ಪಡ್ಡೆ ಹೈಕ್ಳ ಮನಸ್ಸು ಕದಿಯುವ ಚೋರಿ
ಬಹುಭಾಷಾ ನಟಿ ವೇದಿಕಾ ಸುಮಾರು 20 ವರ್ಷಗಳಿಂದ ಚಿತ್ರರಂಗದಲ್ಲಿದ್ದು, ಬಹುಬೇಡಿಕೆಯ ನಟಿ ಎನಿಸಿಕೊಂಡಿದ್ದಾರೆ. ಮೂಲತಃ ಕನ್ನಡತಿಯಾದ ಈಕೆ ಸೋಶಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್. ಆಗಾಗ ಬಿಕಿನಿ ತೊಟ್ಟು ಹಸಿಬಿಸಿಯಾಗಿ ಕಾಣಿಸಿಕೊಳ್ಳುವ ಈಕೆಯ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. `ಸಂಗಮ' ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಕಾಲಿಟ್ಟ ಈಕೆ, `ಶಿವಲಿಂಗು, ಗೌಡ್ರು ಹೋಟೆಲ್, ಗಣ, ಕಾಂಚನಾ-3, ಹೋಮ್ ಮಿನಿಸ್ಟರ್' ಚಿತ್ರಗಳಲ್ಲಿ ಅಭಿಯನಿಸಿದ್ದಾರೆ. ತಮಿಳು, ತೆಲುಗು, ಮಲೆಯಾಳಂ ಹೀಗೆ ಹಲವಾರು ಭಾಷೆಗಳಲ್ಲಿ ಅಭಿನಯಿಸಿ, ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.

ಸೌಂದರ್ಯದ ಖನಿ ಐಶ್ವರ್ಯಾ ಸಿಂಧೋಗಿ
ಸ್ಯಾಂಡಲ್ ವುಡ್ ಹಾಗೂ ಕಿರುತೆರೆ ಬೆಡಗಿ ಐಶ್ವರ್ಯಾ ಸಿಂಧೋಗಿ, ಸೃಜನ್ ಲೋಕೇಶ್ ನಟನೆಯ `ಸಪ್ನನೊಂಕಿ ರಾಣಿ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು. `ಸಿಂಹಾದ್ರಿ, ಮಟಾಷ್, ಸಂಯುಕ್ತ-2, ಲಾಲ್, ಸೈತಾನ್, ಯಾರು ಯಾರು ನೀ ಯಾರು....?' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇದಕ್ಕೂ ಮುನ್ನ `ಡ್ಯಾನ್ಸಿಂಗ್ ಚಾಂಪಿಯನ್, ಸೂಪರ್ ಕ್ವೀನ್' ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದರು. `ನಾಗಿಣಿ-2' ಸೀರಿಯಲ್ ಮೂಲಕ ಕಿರುತೆರೆಗೆ ಕಾಲಿಟ್ಟ ಇವರು, `ಮಂಗಳಗೌರಿ ಮದುವೆ, ಶಾಂಭವಿ' ಸೀರಿಯಲ್ ಗಳಲ್ಲೂ ಅಭಿನಯಿಸಿದ್ದಾರೆ. ಕನ್ನಡದ ಬಿಗ್ ಬಾಸ್ ಸೀಸನ್ ರಲ್ಲಿ 13ನೇ ಸ್ಪರ್ಧಿಯಾಗಿ ಪ್ರವೇಶಿಸಿದ್ದ ಐಶ್ವರ್ಯಾ ಸಿಂಧೋಗಿ, ರಾಜ್ಯ ಮಟ್ಟದ ಹಾಕಿ ಆಟಗಾರ್ತಿಯೂ ಕೂಡ.

ನಟನೆಗೂ ಸೈ, ನಿರ್ಮಾಣಕ್ಕೂ ಸೈ
ಬಹುಭಾಷಾ ನಟಿ ಶರ್ಮಿಳಾ ಮಾಂಡ್ರೆ `ಸಜನಿ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು `ಕೃಷ್ಣ' ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. `ಈ ಬಂಧನ, ನವಗ್ರಹ, ಮಸ್ತ್ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಗಾಳಿಪಟ-2, ಕರಿ ಚಿರತೆ' ಸೇರಿದಂತೆ ಹಲವಾರು ಚಿತ್ರಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಇತ್ತೀಚೆಗಷ್ಟೆ ಬಿಡುಗಡೆಯಾದ ದರ್ಶನ್ ನಟನೆಯ `ದಿ ಡೆವಿಲ್' ಚಿತ್ರದಲ್ಲೂ ನಟಿಸಿರುವ ಶರ್ಮಿಳಾ ಮಾಂಡ್ರೆ, ಸಿನಿಮಾಗಳ ಜೊತೆ ಇನ್ ಸ್ಟಾಗ್ರಾಂನಲ್ಲೂ ಸಖತ್ ಆ್ಯಕ್ಟಿವ್. ತಮ್ಮ ಗ್ಲಾಮರಸ್ ಚಿತ್ರ, ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ನಟನೆಯಿಂದ ನಿರ್ಮಾಪಕಿಯಾಗಿ ಸಹ ಬಡ್ತಿ ಪಡೆದಿರುವ ಶರ್ಮಿಳಾ, ಕನ್ನಡದ `ದಸರಾ' ಮತ್ತು ತಮಿಳಿನ `ಕಾದಲ್ ಕೊಂಜಂ ತೂಕ್ಕಲಾ' ಸಿನಿಮಾಗಳನ್ನು ನಿರ್ಮಿಸಿದ್ದಾರೆ.

ತುಂಬು ಕಂಗಳ ಸಹಜ ಸುಂದರಿ
ಅಂಕಿತಾ ಅಮರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ ಹಾಗೂ ಗಾಯಕಿ. `ಪುಟ್ಟಗೌರಿ ಮದುವೆ' ಸೀರಿಯಲ್ ನಲ್ಲಿ ಚಿಕ್ಕ ಪಾತ್ರದಲ್ಲಿ ನಟಿಸಿದ್ದ ಅಂಕಿತಾ, ಕಲರ್ಸ್ ಕನ್ನಡದ `ನಮ್ಮನೆ ಯುವರಾಣಿ' ಸೀರಿಯಲ್ ಮೂಲಕ ಜನಮನ ಸೆಳೆದರು. ಕನ್ನಡದ `ಅಬ್ಬ ಜಬ್ಬ ದಬ್ಬ, ಜಸ್ಟ್ ಮ್ಯಾರೀಡ್, ಸತ್ಯ ಸನ್ ಆಫ್ ಹರಿಶ್ಚಂದ್ರ, ಇಬ್ಬನಿ ತಬ್ಬಿದ ಇಳೆಯಲಿ' ಚಿತ್ರಗಳಲ್ಲೂ ನಟಿಸಿದ್ದಾರೆ. ಕೆಲವು ಗೀತೆಗಳಿಗೂ ಧ್ವನಿಯಾಗಿರುವ ಅಂಕಿತಾ, ಶಾಸ್ತ್ರೀಯ ಸಂಗೀತ ಮತ್ತು ಭರತನಾಟ್ಯ ಕಲಾವಿದೆಯೂ ಹೌದು.





