ಚಳಿಗಾಲದ ದಿನಗಳಲ್ಲೂ ತುಟಿಗಳ ಅಂದ ಕೆಡದೆ ನಳನಳಿಸಲು ಏನು ಮಾಡಬೇಕು.....?
ಇತ್ತೀಚಿನ ದಿನಗಳಲ್ಲಿ ತುಟಿಗಳ ಅಂದ ಹೆಚ್ಚಿಸಲು ಮಾರುಕಟ್ಟೆಯಲ್ಲಿ ಹಲವು ಕಾಸ್ಮೆಟಿಕ್ಸ್ ಲಭ್ಯವಿವೆ. ಇವುಗಳಲ್ಲಿ ಲಿಪ್ ಬಾಮ್, ಲಿಪ್ ಟಿಂಟ್, ಲಿಪ್ ಗ್ಲಾಸ್ ಹಾಗೂ ಲಿಪ್ ಸ್ಟಿಕ್ ಪ್ರಮುಖ. ಆದರೆ ಇವುಗಳಲ್ಲಿ ಯಾವ ಪ್ರಾಡಕ್ಟ್ ಯಾರಿಗೆ ಸೂಕ್ತ ಎಂದು ಆಲೋಚಿಸಿ ನಿರ್ಧರಿಸುವುದು ಕಷ್ಟ. ಸರಿಯಾದ ಪ್ರಾಡಕ್ಟ್ ನ ಆಯ್ಕೆ ನಿಮ್ಮ ಅಗತ್ಯ, ಲುಕ್ಸ್, ಬಜೆಟ್ ನ್ನು ಆಧರಿಸಿದೆ. ಇವುಗಳ ನಡುವಿನ ಅಂತರ ತಿಳಿಯೋಣವೇ....?
ಲಿಪ್ ಬಾಮ್ : ಇದರ ಮುಖ್ಯ ಕೆಲಸ ತುಟಿಗಳನ್ನು ಆದಷ್ಟೂ ಮೃದುಗೊಳಿಸಿ, ಮಾಯಿಶ್ಚರೈಸ್ ಮಾಡಿಸುವುದು. ಇದು ತುಟಿಗಳು ಒಡೆಯದಂತೆ, ಒಣಗಿಹೋಗದಂತೆ ತಡೆಯುತ್ತದೆ. ತುಟಿಗಳ ಸುರಕ್ಷತೆ ಕಾಪಾಡಲೆಂದೇ ಡಿಸೈನ್ ಗೊಳಿಸಲಾಗಿದೆ. ಇದರ ಟೆಕ್ಸ್ ಚರ್ ಕ್ರೀಮೀ ಯಾ ವ್ಯಾಕ್ಸಿ ಆಗಿರುತ್ತದೆ. ಇದರ ಫಿನಿಶ್ ನ್ಯಾಚುರ್ ಶೈನ್ ಆಗಿರುತ್ತದೆ. ಕೆಲವು ಲಿಪ್ ಬಾಮ್ ಟಿಂಟೆಡ್ ಆಗಿರುತ್ತವೆ, ಆದರೆ ಹೆಚ್ಚಿನ ಕಲರ್ ಲೆಸ್ ಆಗಿರುತ್ತವೆ. ಇದು ಎಲ್ಲಾ ವಯೋಮಾನದವರ ಒಂದು ಬೇಸಿಕ್ ಸ್ಕಿನ್ ಕೇರ್ ಪ್ರಾಡಕ್ಟ್ ಆಗಿದೆ.

ಲಿಪ್ ಬಾಮ್ ನಲ್ಲಿ ಸಾಮಾನ್ಯವಾಗಿ ಯಾವಾಗಲೂ ಶಿಯಾ ಬಟರ್, ಬೀಜ್ಯಾಕ್ಸ್, ಆ್ಯಲೋವೇರಾ, ವಿಟಮಿನ್‌ಹಾಗೂ SPF 30/40 ಬೆರೆತಿರುತ್ತವೆ. ಹೀಗಾಗಿ ಇದು ತುಟಿಗಳನ್ನು ಮಾಯಿಶ್ಚರೈಸ್ ಮಾಡಿ, ಸನ್ ಪ್ರೊಟೆಕ್ಷನ್ ಸಹ ನೀಡುತ್ತವೆ. ಇದನ್ನು ಸಾಮಾನ್ಯವಾಗಿ ಒಡೆದ ತುಟಿಗಳಿಗೆಂದೇ ಬಳಸುತ್ತಾರೆ. ಅದನ್ನು ರಿಪೇರಿ ಮಾಡಿ, ಮೃದುಗೊಳಿಸುತ್ತದೆ. ಹೀಗಾಗಿ ಥಂಡಿ ಸೀಸನ್ನಿನಲ್ಲಿ ಇದು ಅತ್ಯಗತ್ಯ. ಏಕೆಂದರೆ ಚಳಿಗಾಲದಲ್ಲಿ ತುಟಿ ಬೇಗ ಒಣಗುತ್ತದೆ/ಒಡೆಯುತ್ತದೆ. ಇಷ್ಟು ಮಾತ್ರವಲ್ಲದೆ, ಮೇಕಪ್ ಮಾಡಿಕೊಳ್ಳುವ ಮುನ್ನ, ತುಟಿಗಳಿಗೆ ಪ್ರೈಮರ್ ಆಗಿಯೂ ಇದನ್ನು ಬಳಸುತ್ತಾರೆ.
ನೀವು ಮೃದು, ಕೋಮಲ ತುಟಿ ಬಯಸಿದರೆ, ಲಿಪ್ ಬಾಮ್ ನ್ನು ನಿಮ್ಮ ರೊಟೀನ್ ನ ಭಾಗವಾಗಿಸಿ. ಇದು ಟ್ರಾವೆಲ್ ಫ್ರೆಂಡ್ಲಿಯೂ ಹೌದು. ಇದನ್ನು ಎಲ್ಲಿಗಾದರೂ ಕೊಂಡೊಯ್ದು ಬಳಸಿಕೊಳ್ಳಬಹುದು. ಇದೀಗ ಮಾರುಕಟ್ಟೆಯಲ್ಲಿ ಫ್ಲೇರ್ ವುಳ್ಳ ಹಾಗೂ ಮೆಡಿಕೇಟೆಡ್ ಲಿಪ್ ಬಾಮ್ ಸಹ ಲಭ್ಯ, ಇದು ನಿಮಗೆ ಹೆಚ್ಚಿನ ಹಿತಾನುಭಾವ ನೀಡುತ್ತದೆ.
ಲಿಪ್ ಟಿಂಟ್ : ಇದು ಒಂದು ಲೈಟ್ ವೆಯ್ಟ್ ಪ್ರಾಡಕ್ಟ್. ಇದು ತುಟಿಗಳಿಗೆ ನ್ಯಾಚುರಲ್ ಲಾಂಗ್ ಲಾಸ್ಟಿಂಗ್ ಕಲರ್ ನೀಡುತ್ತದೆ. ಇದು ಲಿಕ್ವಿಡ್ ಯಾ ಜೆಲ್ ಬೇಸ್ಡ್ ಆಗಿದ್ದು, ಮ್ಯಾಟ್ ಯಾ ಸೆಮಿ ಮ್ಯಾಟ್ ಫಿನಿಶ್ ನೀಡುತ್ತದೆ. ಇದರ ಟೆಕ್ಸ್ ಚರ್ ಬಲು ಲೈಟ್ ಆಗಿರುತ್ತದೆ ಹಾಗೂ ತುಟಿಗಳ ಮೇಲೆ ಇದು ಅಂಟಂಟಾಗುವುದಿಲ್ಲ. ಲಿಪ್ ಟಿಂಟ್ ನ ಕಲರ್ ಬಹಳ ಹೊತ್ತು ಹಾಗೇ ಉಳಿಯುತ್ತದೆ. ಇದರಿಂದ ಆ್ಯಕ್ಟಿವ್ ಲೈಫ್ ಸ್ಟೈಲ್ ನ ಜನರಿಗೆ ಇದೊಂದು ಆದರ್ಶ ಪ್ರಾಡಕ್ಟ್ ಎನಿಸುತ್ತದೆ. ಲಿಪ್ ಟಿಂಟ್ `ನೋ ಮೇಕಪ್ ಲುಕ್' ಗೆ ಬೆಸ್ಟ್ ಎನಿಸುತ್ತದೆ. ಇದನ್ನು ತುಟಿಗಳಿಗೆ ಮಾತ್ರವಲ್ಲದೆ, ಕೆನ್ನೆಗಳಿಗೆ ಬ್ಲಶ್ ತರಹ ಬಳಸಬಹುದಾಗಿದೆ. ಇದು ಹಲವು ಶೇಡ್ಸ್ ಗಳಲ್ಲಿ ಬರುತ್ತದೆ. ಇದು ಚರ್ಮದಲ್ಲಿ ಸುಲಭವಾಗಿ ವಿಲೀನವಾಗುತ್ತದೆ. ನೀವು ದೀರ್ಘಬಾಳಿಕೆ ಬರುವಂಥ, ಫ್ರೆಶ್ ಲುಕ್ಸ್ ನೀಡುವ ಟಿಂಟ್ ಬಯಸಿದರೆ ಅಗತ್ಯವಾಗಿ ನೀವು ಲಿಪ್ ಟಿಂಟ್ ಬಳಸಿರಿ.





