ಹಿಂದೂಗಳ ಹೊಸಾ ವರ್ಷ ಯುಗಾದಿ ಹಬ್ಬ ಎಂದ ತಕ್ಷಣ ಯುಗಾದಿ ಹಬ್ಬಕ್ಕೆ ಶುಭಹಾರೈಸುತ್ತಾ ಹಾಸ್ಯಕ್ಕಾಗಿ ಕೆಲವರು ಇವತ್ತು ಬೇಳೆ🥘 ನಾಳೆ ಮೂಳೆ 🐐🐓 ಇವತ್ತು ಎಣ್ಣಿ ನೀರು ನಾಳೆ ಎಣ್ಣೆಗೆ ನೀರು🍸🥃 ಎನ್ನುವ ಸಂದೇಶ ಕಳುಹಿಸುವುದನ್ನು ಗಮನಿಸಿರಬಹುದು. . ಹೌದು ನಿಜ. ಯುಗಾದಿ ಹಬ್ಬದ ದಿನ ಒಬ್ಬಟ್ಟಿನ ಊಟ ಮಾಡಿದರೆ, ಯುಗಾದಿಯ ಮಾರನೆಯ ದಿನ ಮಾಂಸಾಹಾರವನ್ನು ಸೇವಿಸುವ ಬಹುತೇಕ ಹಿಂದೂಗಳು ಬಾಡೂಟವನ್ನು ಸೇವಿಸುವುದು ತಲೆ ತಲಾಂತರಗಳಿಂದ ನಡೆದುಕೊಂಡು ಬಂದಿರುವಂತಹ ರೂಢಿ. ಯುಗಾದಿಯ ಮಾರನೆಯ ದಿನ ವರ್ಷತೊಡಕಿನಿಂದ ಮಾಡುವ ಕೆಲಸಗಳು ಇಡೀ ವರ್ಷ ಇರುತ್ತದೆ ಎಂಬ ನಂಬಿಕೆ ಇರುವ ಕಾರಣ. ಎಷ್ಟೇ ಕಷ್ಟವಿದ್ದರೂ, ಸಾಲ ಸೋಲವಾದರೂ ಮಾಡಿ ಅವತ್ತು ಮಾಂಸಾಹಾರವನ್ನು ಭೋಜನ ಮಾಡಿ ಇಡೀ ವರ್ಷ ಹೀಗೆಯೇ ಮಾಂಸಾಹಾರ ತಿನ್ನುವಷ್ಟು ಹಣ ಪ್ರಾಪ್ತಿಯಾಗಲಿ ಎಂದು ಬಯಸುವುದು ಉಂಟು.

ನಮ್ಮ ಪೂರ್ವಜರು ಆಹಾರ ಪದ್ದತಿಗಳು ಅಳವಡಿಸಿಕೊಳ್ಳುವುದರ ಹಿಂದೆಯೂ ಒಂದು ಸುಂದರವಾದ ಕಲ್ಪನೆ ಇತ್ತು. ಆಗೆಲ್ಲಾ ಅವರು ಮಾಡುವ ಕೆಲಸಗಳ ಮೇಲೆ ಬ್ರಾಹ್ಮಣ, ವೈಶ್ಯ, ಕ್ಷತ್ರಿಯ ಮತ್ತು ಶೂದ್ರ ಎಂಬ ವರ್ಣಾಶ್ರಮದ ವಿಂಗಡೆಯಾಗಿತ್ತೇ ಹೊರತು ಜನ್ಮತಃ ಯಾವುದೇ ಜಾತಿ ಪದ್ದತಿ ಮತ್ತು ಆಹಾರ ಪದ್ಧತಿಗಳು ಇರಲಿಲ್ಲ. ಬ್ರಾಹ್ಮಣರಾಗ ಬಯಸುವವನು ಬ್ರಹ್ಮತ್ವವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಪಾಲಿಸುತ್ತಾ ಸತ್ವದ ಗುಣವನ್ನು ಹೊಂದಿರ ಬೇಕಾದ ಕಾರಣ ತಾಮಸ ಗುಣಗಳನ್ನು ಬೆಳಸುವ ಈರುಳ್ಳಿ, ಬೆಳ್ಳುಳ್ಳಿ, ಮಾಂಸಾಹಾರಗಳು ವರ್ಜ್ಯವಾಗಿದ್ದು ಅವರು ಶುದ್ಧ ಸಸ್ಯಾಹಾರವನ್ನು ಸ್ವೀಕರಿಸುತ್ತಿದ್ದರು. ಇನ್ನು ಕ್ಷತ್ರೀಯ ಮತ್ತು ಶೂದ್ರರು ಸ್ವಭಾವತಹಃ ವೀರರು, ಶೂರರು ಮತ್ತು ಕಠಿಣ ಸ್ವಭಾವದವರಾಗಿದ್ದು ಅವರು ದೇಶವನ್ನು ಶತ್ರುಗಳಿಂದ ರಕ್ಷಿಸುವ ಮತ್ತು ಹೊಲ ಗದ್ದೆಗಳಲ್ಲಿ ಬೆವರು ಸುರಿಸಿ ಪರಿಶ್ರಮದಿಂದ ದುಡಿಯುತ್ತಿದ ಕಾರಣಕ್ಕಾಗಿ ಅವರಿಗೆ ಅಪಾರವಾದ ಶಕ್ತಿಯ ಅವಶ್ಯಕತೆ ಇದ್ದ ಕಾರಣ ಅವರುಗಳು ಮಾಂಸಾಹಾರವನ್ನು ಸ್ವೀಕರಿಸಿ ದಷ್ಟ ಪುಷ್ಟರಾಗಿರುತ್ತಿದ್ದರು. ಹೀಗೆ ಹಿಂದೂಗಳಲ್ಲಿ ಅವರವರ ಕ್ರಿಯೆಗಳಿಗೆ ಅನುಗುಣವಾಗಿ ಅವರವರ ಅವಶ್ಯಕತೆಗೆ ತಕ್ಕಂತೆ ಸಸ್ಯಾಹಾರ ಮತ್ತು ಮಾಂಸಾಹಾರಗಳನ್ನು ಸೇವಿಸುತ್ತಿದ್ದರು.

kuri

ಆ ರೀತಿಯಾಗಿ ಮಾಂಸಾಹಾರವನ್ನು ಸೇವಿಸುವವರು ತಮ್ಮ ತಮ್ಮ ಮನೆಗಳಲ್ಲಿ ತಮಗೆ ಅಗತ್ಯವಿದ್ದ ಕೋಳಿ, ಕುರಿ, ಮೇಕೆ, ಹಂದಿಗಳನ್ನು ಆರೋಗ್ಯಕರವಾದ ರೀತಿಯಲ್ಲಿ ಸಾಕಿ ಸಲಹಿ ಅದನ್ನು ದಷ್ಟ ಪುಷ್ಟವಾಗಿ ಬೆಳಸಿ, ಕಡೆಗೆ ಒಂದು ದಿನ ಅದನ್ನು ದೇವರಿಗೆ ಬಲಿ ಕೊಟ್ಟು ಅದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸುತ್ತಿದ್ದದ್ದು ನಡೆದುಕೊಂಡು ಬಂದ ವಾಡಿಕೆ. ಹಾಗಾಗಿಯೇ ಇಂತಹ ಬಲಿ ಕೊಡುವ ದೇವಾಲಯಗಳು ಊರ ಹೊರಗಿರುತ್ತಿತ್ತು ಮತ್ತು ಬಹುತೇಕರು ತಮ್ಮ ಮನೆಗಳಲ್ಲಿ ಮಾಂಸಾಹಾರ ಮಾಡಲೆಂದೇ ವಿಶೇಷವಾದ ಪಾತ್ರೆ ಪಗಡಗಳನ್ನು ಇಟ್ಟಿರಿರುತಿದ್ದರಲ್ಲದೇ, ಮಾಂಸಾಹಾರವನ್ನು ತಮ್ಮ ಮನೆಯ ಅಡುಗೆ ಮನೆಯಲ್ಲಿ ಬೇಯಿಸದೇ ತೋಟದ ಮನೆಯಲ್ಲಿಯೋ ಇಲ್ಲವೇ ಮನೆಯ ಹಿತ್ತಲು ಅಥವಾ ಕೊಟ್ಟಿಗೆಯಲ್ಲಿ ಮಾಂಸಾಹಾರವನ್ನು ಮಾಡುತ್ತಿದ್ದರು. ಇತ್ತೀಚಿನ ಕೆಲ ವರ್ಷಗಳವರೆಗೂ ಮಾಂಸಾಹಾರವನ್ನು ಸೇವಿಸಿದವರು ಅಪ್ಪಿ ತಪ್ಪಿಯೂ ಅಂದು ದೇವಸ್ಥಾನಗಳಿಗಾಗಲೀ ಇಲ್ಲವೇ ಸಸ್ಯಾಹಾರ ಸ್ವೀಕರಿಸುವ ಮನೆಗಳಿಗೆ ಹೋಗುತ್ತಿರಲಿಲ್ಲ ಮತ್ತು ಅಂತಹವರು ತಮ್ಮ ಮನೆಗಳಿಗೆ ಬಂದರೆ ಇವತ್ತು ನಮ್ಮ ಮನೆಯಲ್ಲಿ ಚೀಚೀ ಮಾಡಿದ್ದೇವೆ/ತಿಂದಿದ್ದೇವೆ. ದಯವಿಟ್ಟು ನಾಳೆ ಬನ್ನಿ ಎಂದು ಸೌಜನ್ಯಪೂರಕವಾಗಿ ಹೇಳಿ ಕಳುಹಿಸಿರುವ ಅನೇಕ ಸಂದರ್ಭಗಳಿಗೆ ವಯಕ್ತಿಕವಾಗಿ ಸಾಕ್ಷಿಯಾಗಿದ್ದೇನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ