ಸಿನಿಮಾ ಜಗತ್ತಿನ ಬಹುಮುಖಿ ಹಾಗೂ ಪ್ರಭಾವಶಾಲಿ ನಟಿ
``ಯಾವ ಕಲಾವಿದೆಯರ ಉದ್ದೇಶ ಕೇವಲ ತಮ್ಮ ಕಲಾಸೇವೆಯಿಂದ ಹೆಸರು ಗಳಿಸುವುದಷ್ಟೇ ಅಲ್ಲ, ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಬಯಸುತ್ತಾರೋ ಅಂಥವರಲ್ಲಿ ಪ್ರಮುಖರು!''
ಎಂಪವರ್ ಮೆಂಟ್ ಐಕಾನ್ ಅವಾರ್ಡ್ `ವಿದುರನ್ನಾ ಮೋಟ್ಟುಕ್' (1977) ಚಿತ್ರದಿಂದ ಒಬ್ಬ ಬಾಲಕಲಾವಿದೆಯಾಗಿ ತಮ್ಮ ಸಿನಿಮಾವೃತ್ತಿ ಆರಂಭಿಸಿದ ಕವಿತಾ ರಂಜಿನಿ, ನಂತರ ಊರ್ವಶಿಯಾಗಿ ನ್ಯಾಶನಲ್ ಅವಾರ್ಡ್ ವಿನ್ನರ್ ಆದುದಲ್ಲದೆ, ಮಲೆಯಾಳಂ ಚಿತ್ರರಂಗದ ಪ್ರಬುದ್ಧ ಪ್ರಸಿದ್ಧ ನಟಿಯಾಗಿ ಗುರುತಿಸಲ್ಪಟ್ಟಿದ್ದಾರೆ. ನಂತರ ಈಕೆ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲೂ ಗಣನೀಯ ಖ್ಯಾತಿ ಪಡೆದರು. ಊರ್ವಶಿ ಎಂಥ ಪಾತ್ರವನ್ನಾದರೂ ಸರಳ, ಸುಲಲಿತ ರೀತಿಯಲ್ಲಿ ನಿಭಾಯಿಸಬಲ್ಲಂಥ ನಟಿ. ಇವರ ನಟನೆಗೆ ಇಡೀ ದ. ಭಾರತ ಮಾರುಹೋಗಿದೆ!
ಒಬ್ಬ ಲೀಡ್ ಕಲಾವಿದೆಯ ಆರಂಭ
1980ರಲ್ಲಿ ಲೀಡ್ ನಟಿಯಾಗಿ ಹೊಮ್ಮಿಬಂದ ಊರ್ವಶಿ, ಮಲೆಯಾಳಂ ಚಿತ್ರಗಳಲ್ಲಿ ಮಹಾನ್ ಸಾಧನೆ ಮಾಡಿದಂಥ ನಟಿ. ಮುಂದೆ ದ. ಭಾರತದ ಚಿತ್ರಗಳಲ್ಲಿ ನಟಿಸುತ್ತಾ ಸುಮಾರು 700 ಚಿತ್ರ ದಾಟಿದ್ದಾರೆ. ತನ್ನ ಅಪ್ರತಿಮ ಕೆರಿಯರ್ ನಲ್ಲಿ 4 ದಶಕಗಳಿಗಿಂತಲೂ ಹೆಚ್ಚಾಗಿ ಸೇವೆ ಸಲ್ಲಿಸಿದ್ದಾರೆ. ತನ್ನ ಬಹುಮುಖ ಪ್ರತಿಭೆಗೆ ಈಕೆ ಹೆಸರುವಾಸಿ. ಗ್ಲಾಮರ್, ಕ್ಲಾಸಿಕ್ ಹೃದಯಸ್ಪರ್ಶಿ, ಕಾಮಿಡಿ ಪಾತ್ರಗಳಲ್ಲಿ ಎಲ್ಲದರಲ್ಲೂ ಇವರದು ಎತ್ತಿದ ಕೈ!
ಈಕೆ ಹುಟ್ಟಿದ್ದು ಕಲಾಸಂಪನ್ನ ಪರಿವಾರದಲ್ಲಿ. ಕಲೆ ಅಲ್ಲಿ ಎಲ್ಲರ ಉಸಿರು. ಥಿಯೇಟರ್ ಹಾಗೂ ಸಿನಿಮಾ ಎರಡರಲ್ಲೂ ದುಡಿಯುತ್ತಿದ್ದ ತಾಯಿತಂದೆಯರನ್ನು ಗಮನಿಸುತ್ತಾ ಬೆಳೆದ ಊರ್ವಶಿ, ತಮ್ಮ ಪರ್ಫಾರ್ಮೆನ್ಸ್ ನಿಂದ ಈಕೆ ಎಂಥದ್ದೇ ಪಾತ್ರವನ್ನಾದರೂ ಲೀಲಾಜಾಲವಾಗಿ ನಿಭಾಯಿಸಬಲ್ಲರು. ಇವರ ಈ ಪ್ರತಿಭೆ, ಕ್ರಿಯಾಶೀಲತೆ ಇಂದು ಈಕೆಯನ್ನು ದಕ್ಷಿಣದ ಒಬ್ಬ ಬಹುಮುಖಿ ಕಲಾವಿದೆಯಾಗಿ ಗುರುತಿಸಿದೆ.
ಯಶಸ್ಸು, ಕಮ್ ಬ್ಯಾಕ್, ನ್ಯಾಶನಲ್ ಅವಾರ್ಡ್`ಮರವಿಲ್ಕಾಡಿ (1989), ಗಾಡ್ ಫಾದರ್(1991), ಪಾರ್ವತಿ ಪರಿಣಯಂ (1995), ಅಚುವಿಂತೆ ಅಮ್ಮಾ (2005)' ಚಿತ್ರಗಳಲ್ಲಿ ಈಕೆ ಹಲವು ಟೀಕೆಗಳಿಗೆ ಗುರಿಯಾದದ್ದೂ ಇದೆ. ಆದರೆ ವ್ಯಾವಹಾರಿಕ ಯಶಸ್ಸು ಕೈಗೆಟುಕಿತ್ತು. ಒಂದು ಸಣ್ಣ ಗ್ಯಾಪ್ ನಂತರ ಈಕೆ ಒಂದು ಸ್ಮರಣೀಯ ಕಮ್ ಬ್ಯಾಕ್ ನೀಡಿದರು. `ಉಲ್ಲೋಝುಕ್ಕು' (2024) ಚಿತ್ರದಲ್ಲಿ ಈಕೆಯ ಲೀಲಮ್ಮನ ಪಾತ್ರದಿಂದ, ಆ ವರ್ಷದ ಸರ್ವಶ್ರೇಷ್ಠ ಪೋಷಕ ನಟಿಯಾಗಿ ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು. ಊರ್ವಶಿ ತಮ್ಮ ವಿಭಿನ್ನ, ವೈಚಾರಿಕ ಪಾತ್ರಗಳಿಂದ ಮಲೆಯಾಳಂ ಮಾತ್ರವಲ್ಲದೆ ದ. ಭಾರತದ ಸಿನಿರಂಗವನ್ನೇ ಪ್ರಬುದ್ಧಗೊಳಿಸಿದರು. ಸಶಕ್ತ ಸ್ತ್ರೀ ಪಾತ್ರಗಳಿಂದ ಗಟ್ಟಿಯಾಗಿ ಬೇರೂರಿದರು. ಈಕೆಯ ಪಾತ್ರಗಳು ಹಾಸ್ಯ, ಸಹಾನುಭೂತಿ ಗಿಟ್ಟಿಸಿದರೂ ಹೆಣ್ಣಿನ ಜೀವನದ ಹಲವು ಜಟಿಲ ಮುಖಗಳನ್ನು ಯಶಸ್ವಿಯಾಗಿ ತೋರಿಸಿಕೊಡುವಲ್ಲಿ ಗೆದ್ದಿದ್ದಾರೆ. ಹೀಗಾಗಿ ಎಲ್ಲರ ಪ್ರಿಯ ಐಕಾನ್ ಆಗಿದ್ದಾರೆ.
ಒಬ್ಬ ನಟಿಯಾಗಿ ಊರ್ವಶಿ ಹೆಂಗಸರಿಗೆ ಪ್ರೇರಣೆ ನೀಡುವಂಥ ಕೆಲಸ ಮಾಡುತ್ತಲೇ ಇದ್ದಾರೆ. ಸಿನಿಕ್ಷೇತ್ರ ಹೊರತುಪಡಿಸಿಯೂ ಒಬ್ಬ ಮಹಿಳೆ, ಕಲಾವಿದೆಯಾಗಿ, ಸಮಾಜದಲ್ಲಿ ಮಹಿಳೆಯರ ಧ್ವನಿಯನ್ನು ಪ್ರೋತ್ಸಾಹಿಸುತ್ತಾ ಪ್ರಭಾವಶಾಲಿ ಪಾತ್ರ ವಹಿಸುತ್ತಿದ್ದಾರೆ. ಈಕೆಯ ಈ ಪ್ರಯಾಸಗಳಿಂದ ಪ್ರಭಾವಿತಗೊಂಡ ಗೃಹಶೋಭಾ, ಈಕೆಗೆ ಎಂಪವರ್ ಮೆಂಟ್ ಐಕಾನ್ ಅವಾರ್ಡ್ ಇತ್ತು ಸನ್ಮಾನಿಸಿದೆ. ಊರ್ವಶಿ ಈ ಪ್ರಶಸ್ತಿಗೆ ಅಸಲಿ ಹಕ್ಕುದಾರರು. ಏಕೆಂದರೆ, ಯಾವ ಕಲಾವಿದೆಯರ ಉದ್ದೇಶ ಕೇವಲ ತಮ್ಮ ಕಲಾಸೇವೆಯಿಂದ ಹೆಸರು ಗಳಿಸುವುದಷ್ಟೇ ಅಲ್ಲ, ಸಮಾಜದಲ್ಲಿ ಒಂದು ಬದಲಾವಣೆ ತರಬೇಕೆಂದು ಬಯಸುತ್ತಾರೋ, ಅಂಥವರಲ್ಲಿ ಪ್ರಮುಖರಾಗಿ ಗುರುತಿಸಲ್ಪಡುತ್ತಾರೆ. ಇಂದು ಊರ್ವಶಿಯರ ಯಶಸ್ಸನ್ನು ಕಂಡು, ತಾವು ಏನನ್ನಾದರೂ ಸಾಧಿಸಲೇಬೇಕೆಂದು ಛಲ ತೊಡುವಂತಾಗಿದೆ. ಕಲಾಸೇವೆಯನ್ನು ಕೇವಲ ಷೋಕಿಗಾಗಿ ಅಷ್ಟೇ ಮೀಸಲಾಗಿರಿಸದೆ, ಏನನ್ನಾದರೂ ಸಾಧಿಸುವಂತೆ ತಮ್ಮ ಮಕ್ಕಳಿಗೆ ಹೇಳುವಂತಾಗಿದೆ. ಇಂಥ ಹೊಸ ನಟಿಯರಿಗೆಲ್ಲ ನಿಜ ಅರ್ಥದಲ್ಲಿ ಊರ್ವಶಿ ಒಬ್ಬ ಮಾದರಿ, ಮಾರ್ಗದರ್ಶಿ ಆಗಿದ್ದಾರೆ.





