ವಿಂಟರ್ ಸೀಸನ್ ನಲ್ಲಿ ಸ್ಕಿನ್ ನ್ನು ಹೆಚ್ಚು ಹೈಡ್ರೇಟೆಡ್ ಗ್ಲೋಯಿಂಗ್ ಆಗಿರಿಸಿಕೊಳ್ಳಲು ಏನೇನು ಮಾಡಬೇಕು ಎಂದು ಒಮ್ಮೆ ವಿಚಾರಿಸಿ ನೋಡಿ……
ನೀವು ಈ ವಿಂಟರ್ ಸೀಸನ್ ನಲ್ಲಿ ಬಿಸಿ ಬಿಸಿಯಾದ ನೀರಲ್ಲಿ ಬಹಳ ಹೊತ್ತು ಸ್ನಾನ ಮಾಡಿದರೆ, ಅದರಿಂದ ಲಾಭ ಆಗುವುದಕ್ಕಿಂತ ಹಾನಿಯೇ ಹೆಚ್ಚು. ಏಕೆಂದರೆ ಹಾಗೆ ಮಾಡುವುದರಿಂದ ದೇಹದ ನೈಸರ್ಗಿಕ ತೈಲಾಂಶ ತಂತಾನೇ ಹೋಗಿಬಿಡುತ್ತದೆ. ಈ ತೈಲಾಂಶ ಇದ್ದರೆ ಮಾತ್ರ ನೀವು ಸದಾ ಮಾಯಿಶ್ಚರೈಸ್ಡ್ ಆಗಿ ಸುರಕ್ಷಿತವಾಗಿರಬಲ್ಲಿರಿ. ಈ ಕಾಲದಲ್ಲಿ ನಿಮ್ಮ ಚರ್ಮವನ್ನು ಹೈಡ್ರೇಟೆಡ್‌ಗ್ಲೊಯಿಂಗ್ ಆಗಿರಿಸಲು, ಸರಿಯಾದ ಕ್ರಮದಿಂದ, ನಿಮ್ಮ ಸ್ನಾನದ ಪ್ರಾಡಕ್ಟ್ಸ್ ನ್ನು ನಿಮ್ಮ ದೇಹದ ಮೇಲೆ ಪದರವಾಗಿ ಪೇರಿಸಲು ಮರೆಯದಿರಿ.
ಹೈಡ್ರೇಟಿಂಗ್ ಶವರ್ ಜೆಲ್ : ವಿಂಟರ್ ಲ್ಲಿ ಸ್ನಾನ ಮಾಡಲು ಗ್ಲಿಸರಿನ್, ಶಿಯಾ ಬಟರ್ ಯಾ ನ್ಯಾಚುರಲ್ ಎಸೆನ್ಶಿಯಲ್ ಆಯಿಲ್ಸ್, ಮಾಯಿಶ್ಚರೈಸಿಂಗ್ ಗುಣಗಳು ಅಡಗಿರುವಂಥ ಶವರ್ ಜೆಲ್ ನ್ನೇ ಆರಿಸಿ. ಇದು ನಿಮಗೆ ಹೆಚ್ಚು ಆರ್ದ್ರತೆ ಒದಗಿಸುವುದಲ್ಲದೆ, ಸುಖಾನುಭೂತಿಯ ಸುವಾಸನೆಯಿಂದ ನಿಮಗೆ ಹಿತಕರ, ತಾಜಾತನದ ಅನುಭವ ತುಂಬುತ್ತದೆ. ಇದರಲ್ಲಿ 97% ನ್ಯಾಚುರಲ್ ಎಲಿಮೆಂಟ್ಸ್ ಸ್ಕಿನ್ ಕಂಡೀಶನರ್ ಗಳು ಲಭ್ಯ. ಇದು ನಿಮ್ಮ ಚರ್ಮವನ್ನು ಸಾಫ್ಟ್, ಸ್ಮೂತ್‌ಬ್ಯೂಟಿಫುಲಿ ನರಿಶ್ಡ್ ಆಗಿರಿಸುತ್ತದೆ.
ಉಗುರು ಬೆಚ್ಚಗಿನ ನೀರಿನಿಂದ ಸ್ನಾನ ಆರಂಭಿಸಿ : ವಿಂಟರ್ ಮುಂಜಾನೆಗಳಲ್ಲಿ ನಿಮ್ಮ ದೇಹವನ್ನು ಸ್ವಚ್ಛ, ಶುಭ್ರವಾಗಿರಿಸಲು, ಸದಾ ಉಗುರು ಬೆಚ್ಚಗಿನ ನೀರಿನಿಂದಲೇ ಸ್ನಾನ ಮಾಡಿ, ಕುದಿವ ನೀರು ಬೇಡ. ಆಗ ಮಾತ್ರವೇ ನಿಮ್ಮ ದೇಹದ ನ್ಯಾಚುರಲ್ ಮಾಯಿಶ್ಚರ್ ಸ್ಥಿರವಾಗಿರಲು ಸಾಧ್ಯ. ಚಳಿಗಾಲದಲ್ಲಿ ತುಸು ಹೆಚ್ಚೇ ಬಿಸಿ ನೀರು ಬೇಕೆನಿಸಿದರೂ, ಅದು ನಿಮ್ಮ ಸ್ಕಿನ್ ನ್ನು ಡ್ರೈ ಮಾಡಿಬಿಡುವುದರಿಂದ, ಎಚ್ಚರ! ಉಗುರ ಬೆಚ್ಚಗಿನ ನೀರನ್ನೇ ಬಳಸುವುದರಿಂದ, ನಿಮ್ಮ ಚರ್ಮದ ಆರ್ದ್ರತೆ ಸುರಕ್ಷಿತವಾಗಿರುತ್ತದೆ. ಶವರ್ ಜೆಲ್ ಯಾ ಬಾಡಿವಾಶ್ ನಲ್ಲಿರುವಂಥ ಪೌಷ್ಟಿಕಾಂಶಗಳು, ಇದನ್ನು ಉತ್ತಮ ರೀತಿಯಲ್ಲಿ ಚರ್ಮದಲ್ಲಿ ವಿಲೀನಗೊಳ್ಳಲು ಸಹಕರಿಸುತ್ತವೆ.
ಥಿಕ್ ಬಾಡಿ ಲೋಶನ್ ಯಾ ಕ್ರೀಂ : ಉಗುರು ಬೆಚ್ಚಗಿನ ನೀರಲ್ಲಿ ಸ್ನಾನ ಮಾಡಿದ ತಕ್ಷಣ, ಇಡೀ ದೇಹವನ್ನು ಮೃದುವಾದ ಟವೆಲ್ ನಿಂದ ಚೆನ್ನಾಗಿ ಒರೆಸಿ ಡ್ರೈ ಮಾಡಿ. ನಂತರ ಅದಕ್ಕೆ ಥಿಕ್ ಬಾಡಿ ಲೋಶನ್ ಯಾ ಕ್ರೀಂನಿಂದ ಅದರ ಆರ್ದ್ರತೆ ಸೀಲ್ ಮಾಡಿಬಿಡಿ. ಹ್ಯಾಲುರೋನಿಕ್ ಆ್ಯಸಿಡ್, ಕೋಕೋ ಬಟರ್, ಸೆರಮೈಡ್ಸ್, ಶಿಯಾ ಬಟರ್ ತುಂಬಿರುವಂಥ ಲೋಶನ್ ಮಾತ್ರ ಆರಿಸಿ. ಈ ಅಂಶಗಳು ದೇಹದ ಆರ್ದ್ರತೆ ಕಾಪಾಡುವಲ್ಲಿ ಮುಂದು.
ಮಿಸ್ಟ್ ನಿಂದ ಫೈನಲ್ ಟಚ್ ನೀಡಿ : ಹೀಗೆ ಸ್ನಾನ ಆದ ನಂತರದ ಪ್ರಕ್ರಿಯೆಗಳನ್ನು ವಿಶಿಷ್ಟ ಆಗಿಸಲು, ಒಂದು ಹೈಡ್ರೇಟಿಂಗ್ ಬಾಡಿ ಮಿಸ್ಟ್ ನ್ನು ನಿಮ್ಮ ದೇಹವಿಡೀ ಲೈಟ್ ಆಗಿ ಸ್ಪ್ರೇ ಮಾಡಿ. ಇದರಿಂದ ನಿಮ್ಮ ದೇಹಕ್ಕೆ ಲೈಟ್ ಹೈಡ್ರೇಶನ್ ಜೊತೆಗೆ ಘಮಘಮಿಸುವ ಪರಿಮಳವನ್ನೂ ಒದಗಿಸುತ್ತದೆ. ಇದು ನಿಮ್ಮ ದಿನವಿಡಿಯ ಫ್ರೆಶ್ ನೆಸ್ ಕಾಪಾಡಿಕೊಳ್ಳುವಲ್ಲಿಯೂ ಪರ್ಫೆಕ್ಟ್ ಆಯ್ಕೆ ಎನಿಸುತ್ತದೆ. ಇದು ನಿಮ್ಮ ದೇಹ ಸೌಂದರ್ಯ ರಕ್ಷಿಸುವ ರೊಟೀನ್ ನಲ್ಲಿ ತಾಜಾತನದ ಸ್ಪರ್ಶ ನೀಡುತ್ತದೆ. ಇದರಿಂದ ಇಡೀ ದಿನ ನಿಮ್ಮ ದೇಹ ಸಾಫ್ಟ್, ಸ್ಮೂತ್‌ರೀಫ್ರೆಶಿಂಗ್ ಆಗಿರುತ್ತದೆ. ಹೀಗೆ ವಿಂಟರ್ ನಲ್ಲಿ ಸ್ನಾನದ ನಂತರ ನಿಮ್ಮ ದೇಹವನ್ನು ಲೇಯರ್ಡ್ ಮಾಡುವುದರಿಂದ, ನಿಮ್ಮ ಚರ್ಮ ಸೌಂದರ್ಯ ಕಾಪಾಡಿಕೊಳ್ಳಲು ಗರಿಷ್ಠ ನೆರವು ದೊರಕುತ್ತದೆ.
ವಿಂಟರ್ ಸ್ವಿಮಿಂಗ್ : ನಿಮಗೆ ಈಜಿನ ಹವ್ಯಾಸವಿದ್ದರೆ, ಚಳಿಗಾಲದಲ್ಲಿ ನಿಮ್ಮ ಚರ್ಮವನ್ನು ಸುರಕ್ಷಿತವಾಗಿರಿಸಲು, ಈಜಿಗೆ ಮೊದಲು ಹಾಗೂ ನಂತರ, ಲ್ಯೂಕ್ ವಾರ್ಮ್ ಶವರ್ ಪಡೆಯಿರಿ. ಈಜಿನ ನಂತರ ಮೈಲ್ಡ್ ಕ್ಲೆನ್ಸರ್ ನಿಂದ ಮೈಗಂಟಿದ ಕ್ಲೋರಿನ್ ತೊಲಗಿಸಿ. ಈಜಿನ ನಂತರ ಹಾರ್ಡ್ ಸ್ಕ್ರಬರ್ ಬಳಸಬೇಡಿ. ಹಾಗೆಯೇ ಇಡೀ ದೇಹವನ್ನು ಮಾಯಿಶ್ಚರೈಸ್ ಮಾಡಲಿಕ್ಕೂ ಮರೆಯದಿರಿ. ಇದರ ಜೊತೆಗೆ SPF 30 ಸನ್ ಸ್ಕ್ರೀನ್ ಹಚ್ಚಿಕೊಳ್ಳಿ, ನಂತರವೇ ಬಿಸಿಲಿಗೆ ಹೊರಡಬೇಕು. ಹೀಗೆ ಮಾಡದೆ, ಈಜಿನ ನಂತರ ನೇರ ಸೂರ್ಯಕಿರಣಗಳಿಗೆ ನಿಮ್ಮ ಮೈ ಒಡ್ಡಿದರೆ ಸನ್ ಬರ್ನ್ ಗೆ ಕಾರಣವಾದೀತು. ನಿಮ್ಮ ಚರ್ಮ ಹೆಚ್ಚು ಡ್ರೈ ಅನಿಸಿದರೆ, ಪ್ರತಿ 3-4 ಗಂಟೆಗಳಿಗೆ ಒಮ್ಮೆ ಥಿಕ್ ಮಾಯಿಶ್ಚರೈಸರ್ ಹಚ್ಚಿಕೊಳ್ಳಲು ಮರೆಯದಿರಿ. ಡ್ರೈನೆಸ್ ಹೆಚ್ಚಿದಷ್ಟೂ ಸ್ಕಿನ್ ಇರಿಟೇಶ್‌ನ್‌ಇಚಿಂಗ್ ನಿಮಗೆ ಅಹಿತ ತರುತ್ತವೆ.
– ಪ್ರಭಾ ಮಾಧವ





