ಅನುಮೋಲ್ ಮನೋಹರನ್
ತಮಿಳು ಹಾಗೂ ಮಲೆಯಾಳಂ ಚಿತ್ರರಂಗದ, ಪ್ರಸಕ್ತ ಹೆಚ್ಚು ಚಾಲ್ತಿಯಲ್ಲಿರು, OTT ವೆಬ್ ಸೀರೀಸ್ ನಲ್ಲೂ ಅಷ್ಟೇ ಮಿಂಚುತ್ತಿರುವ ನಟಿ ಅನುಮೋಲ್ ಕೆ. ಮನೋಹರನ್ ರ ಸಾಧನೆಗಳ ಬಗ್ಗೆ ತಿಳಿಯೋಣವೇ.....?
ಇದೀಗ ಅನುಮೋಲ್ ಕೆ. ಮನೋಹರನ್‌ರ ತಮಿಳಿನ OTT ವೆಬ್ ಸೀರೀಸ್ (ಹಾಟ್ ಸ್ಟಾರ್ ಪ್ರಸಾರಿತ)ನ `ಹಾರ್ಟ್ ಬೀಟ್' ದ. ಭಾರತದ ಎಲ್ಲರ ಹಾರ್ಟ್ ಟಚ್‌ಮಾಡಿದೆ! ಸಾಂಪ್ರದಾಯಿಕ ಮನೆತನದ ಈ ಹೆಣ್ಣುಮಗಳು, ಕೇರಳ ಮೂಲದವಳು. 2010ರಲ್ಲಿ ತಮಿಳಿನ `ಕಣ್ಣುಕ್ಕುಳ್ಳೇ' ಚಿತ್ರದಿಂದ ಫಿಲ್ಮೀರಂಗಕ್ಕೆ ಪಾದಾರ್ಪಣೆ. ಜೊತೆಗೆ ಈಕೆ ಸುಪ್ರಸಿದ್ಧ ಭರತನಾಟ್ಯಂ ಹಾಗೂ ಕಥಕ್ಕಳಿ ಶಾಸ್ತ್ರೀಯ ನೃತ್ಯಪಟು ಸಹ, ಉತ್ತಮ ಶಿಕ್ಷಣ ಪಡೆದ ಪದವೀಧರೆ. 2023ರ `ಅಯಲಿ' ವೆಬ್ ಸೀರೀಸನಿಂದ OTTಯಲ್ಲೂ ಮಿಂಚಿದ್ದಾಳೆ.
ಸುಮಾರು 15 ವರ್ಷಗಳಿಂದ ತಮಿಳು, ಮಲೆಯಾಳಂ ಚಿತ್ರರಂಗದಲ್ಲಿ ಉತ್ತಮ ಕೆರಿಯರ್ ಬೆಳೆಸಿಕೊಂಡಿರುವ ಈಕೆ ಸಿನಿಮಾ, ಟಿವಿ, ಡಿಜಿಟಲ್ ಪ್ಲಾಟ್ ಫಾರ್ಮ್ ಗಳಲ್ಲಿ ಉತ್ತಮ ಹೆಸರು ಗಳಿಸಿದ್ದಾಳೆ. ಈಕೆಯ ಟ್ರಾವೆಲ್ ಲಾಗ್ `ಅನುಯಾತ್ರ,' ಕೋವಿಡ್ ಪ್ಯಾಂಡಮಿಕ್ ಪಿರಿಯಡ್ ನಿಂದಲೇ ಆನ್ ಲೈನ್ ನಲ್ಲಿ ಹೆಚ್ಚು ಜನಪ್ರಿಯವಾಯಿತು. ಇಂದು ಈಕೆ OTTಯ ತಮಿಳು ವೆಬ್ ಸೀರೀಸ್ `ಹಾರ್ಟ್ ಬೀಟ್'ನ ಡಾ. ರತಿಯಾಗಿ ಅತಿ ಜನಪ್ರಿಯಳಾಗಿದ್ದಾಳೆ. ಈಕೆ ತನ್ನ ಹಳ್ಳಿ ಮೂಲದ ಸಂಸ್ಕೃತಿ ಮರೆತಿಲ್ಲ. ಈ ಬಾರಿ ಈಕೆ ಗೃಹಶೋಭಾ ಜೊತೆ ಮನಬಿಚ್ಚಿ ಮಾತನಾಡಿದ್ದಾಳೆ.
ಈ ಸಲದ ಹಬ್ಬಗಳು ನಿಮಗೆ ಹೇಗನಿಸಿತು?
ಹಬ್ಬಗಳು ಸದಾ ಜೀವಂತ, ಅತಿ ಸುಂದರ, ಮನೋಹರ! ನಾನೀಗ ಪ್ರಸ್ತುತ ಹಲವು ತಮಿಳು, ಮಲೆಯಾಳಂ ಚಿತ್ರಗಳಿಗಾಗಿ ನಟಿಸುತ್ತಿದ್ದೇನೆ. ಅವು ಇನ್ನೂ ಅಧಿಕೃತವಾಗಿ ಘೋಷಿಸಲ್ಪಟ್ಟಿಲ್ಲ, ಹೀಗಾಗಿ ಬಹಳ ಬಿಝಿ ಆಗಿಹೋಗಿದ್ದೇನೆ. ಜೊತೆಗೆ ಎಲ್ಲೆಡೆ ಸದಾ ಪ್ರಯಾಣ ಇದ್ದೇ ಇರುತ್ತದೆ, ಅದು ನನಗೆ ಬಹಳ ಇಷ್ಟ.

ಈ ರೀತಿ ಬಿಝಿ ಶೆಡ್ಯೂಲ್, ಪ್ರಯಾಣದ ಮಧ್ಯೆ ಹಬ್ಬಗಳಿಗಾಗಿ ಮನೆಗೆ ಬಿಡುವಾಗಿ ಹೋಗಿ ಬರುವುದಿದೆಯಲ್ಲ, ಅದಂತೂ ಅದ್ಭುತ! `ಹಾರ್ಟ್ ಬೀಟ್' ನ ಡಾ. ರತಿ ಪಾತ್ರ ಈಗ ಎಲ್ಲೆಡೆ ಮನೆಮಾತು. ಆ ಕುರಿತು ಹೇಳಿ.
ಡಾ. ರತಿ ಕೇವಲ ಒಂದು ಪಾತ್ರವಾಗಿರದೆ, ನನ್ನ ಕೆರಿಯರ್ ನ ಅತಿ ಮುಖ್ಯ ಪ್ರೇರಣಾದಾಯಿ ವ್ಯಕ್ತಿತ್ವ ಎನ್ನಬಹುದು. ನನ್ನ ನೆಚ್ಚಿನ ಪ್ರೇಕ್ಷಕರು ಈ ಪಾತ್ರದಿಂದ ಬಹಳ ಪ್ರಭಾವಿತರಾಗಿದ್ದಾರೆ. ಆ ಪಾತ್ರದಿಂದ ನಾನು ಬಹಳ ಜಾಗೃತಳಾಗಿದ್ದೇನೆ. ಮುಂದಿನ ನನ್ನ ಪಾತ್ರಗಳ ಆಯ್ಕೆಯಲ್ಲಿ ಒಂದಲ್ಲ 4 ಸಲ ಯೋಚಿಸುವಂತಾಗಿದೆ. ಅದರಲ್ಲೂ ಸೋಶಿಯಲ್ ಮೀಡಿಯಾದಲ್ಲಿ ಈ ಪಾತ್ರದ ಬಗ್ಗೆ ತುಂಬಾನೇ ಚರ್ಚೆ ಆಗಿರುತ್ತದೆ. ಜನರ ಅಪಾರ ನಂಬಿಕೆ ಉಳಿಸಿಕೊಳ್ಳಬೇಕಾದುದು ನನ್ನ ದೊಡ್ಡ ಜವಾಬ್ದಾರಿ ಆಗಿದೆ.
ಈಗಿನ ಟ್ರೆಂಡ್ ಗಮನಿಸಿದರೆ, ಹೆಚ್ಚು ಮಂದಿ ಹೆಂಗಸರು ಡಾ. ರತಿ ಪಾತ್ರಕ್ಕೆ ಮಾರುಹೋಗಿದ್ದಾರೆ, ಒಂದಿಲ್ಲೊಂದು ವಿಧದಲ್ಲಿ ತಮ್ಮನ್ನು ಆ ಮೂಲಕ ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ನನ್ನ ಹಿಂದಿನ ಕೆರಿಯರ್ ಗ್ರಾಫ್ ಗಮನಿಸಿದರೆ, ಹೆಚ್ಚು ಮಂದಿ ಗಂಡಸರು ನನ್ನ ಪಾತ್ರ ಮೆಚ್ಚಿ ಫ್ಯಾನ್ ಫಾಲೋಯರ್ಸ್ ಆಗಿದ್ದರು. ಆದರೆ ಈಗಿನ ಟ್ರೆಂಡ್ ಬದಲಾಗಿದ್ದು, ಹೆಚ್ಚು ಮಂದಿ ಹೆಂಗಸರು ಈ ಪಾತ್ರದ ಮೂಲಕ ಕನೆಕ್ಟ್ ಆಗುತ್ತಿದ್ದು, ಅವರುಗಳ ಜೀವನ ಅದರಿಂದ ಹೇಗೆ ಪ್ರಭಾವಿತಗೊಂಡಿದೆ, ಬದಲಾಗುತ್ತಿದೆ ಎಂದೂ ಹೇಳುತ್ತಾರೆ. ಇದರಿಂದ ಎಷ್ಟೋ ಮಂದಿ ಹೆಂಗಸರು ಇಂಡಿಪೆಂಡೆಂಟ್ ಆಗಿ ಸದೃಢ ವ್ಯಕ್ತಿತ್ವ ಬೆಳೆಸಿಕೊಳ್ಳುತ್ತಾ, ಡ್ರೈವಿಂಗ್, ಟ್ರಾವೆಲಿಂಗ್ ನ್ನು ಸಹ ಕೆರಿಯರ್ ನಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ. ಡಾ. ರತಿಯಿಂದ ಇವರು ಹೆಚ್ಚಿನ ಪ್ರೋತ್ಸಾಹ ಪಡೆದಿದ್ದಾರೆ. ಇವರೆಲ್ಲ ಸೇರಿ `ರತಿ ಗರ್ಲ್ಸ್' ಅಂತ ಒಂದು ವಾಟ್ಸ್ ಆ್ಯಪ್ ಗ್ರೂಪ್ ಕ್ರಿಯೇಟ್ ಮಾಡಿ, ಪರಸ್ಪರ ಹೆಚ್ಚು ಸಪೋರ್ಟ್ ಮಾಡಿಕೊಳ್ಳುತ್ತಾರೆ.





