ಪತಿ : ಡಾರ್ಲಿಂಗ್, ನಾನು ನಿನ್ನನ್ನು ಎಷ್ಟು ಲವ್ ಮಾಡ್ತೀನಿ ಗೊತ್ತಾ? ನಿನಗಾಗಿ ಏನು ಬೇಕಾದರೂ ಮಾಡಬಲ್ಲೆ!
ಪತ್ನಿ : ಹೌದೇ? ಎಲ್ಲಿ..... ಹಾಗಾದರೆ ಭುಜಂಗಾಸನದಿಂದ ಶೀರ್ಷಾಸನದವರೆಗೂ ಎಲ್ಲಾ ಆಸನ ಮಾಡಿ ತೋರಿಸಿ!
ಗಿರೀಶ : ಕಳೆದ ಸಲದ ಒಲಿಂಪಿಕ್ಸ್ ನಲ್ಲಿ ವೆಯ್ಟ್ ಲಿಫ್ಟಿಂಗ್ ಚಾಂಪಿಯನ್ ಎನಿಸಿರುವ ಮೀರಾಬಾಯಿ ಚಾನೂ 49 ಕಿಲೋ ವರ್ಗದಲ್ಲಿ, ಸುಲಭವಾಗಿ 205 ಕಿಲೋ ತೂಕ ಎತ್ತಿಳಿಸಿ ತಮ್ಮ ದೇಶಕ್ಕೆ ಚಿನ್ನ ತಂದಿದ್ದಾರೆ! ಎಂಥ ಗ್ರೇಟ್ ಅಲ್ಲವೇ...?
ಸುರೇಶ : ಅದು ಸರಿ ಮಾರಾಯ, ನನ್ನ ಹೆಂಡತಿ 60 ಕಿಲೋ ತೂಗುತ್ತಾಳೆ. ಆದರೆ ಮಾರ್ಕೆಟ್ ಗೆ ಹೋದಾಗ ತರಕಾರಿ ಚೀಲ 1 ಕಿಲೋ ತೂಕಕ್ಕಿಂತ ಭಾರ ಎನಿಸಿದರೆ, ತಕ್ಷಣ ಆ ಚೀಲವನ್ನು ನನ್ನ ಕೈಗೆ ರವಾನಿಸುತ್ತಾಳೆ..... ಈ ಲಕ್ಷಣಕ್ಕೆ ಇವಳಿಗೂ ಆಗಾಗ ಚಿನ್ನ ಬೇರೆ ಕೊಡಿಸಬೇಕಂತೆ!
ಗಿರೀಶ : ಅಯ್ಯೋ ಪಾಪ! ಗಂಡಂದಿರ ಗೋಳು ಕೇಳುವವರಾರು?
ವಿದೇಶಿ : ನಿಮ್ಮ ದೇಶದಲ್ಲಿ ನೀವು ಕಾರನ್ನು ರಸ್ತೆಯ ಎಡಬದಿಗೆ ಚಲಿಸುತ್ತೀರೋ ಬಲ ಬದಿಗೋ?
ಸ್ವದೇಶಿ : ನಮ್ಮ ದೇಶದ ರಸ್ತೆಗಳಲ್ಲಿ ಗುಂಡಿ, ಹಳ್ಳ ಬಿಟ್ಟು ಯಾವ ಭಾಗ ಅಳಿದುಳಿದಿರುತ್ತದೋ ಆ ಭಾಗದಲ್ಲಿ ನಾವು ಗಾಡಿ ಚಲಾಯಿಸುತ್ತೇವೆ!
ಗೀತಾ : ಬೆಂಗಳೂರಿನಲ್ಲಿ ಎಲ್ಲೆಲ್ಲೂ ಈ ಪಾಟಿ ಟ್ರಾಫಿಕ್ ತುಂಬಿರುತ್ತದೆ. ಗಾಡಿ ಓಡಿಸಿಕೊಂಡು ಹೋಗೋದೇ ಕಷ್ಟ. ಆದರೂ ಆ್ಯಕ್ಸಿಡೆಂಟ್ ಗಳಿಗೇನೂ ಕೊರತೆ ಇಲ್ಲವಲ್ಲ....? ಇದು ಹೇಗೆ?
ಸುಧಾ : ಶಿಸ್ತಾಗಿ ಟ್ರಾಫಿಕ್ ರೂಲ್ಸ್ ಪಾಲಿಸಿದರೆ ಇದೇ ಗತಿ, ಮನಸ್ಸು ಬಂದಂತೆ ಗಾಡಿ ಓಡಿಸಿದರೆ ಯಾವ ತಂಟೆ ತಕರಾರೂ ಇರೋದಿಲ್ಲ!
ಯಾರೋ ಒಬ್ಬ ಆಧುನಿಕ ತರುಣ ಟಿಪ್ ಟಾಪ್ ಆಗಿ ಡ್ರೆಸ್ ಮಾಡಿಕೊಂಡು ಬಾಡಿಗೆ ಮನೆಗಾಗಿ ಹುಡುಕಾಡುತ್ತಾ ಬೆಂಗಳೂರೆಲ್ಲಾ ಅಲೆದಾಡಿಬಿಟ್ಟ.
ಅಂತೂ ಒಬ್ಬ ಮನೆಯಾಕೆ ದೊಡ್ಡ ಮನಸ್ಸು ಮಾಡಿ ಇವನಿಗೆ ಬಾಡಿಗೆಗೆ ಮನೆ ನೀಡಲು ನಿರ್ಧರಿಸಿದಳು.
ವಿಶಾಲಮ್ಮ : ಅದು ಸರಿ ಕಣ್ರೀ, ನೀವು ಕೆಲಸ ಮಾಡೋದು ಯಾ ಕಂಪನಿ?
ತರುಣ : ನಾನು ಇನ್ ಫೋಸಿಸ್ ಗಾಗಿ ವರ್ಕ್ ಮಾಡ್ತೀನಿ ಮೇಡಂ!
ವಿಶಾಲಮ್ಮ : ಓಹ್.... ಆ ಬಸ್ ಕಂಪನಿಯಾ? ಸಾರಿ ಕಣ್ರೀ, ನಾವು ಉತ್ತಮ ಕಂಪನಿಯ ಸಿಬ್ಬಂದಿಗೆ ಮಾತ್ರ ಬಾಡಿಗೆಗೆ ಮನೆ ಕೊಡೋದು!
ತರುಣ : ಅಯ್ಯೋ! ನಮ್ಮ ಕಂಪನಿ ಅತ್ಯುತ್ತಮ! ಹಾಗಲ್ಲ ಅಂತ ನಿಮಗೆ ಹೇಳಿದವರು ಯಾರು?
ವಿಶಾಲಮ್ಮ : ಕಂಡಿದ್ದೀನಿ ಬಿಡ್ರಿ, ನಮ್ಮ ನಗರ ಸಾರಿಗೆ ಬಸ್ಸುಗಳಿಗಿಂತ ನಿಮ್ಮ ಕಂಪನಿಯದೇ ಬಸ್ಸುಗಳು ಹೆಚ್ಚಾಗಿ ಓಡಾಡುತ್ತವೆ. ನಿಮ್ಮಿಂದ ತಾನೇ ಇಡೀ ಬೆಂಗಳೂರು ಟ್ರಾಫಿಕ್ ಮಯ ಆಗಿರೋದು.....!
ರಾಮಣ್ಣ : ಅಂತೂ ನಮ್ಮ ಬೆಂಗಳೂರಿನಲ್ಲಿ ಬಿಸ್ ನೆಸ್ ಜೋರಾಗಿ ನಡೀತಿದೆ ಅಂತ ಆಯ್ತು.
ಶ್ಯಾಮಣ್ಣ : ಹಾಗಂತ ಯಾರು ನಿಮಗೆ ಹೇಳಿದ್ದು? ಅದಕ್ಕಿಂತಲೂ ಪೇಯಿಂಗ್ ಗೆಸ್ಟ್ ಬಿಸ್ ನೆಸ್ ಬಲು ಹೈಕ್ಲಾಸಾಗಿ ನಡೀತಿದೆ ಅಂತೀನಿ!





