ದೃಷ್ಟಿ ವಿಕಲಚೇತನರು ಯಾವುದೇ ತೊಂದರೆಯಿಲ್ಲದೆ, ಸ್ವತಂತ್ರವಾಗಿ ಕನ್ನಡದ ಮೂಲಕ (ಧ್ವನಿಮುದ್ರಿತ ನಿರ್ದೇಶನಗಳನ್ನು ಆಲಿಸುವುದರರೊಂದಿಗೆ) ಇಂಗ್ಲಿಷ್ ಟೈಪಿಂಗ್ ಕಲಿಯುವ ಭಾರತದ ಏಕೈಕ ಪ್ರವೇಶಯೋಗ್ಯ ಬಹುಭಾಷಾ ಟೈಪಿಂಗ್ ಟ್ಯೂಟರ್ ‘ಸ್ವಲೇಖ್’ (Swalekh App) ಆಪ್‌ನ ಕನ್ನಡ ಆವೃತ್ತಿ ಬಿಡುಗಡೆಗೆ ಸಿದ್ಧವಾಗಿದೆ.

​ಈ ಮಹತ್ವದ ತಂತ್ರಾಂಶದ ಕನ್ನಡ ಅನುವಾದವನ್ನು ನಾನು ಯಶಸ್ವಿಯಾಗಿ ಪೂರ್ಣಗೊಳಿಸಿಕೊಟ್ಟಿದ್ದೇನೆ.‌  ದತ್ತಾ ಪಾಟೀಲರ ಪ್ರಸಿದ್ಧ ಮರಾಠಿ ನಾಟಕ ‘ ತೋ ರಾಜಹಂಸ ಏಕ್’ ಕೃತಿಯನ್ನು ‘ರಾಜಹಂಸ’ ಹೆಸರಿನಲ್ಲಿ ಕನ್ನಡಕ್ಕೆ ಭಾಷಾಂತರಿಸಿದ ಬಳಿಕ, ಈಗ ತಂತ್ರಜ್ಞಾನ ಕ್ಷೇತ್ರದಲ್ಲೂ ಮರಾಠಿಯಿಂದ ಕನ್ನಡಕ್ಕೆ ಅನುವಾದ ಮಾಡಿಕೊಟ್ಟಿರುವುದು ನನಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ.

​ನಿವಾಂತ್ ಅಂಧ ಮುಕ್ತ ವಿಕಾಸಾಲಯ ಮತ್ತು ಪ್ರೇಮಾಂಜಲಿ ಫೌಂಡೇಶನ್ ಸಂಯುಕ್ತ ಆಶ್ರಯದಲ್ಲಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ದೃಷ್ಟಿ ವಿಕಲಚೇತನ ವಿದ್ಯಾರ್ಥಿಗಳಿಗೆ ಮತ್ತು ಆಸಕ್ತರಿಗೆ ಇದು ಅತ್ಯಂತ ಉಪಯುಕ್ತವಾದ ಡಿಜಿಟಲ್ ಕೊಡುಗೆಯಾಗಲಿದೆ.

IMG-20260911-WA0067

​ಕಾರ್ಯಕ್ರಮದ ವಿವರಗಳು:

​ದಿನಾಂಕ: 16 ಸೆಪ್ಟೆಂಬರ್ 2026 (ಬುಧವಾರ)

​ಸಮಯ: ಸಂಜೆ 4:00 ರಿಂದ 6:00 ಗಂಟೆಯವರೆಗೆ

​ಸ್ಥಳ: ಪ್ರೇಮಾಂಜಲಿ ಫೌಂಡೇಶನ್, ಜೆ.ಪಿ. ನಗರ, ಬೆಂಗಳೂರು.

ಅಶೋಕ ಚಿಕ್ಕಪರಪ್ಪಾ

ಪತ್ರಕರ್ತ, ಅನುವಾದಕ

ಬೆಂಗಳೂರು

Ph: 7795680405

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ