ಅನುಮೋಲ್ ಮನೋಹರನ್
ತಮಿಳು ಹಾಗೂ ಮಲೆಯಾಳಂ ಚಿತ್ರರಂಗದ, ಪ್ರಸಕ್ತ ಹೆಚ್ಚು ಚಾಲ್ತಿಯಲ್ಲಿರು, OTT ವೆಬ್ ಸೀರೀಸ್ ನಲ್ಲೂ ಅಷ್ಟೇ ಮಿಂಚುತ್ತಿರುವ ನಟಿ ಅನುಮೋಲ್ ಕೆ. ಮನೋಹರನ್ ರ ಸಾಧನೆಗಳ ಬಗ್ಗೆ ತಿಳಿಯೋಣವೇ…..?
ಇದೀಗ ಅನುಮೋಲ್ ಕೆ. ಮನೋಹರನ್‌ರ ತಮಿಳಿನ OTT ವೆಬ್ ಸೀರೀಸ್ (ಹಾಟ್ ಸ್ಟಾರ್ ಪ್ರಸಾರಿತ)ನ `ಹಾರ್ಟ್ ಬೀಟ್’ ದ. ಭಾರತದ ಎಲ್ಲರ ಹಾರ್ಟ್ ಟಚ್‌ಮಾಡಿದೆ! ಸಾಂಪ್ರದಾಯಿಕ ಮನೆತನದ ಈ ಹೆಣ್ಣುಮಗಳು, ಕೇರಳ ಮೂಲದವಳು. 2010ರಲ್ಲಿ ತಮಿಳಿನ `ಕಣ್ಣುಕ್ಕುಳ್ಳೇ’ ಚಿತ್ರದಿಂದ ಫಿಲ್ಮೀರಂಗಕ್ಕೆ ಪಾದಾರ್ಪಣೆ. ಜೊತೆಗೆ ಈಕೆ ಸುಪ್ರಸಿದ್ಧ ಭರತನಾಟ್ಯಂ ಹಾಗೂ ಕಥಕ್ಕಳಿ ಶಾಸ್ತ್ರೀಯ ನೃತ್ಯಪಟು ಸಹ, ಉತ್ತಮ ಶಿಕ್ಷಣ ಪಡೆದ ಪದವೀಧರೆ. 2023ರ `ಅಯಲಿ’ ವೆಬ್ ಸೀರೀಸನಿಂದ OTTಯಲ್ಲೂ ಮಿಂಚಿದ್ದಾಳೆ.
ಸುಮಾರು 15 ವರ್ಷಗಳಿಂದ ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಉತ್ತಮ ಕೆರಿಯರ್ ಬೆಳೆಸಿಕೊಂಡಿರುವ ಈಕೆ ಸಿನಿಮಾ, ಟಿವಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾಳೆ. ಈಕೆಯ ಟ್ರಾವೆಲ್ ಲಾಗ್ `ಅನುಯಾತ್ರ,’ ಕೋವಿಡ್ ಪ್ಯಾಂಡಮಿಕ್ ಪಿರಿಯಡ್ ನಿಂದಲೇ ಆನ್ ಲೈನ್ ನಲ್ಲಿ ಹೆಚ್ಚು ಜನಪ್ರಿಯವಾಯಿತು. ಇಂದು ಈಕೆ OTTಯ ತಮಿಳು ವೆಬ್ ಸೀರೀಸ್ `ಹಾರ್ಟ್ ಬೀಟ್’ನ ಡಾ. ರತಿಯಾಗಿ ಅತಿ ಜನಪ್ರಿಯಳಾಗಿದ್ದಾಳೆ. ಈಕೆ ತನ್ನ ಹಳ್ಳಿ ಮೂಲದ ಸಂಸ್ಕೃತಿ ಮರೆತಿಲ್ಲ. ಈ ಬಾರಿ ಈಕೆ ಗೃಹಶೋಭಾ ಜೊತೆ ಮನಬಿಚ್ಚಿ ಮಾತನಾಡಿದ್ದಾಳೆ.
ಈ ಸಲದ ಹಬ್ಬಗಳು ನಿಮಗೆ ಹೇಗನಿಸಿತು?
ಹಬ್ಬಗಳು ಸದಾ ಜೀವಂತ, ಅತಿ ಸುಂದರ, ಮನೋಹರ! ನಾನೀಗ ಪ್ರಸ್ತುತ ಹಲವು ತಮಿಳು, ಮಲೆಯಾಳಂ ಚಿತ್ರಗಳಿಗಾಗಿ ನಟಿಸುತ್ತಿದ್ದೇನೆ. ಅವು ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ಹೀಗಾಗಿ ಬಹಳ ಬಿಝಿ ಆಗಿಹೋಗಿದ್ದೇನೆ. ಜೊತೆಗೆ ಎಲ್ಲೆಡೆ ಸದಾ ಪ್ರಯಾಣ ಇದ್ದೇ ಇರುತ್ತದೆ, ಅದು ನನಗೆ ಬಹಳ ಇಷ್ಟ.

ಈ ರೀತಿ ಬಿಝಿ ಶೆಡ್ಯೂಲ್, ಪ್ರಯಾಣದ ಮಧ್ಯೆ ಹಬ್ಬಗಳಿಗಾಗಿ ಮನೆಗೆ ಬಿಡುವಾಗಿ ಹೋಗಿ ಬರುವುದಿದೆಯಲ್ಲ, ಅದಂತೂ ಅದ್ಭುತ! `ಹಾರ್ಟ್ ಬೀಟ್’ ನ ಡಾ. ರತಿ ಪಾತ್ರ ಈಗ ಎಲ್ಲೆಡೆ ಮನೆಮಾತು. ಆ ಕುರಿತು ಹೇಳಿ.
ಡಾ. ರತಿ ಕೇವಲ ಒಂದು ಪಾತ್ರವಾಗಿರದೆ, ನನ್ನ ಕೆರಿಯರ್ ನ ಅತಿ ಮುಖ್ಯ ಪ್ರೇರಣಾದಾಯಿ ವ್ಯಕ್ತಿತ್ವ ಎನ್ನಬಹುದು. ನನ್ನ ನೆಚ್ಚಿನ ಪ್ರೇಕ್ಷಕರು ಈ ಪಾತ್ರದಿಂದ ಬಹಳ ಪ್ರಭಾವಿತರಾಗಿದ್ದಾರೆ. ಆ ಪಾತ್ರದಿಂದ ನಾನು ಬಹಳ ಜಾಗೃತಳಾಗಿದ್ದೇನೆ. ಮುಂದಿನ ನನ್ನ ಪಾತ್ರಗಳ ಆಯ್ಕೆಯಲ್ಲಿ ಒಂದಲ್ಲ 4 ಸಲ ಯೋಚಿಸುವಂತಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಈ ಪಾತ್ರದ ಬಗ್ಗೆ ತುಂಬಾನೇ ಚರ್ಚೆ ಆಗಿರುತ್ತದೆ. ಜನರ ಅಪಾರ ನಂಬಿಕೆ ಉಳಿಸಿಕೊಳ್ಳಬೇಕಾದುದು ನನ್ನ ದೊಡ್ಡ ಜವಾಬ್ದಾರಿ ಆಗಿದೆ.
ಈಗಿನ ಟ್ರೆಂಡ್ ಗಮನಿಸಿದರೆ, ಹೆಚ್ಚು ಮಂದಿ ಹೆಂಗಸರು ಡಾ. ರತಿ ಪಾತ್ರಕ್ಕೆ ಮಾರುಹೋಗಿದ್ದಾರೆ, ಒಂದಿಲ್ಲೊಂದು ವಿಧದಲ್ಲಿ ತಮ್ಮನ್ನು ಆ ಮೂಲಕ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನನ್ನ ಹಿಂದಿನ ಕೆರಿಯರ್ ಗ್ರಾಫ್ ಗಮನಿಸಿದರೆ, ಹೆಚ್ಚು ಮಂದಿ ಗಂಡಸರು ನನ್ನ ಪಾತ್ರ ಮೆಚ್ಚಿ ಫ್ಯಾನ್ ಫಾಲೋಯರ್ಸ್ ಆಗಿದ್ದರು. ಆದರೆ ಈಗಿನ ಟ್ರೆಂಡ್ ಬದಲಾಗಿದ್ದು, ಹೆಚ್ಚು ಮಂದಿ ಹೆಂಗಸರು ಈ ಪಾತ್ರದ ಮೂಲಕ ಕನೆಕ್ಟ್ ಆಗುತ್ತಿದ್ದು, ಅವರುಗಳ ಜೀವನ ಅದರಿಂದ ಹೇಗೆ ಪ್ರಭಾವಿತಗೊಂಡಿದೆ, ಬದಲಾಗುತ್ತಿದೆ ಎಂದೂ ಹೇಳುತ್ತಾರೆ. ಇದರಿಂದ ಎಷ್ಟೋ ಮಂದಿ ಹೆಂಗಸರು ಇಂಡಿಪೆಂಡೆಂಟ್ ಆಗಿ ಸದೃಢ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾ, ಡ್ರೈವಿಂಗ್, ಟ್ರಾವೆಲಿಂಗ್ ನ್ನು ಸಹ ಕೆರಿಯರ್ ನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಡಾ. ರತಿಯಿಂದ ಇವರು ಹೆಚ್ಚಿನ ಪ್ರೋತ್ಸಾಹ ಪಡೆದಿದ್ದಾರೆ. ಇವರೆಲ್ಲ ಸೇರಿ `ರತಿ ಗರ್ಲ್ಸ್’ ಅಂತ ಒಂದು ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಿ, ಪರಸ್ಪರ ಹೆಚ್ಚು ಸಪೋರ್ಟ್ ಮಾಡಿಕೊಳ್ಳುತ್ತಾರೆ.
ಇವರುಗಳ ಪ್ರೀತಿವಾತ್ಸಲ್ಯ ಕಂಡು ನಾನು ಮೂಕಳಾಗಿದ್ದೇನೆ! ಈಗಾಗಲೇ `ಹಾರ್ಟ್ ಬೀಟ್’ 1 2 ಸೀಸನ್ ಮುಗಿದಿದೆ. ಅವುಗಳ ನಡುವೆ 8 ತಿಂಗಳ ಗ್ಯಾಪ್ ಇದ್ದಾಗಲೂ ಸಹ, ಒಬ್ಬರಲ್ಲ ಒಬ್ಬರು ಮೊದಲ ಸೀಸನ್ನಿನ ಡಾ. ರತಿಯ ಒಂದಲ್ಲ ಒಂದು ಕ್ಲಿಕ್ ಶೇರ್ ಮಾಡುತ್ತಾ, ಕಮೆಂಟ್ ಮಾಡುತ್ತಲೇ ಇದ್ದರು. ಈ ಮಟ್ಟದ ಕನೆಕ್ಷನ್ ನಿಜಕ್ಕೂ ಒಬ್ಬ ನಟಿ ಎಷ್ಟು ಯಶಸ್ವಿ ಎಂಬುದನ್ನು ತೋರಿಸಿಕೊಡುತ್ತದೆ, ಇದರ ಮುಂದೆ ಎಲ್ಲಾ ಪ್ರಶಸ್ತಿಗಳೂ ಗೌಣ! ಇವರುಗಳಿಂದ ನಾನು ಹೆಚ್ಚು ಸಂತೃಪ್ತಳಾಗಿದ್ದೇನೆ. ಈ ಸೀರೀಸ್ ಆರಂಭಿಸಿದ ಇಡೀ ತಂಡಕ್ಕೆ ನಾನು ಅತ್ಯಂತ ಆಭಾರಿ!

ನೀವು ತಮಿಳು ಚಿತ್ರಗಳಿಂದ ಕೆರಿಯರ್ ಆರಂಭಿಸಿದಿರಿ. ನಂತರ ಮಲೆಯಾಳಂ ಚಿತ್ರರಂಗದಲ್ಲೂ ಸದೃಢವಾಗಿ ನೆಲೆ ಕಂಡುಕೊಂಡಿರಿ. ಈ ಜರ್ನಿ ಬಗ್ಗೆ ಹೇಳಿ.
ನಾನು ನಟಿಯಾಗಿ ಕೆರಿಯರ್ ಹೊಂದಬಲ್ಲೆ ಎಂದು ಕನಸು ಕಂಡವಳೇ ಅಲ್ಲ! ಹಿಂದೆಲ್ಲ ನನಗೆ ಸಿಗುತ್ತಿದ್ದ ಪಾತ್ರಗಳಿಗೆ ಇತರರ ಹೆಸರನ್ನು ನಾನು ಸೂಚಿಸಿದ್ದುಂಟು. ನನ್ನ ಡೆಬ್ಯು ನಿಜಕ್ಕೂ ಒನ್ ಟೈಂ ಎಕ್ಸ್ ರಿಯನ್ಸ್ ಆಗಿ ಉಳಿದುಹೋಗುತ್ತದೆ ಎಂದೇ ಭಾವಿಸಿದ್ದೆ. ಆದರೆ ಸಿನಿಪ್ರಪಂಚ ನನ್ನನ್ನು ಕೈಬೀಸಿ ಕರೆದಾಗ, ಇದರ ಮೋಹಕ ಸೆಳೆತಕ್ಕೆ ನಾನು ಮಾರುಹೋದೆ! ನಾನೊಬ್ಬ ಅಪ್ಪಟ ಕಲಾವಿದೆ ಎನಿಸಲು ಕೆಲವು ವರ್ಷಗಳೇ ಬೇಕಾದವು. ಇದನ್ನು ನನ್ನ ಬಂಗಾಳಿ `ಒಭಿಮಾನಿ ಜೋಲ್’ (ನೀರ ಮೇಲಿನ ನಡಿಗೆ) ಚಿತ್ರದಿಂದ ಕಂಡುಕೊಂಡೆ. ಅಂದಿನಿಂದ ನಟನೆಯ ಕಲೆಗಾಗಿ ನನ್ನನ್ನು ನಾನು ಸಂಪೂರ್ಣ ಸಮರ್ಪಿಸಿಕೊಂಡೆ ಅಷ್ಟು ಹೊತ್ತಿಗೆ ನನ್ನ ಜೀವನದ ಏರಿಳಿತ, ಪ್ರೇಕ್ಷಕರ ಪ್ರಶಂಸೆಯ ನುಡಿಗಳು, ಸೋಶಿಯಲ್ ಮೀಡಿಯಾದ ಎನರ್ಜಿ ಎಲ್ಲಾ ಕೂಡಿ ಹೊಸತೊಂದು ಮಾಯಾಜಾಲವನ್ನೇ ಸೃಷ್ಟಿಸಿತ್ತು. ಹೀಗಾಗಿ ಈಗ ನಟನೆ ನನ್ನ ಪ್ರವೃತ್ತಿ ಮಾತ್ರವಲ್ಲದೆ, ಪ್ರಮುಖ ವೃತ್ತಿಯೂ ಆಗಿದೆ. ಇದು ನನ್ನ ಆತ್ಮವಿಶ್ವಾಸ ಹೆಚ್ಚಿಸಿದೆ. ಇದನ್ನು ನಾನು ಮನಸಾರೆ ಪೂಜಿಸುತ್ತೇನೆ.
ನಿಮ್ಮ ಊರಾದ ನಡುವಾಟ್ಟಂ, ಆಗಾಗ ನಿಮ್ಮ ವಿಡಿಯೋಗಳಲ್ಲಿ ಕಂಗೊಳಿಸುತ್ತದೆ. ಇದು ನಿಮ್ಮ ಜೀವನದ ಮೇಲೆ ಹೇಗೆ ಪ್ರಭಾವ ಬೀರಿದೆ?
ಇದು ಕೇರಳ ರಾಜ್ಯದ ಪಾಲಕ್ಕಾಡ್ ಜಿಲ್ಲೆಯ ನನ್ನ ಜನ್ಮಸ್ಥಳ ಮಾತ್ರವಲ್ಲದೆ, ನನ್ನೆಲ್ಲ ಆಸೆ, ಆಕಾಂಕ್ಷೆ, ಪ್ರೇರಣೆಗಳ ಮೂಲ ಹೌದು. ಇಂದೂ ಸಹ ನಾನು ಬಿಡುವಾದಾಗೆಲ್ಲ ಮೊದಲು ಅಲ್ಲಿಗೆ ಹೋಗಿ, ವಿಶ್ರಾಂತಿ ಪಡೆದು, ನೈಜ ಬದುಕನ್ನು ಬದುಕುತ್ತೇನೆ. ನಗರ ಜೀವನ ಕೇವಲ ನನ್ನ ವೃತ್ತಿಪರ ಭಾಗ ಅಷ್ಟೆ. ಹಳ್ಳಿ ಜೀವನವೇ ನನಗೆ ಮೂಲಾಧಾರ.
ನಾನು ಹಳ್ಳಿಯ ಮುಗ್ಧೆ, ಹೆಚ್ಚಾಗಿ ನಗರದ ಯಾಂತ್ರಿಕ ಜೀವನಕ್ಕೆ ಹೊಂದಿಕೊಳ್ಳಲು ಹೆಣಗುತ್ತಿದ್ದಾಗ, ಹಲವು ಸಾಲುಗಳು ಎದುರಾದವು. ನಗರ ಜೀವನದಲ್ಲಿ ಜನರ ನಡುವಿನ ಗಂಭೀರ ಅಂತರ ಕಂಡು ನಾನು ದಂಗಾದೆ! ಕೊಚ್ಚಿಯಲ್ಲಿ ನನ್ನ ಮೊದಲ ಹಬ್ಬದ ಅನುಭವ ಇನ್ನೂ ನೆನಪಿದೆ, ನಾನಿದ್ದ ಅಲ್ಲಿನ ಆಪಾರ್ಟ್ ಮೆಂಟ್ ನಲ್ಲಿ ಯಾ ಫ್ಲಾಟ್ ನಲ್ಲಿ ಯಾರಿದ್ದಾರೆ ಅಂತಲೂ ಗೊತ್ತಾಗುತ್ತಿರಲಿಲ್ಲ. ನಾನು ಅಲ್ಲಿನ ಎಂಟ್ರೆನ್ಸ್ ನಲ್ಲಿ `ಪೂಕ್ಕೋಲಂ’ ಚಿತ್ತಾರ ಬಿಡಿಸಿದಾಗ, ಸುಮಾರು 2 ವಾರಗಳ ನಂತರ ಜನ ಒಬ್ಬೊಬ್ಬರಾಗಿ ಫ್ರೆಂಡ್ಸ್ ಆಗತೊಡಗಿದರು. ಆ ತಿಂಗಳು ಕಳೆಯುವಷ್ಟರಲ್ಲಿ ನಾವೆಲ್ಲ ಒಂದು ಗುಂಪಾಗಿದ್ದೆವು.
ನಮ್ಮ ಓದುಗರಿಗೆ ಏನಾದರೂ ಸಂದೇಶ ನೀಡಬಯಸುವಿರಾ?
ಮೊದಲು ನಿಮ್ಮನ್ನು ನೀವು ಲವ್ ಮಾಡಲು ಕಲಿಯಿರಿ! ನೀವು ಇರುವ ಹಾಗೆಯೇ ಬಾಳಲು ಮುಂದುವರಿಯಿರಿ, ಯಾರನ್ನೋ ಮೆಚ್ಚಿಸಿ ಏನೂ ಆಗಬೇಕಿಲ್ಲ. ನಿಮ್ಮ ಒರಿಜಿನಾಲಿಟಿ ಮರೆತು ನಿಮ್ಮ ಸೌಂದರ್ಯ ಪ್ರದರ್ಶನ ಬೇಡ. ಪ್ರಸ್ತುತ ಟ್ರೆಂಡ್ಲ್ ನಲ್ಲಿ ಕಳೆದುಹೋಗಬೇಡಿ, ಇತ್ತು ಇದ್ದದ್ದು ನಾಳೆ ಇರೋಲ್ಲ. ಕೈಮಗ್ಗದ ಉತ್ಪನ್ನಗಳನ್ನು ಎಂದೂ ಬಿಟ್ಟುಕೊಡಬೇಡಿ. ಅದರ ಮೃದುತ್ವ, ಡಿಸೈನ್, ಎಲಿಗೆನ್ಸ್ ನಿಮಗೆ ಅದರ ಹಿಂದಿನ ಸಂಪ್ರದಾಯ, ಕಲೆ, ಅಭಿರುಚಿಗಳನ್ನು ನೆನಪಿಸುತ್ತದೆ. ನಾವೆಲ್ಲರೂ ಒಟ್ಟಾಗಿ ಮುಂದಿನ ಸುಂದರ ನಾಳೆಗಾಗಿ ದೃಢ ಸಂಕಲ್ಪದಿಂದ ಮುಂದುವರಿಯೋಣ, ಹೆಂಗಸರೆಲ್ಲರೂ ಒಗ್ಗಟ್ಟಾದರೆ ಅದಕ್ಕಿಂತ ಹಿರಿದೇನು…..?
– ಪ್ರತಿನಿಧಿ





