ಪ್ರಾಜೆಕ್ಟ್ ಡೈರೆಕ್ಟರ್‌,

ಸ್ಯಾಟಲೈಟ್ಇಮೇಜಿಂಗ್ಟೆಕ್ನಿಕ್ಸ್ ನ್ನು ವಿಕಸಿತಗೊಳಿಸುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸುವಿಕೆ.”

ಸ್ಟಿಮ್ ಐಕಾನ್‌ ಅವಾರ್ಡ್‌ ನಿಗಾರ್‌ ಶಾಜೀ ಒಬ್ಬ ಪ್ರಸಿದ್ಧ ಅಂತರಿಕ್ಷ ವಿಜ್ಞಾನಿ ಹಾಗೂ ಪ್ರಾಜೆಕ್ಟ್ ಡೈರೆಕ್ಟರ್‌. ಇವರು ಭಾರತದ ಮೊದಲ ಸೌರ ಮಿಶನ್ನಿನ ಆದಿತ್ಯ ಮಿಷನ್- 1 ನೇತೃತ್ವ ವಹಿಸಿ ಸೈ ಎನಿಸಿದ್ದಾರೆ. ಈ ನಿಟ್ಟಿನಲ್ಲಿ 35 ವರ್ಷಗಳಿಗೂ ಅಧಿಕ ಅನುಭವ ಹೊಂದಿರುವ ಈಕೆ, ಭಾರತದ ಅಂತರಿಕ್ಷ ಅನ್ವೇಷಣಾ ಯಾತ್ರೆಗೆ ಆಕಾರ ನೀಡುವಲ್ಲಿ ಮಹತ್ವಪೂರ್ಣ ಪಾತ್ರ ವಹಿಸಿದ್ದಾರೆ ಹಾಗೂ ಅಂತರಿಕ್ಷದಲ್ಲಿ ಒಂದು ಸೌರ ವೇಧಶಾಲೆ ಸ್ಥಾಪಿಸುವಲ್ಲಿ ಹಾಗೂ ಜಟಿಲ ವೈಜ್ಞಾನಿಕ ಮಿಶನ್‌ ಗಳನ್ನು ಯಶಸ್ವಿಯಾಗಿ ಸಂಚಾಲಿತಗೊಳಿಸುವಲ್ಲಿ ತಮ್ಮ ನೇತೃತ್ವತದ ಜೊತೆಗೆ ಲಕ್ಷಾಂತರ ಮಂದಿಯನ್ನು ಪ್ರೇರಿತಗೊಳಿಸಿದ್ದಾರೆ.

ಶಾಜೀ ಭಾರತೀಯ ಸುದೂರ್‌ ಸಂವೇದನೆ (ರಿಮೋಟ್‌ ಸೋರ್ಸಿಂಗ್‌), ಸಂಚಾರ ಮತ್ತು ಅಂತರಗ್ರಹೀಯ ಉಪಗ್ರಹ ಕಾರ್ಯಕ್ರಮಗಳಲ್ಲಿ ಉತ್ಕೃಷ್ಟ ಪಾತ್ರ ವಹಿಸಿದ್ದಾರೆ. ಈಕೆ ತಮಿಳುನಾಡಿನ ತೆನ್‌ಕಾಸಿ ಜಿಲ್ಲೆಗೆ ಸೇರಿದರು, ಚೆನ್ನೈನಿಂದ ಅದು 550 ಕಿ.ಮೀ ದೂರದಲ್ಲಿದೆ. ಈಕೆ ತಮ್ಮ ಬಾಲ್ಯದಲ್ಲಿ ಸದಾ ಪ್ರಸಿದ್ಧ ನೊಬೆಲ್ ‌ಪ್ರಶಸ್ತಿ ವಿಜೇತ ಮಹಿಳಾ ವಿಜ್ಞಾನಿ ಮೇರಿಕ್ಯೂರಿ ಕಥೆ ಕೇಳಿ ಬೆಳೆದವರು. ಇವರ ತಂದೆ ಮಗಳಿಗೆ ಸದಾ ವೈಜ್ಞಾನಿಕ ಕಥೆಗಳನ್ನು ಹೇಳಿ, ಗಣಿತ ವಿಜ್ಞಾನದಲ್ಲಿ ಇವರ ಆಸಕ್ತಿ ಹೆಚ್ಚಿಸಿದರು. ಹಾಗಾಗಿ ಈ ಕ್ಷೇತ್ರಕ್ಕೆ ಕಾಲಿಟ್ಟರು. ಈಕೆ ಮದುರೈ ಕಾಮರಾಜ ವಿಶ್ವವಿದ್ಯಾನಿಲಯದಿಂದ ಎಲೆಕ್ಟ್ರಾನಿಕ್ಸ್ ನಲ್ಲಿ ಪದವಿ ಗಳಿಸಿ, ರಾಂಚಿಯಿಂದ ಅದರಲ್ಲಿ ಮಾಸ್ಟರ್ಸ್‌ ಪದವಿ ಪಡೆದರು.

ಮಹತ್ವಪೂರ್ಣ ಜವಾಬ್ದಾರಿಗಳು

ನಿಗಾರ್‌ ಶಾಜೀ 1987ರಲ್ಲಿ ವಿಶಿಷ್ಟ ಅಂತರಿಕ್ಷ ಏಜೆನ್ಸಿಗೆ ಸೇರಿದರು. ಇವರು ಇಲ್ಲಿ ತಮ್ಮ ಕಾರ್ಯಕಾಲ ಆಂಧ್ರ ತಟದ ಬಳಿಯ ಶ್ರೀಹರಿಕೋಟಾ ಅಂತರಿಕ್ಷ ಬಂದರಿನಲ್ಲಿ ಮೊದಲು ಕೆಲಸ ಆರಂಭಿಸಿದರು. ನಂತರ ಇವರು ಬೆಂಗಳೂರಿನ ರಾವ್ ‌ಸ್ಯಾಟಲೈಟ್ ಸೆಂಟರಿಗೆ ವರ್ಗವಾದರು. ಇದು ಉಪಗ್ರಹ ವಿಕಾಸಗಳಿಗೆ ಪ್ರಮುಖ ಕೇಂದ್ರ. ಇಲ್ಲಿ ಇವರು ಹಲವು ಮಹತ್ವಪೂರ್ಣ ಜವಾಬ್ದಾರಿಗಳನ್ನು ನಿಭಾಯಿಸಿದರು. ಅಲ್ಲಿ ಇವರು ಭರವಸೆಯ ಪ್ರತೀಕ ಎನಿಸಿದರು. ಇದಾದ ನಂತರ ಇವರನ್ನು ಭಾರತದ ಮೊದಲ ಸೌರ ಮಿಶನ್‌ ಪ್ರಾಜೆಕ್ಟ್ ನ ನಿರ್ದೇಶಕಿಯಾಗಿ ನಿಯುಕ್ತಿಸಲಾಯಿತು. ಶಾಜೀ ಮೊದಲ ರಿಸೋರ್ಸ್‌ ಸ್ಯಾಟ್‌ ದ ಪ್ರಾಜೆಕ್ಟ್ ನ ನಿರ್ದೇಶಕಿಯಾಗಿಯೂ ಕೆಲಸ ಮಾಡಿದ್ದರು. ಇವರು ಎಲ್ಲಾ ಕೆಳ ಕಕ್ಷೆಗಳ ಗ್ರಹೀಯ ಮಿಶನ್‌ ಗಳ ಪ್ರೋಗ್ರಾಂ ಡೈರೆಕ್ಟರ್‌ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಈಕೆ ಇಮೇಜ್‌ ಕಂಪ್ರೆಶನ್‌, ಸಿಸ್ಟಂ ಎಂಜಿನಿಯರಿಂಗ್‌ ಸಹಿತ ಇತರ ವಿಷಯಗಳಲ್ಲಿ ಅನೇಕ ಪೇಪರ್ಸ್‌ ಸಬ್‌ ಮಿಟ್‌ ಮಾಡಿದ್ದಾರೆ.

ಕಾರ್ಯ ಮತ್ತು ಮಿಶನ್ನೇತೃತ್ವ

ನಿಗಾರ್‌ ರಿಸೋರ್ಸ್‌ ಸ್ಯಾಟ್‌ ಸ್ಯಾಟಲೈಟ್‌ ಗಾಗಿ ಅಸೋಸಿಯೇಟ್‌ ಪ್ರಾಜೆಕ್ಟ್ ಡೈರೆಕ್ಟರ್‌ ರೂಪದಲ್ಲಿ ಹಾಗೂ ನಂತರ ಆದಿತ್ಯ  ಸೌರ ಮಿಶನ್‌ ಗಾಗಿ ಪ್ರಾಜೆಕ್ಟ್ ಡೈರೆಕ್ಟರ್‌ ಆಗಿ ಕೆಲಸ ನಿರ್ವಹಿಸಿದ್ದಾರೆ. ಅದು ಸೆಪ್ಟೆಂಬರ್‌ 2023ರಲ್ಲಿ ಯಶಸ್ವಿಯಾಗಿ ಲಾಂಚ್ ಮಾಡಲಾಗಿತ್ತು. ಇವರ ನೇತೃತ್ವದಲ್ಲಿ ಎಲ್ಲಾ ಗ್ರಹೀಯ ಮತ್ತು ನಿಮ್ನ ಪೃಥ್ವಿ ಕಕ್ಷೆ ಹಾಗೂ ಗ್ರಹೀಯ ಮಿಶನ್‌ ಗಳ ಕಾರ್ಯಕ್ರಮ ದಿಶೆಯಲ್ಲಿ ಹರಡಿದೆ. ಈಕೆ ಸ್ಯಾಟಲೈಟ್‌ ಇಮೇಜಿಂಗ್‌ ಟೆಕ್ನಿಕ್ಸ್ ನ್ನು ವಿಕಸಿತಗೊಳಿಸುವಲ್ಲಿ ಮಹತ್ವಪೂರ್ಣ ಪಾತ್ರ ನಿರ್ವಹಿಸಿದ್ದಾರೆ ಅಂತಾರಾಷ್ಟ್ರೀಯ ಏಜೆನ್ಸಿಗಳ ಜೊತೆ ಸಹಯೋಗ ನೀಡಿದ್ದಾರೆ.

ಪ್ರಶಸ್ತಿ ಪುರಸ್ಕಾರಗಳು

ಟೈಮ್ ನೌ ಅಮೇಝಿಂಗ್‌ ಇಂಡಿಯಾಸ್‌ ಅವಾರ್ಡ್‌ (2023)

ಈವ್ ಆಫ್‌ ಎಕ್ಸಿನ್ಸ್ ಅವಾರ್ಡ್‌, ತಿರುಚಿನಾಪಳ್ಳಿ ರೀಜನಲ್ ಎಂಜಿನಿಯರಿಂಗ್‌ ಕಾಲೇಜ್‌ (2023)

ರೇನ್‌ ಡ್ರಾಪ್ಸ್ ವುಮನ್‌ ಅಚೀವರ್‌ ಅವಾರ್ಡ್‌ (`ಸನೀ ಲೇಡಿ’ ವೈಜ್ಞಾನಿಕ)

ಗಣತಂತ್ರ ದಿವಸ ಪೆರೇಡ್‌ಮೀಡಿಯಾ ಪ್ಲಾಟ್‌ ಫಾರ್ಮ್ ಗಳಲ್ಲಿ ನಾರೀ ಶಕ್ತಿಯ ರೂಪದಲ್ಲಿ ಭಾರತವನ್ನು ಪ್ರತಿನಿಧಿಸಿದರು.

ಗರಿಮಾ ಪಂಕಜ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ