ಚಳಿಗಾಲದಲ್ಲಿ ವ್ಯಾಕ್ಸಿಂಗ್ ಒಂದು ಅತ್ಯಗತ್ಯ ಸೌಂದರ್ಯ ಚಿಕಿತ್ಸೆ. ಇದು ಆಧುನಿಕ ತರುಣಿಯರ ಸೌಂದರ್ಯ, ಆರೋಗ್ಯಕ್ಕೆ ಏಕೆ ಅಗತ್ಯ ಎಂದು ತಿಳಿಯೋಣವೇ…..?
ಹೊಸ ವರ್ಷದ ಪಾರ್ಟಿಗಾಗಿ ಲಾಂಗ್ ಯಾ ಶಾರ್ಟ್ ಸ್ಲಿಟೆಡ್ ಸ್ಕರ್ಟ್ ನ ಜೊತೆ ಸ್ಟೈಲಿಶ್ ಲುಕ್ಸ್ ಹೊಂದಬೇಕೇ? ಆಗ ವ್ಯಾಕ್ಸಿಂಗ್ ಅತ್ಯಗತ್ಯ! ಇದು ಚರ್ಮದ ಆರೋಗ್ಯ, ಹೈಜೀನ್, ಕಾಂತಿಯುತವಾಗಿ ಹೊಳೆಯಲಿಕ್ಕೆ ಪೂರಕ. ಚಳಿಗಾಲದಲ್ಲಿ ವ್ಯಾಕ್ಸಿಂಗ್ ಎಂದರೆ ಹೆಣ್ಣುಮಕ್ಕಳು ತುಸು ಹಿಂಜರಿಯುತ್ತಾರೆ. ಬಹುತೇಕ ತರುಣಿಯರು, ಚಳಿಗಾಲದಲ್ಲಿ ಕೈಕಾಲುಗಳು ಸ್ವೆಟರ್ ಇತ್ಯಾದಿಗಳಿಂದ ಕವರ್ ಆಗಿರುತ್ತವೆ, ಹಾಗಿರುವಾಗ ವ್ಯಾಕ್ಸಿಂಗ್ ಏಕೆ? ಎನ್ನುತ್ತಾರೆ. ಇಷ್ಟು ಮಾತ್ರವಲ್ಲದೆ, ವ್ಯಾಕ್ಸಿಂಗ್ ಮಾಡಿಸುವಾಗ ಚಳಿ ಆಗಬಹುದು ಎಂಬ ಕಾರಣಕ್ಕೂ ಇದನ್ನು ಮಾಡಿಸುವುದಿಲ್ಲ. ಇದರಿಂದ ಕೈಕಾಲುಗಳ ಮೇಲೆ ಅನಗತ್ಯ ಕೂದಲು ಹೆಚ್ಚುತ್ತಾ ಹೋಗುತ್ತದೆ. ಈ ಕಾರಣ, ದೇಹದ ಮೇಲೆ ಹೆಚ್ಚಾಗಿ ಡಸ್ಟ್ ಜಮೆಗೊಳ್ಳುತ್ತದೆ. ಹೀಗಾಗಿ ಸಹಜವಾಗಿಯೇ ಚರ್ಮದ ಮೇಲೆ ಟ್ಯಾನಿಂಗ್ ಪದರ ಎದ್ದು ಕಾಣುವಂತಾಗುತ್ತದೆ.
ಹೀಗಾಗಿ ಈ ಚಳಿಗಾಲದಲ್ಲೂ ಸಹ ನಿಮ್ಮ ಚರ್ಮಕ್ಕೆ ಉತ್ತಮ ಸೌಂದರ್ಯ ಸಂವರ್ಧನೆ ನೀಡಲು ವ್ಯಾಕ್ಸಿಂಗ್ ಮಾಡಿಸಬೇಕಾದುದು ಅನಿವಾರ್ಯ.
ಚಳಿಗಾಲದಲ್ಲಿ ವ್ಯಾಕ್ಸಿಂಗ್ ಮಾಡಿಸದಿರಲು ಕ್ಷುಲ್ಲಕ ಕಾರಣಗಳು : ಚಳಿಗಾಲದ ಸಮಯದಲ್ಲಿ ತರುಣಿಯರು ಸಾಮಾನ್ಯವಾಗಿ ತಮ್ಮ ಮೇಲ್ದುಟಿ ಹಾಗೂ ಹಣೆಯ ಭಾಗದ ಅನಗತ್ಯ ಕೂದಲನ್ನು ನಿವಾರಿಸಲು ವ್ಯಾಕ್ಸಿಂಗ್ ಮಾಡಿಸುತ್ತಾರೆ. ಆದರೆ ಕೈಕಾಲುಗಳ ವಿಷಯಕ್ಕೆ ಬಂದಾಗ, ಚಳಿಗಾಲದ 2-3 ತಿಂಗಳು ತಮ್ಮ ಕೈಕಾಲುಗಳ ಭಾಗದ ಅನಗತ್ಯ ಕೂದಲನ್ನು ಬೆಳೆಯಲು ಬಿಟ್ಟು ನಿರ್ಲಕ್ಷಿಸುತ್ತಾರೆ. ಈ ಸಂದರ್ಭದಲ್ಲಿ ವ್ಯಾಕ್ಸಿಂಗ್ ಬೇಡ ಎಂದುಕೊಳ್ಳುತ್ತಾರೆ. ದೇಹದ ಯಾವ ಭಾಗ ಉಣ್ಣೆಯಿಂದ ಸಂಪೂರ್ಣ ಕವರ್ಡ್ ಆಗಿರುತ್ತದೋ, ಅದಕ್ಕೆ ವ್ಯಾಕ್ಸಿಂಗ್ ನ ಖರ್ಚು ಏಕೆ? ಎನ್ನುತ್ತಾರೆ. ಇದರಿಂದ ದೇಹಕ್ಕೆ ಹೆಚ್ಚು ಧೂಳಿನ ಜಮೆ ಆಗುತ್ತದೆ ಎಂಬುದರತ್ತ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ.
ಚಳಿಗಾಲದಲ್ಲಿ ವ್ಯಾಕ್ಸಿಂಗ್ ನಿಂದ ಆಗುವ ಲಾಭಗಳು?: ಚಳಿಗಾಲದ ಸಂದರ್ಭದಲ್ಲಿ ಎಲ್ಲಕ್ಕಿಂತಲೂ ಉತ್ತಮ ವಿಚಾರ ಎಂದರೆ, ಇದರಲ್ಲಿ ಬೇಸಿಗೆ ತರಹ ವ್ಯಾಕ್ಸ್ ಮಾಡಿಸುವಾಗ ಬೆವರುವಿಕೆಯ ಗೋಜಿಲ್ಲ. ಈ ಕಾರಣ, ವ್ಯಾಕ್ಸಿಂಗ್ ಮಾಡಿಸುವಾಗ ಚರ್ಮ ಅಂಟಂಟಾಗಿ ಆಗುವುದಿಲ್ಲ, ಆ ರೀತಿ ವ್ಯಾಕ್ಸಿಂಗ್ ಸುಲಲಿತವಾಗಿ, ಶೀಘ್ರ ನಡೆಯುತ್ತದೆ.
ರೆಗ್ಯುಲರ್ ಆಗಿ ವ್ಯಾಕ್ಸಿಂಗ್ ಮಾಡಿಸಿ : ರೆಗ್ಯುಲರ್ ಆಗಿ ವ್ಯಾಕ್ಸಿಂಗ್ ಮಾಡಿಸಬೇಕಾದುದು ಅತ್ಯಗತ್ಯ. ಇದರಿಂದ ನಿಮ್ಮ ಸ್ಕಿನ್ ಲೆಸ್ ಸೆನ್ಸಿಟಿವ್ ಆಗುತ್ತದೆ. ಹೀಗೆ ನಿಯಮಿತವಾಗಿ ವ್ಯಾಕ್ಸಿಂಗ್ ಮಾಡಿಸುವುದರಿಂದ, ಎಳೆಯಲ್ಪಡುವ ಕೂದಲಿನ ಭಾಗದಲ್ಲಿ, ಹೇರ್ ಫಾಲಿಕ್ ನ ಹಿಡಿತ, ಕಾಲ ಸರಿದಂತೆ ಲೂಸ್ ಆಗುತ್ತದೆ. ಇದರಿಂದಾಗಿ ಆ ಭಾಗದ ಕೂದಲ ನಿವಾರಣೆ ಅತಿ ಸುಲಭವಾಗುತ್ತದೆ.
ಮುಖ್ಯವಾಗಿ ಗಮನಹರಿಸಬೇಕಾದ ಸಂಗತಿಗಳು : ಚಳಿಗಾಲದಲ್ಲಿ ಮದುವೆ ಪಾರ್ಟಿ, ನ್ಯೂ ಇಯರ್ ಪಾರ್ಟಿ ಇತ್ಯಾದಿ ವಿಶೇಷ ಔತಣಗಳಿಗೆ ವ್ಯಾಕ್ಸಿಂಗ್ ಮಾಡಿಸದೆ ಕರಡಿಗಳಂತೆ ಹೋದರೆ ಏನು ಚೆನ್ನ? ಹೀಗಾಗಿ ಇಂಥ ಪಾರ್ಟಿಗಳಿಗೆ ಹೋಗುವ 2-3 ದಿನಗಳ ಹಿಂದೆಯೇ ವ್ಯಾಕ್ಸಿಂಗ್ ಮಾಡಿಸಿ. ಏಕೆಂದರೆ ಸೆನ್ಸಿಟಿವ್ ಸ್ಕಿನ್ ನವರಿಗೆ ವ್ಯಾಕ್ಸ್ ಮಾಡಿಸಿದ ನಂತರ, ಅವರ ಚರ್ಮದ ಮೇಲೆ ರೆಡ್ ರಾಶೆಸ್ ಆಗುತ್ತದೆ. ಇದು ನೋಡಲು ಅತಿ ಕೆಟ್ಟದಾಗಿರುತ್ತದೆ.
ಇಷ್ಟು ಮಾತ್ರವಲ್ಲದೆ, ಎಂದೂ ನೀವು ವ್ಯಾಯಾಮ ಮಾಡಿದ ತಕ್ಷಣ ವ್ಯಾಕ್ಸಿಂಗ್ ಮಾಡಿಸಬೇಡಿ. ಇಲ್ಲದಿದ್ದರೆ ಬೆವರುವಿಕೆಯಿಂದ ಇನ್ ಗ್ರೋಥ್ ಹೇರ್‌ಸ್ಕಿನ್ ನಡುವೆ ಇರಿಟೇಶನ್ ಹೆಚ್ಚುತ್ತದೆ.
ವ್ಯಾಕ್ಸ್ ಟ್ರೀಟ್ ಮೆಂಟ್ ಗೆ ಮೊದಲೇ ನಿಮ್ಮ ದೊಡ್ಡದೆನಿಸುವ ಅನಗತ್ಯ ಕೂದಲನ್ನು ಶೇವ್ ಯಾ ಪ್ಲಕಿಂಗ್ ನಿಂದ ನಿವಾರಿಸುವ ಯೋಚನೆ ಬಿಡಿ. ಏಕೆಂದರೆ ಅತಿ ಸಣ್ಣ ಹೇರ್ ರೂಟ್ಸ್ ನ್ನು ಈ ರೀತಿ ತೆಗೆಯಲಾಗದು. ವ್ಯಾಕ್ಸಿಂಗ್ ಗಾಗಿ ಹೇರ್ ಗ್ರೋಥ್‌ಇರಬೇಕಾದುದು ಅನಿವಾರ್ಯ. ಆಗ ಮಾತ್ರವೇ ಅದನ್ನು ಬುಡಸಮೇತ ತೆಗೆಸಬಹುದು.
ವ್ಯಾಕ್ಸಿಂಗ್ ಮಾಡಿಸುವ ಮೊದಲು, ಇದರಲ್ಲಿ ಎಷ್ಟು ವಿಧಗಳಿವೆ ಎಂದು ತಿಳಿದುಕೊಳ್ಳಿ. ಯಾವುದು ನಿಮ್ಮ ಚರ್ಮಕ್ಕೆ ಚೆನ್ನಾಗಿ ಸೂಟ್ ಆಗುತ್ತದೋ ನೋಡಿಕೊಳ್ಳಿ.
ವ್ಯಾಕ್ಸಿಂಗ್ ನಲ್ಲಿ ವೈವಿಧ್ಯತೆ : ಇದರಲ್ಲಿ ಮುಖ್ಯವಾಗಿ 2 ಬಗೆ ಇವೆ. ಹಾಟ್‌ಕೋಲ್ಡ್ ವ್ಯಾಕ್ಸ್. ಆದರೆ ಈಗ ಮಾರುಕಟ್ಟೆಯಲ್ಲಿ ನಿಮಗೆ ವ್ಯಾಕ್ಸಿಂಗ್ ನ ಧಾರಾಳ ಆಪ್ಶನ್ಸ್ ಲಭ್ಯ. ಮುಖ್ಯವಾಗಿ ಎರಡು ಪ್ರಧಾನ ವಿಧ ಅಂದರೆ, ಹೈಡ್ರೋಸೋಲುಬಿ ವ್ಯಾಕ್ಸ್ ಲಿಪೋಸೋಲುಬಿ ವ್ಯಾಕ್ಸ್.
ಹೈಡ್ರೋಸೋಲುಬಿ ವ್ಯಾಕ್ಸ್ : ಇದು ವಾಟರ್ ಬೇಸ್ಡ್ ವ್ಯಾಕ್ಸ್. ಇದರಲ್ಲಿ ಹನೀ ವ್ಯಾಕ್ಸ್, ಗ್ರೀನ್ ಆ್ಯಪಲ್ ವ್ಯಾಕ್ಸ್, ವೈಟ್ ಚಾಕಲೇಟ್ ವ್ಯಾಕ್ಸ್, ಆ್ಯಲೋವೇರಾ ವ್ಯಾಕ್ಸ್, ಡಾರ್ಕ್ ಚಾಕಲೇಟ್ ವ್ಯಾಕ್ಸ್, ಸ್ಟ್ರಾಬೆರಿ ವ್ಯಾಕ್ಸ್ ಇತ್ಯಾದಿ.
ಲಿಪೋಸೋಲುಬಿ ವ್ಯಾಕ್ಸ್ : ಇದು ಆಯಿಲ್ ಬೇಸ್ಡ್ ವ್ಯಾಕ್ಸ್ ಆಗಿದೆ. ಇದರಲ್ಲಿ ರೀಕಾ ವ್ಯಾಕ್ಸ್, ಬ್ರೆಝಿಲಿಯನ್ ವ್ಯಾಕ್ಸ್, ಬೀನ್ ವ್ಯಾಕ್ಸ್ ಇತ್ಯಾದಿ ಉಂಟು.
ಚಳಿಗಾಲದಲ್ಲಿ ಮುಖ್ಯವಾಗಿ ಮಾಡಿಸಬೇಕಾದ ವ್ಯಾಕ್ಸಿಂಗ್ : ಇದರಲ್ಲಿ ಮೊಟ್ಟ ಮೊದಲಿಗೆ ಡಾರ್ಕ್ ಚಾಕಲೇಟ್ ವ್ಯಾಕ್ಸ್ ಗೆ ಪ್ರಾಮುಖ್ಯತೆ ನೀಡಿ. ಇದರಲ್ಲಿ ಕೋಕೋ ಇರುವ ಕಾರಣ, ಚರ್ಮಕ್ಕೆ ಬಹಳ ಲಾಭವಿದೆ. ಇದರಲ್ಲಿ ಅಧಿಕವಾಗಿ ಆ್ಯಂಟಿಆಕ್ಸಿಡೆಂಟ್ಸ್ ಇರುತ್ತವೆ. ಇದರ ಆ್ಯಂಟಿ ಏಜಿಂಗ್ ಲಾಭ ಕಳೆದುಕೊಳ್ಳಬೇಡಿ. ಚಾಕಲೇಟ್ ನಿಂದ ಚರ್ಮ ಮೃದು, ಕೋಮಲವಾಗುತ್ತದೆ. ಕೋಕೋ ಬೀನ್ಸ್ ಸಹ ಆ್ಯಂಟಿ ಇನ್ ಫ್ಲಮೇಟರಿ ಆಗಿದ್ದು, ಚರ್ಮಕ್ಕೆ ಹೆಚ್ಚು ಲಾಭಕರ ಎನಿಸುತ್ತದೆ. ಹೀಗಾಗಿ ಈ ಬಗೆಯ ವ್ಯಾಕ್ಸಿಂಗ್ ಮಾಡಿಸುವುದರಿಂದ ಊತ ಆಗುವುದಿಲ್ಲ, ರೆಡ್ ನೆಸ್, ನೋವು ಸಹ ಎಷ್ಟೋ ಪಟ್ಟು ತಗ್ಗುತ್ತದೆ. ಇದನ್ನು ಒಮ್ಮೆ ಮಾಡಿಸಿದ ಮೇಲೆ, ಬಹಳ ದಿನ ಮತ್ತೆ ವ್ಯಾಕ್ಸಿಂಗ್ ನ ಗೋಜಿರುವುದಿಲ್ಲ.
ಈ ವ್ಯಾಕ್ಸ್ ಎಲ್ಲಾ ರೀತಿಯ ಚರ್ಮಕ್ಕೂ ಹೊಂದುತ್ತದೆ. ಇದರ ಒಂದು ವೈಶಿಷ್ಟ್ಯ ಎಂದರೆ, ಇದರಲ್ಲಿ ಚಾಕಲೇಟ್ ನ ಸುಗಂಧ ತುಂಬಿರುತ್ತದೆ. ಹೀಗಾಗಿ ವ್ಯಾಕ್ಸಿಂಗ್ ಮಾಡಲು, ಮಾಡಿಸಿಕೊಳ್ಳಲು ಹಿತಕರ ಅನಿಸುತ್ತದೆ. ಟ್ಯಾನಿಂಗ್ ತೊಲಗಿಸಲು ಇದು ಉತ್ತಮ ಆಯ್ಕೆ.
ರೀಕಾ ವ್ಯಾಕ್ಸ್ : ಇದನ್ನೇ ವೈಟ್ ಚಾಕಲೇಟ್ಸ್ ವ್ಯಾಕ್ಸ್ ಅಂತಲೂ ಕರೆಯುತ್ತಾರೆ. ಇದು ವೆಜಿಟೆಬಲ್ ಆಯಿಲ್ ಹಾಗೂ ಪ್ಲಾಂಟ್ ಬೇಸ್ಡ್ ಘಟಕಗಳಿಂದ ರೂಪುಗೊಂಡಿದೆ. ಸುಲಭವಾಗಿ ಇನ್ ಗ್ರೋಥ್ ಹೇರ್ ನ್ನೂ ತೊಲಗಿಸುತ್ತದೆ. ಇಷ್ಟು ಮಾತ್ರವಲ್ಲ, ಈ ರೀತಿ ಇನ್ ಗ್ರೋನ್ ಹೇರ್ ಮತ್ತೆ ಮೂಡದಂತೆ ತಡೆಯುತ್ತದೆ. ಜೊತೆಗೆ ಈ ಬಗೆಯ ವ್ಯಾಕ್ಸಿಂಗ್ ನಿಂದ ದೇಹದಿಂದ ಹೇರ್ ಜೊತೆ ಟ್ಯಾನಿಂಗ್ ನ್ನು ತೊಲಗಿಸಬಲ್ಲದು. ಇದನ್ನು ಮಾಡಿಸುವಾಗ ಚರ್ಮವನ್ನು ಟೈಟ್ ಆಗಿ ಹಿಡಿಯುತ್ತಾರೆ. ಆಗ ಸ್ಕಿನ್ ನಲ್ಲಿ ಯಾವುದೇ ಸ್ಯಾಗಿಂಗ್ ಆಗೋಲ್ಲ. ಇದು ಒಂದು ಬಗೆಯಲ್ಲಿ ಮೆಕ್ಯಾನಿಕ್ ಎಕ್ಸ್ ಫಾಲಿಯೆಂಟ್ ಆಗಿಯೂ ಕೆಲಸ ಮಾಡುತ್ತದೆ. ಈ ವ್ಯಾಕ್ಸ್ ನಿಂದ ಕೂದಲು ತೊಲಗುವುದಲ್ಲದೆ, ಎಕ್ಸ್ ಫಾಲಿಯೇಟ್ ಮಾಡಿ ಡೆಡ್ ಸೆಲ್ಸ್ ನ್ನೂ ತೊಲಗಿಸುತ್ತದೆ. ಇದರಿಂದ ಸ್ಕಿನ್ ಯಂಗ್‌ಗ್ಲೋ ಆಗುತ್ತದೆ.
– ಪ್ರತಿನಿಧಿ





