ಭಾರತದಲ್ಲಿ ದೂರದ ಓಟದ ಕ್ರೀಡೆಗೆ ಮುನ್ನುಡಿ ಬರೆದ ಪ್ರೊಕಾಮ್ ಇಂಟರ್‌ನ್ಯಾಷನಲ್ ಸಂಸ್ಥೆಯು, 22ನೇ ಆವೃತ್ತಿಯ ಟಾಟಾ ಮುಂಬೈ ಮ್ಯಾರಥಾನ್‌ಗೆ ಇಂದು ನೋಂದಣಿಗಳು ಆರಂಭವಾಗಿರುವುದಾಗಿ ಘೋಷಿಸಿದೆ.
ಈ ಮ್ಯಾರಥಾನ್ 2027ರ ಜನವರಿ 17 ರಂದು ನಡೆಯಲಿದೆ. ಈ ಉದ್ಘಾಟನಾ ಸಮಾರಂಭದಲ್ಲಿ, ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಜಿಷ್ಣು ದೇವ್ ವರ್ಮಾ ಅವರು ಟಾಟಾ ಮುಂಬೈ ಮ್ಯಾರಥಾನ್ 2027 ಕ್ಕಾಗಿ ಮೊದಲು ನೋಂದಣಿ ಮಾಡಿಕೊಂಡಿದ್ದಾರೆ.
2004ರಲ್ಲಿ ಆರಂಭವಾದಾಗಿನಿಂದ, ಟಾಟಾ ಮುಂಬೈ ಮ್ಯಾರಥಾನ್ ಜಗತ್ತಿನ ಅತಿ ದೊಡ್ಡ ಜನಪರ ಚಳವಳಿಗಳಲ್ಲಿ ಒಂದಾಗಿ ಬೆಳೆದಿದೆ. ಇದೇವೇಳೆ, ಇದು ಕೇವಲ ಒಂದು ಓಟವಲ್ಲದೆ, ಮುಂಬೈನ ಸ್ಥೈರ್ಯ, ಉದಾರತೆ ಮತ್ತು ಅಚಲ ಉತ್ಸಾಹದ ಸಂಭ್ರಮವಾಗಿದೆ. ನಗರ, ದೇಶ ಹಾಗೂ ವಿಶ್ವಾದ್ಯಂತದ ಜನರನ್ನು ಇದು ಒಂದೆಡೆ ಸೇರಿಸುತ್ತದೆ. ರೇಸ್ ದಿನದಂದು, ಪ್ರತಿಯೊಂದು ಹೆಜ್ಜೆ, ಪ್ರತಿಯೊಂದು ಹರ್ಷೋದ್ಗಾರ ಮತ್ತು ಪ್ರತಿಯೊಂದು ಹೃದಯದ ಬಡಿತವೂ ಮುಂಬೈಗೆ ಸೇರಿದ್ದಾಗಿರುತ್ತದೆ.
ಟಾಟಾ ಮುಂಬೈ ಮ್ಯಾರಥಾನ್ 2027 ರ ಮೊದಲ ನೋಂದಣಿದಾರರಾಗಿ ಮಾತನಾಡಿದ ಮಹಾರಾಷ್ಟ್ರದ ಗೌರವಾನ್ವಿತ ರಾಜ್ಯಪಾಲರಾದ ಜಿಷ್ಣು ದೇವ್ ವರ್ಮಾ, " ಕೇವಲ ಕ್ರೀಡಾಕೂಟವಾಗಿ ಆರಂಭವಾದ ಮ್ಯಾರಥಾನ್ ಇಂದು ಒಂದು ಜನಪರ ಚಳವಳಿಯಾಗಿ ಮಾರ್ಪಟ್ಟಿರುವುದು ಅತ್ಯಂತ ಸಂತೋಷ ತಂದಿದೆ. ಮ್ಯಾರಥಾನ್‌ನ ಸ್ಪೂರ್ತಿ ಯಾವಾಗಲೂ ಸಂಖ್ಯೆಗಳಿಗಿಂತ ದೊಡ್ಡದಾಗಿರುತ್ತದೆ ಮತ್ತು ಟಾಟಾ ಮುಂಬೈ ಮ್ಯಾರಥಾನ್ ಲೋಕೋಪಕಾರ ಹಾಗೂ ಕರುಣೆಯ ಮೂಲಕ ಮುಂಬೈ ಗಡಿಯನ್ನೂ ಮೀರಿ ತಲುಪುತ್ತಿರುವುದು ಸಂತಸದ ವಿಷಯ" ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಸರ್ಕಾರದ ಸಚಿವರಾದ ಆಶಿಶ್ ಶೆಲಾರ್ ಅವರು, "ಮುಂಬೈ ತನ್ನ ಸಂಸ್ಕೃತಿ ಹಾಗೂ ಹಬ್ಬಗಳಿಗೆ ಹೆಸರುವಾಸಿಯಾಗಿದ್ದು, ಟಾಟಾ ಮುಂಬೈ ಮ್ಯಾರಥಾನ್ ನಗರಕ್ಕೆ ಮತ್ತೊಂದು ಸುಂದರ ಆಯಾಮ ನೀಡಿದೆ. ಇದು ಕೇವಲ ಕ್ರೀಡೆ ಅಥವಾ ವೇಗವಲ್ಲ, ಬದಲಿಗೆ ಜನರಿಗೆ ಫಿಟ್‌ನೆಸ್ ಮತ್ತು ಸಕ್ರಿಯ ಜೀವನಶೈಲಿಗೆ ಸ್ಫೂರ್ತಿ ನೀಡುವ ವೇದಿಕೆಯಾಗಿದೆ. 22ನೇ ಆವೃತ್ತಿಯ ನೋಂದಣಿ ಆರಂಭವಾಗಿದ್ದು, ಎಲ್ಲರೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಕೋರುತ್ತೇನೆ. ಜಾಗತಿಕ ಮಾನದಂಡವಾಗಿ ಬೆಳೆದಿರುವ ಈ ಕಾರ್ಯಕ್ರಮವನ್ನು ಬೆಂಬಲಿಸಲು ಮಹಾರಾಷ್ಟ್ರ ಸರ್ಕಾರ ಹೆಮ್ಮೆಪಡುತ್ತದೆ" ಎಂದರು.
ವಿಶ್ವ ಅಥ್ಲೆಟಿಕ್ಸ್ ಚಿನ್ನದ ಲೇಬಲ್ ರೇಸ್ ಆಗಿರುವ ಟಾಟಾ ಮುಂಬೈ ಮ್ಯಾರಥಾನ್ ಒಟ್ಟು USD 389,524 ರಷ್ಟು ಆಕರ್ಷಕ ಬಹುಮಾನ ಮೊತ್ತವನ್ನು ನೀಡಲಿದ್ದು, ಇದು ಪ್ರಪಂಚದಾದ್ಯಂತದ ಅತ್ಯುತ್ತಮ ಅಥ್ಲೀಟ್‌ಗಳು ಮತ್ತು ಹವ್ಯಾಸಿ ಓಟಗಾರರನ್ನು ಸೆಳೆಯಲಿದೆ. ಭೌತಿಕ ಹಾಗೂ ವರ್ಚುವಲ್ ಓಟಗಳೆರಡಕ್ಕೂ tatamumbaimarathon.procam.in ಮೂಲಕ ನೋಂದಣಿಗಳು ಆರಂಭಗೊಂಡಿವೆ. ಮುಂಬರುವ 2027ರ ಜನವರಿ 17ರ ಭಾನುವಾರದಂದು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್‌ನಿಂದ ಈ ಓಟಕ್ಕೆ ಚಾಲನೆ ನೀಡಲಾಗುತ್ತದೆ.
ಮಹಾರಾಷ್ಟ್ರ ಸರ್ಕಾರದ ನಿರಂತರ ಬೆಂಬಲ ಹಾಗೂ ಆರೋಗ್ಯಕರ ಜೀವನಶೈಲಿಗೆ ಸ್ಫೂರ್ತಿ ನೀಡುವುದು, ನಾಗರಿಕ ಹೆಮ್ಮೆಯನ್ನು ಬೆಳೆಸುವುದು ಮತ್ತು ಓಟದ ಉತ್ಸಾಹದ ಮೂಲಕ ಸಮುದಾಯಗಳನ್ನು ಒಟ್ಟುಗೂಡಿಸುವ ಪರಂಪರೆಯನ್ನು ಪ್ರತಿಫಲಿಸುತ್ತಾ, ಶ್ರೀ ದೇವೇಂದ್ರ ಫಡ್ನವಿಸ್ ಅವರು ಟಾಟಾ ಮುಂಬೈ ಮ್ಯಾರಥಾನ್‌ನ ಮುಖ್ಯ ಪೋಷಕರಾಗಿ (Chief Patron) ಸೇವೆ ಸಲ್ಲಿಸುತ್ತಿದ್ದಾರೆ.





