು ತಗ್ಗಿಸಲು ಬಲು ಸಹಕಾರಿಯಾಗಿದೆ.
ನಿಮ್ಮ ಫೇಸ್ ಮಾಸ್ಕ್ ಗೆ 2-3 ಹನಿ ಈ ಮೇಲಿನ ಆಯಿಲ್ಸ್ ಬೆರೆಸಿ, ಬಳಸಿಕೊಳ್ಳಿ.
ಡಯೆಟ್ಹೈಡ್ರೇಶನ್ : ಇದರ ಕಡೆ ಗಮನಹರಿಸಿ, ದೇಹದ ಆಂತರಿಕ ಭಾಗಗಳನ್ನೂ ಸ್ವಸ್ಥವಾಗಿಡಿ. ಚರ್ಮದ ಆರೋಗ್ಯಕ್ಕಾಗಿ ಕೇವಲ ಹೊರಭಾಗದಿಂದ ಆರೈಕೆ ಮಾಡಿದರೆ ಸಾಲದು, ಉತ್ತಮ ಪೌಷ್ಟಿಕ ಆಹಾರ ಹಾಗೂ ಸಮಯಕ್ಕೆ ಸರಿಯಾಗಿ ಧಾರಾಳ ನೀರು ಕುಡಿಯುತ್ತಾ, ಸದಾ ಹೈಡ್ರೇಟೆಡ್ ಆಗಿರಿ.
ಟಿಪ್ಸ್
ಆ್ಯಂಟಿ ಆಕ್ಸಿಡೆಂಟ್ಸ್ ಧಾರಾಳ ಅಡಗಿರುವಂಥ ಆಹಾರ ಸೇವಿಸಿ : ನಿಮ್ಮ ದೈನಂದಿನ ಆಹಾರದಲ್ಲಿ ಧಾರಾಳವಾಗಿ ವಿಟಮಿನ್ಸ್, ಮಿನರಲ್ಸ್ ಅಡಗಿರುವಂಥ ನಿಂಬೆ, ಕಿತ್ತಳೆ, ಬಾದಾಮಿ, ಖರ್ಜೂರ, ಗೋಡಂಬಿ, ಸೂರ್ಯಕಾಂತಿ ಬೀಜ, ಫ್ಲಾಕ್ಸ್ ಸೀಡ್ಸ್ ಇತ್ಯಾದಿಗಳನ್ನು ಅಗತ್ಯ ಬೆರೆಸಿಕೊಳ್ಳಿ.
ಗ್ರೀನ್ ಟೀ : ಇದರಲ್ಲೂ ಧಾರಾಳ ಆ್ಯಂಟಿ ಆಕ್ಸಿಡೆಂಟ್ಸ್ ತುಂಬಿದ್ದು, ಚರ್ಮದ ಡೀಟಾಕ್ಸಿಫಿಕೇಶನ್ ಗೆ ಸಹಾಯಕಾರಿ.
– ಪ್ರತಿನಿಧಿ





