– ರಾಘವೇಂದ್ರ ಅಡಿಗ ಎಚ್ಚೆನ್.
ಬೆಂಗಳೂರು: ಇದು ನಿಮ್ಮ ವಾಹಿನಿ ಕಲಾವೇದಿಕೆ ಸಮಾಜದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ ಹೇಳಿದರು.

ನಗರದ ನಯನ ಸಭಾಂಗಣದಲ್ಲಿ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹಾಗೂ ಸುವರ್ಣ ಕರ್ನಾಟಕ ಡಿಜಿಟಲ್ ಮೀಡಿಯಾ ಅಸೋಸಿಯೇಷನ್ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮ ದಿನಾಚರಣೆ ಅಂಗವಾಗಿ 24 ನೇ ಸಾಂಸ್ಕೃತಿಕ ಸಿಂಚನ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಳೆದ ಕೆಲ ವರ್ಷಗಳಿಂದ ಇದು ನಿಮ್ಮ ವಾಹಿನಿ ಕಲಾ ವೇದಿಕೆ ಹತ್ತಾರು ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಸಾಧಕ ಮಹನೀಯರನ್ನು ಗೌರವಿಸುತ್ತ ಬರುತ್ತಿದೆ. ಎಲೆಮರೆಯ ಕಾಯಿಯಂತೆ ಸಮಾಜದ ಋಣ ತೀರಿಸುವ ರಾಜ್ಯದ ವಿವಿಧ ಜಿಲ್ಲೆಗಳ ಗಣ್ಯರಿಗೆ ವೇದಿಕೆ ಕಲ್ಪಿಸಿದೆ ಎಂದರು.

ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಮಾತನಾಡಿ, ಶಿಕ್ಷಕರು ಸಮಾಜ ತಿದ್ದುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕಲಾ ವೇದಿಕೆ ಶಿಕ್ಷಕರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಕೆಲಸ ಮಾಡಿದೆ ಎಂದರು.

ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ, ಪತ್ರಕರ್ತ ಗಂಡಸಿ ಸದಾನಂದಸ್ವಾಮಿ, ಗಣೇಶ್ ರಾವ್ ಕೇಸರಸ್ಕರ್, ಹಿರಿಯ ಗಾಯಕ ಶಶಿಧರ್ ಕೋಟೆ, ಸರಿಗಮಪ ಜ್ಯೂರಿ ಸದಸ್ಯ ಸಚಿನ್ ಎಸ್.ನರ್ಗಾತ, ನಮ್ಮ ಸೂಪರ್ ಸ್ಟಾರ್ ಸಂಪಾದಕ ಎಚ್.ಕೆ.ಮೊಹ್ಮದ್ ಅಸ್ಲಮ್, ವಸ್ತ್ರ ವಿನ್ಯಾಸಕಾರ ಲಕ್ಷ್ಮೀ ಕೃಷ್ಣ, ಸಂಜೀವಿನಿ ರೇಖಿ ಹಿಲಿಂಗ್ ಸೆಂಟರ್ ನ ಅಧ್ಯಕ್ಷೆ ಡಾ.ವಿ.ಭರಣಿರಾಜು, ಶ್ರೀಸಾಯಿ ಶಂಕರ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥಾಪಕಿ ದೀಪಾ ಲಕ್ಷ್ಮೀ ಎಸ್. ಇವೆಂಟ್ ಕೋ-ಆರ್ಡಿನೇಟರ್ ಚಂದ್ರಿಕಾ ಬಿ.ವಿ. ಭಾಗವಹಿಸಲಿದ್ದಾರೆ ಎಂದು ಇದು ನಿಮ್ಮ ವಾಹಿನಿ ಕಲಾ ವೇದಿಕೆ ಪ್ರಧಾನ ಕಾರ್ಯದರ್ಶಿ ಕಿಶೋರ್ ಕುಮಾರ್ ಪಾಲ್ಗೊಂಡಿದ್ದರು.

ಡಾ.ಚಿಕ್ಕಹೆಜ್ಜಾಜಿ ಮಹದೇವ್, ಎಸ್.ನಂಜುಂಡ, ಎಸ್. ಸವಿತಾ, ಟಿ.ಆರ್. ಚೂಡಾಮಣಿ, ಜಯಚಿತ್ರ, ಪವಿತ್ರಾ ಎಂ.ಆರ್, ಸುಮಾ ಎಂ, ಅಂಜನಾ ಲಮ, ಸಂಧ್ಯಾಪ್ರಿಯ ಜಿ, ಅರ್ಪಣ ಕುಮಾರಿ, ಅರ್ಚನ ಎಂ.ಎನ್, ರೆಶ್ಮಾ, ರೂಪ ಎನ್, ರಿಟಾ ವಿ, ರಮ್ಯ ಜಿ, ಅಭಿನಯ ಎಂ, ಜ್ಯೋತಿ ಭಿಡೆ ಆರ್, ಸುಮೇರಾ ಅಮನ್, ವೆಂಕಟೇಶ ಮೂರ್ತಿ ಎಸ್.ವಿ, ಮಂಚೇನಹಳ್ಳಿ ಪ್ರಕಾಶ್ ಎನ್.ಜಿಂಗಾಡೆ, ರೂಪಾ ಕೆ, ಭವಾನಿ ಆರ್,. ಕುಮಾರ ತೇಜಸ್ ಎಸ್, ಕೃತಿಕಾ ಆರ್,, ಕುಮಾರಿ ಸೌಜನ್ಯ ವಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.





