ಚಳಿಗಾಲದ ದಿನಗಳಲ್ಲೂ ತುಟಿಗಳ ಅಂದ ಕೆಡದೆ ನಳನಳಿಸಲು ಏನು ಮಾಡಬೇಕು…..?
ಇತ್ತೀಚಿನ ದಿನಗಳಲ್ಲಿ ತುಟಿಗಳ ಅಂದ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್ ಲಭ್ಯವಿವೆ. ಇವುಗಳಲ್ಲಿ ಲಿಪ್ ಬಾಮ್, ಲಿಪ್ ಟಿಂಟ್, ಲಿಪ್ ಗ್ಲಾಸ್ ಹಾಗೂ ಲಿಪ್ ಸ್ಟಿಕ್ ಪ್ರಮುಖ. ಆದರೆ ಇವುಗಳಲ್ಲಿ ಯಾವ ಪ್ರಾಡಕ್ಟ್ ಯಾರಿಗೆ ಸೂಕ್ತ ಎಂದು ಆಲೋಚಿಸಿ ನಿರ್ಧರಿಸುವುದು ಕಷ್ಟ. ಸರಿಯಾದ ಪ್ರಾಡಕ್ಟ್ ನ ಆಯ್ಕೆ ನಿಮ್ಮ ಅಗತ್ಯ, ಲುಕ್ಸ್, ಬಜೆಟ್ ನ್ನು ಆಧರಿಸಿದೆ. ಇವುಗಳ ನಡುವಿನ ಅಂತರ ತಿಳಿಯೋಣವೇ….?
ಲಿಪ್ ಬಾಮ್ : ಇದರ ಮುಖ್ಯ ಕೆಲಸ ತುಟಿಗಳನ್ನು ಆದಷ್ಟೂ ಮೃದುಗೊಳಿಸಿ, ಮಾಯಿಶ್ಚರೈಸ್ ಮಾಡಿಸುವುದು. ಇದು ತುಟಿಗಳು ಒಡೆಯದಂತೆ, ಒಣಗಿಹೋಗದಂತೆ ತಡೆಯುತ್ತದೆ. ತುಟಿಗಳ ಸುರಕ್ಷತೆ ಕಾಪಾಡಲೆಂದೇ ಡಿಸೈನ್ ಗೊಳಿಸಲಾಗಿದೆ. ಇದರ ಟೆಕ್ಸ್ ಚರ್ ಕ್ರೀಮೀ ಯಾ ವ್ಯಾಕ್ಸಿ ಆಗಿರುತ್ತದೆ. ಇದರ ಫಿನಿಶ್ ನ್ಯಾಚುರ್ ಶೈನ್ ಆಗಿರುತ್ತದೆ. ಕೆಲವು ಲಿಪ್ ಬಾಮ್ ಟಿಂಟೆಡ್ ಆಗಿರುತ್ತವೆ, ಆದರೆ ಹೆಚ್ಚಿನ ಕಲರ್ ಲೆಸ್ ಆಗಿರುತ್ತವೆ. ಇದು ಎಲ್ಲಾ ವಯೋಮಾನದವರ ಒಂದು ಬೇಸಿಕ್ ಸ್ಕಿನ್ ಕೇರ್ ಪ್ರಾಡಕ್ಟ್ ಆಗಿದೆ.

ಲಿಪ್ ಬಾಮ್ ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಶಿಯಾ ಬಟರ್, ಬೀಜ್ಯಾಕ್ಸ್, ಆ್ಯಲೋವೇರಾ, ವಿಟಮಿನ್‌ಹಾಗೂ SPF 30/40 ಬೆರೆತಿರುತ್ತವೆ. ಹೀಗಾಗಿ ಇದು ತುಟಿಗಳನ್ನು ಮಾಯಿಶ್ಚರೈಸ್ ಮಾಡಿ, ಸನ್ ಪ್ರೊಟೆಕ್ಷನ್ ಸಹ ನೀಡುತ್ತವೆ. ಇದನ್ನು ಸಾಮಾನ್ಯವಾಗಿ ಒಡೆದ ತುಟಿಗಳಿಗೆಂದೇ ಬಳಸುತ್ತಾರೆ. ಅದನ್ನು ರಿಪೇರಿ ಮಾಡಿ, ಮೃದುಗೊಳಿಸುತ್ತದೆ. ಹೀಗಾಗಿ ಥಂಡಿ ಸೀಸನ್ನಿನಲ್ಲಿ ಇದು ಅತ್ಯಗತ್ಯ. ಏಕೆಂದರೆ ಚಳಿಗಾಲದಲ್ಲಿ ತುಟಿ ಬೇಗ ಒಣಗುತ್ತದೆ/ಒಡೆಯುತ್ತದೆ. ಇಷ್ಟು ಮಾತ್ರವಲ್ಲದೆ, ಮೇಕಪ್ ಮಾಡಿಕೊಳ್ಳುವ ಮುನ್ನ, ತುಟಿಗಳಿಗೆ ಪ್ರೈಮರ್ ಆಗಿಯೂ ಇದನ್ನು ಬಳಸುತ್ತಾರೆ.
ನೀವು ಮೃದು, ಕೋಮಲ ತುಟಿ ಬಯಸಿದರೆ, ಲಿಪ್ ಬಾಮ್ ನ್ನು ನಿಮ್ಮ ರೊಟೀನ್ ನ ಭಾಗವಾಗಿಸಿ. ಇದು ಟ್ರಾವೆಲ್ ಫ್ರೆಂಡ್ಲಿಯೂ ಹೌದು. ಇದನ್ನು ಎಲ್ಲಿಗಾದರೂ ಕೊಂಡೊಯ್ದು ಬಳಸಿಕೊಳ್ಳಬಹುದು. ಇದೀಗ ಮಾರುಕಟ್ಟೆಯಲ್ಲಿ ಫ್ಲೇರ್ ವುಳ್ಳ ಹಾಗೂ ಮೆಡಿಕೇಟೆಡ್ ಲಿಪ್ ಬಾಮ್ ಸಹ ಲಭ್ಯ, ಇದು ನಿಮಗೆ ಹೆಚ್ಚಿನ ಹಿತಾನುಭಾವ ನೀಡುತ್ತದೆ.
ಲಿಪ್ ಟಿಂಟ್ : ಇದು ಒಂದು ಲೈಟ್ ವೆಯ್ಟ್ ಪ್ರಾಡಕ್ಟ್. ಇದು ತುಟಿಗಳಿಗೆ ನ್ಯಾಚುರಲ್ ಲಾಂಗ್ ಲಾಸ್ಟಿಂಗ್ ಕಲರ್ ನೀಡುತ್ತದೆ. ಇದು ಲಿಕ್ವಿಡ್ ಯಾ ಜೆಲ್ ಬೇಸ್ಡ್ ಆಗಿದ್ದು, ಮ್ಯಾಟ್ ಯಾ ಸೆಮಿ ಮ್ಯಾಟ್ ಫಿನಿಶ್ ನೀಡುತ್ತದೆ. ಇದರ ಟೆಕ್ಸ್ ಚರ್ ಬಲು ಲೈಟ್ ಆಗಿರುತ್ತದೆ ಹಾಗೂ ತುಟಿಗಳ ಮೇಲೆ ಇದು ಅಂಟಂಟಾಗುವುದಿಲ್ಲ. ಲಿಪ್ ಟಿಂಟ್ ನ ಕಲರ್ ಬಹಳ ಹೊತ್ತು ಹಾಗೇ ಉಳಿಯುತ್ತದೆ. ಇದರಿಂದ ಆ್ಯಕ್ಟಿವ್ ಲೈಫ್ ಸ್ಟೈಲ್ ನ ಜನರಿಗೆ ಇದೊಂದು ಆದರ್ಶ ಪ್ರಾಡಕ್ಟ್ ಎನಿಸುತ್ತದೆ. ಲಿಪ್ ಟಿಂಟ್ `ನೋ ಮೇಕಪ್ ಲುಕ್’ ಗೆ ಬೆಸ್ಟ್ ಎನಿಸುತ್ತದೆ. ಇದನ್ನು ತುಟಿಗಳಿಗೆ ಮಾತ್ರವಲ್ಲದೆ, ಕೆನ್ನೆಗಳಿಗೆ ಬ್ಲಶ್ ತರಹ ಬಳಸಬಹುದಾಗಿದೆ. ಇದು ಹಲವು ಶೇಡ್ಸ್ ಗಳಲ್ಲಿ ಬರುತ್ತದೆ. ಇದು ಚರ್ಮದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ನೀವು ದೀರ್ಘಬಾಳಿಕೆ ಬರುವಂಥ, ಫ್ರೆಶ್ ಲುಕ್ಸ್ ನೀಡುವ ಟಿಂಟ್ ಬಯಸಿದರೆ ಅಗತ್ಯವಾಗಿ ನೀವು ಲಿಪ್ ಟಿಂಟ್ ಬಳಸಿರಿ.
ಇತ್ತೀಚಿನ ಹಲವು ಬಗೆಯ ಲಿಪ್ ಟಿಂಟ್ಸ್ ಗಳಲ್ಲಿ ಮಾಯಿಶ್ಚರೈಸಿಂಗ್ ಇನ್ ಗ್ರೀಡಿಯೆಂಟ್ಸ್ ಸಹ ಇರುತ್ತದೆ. ಇದು ತುಟಿಗಳನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ. ಇದು ದೈನಂದಿನ ಬಳಕೆಗೂ ಬೆಸ್ಟ್ ಎನಿಸಿದೆ. ಮುಖ್ಯವಾಗಿ ನೀವು ಸಿಂಪ್‌ಮಿನಿಮಲಿಸ್ಟ್ ಲುಕ್‌ಬಯಸಿದರೆ ಇದು ಅತ್ಯಗತ್ಯ.
ಲಿಪ್ ಗ್ಲಾಸ್ : ಈ ಲಿಪ್ ಗ್ಲಾಸ್ ತುಟಿಗಳನ್ನು ಹೊಳೆಹೊಳೆಯುವಂತೆ, ಪ್ಲಂಪ್ ಆಗಿ ತೋರಿಸಲು ಪೂರಕ. ಇದರ ಟೆಕ್ಸ್ ಚರ್ ಲಿಕ್ವಿಡ್ ಯಾ ಜೆಲ್ ಬೇಸ್ಡ್ ಆಗಿರುತ್ತದೆ, ಇದು ಲೈಟ್ ಆಗಿ ತುಸು ಅಂಟಂಟಾಗಿರುತ್ತದೆ. ಇದರ ಫಿನಿಶ್ ಹೈಶೈನ್ ಹಾಗೂ ರಿಫ್ಲೆಕ್ಟಿವ್ ಆಗುತ್ತದೆ, ಇದು ತುಟಿಗಳಿಗೆ ಇನ್ ಸ್ಟೆಂಟ್ ಗ್ಲಾಮ್ ನೀಡುತ್ತದೆ.
ಇದು ಸದಾ ಲೈಟ್ ಯಾ ಟ್ರಾನ್ಸ್ ಪರೆಂಟ್ ಶೇಡ್ಸ್ ನಲ್ಲಿ ಲಭ್ಯ. ಇದರಲ್ಲಿನ ಮಾಯಿಶ್ಚರೈಸಿಂಗ್ ಘಟಕಗಳಿಂದಾಗಿ ತುಟಿಗಳು ಸದಾ ಹೈಡ್ರೇಟೆಡ್ ಆಗಿರುತ್ತವೆ. ಗ್ಲಾಮರಸ್ ಪಾರ್ಟಿ ಲುಕ್ಸ್ ಗಾಗಿಯೇ ಲಿಪ್ ಗ್ಲಾಸ್ ನ್ನು ಬಳಸುತ್ತಾರೆ. ಇದು ಸಿಂಪಲ್ ಮೇಕಪ್ ಡಿಫೈನ್ ಮಾಡಿ, ತುಟಿಗಳನ್ನು ಆಕರ್ಷಕಗೊಳಿಸುವಲ್ಲಿ ಸಹಕಾರಿ.
ನೀವು ನಿಮ್ಮ ಲಿಪ್ ಸ್ಟಿಕ್ ಗೆ ಗ್ಲಾಸಿ ಲುಕ್ಸ್ ನೀಡಬಯಸಿದರೆ, ಅಗತ್ಯವಾಗಿ ಅದರ ಮೇಲೆ ಅಗತ್ಯ ಲಿಪ್ ಗ್ಲಾಸ್ ತೀಡಿಕೊಳ್ಳಿ. ಇದು ಡೇ ನೈಟ್ ಎರಡರ ಲುಕ್ಸ್ ಗೂ ಹೊಂದುತ್ತದೆ. ಸಾಫ್ಟ್ ಶೈನಿ ಲಿಸ್ಟ್ ಬಯಸುವವರಿಗೆ ಇದು ವರದಾನ.
ಲಿಪ್ ಸ್ಟಿಕ್ : ಇದರ ಮುಖ್ಯ ಕೆಲಸ ತುಟಿಗಳಿಗೆ ಬೋಲ್ಡ್ ಡಿಫೈನ್ಡ್ ಲುಕ್ ನೀಡುವುದಾಗಿದೆ. ಇದು ಎಲ್ಲಕ್ಕಿಂತ ಅಧಿಕ ಪಿಗ್ಮೆಂಟೆಡ್ ಪ್ರಾಡಕ್ಟ್ ಆಗಿದ್ದು, ತುಟಿಗಳಿಗೆ ವೈಬ್ರೆಂಟ್ ಕಲರ್ಸ್ ನೀಡುತ್ತದೆ. ಇದು ಹಲವು ಟೆಕ್ಸ್ ಚರ್ಸ್ ಗಳಲ್ಲಿ ಲಭ್ಯ. ಕ್ರೀಮೀ, ಮ್ಯಾಟ್, ಸ್ಯಾಟಿನ್ ಯಾ ಲಿಕ್ವಿಡ್. ಇದರ ಫಿನಿಶ್ ಪರ್ಫೆಕ್ಟ್ ಮ್ಯಾಟ್, ಗ್ಲಾಸಿ, ಮೆಟಾಲಿಕ್ ಯಾ ವೆಲ್ವೆಟ್ ಆಗಿರುತ್ತದೆ.
ಲಿಪ್ ಸ್ಟಿಕ್ ನ್ನು ಯಾವುದೇ ವಿಶೇಷ ಸಮಾರಂಭ, ಫಾರ್ಮಲ್ ಇವೆಂಟ್ ಯಾ ಪಾರ್ಟಿಗಳಿಗೆ ಬಳಸಿಕೊಳ್ಳಬಹುದು. ಇದು ಹಲವು ವಿಭಿನ್ನ ಶೇಡ್ಸ್ ಗಳಲ್ಲಿ ಲಭ್ಯ. ಇದನ್ನು ನಿಮ್ಮ ಡ್ರೆಸ್‌ಮೇಕಪ್ ಗೆ ತಕ್ಕಂತೆ ಆರಿಸಬಹುದು. ನೀವು ನಿಮ್ಮ ತುಟಿಗಳನ್ನು ಮೇಕಪ್ ನ ಫೋಕಸ್ ಮಾಡಬಯಸಿದರೆ, ಲಿಪ್ ಸ್ಟಿಕ್ ಉತ್ತಮ ಆಯ್ಕೆ.ಲಿಪ್ ಸ್ಟಿಕ್ ನಲ್ಲಿ ಇದೀಗ ಅನೇಕ ವೇರಿಯೆಂಟ್ಸ್ ಲಭ್ಯವಿವೆ, ಇವು ದೀರ್ಘಕಾಲ ಬಾಳಿಕೆ ಬರುತ್ತವೆ, ತುಟಿಗಳನ್ನು ಮಾಯಿಶ್ಚರೈಸ್ ಸಹ ಮಾಡುತ್ತವೆ. ಇಂದಿನ ಆಧುನಿಕ ಹೆಂಗಸರ ಅನಿವಾರ್ಯ ಮೇಕಪ್ ಪ್ರಾಡಕ್ಟ್ ಎನಿಸಿದೆ.
ಏನನ್ನು ಯಾವಾಗ ಆರಿಸಬೇಕು? : ನಿಮ್ಮ ತುಟಿಗಳು ಅತಿ ಶುಷ್ಕಗೊಂಡು, ಒಡೆದಿದ್ದರೆ, ಅದಕ್ಕೆ ಅಗತ್ಯ ಲಿಪ್ ಬಾಮ್ ತೀಡಿರಿ. ನಿಮಗೆ ನ್ಯಾಚುರ್ ಲುಕ್ಸ್ ಬೇಕೆನಿಸಿದರೆ, ಲಿಪ್ ಟಿಂಟ್ ಆರಿಸಿ. ನಿಮಗೆ ಶೈನಿ ಸಾಫ್ಟ್ ಲುಕ್ಸ್ ಬೇಕಿದ್ದರೆ ಲಿಪ್ ಗ್ಲಾಸ್ ತೀಡಿರಿ. ಬೋಲ್ಡ್ ಅಟ್ರಾಕ್ಟಿವ್ ಲುಕ್ಸ್ ಬೇಕಿದ್ದರೆ ಲಿಪ್ ಸ್ಟಿಕ್ ಎಲ್ಲಕ್ಕಿಂತ ಬೆಸ್ಟ್!
ಈ ಪ್ರಾಡಕ್ಟ್ಸ್ ನ್ನು ನೀವು ಮಿಕ್ಸ್ ಮಾಡಿಯೂ ಬಳಸಬಹುದು. ಉದಾ : ಲಿಪ್ ಬಾಮ್ ಮೇಲೆ ಲಿಪ್ ಸ್ಟಿಕ್ ತೀಡಿರಿ, ಆಗ ತುಟಿ ಮಾಯಿಶ್ಟರೈಸ್ ಆಗಿರುತ್ತದೆ. ಲಿಪ್ ಟಿಂಟ್ ಜೊತೆ ಲಿಪ್ ಗ್ಲಾಸ್ ತೀಡಿಕೊಳ್ಳಿ. ಇದರಿಂದ ಡ್ಯೂಯಿ ನ್ಯಾಚುರಲ್ ಲುಕ್ಸ್ ಸಿಗುತ್ತದೆ. ಮ್ಯಾಟ್ ಲಿಪ್ ಸ್ಟಿಕ್ ಜೊತೆ ಲೈಟ್ ಆಗಿ ಲಿಪ್ ಗ್ಲಾಸ್ ತೀಡಿದರೆ, ಪರ್ಫೆಕ್ಟ್ ಪಾರ್ಟಿ ಲುಕ್ಸ್ ಸಿಗುತ್ತದೆ.
ತುಟಿಗಳ ಸಮರ್ಪಕ ಆರೈಕೆ ಹಾಗೂ ಪ್ರಾಡಕ್ಟ್ ನ ಪರ್ಫೆಕ್ಟ್ ಆಯ್ಕೆಯ ಕಾಂಬೋ ಸರಿಯಾಗಿದ್ದರೆ ಮಾತ್ರ, ನೀವು ಎಲ್ಲಾ ಸಂದರ್ಭಗಳಲ್ಲೂ ಮಿಂಚಲು ಸಾಧ್ಯ!
– ಪ್ರತಿನಿಧಿ





