ಪತ್ರಿಕಾ ಪ್ರಕಟಣೆ
21 ಸೆಪ್ಟೆಂಬರ್ 2026
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಗುಬ್ಬಿವಾಣಿ ಟ್ರಸ್ಟ್‌ನ ‘ಅವಳ ಹೆಜ್ಜೆ 2026’ ಮಹಿಳಾ ನಿರ್ದೇಶಿತ ಕನ್ನಡ ಕಿರುಚಿತ್ರಗಳ ಮರುಪ್ರದರ್ಶನ*
ಕಳೆದ ಮೇ ತಿಂಗಳಲ್ಲಿ ಯಶಸ್ವಿಯಾಗಿ ಜರುಗಿದ ಮುಖ್ಯ ಕಿರುಚಿತ್ರೋತ್ಸವ ಹಾಗೂ ಜುಲೈ ತಿಂಗಳಲ್ಲಿ ಬೆಂಗಳೂರಿನ IIWC ಯಲ್ಲಿ ನಡೆದ ಮರುಪ್ರದರ್ಶನದ ಬೆನ್ನಲ್ಲೇ, *ಗುಬ್ಬಿವಾಣಿ ಟ್ರಸ್ಟ್ ಆಯೋಜಿತ “ಅವಳ ಹೆಜ್ಜೆ ಕಿರುಚಿತ್ರೋತ್ಸವ”ದ* ಮತ್ತೊಂದು ವಿಶೇಷ ಮರುಪ್ರದರ್ಶನವು *ಸೆಪ್ಟೆಂಬರ್ 24*, 2026ರಂದು *ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ* (KSAWUV) ನಡೆಯಲಿದೆ.

ಕೇವಲ ಗ್ಲಾಮರ್ ಗೆ ಸೀಮಿತವಾಗದೇ ಕ್ಯಾಮೆರಾ ಹಿಂದೆಯೂ ಮಹಿಳೆಯರಿರಬೇಕು ಮತ್ತು ಮಹಿಳಾ ನಿರ್ದೇಶಕಿಯರ ಕಥನಗಳಿಗೆ ಬಲವಾದ ವೇದಿಕೆ ಸಿಗಬೇಕು ಎಂಬ ಧ್ಯೇಯದೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ರೂಪುಗೊಂಡಿರುವ ಒಂದು ಸಾಂಸ್ಕೃತಿಕ ಚಳವಳಿಯೇ ‘ಅವಳ ಹೆಜ್ಜೆ ಕಿರುಚಿತ್ರೋತ್ಸವ’.
*ಕಿರುಚಿತ್ರ ಪ್ರದರ್ಶನಗಳ* ಜೊತೆಗೆ, ಗುಬ್ಬಿವಾಣಿ ಟ್ರಸ್ಟ್ ಯುವಜನರಿಗಾಗಿ ಅನೇಕ ವಿಶೇಷ *ಕಾರ್ಯಾಗಾರಗಳು ಹಾಗೂ ಇಂಟರ್ನ್‌ಶಿಪ್* ಅವಕಾಶಗಳನ್ನೂ ನೀಡುತ್ತದೆ. ಸಹಯೋಗದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಆಸಕ್ತ ಶಿಕ್ಷಣ ಸಂಸ್ಥೆಗಳು ಅಥವಾ ಇತರ ಸಂಘ-ಸಂಸ್ಥೆಗಳು ನಮ್ಮನ್ನು ಸಂಪರ್ಕಿಸಬಹುದು.
ಮಾಧ್ಯಮ ಮಾಹಿತಿ, ಇಂಟರ್ನ್‌ಶಿಪ್ ಅರ್ಜಿ ಅಥವಾ ಸಹಯೋಗದ ವಿನಂತಿಗಾಗಿ ಸಂಪರ್ಕಿಸಿ:
ವೆಬ್‌ಸೈಟ್: www.gubbivanitrust.ngo
ಫೋನ್: 72599 36111 | 88677 47236
ಇಮೇಲ್: gubbivanitrust@gmail.com
ಧನ್ಯವಾದಗಳೊಂದಿಗೆ,
ಶಾಂತಲಾ ದಾಮ್ಲೆ
ಅವಳ ಹೆಜ್ಜೆ ಕಾರ್ಯಕ್ರಮ ನಿರ್ದೇಶಕಿ, ಗುಬ್ಬಿವಾಣಿ ಟ್ರಸ್ಟ್
8867747236





