ಹೊಸ ವರ್ಷದಲ್ಲಿ ನಿಮ್ಮ ಲುಕ್ಸ್ ನ್ನು ಟ್ರೆಂಡಿ ಆಗಿಸ ಬಯಸುವಿರಾ? ಹಾಗಾದರೆ ಇಲ್ಲಿನ ಫ್ಯಾಷನ್ಟ್ರೆಂಡ್ಸ್ ಸ್ಟೈಲಿಂಗ್ಟಿಪ್ಸ್ ಅನುಸರಿಸಿ…..

ಇಂದಿನ ಆಧುನಿಕ ಜನರೇಶನ್‌ ಅಂದ್ರೆ ಫ್ಯಾಷನ್‌ ಸೆನ್ಸ್, ಕಂಫರ್ಟ್‌, ಕ್ಲಾಸಿ ಟ್ರೆಂಡಿಗಳ ಪರ್ಫೆಕ್ಟ್ ಸಂಮಿಶ್ರಣ. ಈ ಪೀಳಿಗೆ ಆಧುನಿಕ ಫ್ಯಾಷನ್‌ ನ್ನು ಹೊಸ ದೃಷ್ಟಿಯಿಂದ ನೋಡುತ್ತದೆ. ದೈನಂದಿನ ಔಟ್‌ ಫಿಟ್ಸ್ ನಲ್ಲಿ ಒಂದೊಂದು ಸ್ಟೇಟ್‌ ಮೆಂಟ್ ಕೂಡಿಸಿಕೊಳ್ಳುತ್ತಾ ಹೋಗುತ್ತದೆ. ನೀವು ಸಹ ಇವರಂತೆಯೇ ನಿಮ್ಮ ಲುಕ್ಸ್ ನ್ನು ಟ್ರೆಂಡಿ ಆಗಿಸಿಕೊಳ್ಳಲು ಬಯಸಿದರೆ, ಇವರುಗಳ ಅಚ್ಚುಮೆಚ್ಚಿನ ಫ್ಯಾಷನ್‌ ಟ್ರೆಂಡ್ಸ್ ಸ್ಟೈಲಿಂಗ್‌ ಟಿಪ್ಸ್ ಫಾಲೋ ಮಾಡಿ :

ಲಾಂಗ್ಸಾಕ್ಸ್ ಜೊತೆ ಕೂಲ್ ಲುಕ್ಸ್ : ಮಿಲೇನಿಯಲ್ ಜನರೇಶನ್ನಿನ ಜನ, ಈಗಲೂ ಸಹ ಜಿಮ್ ನ ಸ್ಪೋರ್ಟ್ಸ್ ಶೂಸ್‌ ಇರಲಿ ಯಾ ಆಫೀಸ್‌ ಲಾಫರ್ಸ್‌, ಅವನ್ನು ಮಂಡಿಯವರೆಗಿನ ಸಾಕ್ಸ್ ಜೊತೆ ಮಾತ್ರವೇ ಧರಿಸ ಬಯಸುತ್ತಾರೆ. ಆದರೆ ಜೆನ್‌ಈ ಟ್ರೆಂಡ್ ನ್ನು ಬಹಳ ವಿರೋಧಿಸುತ್ತಾರೆ. ಮಂಡಿಯವರೆಗಿನ ಈ ಲಾಂಗ್‌ ಸಾಕ್ಸ್ ಜೆನ್‌ ನವರ ಫೇವರಿಟ್‌ ಆ್ಯಕ್ಸೆಸರೀಸ್‌ ಗಳಲ್ಲಿ ಒಂದು. ಇದು ಸ್ಟೈಲಿಶ್‌ ಕಂಫರ್ಟೆಬಲ್ ಎರಡೂ ಹೌದು. ಜಿಮ್ ನ ಲೆಗ್ಗಿಂಗ್ಸ್ ಇರಲಿ ಯಾ ಆಫೀಸಿನ ಫಾರ್ಮ್‌ ಔಟ್‌ ಫಿಟ್ಸ್, ಈ ಪೀಳಿಗೆ ಲಾಂಗ್‌ ಸಾಕ್ಸ್ ನ್ನೇ ಆರಿಸುತ್ತದೆ. ನೀವು ಈ ಸಾಕ್ಸ್ ನ್ನು ಓವರ್‌ ಸೈಡ್‌ ಹುಡೀ ಯಾ ಟೀಶರ್ಟ್‌ ಡ್ರೆಸ್‌ ನ ಜೊತೆ ಯಾ ಕಲರ್‌ ಫುಲ್ ಪ್ರಿಂಟೆಡ್‌ ಸಾಕ್ಸ್ ನ್ನು ಮಿನಿ ಸ್ಕರ್ಟ್ಸ್ ಶಾರ್ಟ್ಸ್ ಜೊತೆ ಸ್ಟೈಲಿಶ್‌ ಗ್ಲಾಮರಸ್‌ ಆಗಿ ಧರಿಸಬಹುದು.

ಮಾಮ್ ಜೀನ್ಸ್ ರೆಟ್ರೋ ವೈಬ್‌ : ಜೆನ್‌ಗೆ ಮಾಮ್ ಜೀನ್ಸ್ ನ ಕ್ರೇಜ್‌ ತುಸು ಹೆಚ್ಚೆಂದೇ ಹೇಳಬಹುದು. ಇದು ಕೇವಲ ಕಂಫರ್ಟೆಬಲ್ ಮಾತ್ರವಲ್ಲ, ಬದಲಿಗೆ ರೆಟ್ರೋ ವೈಬ್ಸ್ ನ್ನೂ ನೀಡುತ್ತದೆ. ನೀವು ಇದನ್ನು ಕ್ರಾಪ್‌ ಟಾಪ್‌ ಯಾ ಬ್ರಿಲಾಟ್‌ ಜೊತೆ ಸ್ಟೈಲ್ ‌ಮಾಡಬಹುದು. ಈ ಹೈ ವೆಯ್ಸ್ಟ್ ಜೀನ್ಸ್ ನ್ನು ಟಕ್‌ ಇನ್‌ ಶರ್ಟ್‌ ಜೊತೆ ಧರಿಸಿ ಸ್ಟೈಲಿಶ್‌ ಲುಕ್‌ ಪಡೆಯಬಹುದು. ಇದಕ್ಕೆ ನೀವು ಮತ್ತಷ್ಟು ಎಲಿಗೆನ್ಸ್ ಆ್ಯಡ್‌ ಮಾಡಲು ವೈಟ್‌ ಸ್ನೀಕರ್ಸ್‌ ಮಿನಿಮಮ್ ಜ್ಯೂವೆಲರಿ ಜೊತೆ ಧರಿಸಬಹುದು.

ಬಾಯ್ಫ್ರೆಂಡ್ಜೀನ್ಸ್ ರಿಲ್ಯಾಸ್ಕ್ಡ್ ಸ್ಟೈಲ್ ‌: ಬಾಯ್‌ ಫ್ರೆಂಡ್‌ ಜೀನ್ಸ್ ನ ಬ್ಯಾಗಿ ಗಿಫ್ಟ್ ಕಂಫರ್ಟ್‌, ಇದನ್ನು ಜೆನ್‌ನವರ ಅಚ್ಚುಮೆಚ್ಚಿನ ಕ್ಯಾಶ್ಯುಯೆಲ್ ಚಾಯ್ಸ್ ಆಗಿಸಿದೆ. ಇದರ ಜೊತೆ ಫಿಟೆಡ್‌ ಟೀ ಶರ್ಟ್‌ ಯಾ ಬಾಡಿಸೂಟ್‌ ನ ಕಾಂಟ್ರಾಸ್ಟ್ ಲುಕ್‌ ಟ್ರೈ ಮಾಡಬಹುದು. ಇದರಲ್ಲಿ ನೀವು ಲೇಯರಿಂಗ್‌ ಗಾಗಿ ಡೆನಿಮ್ ಜ್ಯಾಕೆಟ್‌ ಯಾ ಪ್ಲಾನೆಲ್ ‌ಶರ್ಟ್‌ ಸಹ ಬಳಸಬಹುದು. ಇದರ ಜೊತೆಗೆ ಹೀಲ್ಸ್ ಯಾ ಸ್ಲೈಡರ್ಸ್‌ ಸೇರಿಸಿ ಗ್ಲಾಮರಸ್‌ ಟಚ್‌ ಕೊಡಿ.

ಮಾನೋಕ್ರೋಮ್ ಲುಕ್ಸ್ ಕ್ಲಾಸೀ ಸಟ್ಡ್‌ : ಇಂಥ ಕಾಂಬಿನೇಶನ್‌ ಗಳನ್ನು ಆರಿಸುವುದು ಈ ಪೀಳಿಗೆಯ ಕ್ಲಾಸಿಕ್‌ ಟ್ರೆಂಡ್ಸ್ ಗಳಲ್ಲಿ ಒಂದು. ಇದರಲ್ಲಿ ನಿಮ್ಮ ಬಳಿ ಬಣ್ಣಗಳಿಗೆ ಲಿಮಿಟೇಶನ್‌ ಇಲ್ಲ. ನೀವು ಪಿಂಕ್‌, ಪರ್ಪಲ್, ಗ್ರೀನ್‌, ಬ್ಲೂ, ಪಿಸ್ತಾ ಇತ್ಯಾದಿ ವಿಭಿನ್ನ ಶೇಡ್ಸ್ ನ್ನು ಒಟ್ಟೊಟ್ಟಿಗೆ ಸ್ಟೈಲ್ ‌ಮಾಡಬಹುದು. ಒಂದು ಸಲಕ್ಕೆ ಒಂದೇ ಬಣ್ಣ ಆರಿಸಬೇಕು ಎಂದು ನೆನಪಿಡಿ. ಇಯರಿಂಗ್ಸ್ ನಿಂದ ಹಿಡಿದು ಟಾಪ್‌, ಜ್ಯಾಕೆಟ್‌, ಶೂಸ್‌, ಪರ್ಸ್‌ ಎಲ್ಲವೂ ಅದೇ ಬಣ್ಣದ್ದಾಗಿರಲಿ. ಕಪ್ಪು, ಬಿಳಿ, ಬೇಜ್‌ ಯಾ ಗ್ರೇ ಬಣ್ಣದ ಬೇಸಿಕ್ ಬಣ್ಣಗಳಲ್ಲಿ ಮಾನೋಕ್ರೋಮ್ ಲುಕ್ಸ್ ನ್ನು ನಿಮ್ಮದಾಗಿಸಿಕೊಳ್ಳಲು, ನೀವು ವಿವಿಧ ಟೆಕ್ಸ್ ಚರ್‌ ಆ್ಯಡ್‌ ಮಾಡಿ, ನಿಮ್ಮ ಲುಕ್ಸ್ ಗೆ ಗ್ಲಾಮರಸ್‌ ಟಚ್‌ ನೀಡಬಹುದು.

ಜೆನ್ನವರ ಪಂಚಪ್ರಾಣ ಅಂದ್ರೆ ನ್ಯೂಟ್ರಲ್ ಕಲರ್ಸ್‌ : ಜೆನ್‌ ನವರ ಫ್ಯಾಷನ್ನಿನಲ್ಲಿ ನ್ಯೂಟ್ರಲ್ ಕಲರ್ಸ್‌ ಆದ ಬೇಜ್‌, ಟ್ಯಾನ್‌, ಆಲಿವ್‌ ಗ್ರೀನ್‌, ಗ್ರೇ ಇತ್ಯಾದಿಗಳಿಗೆ ವಿಶೇಷ ಮಹತ್ವವಿದೆ. ನ್ಯೂಟ್ರಲ್ ಕಲರ್‌ ಟಾಪ್ಸ್ ನ್ನು ಬ್ರೈಟ್‌ ಬಾಟಂ ಜೊತೆ ಧರಿಸುವುದು ಯಾ ನ್ಯೂಟ್ರಲ್ ಸ್ಕರ್ಟ್ಸ್ ಶಾರ್ಟ್ಸ್ ನ್ನು ಕ್ರಾಪ್‌ ಟಾಪ್ಸ್ ಜೊತೆ ಮ್ಯಾಚ್‌ ಮಾಡಿ, ಸ್ಟೈಲಿಶ್‌ ಕಂಫಿ ಲುಕ್ಸ್ ಕ್ರಿಯೇಟ್‌ ಮಾಡಬಹುದು. ಈ ಎಲ್ಲಾ ಲುಕ್ಸ್ ನ್ನೂ ಮಾಡರ್ನ್‌ ಆಗಿಸಲು ನ್ಯೂಟ್ರಲ್ ಬ್ಲೇಝರ್‌ಮಿನಿಮಮ್ ಜ್ಯೂವೆಲರಿ ಬಳಸಿಕೊಳ್ಳಿ.

ಲಾಂಗ್ಲೆಂತ್‌  ಔಟ್ಫಿಟ್ಸ್ ಜೆನ್ನವರ ಸ್ಟೈಲ್ ಸ್ಟೇಟ್ಮೆಂಟ್‌ : ಲಾಂಗ್‌ ಲೆಂತ್‌ ಓವರ್‌ ಸೈಸ್ಡ್ ಜ್ಯಾಕೆಟ್ಸ್, ಟ್ರೆಂಚ್‌ ಕೋಟ್‌, ಶಾಕೆಟ್ಸ್, ಓವರ್‌ ಸೈಸ್ಡ್ ಹುಡೀ ಹಾಗೂ ಡ್ರೆಸೆಸ್‌ ಜೆನ್‌ ನವರ ವಾರ್ಡ್‌ ರೋಬ್‌ ನಲ್ಲಿ ಅನಿವಾರ್ಯ. ಇವರುಗಳ ಸ್ಟೈಲ್ ‌ಮೋಟೋ ಅಂದ್ರೆ `ಫ್ಲರ್ಟ್‌ ವಿತ್‌ ಸ್ಟೈಲ್‌!’ ಹೀಗಾಗಿ ಲಾಂಗ್‌ ಲೆಂತ್‌ ನ ಓವರ್‌ ಸೈಸ್ಡ್ ಔಟ್‌ ಫಿಟ್ಸ್ ಜೆನ್‌ ನವರಿಗೆ ಬಹಳ ಇಷ್ಟ. ನೀವು ಇಂಥ ಓವರ್‌ ಸೈಸ್ಡ್ ಜ್ಯಾಕೆಟ್ಸ್ ನ್ನು ಕ್ರಾಪ್‌ ಟಾಪ್‌ ಹೈ ವೆಯ್ಸ್ಟ್ ಜೀನ್ಸ್ ಜೊತೆ, ಟ್ರೆಂಚ್‌ ಕೋಟ್‌ ನ್ನು ಸಿಂಕ್‌ ಬ್ಲ್ಯಾಕ್‌ ಡ್ರೆಸ್ ಜೊತೆ ವೈಡ್‌ ಲೆಗ್‌ ಪ್ಯಾಂಟ್ಸ್, ಟರ್ಟಲ್ ನೆಕ್‌ ಜೊತೆ ಧರಿಸಬಹುದು. ಲಾಂಗ್‌ ಡ್ರೆಸ್‌ ನ್ನು ಸ್ನೀಕರ್ಸ್‌ ಬೋಲ್ಡ್ ಬೆಲ್ಟ್ ಜೊತೆ ಆ್ಯಕ್ಸೆಸರೀಸ್‌ ತರಹ ಧರಿಸಿರಿ. ಓವರ್‌ ಸೈಸ್ಡ್  ಲಾಂಗ್‌ ಕಾರ್ಡಿಗನ್‌ ನ್ನು ಕ್ರಾಪ್‌ ಟಾಪ್‌ ಮಾಮ್ ಜೀನ್ಸ್ ಜೊತೆ ಧರಿಸಿರಿ.

ಜೆನ್ನವರಿಂದ ಪ್ರೇರಿತ ಫ್ಯಾಶನ್ನಿನ ಲಾಭಗಳು : ಇವರುಗಳಿಂದ ಪ್ರಭಾವಿತ ಫ್ಯಾಷನ್‌ ನ್ನು ಫಾಲೋ ಮಾಡುವುದರಿಂದ ಹೆಚ್ಚಿನ ಲಾಭಗಳಿವೆ. ಇದು ಜನರೇಶನ್‌ ಸ್ಟೈಲ್ ಜೊತೆ ಬಜೆಟ್‌ ನ್ನು ಸಹ ಮ್ಯಾನೇಜ್‌ ಮಾಡುತ್ತದೆ. ಇದರ ಲುಕ್ಸ್ ನಲ್ಲಿ ನಿಮಗೆ ಕಂಫರ್ಟಬಲ್ ಸ್ಟೈಲ್ ನ ಬ್ಯಾಲೆನ್ಸ್ ಸಿಗುತ್ತದೆ. ಈ ಪೀಳಿಗೆ ಮಿನಿಮಲಿಸಮ್ ಗೆ ಹೆಚ್ಚಿನ ಮಹತ್ವ ನೀಡಿ ಪ್ರೊಮೋಟ್‌ ಮಾಡುತ್ತದೆ. ಕಡಿಮೆ ವಸ್ತು ಬಳಸಿ, ಹೀಗೆ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ನಿರೂಪಿಸುತ್ತದೆ. ಈ ಮೂಲಕ ಲೇಟೆಸ್ಟ್ ಸ್ಟೈಲ್ ‌ನ್ನು ನಿಮ್ಮದಾಗಿಸಿಕೊಂಡು, ಅದರತ್ತ ಹೆಚ್ಚು ಫೋಕಸ್‌ ಮಾಡಬಹುದು.

ಜೆನ್‌ನವರ ಮತ್ತೊಂದು ವೈಶಿಷ್ಟ್ಯ ಎಂದರೆ, ಇವರು ಕೇವಲ ದೊಡ್ಡ ದೊಡ್ಡ ದುಬಾರಿ ಬ್ರಾಂಡ್ಸ್ ನ್ನು ಮಾತ್ರ ತಮ್ಮ ವಾರ್ಡ್‌ ರೋಬ್‌ ಗೆ ತುಂಬಿಸುತ್ತಾರೆ ಅಂತೇನಲ್ಲ, ಬದಲಿಗೆ ಸಸ್ಟೇನೆಬಲ್ ಫ್ಯಾಷನ್‌ ನತ್ತಲೂ ಫೋಕಸ್‌ ಮಾಡುತ್ತಾರೆ. ಈ ಪೀಳಿಗೆ ಥ್ರಿಫ್ಟ್ ಶಾಪಿಂಗ್‌ ರೀಸೈಕ್ಲಿಂಗ್‌ ಗೆ ಹೆಚ್ಚಿನ ಮಹತ್ವ ನೀಡುತ್ತದೆ. ನೀವು ಹೇಗೆ ಬೆಟರ್‌ ಥ್ರಿಫ್ಟ್ ಶಾಫಿಂಗ್‌ ಮಾಡಬಹುದು, ಇದನ್ನೂ ತಿಳಿಯಬಹುದು. ಇವರುಗಳ ಸ್ಟೈಲಿಂಗ್‌ ನಲ್ಲಿ ಮತ್ತೊಂದು ಪ್ಲಸ್‌ ಪಾಯಿಂಟ್‌ ಎಂದರೆ, ಅವರು ಕೇವಲ ಟ್ರೆಂಡ್ಸ್ ನ್ನು ಫಾಲೋ ಮಾಡುವುದಿಲ್ಲ, ಬದಲಿಗೆ ಅದನ್ನು ತಮ್ಮ ಬಾಡಿ ಶೇಪ್‌ ಪರ್ಸನಾಲಿಟಿಗೆ ತಕ್ಕಂತೆ ಬದಲಾಯಿಸುತ್ತಿರುತ್ತಾರೆ.

ಇವರುಗಳಿಂದ ಪ್ರೇರಣೆ ಪಡೆದು, ನೀವು ನಿಮ್ಮ ಫ್ಯಾಷನ್‌ ನ್ನು ಮಾಡರ್ನ್‌ ಜೊತೆ ಕಂಫರ್ಟೆಬಲ್ ಸ್ಟೈಲಿಶ್‌ ಸಹ ಮಾಡಿಕೊಳ್ಳಬಹುದು. ಇವರುಗಳ ಟಿಪ್ಸ್ ಅನುಸರಿಸುತ್ತಾ, ನೀವು ನಿಮ್ಮ ದೈನಂದಿನ ಔಟ್‌ ಫಿಟ್ಸ್ ನಲ್ಲಿ ಒಂದು ಫ್ರೆಶ್‌ ಟ್ರೆಂಡಿ ಟಚ್‌ತರಬಹುದು.

ಹಾಗಿರುವಾಗ ಇನ್ನು ತಡವೇಕೆ? ನಿಮ್ಮ ವಾರ್ಡ್‌ ರೋಬ್‌ ನ್ನು ಜೆನ್  ನವರ ಸ್ಟೈಲ್ ‌ಪ್ರಕಾರ ಅಪ್‌ ಡೇಟ್‌ ಮಾಡಿಕೊಳ್ಳಿ, ಪ್ರತಿದಿನ ಒಂದು ಹೊಸ ಲುಕ್‌ ಟ್ರೈ ಮಾಡಿ.

ಆರ್‌. ಸುಮನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ