ಡಾಕ್ಟರ್ ಗಳಿಗೆ Dr, ಪ್ರೊಫೆಸರ್ ಗಳಿಗೆ Prof ಎಂದು ಹೆಸರಿನ ಮುಂದೆ ಗೌರವದ ವಿಶೇಷಣ ಇರುವಂತೆ ಶಿಕ್ಷಕರಿಗೆ ಕರ್ನಾಟಕದಲ್ಲಿ Tr ಎಂಬ ವಿಶೇಷಣ ನೀಡಲಾಗಿದೆ. ಈಗ ಅದೇ ಮಾದರಿಯಲ್ಲಿ ಎಂಜಿನಿಯರ್ ಗಳಿಗೆ Er ಎಂದು ವಿಶೇಷಣವನ್ನು ಅಧಿಕೃತವಾಗಿ ಬಳಸಲು ಸರ್ಕಾರ ಆದೇಶ ಹೊರಡಿಸಿದೆ.

ಇತ್ತೀಚೆಗಷ್ಟೇ ರಾಜ್ಯಸರ್ಕಾರ ವೈದ್ಯರು ತಮ್ಮ ಹೆಸರಿನ ಮುಂದೆ ‘Dr’, ಪ್ರಾಧ್ಯಾಪಕರು ‘Prof’ ಎಂದು ಬಳಸುವ ಮಾದರಿಯಲ್ಲೇ, ಶಿಕ್ಷಕರು  ‘Tr’ ವಿಶೇಷಣ ಬಳಸಲು ಅನುಮತಿ ನೀಡಿತ್ತು. ಇದರ ಬೆನ್ನಲ್ಲೇ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಅವರ ಜನ್ಮದಿನವಾದ ಸೆಪ್ಟೆಂಬರ್ 15 ರಂದು ಹಮ್ಮಿಕೊಂಡಿದ್ದ ಇಂಜಿನಿಯರ್ಸ್ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಘೋಷಣೆ ಮಾಡಿದ್ದು, ಇಂಜಿನಿಯರ್‌ಗಳಿಗೂ ತಮ್ಮ ಹೆಸರಿನ ಮುಂದೆ ಗೌರವ ಸೂಚಕವಾಗಿ “Er” (ಅಭಿಯಂತರರು – Engineer) ಎಂಬ ಶೀರ್ಷಿಕೆ  ಬಳಸುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ, ಇಂಜಿನಿಯರ್‌ಗಳ ಕೊಡುಗೆಯನ್ನು ಗೌರವಿಸಲು ಪ್ರತಿ ವರ್ಷ ಸೆಪ್ಟೆಂಬರ್ 15 ರಂದು ಆಚರಿಸಲಾಗುವ ಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು (ಇಂಜಿನಿಯರ್ಸ್ ದಿನ) ಇನ್ಮುಂದೆ ರಾಜ್ಯದ ಅಧಿಕೃತ ಕಾರ್ಯಕ್ರಮವನ್ನಾಗಿ ಸರ್ಕಾರ ಘೋಷಿಸಿದೆ.

ಒಟ್ಟಾರೆಯಾಗಿ, ಪ್ರತಿ ವರ್ಷ ಕರ್ನಾಟಕದಲ್ಲಿ ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಪದವಿ ಮುಗಿಸಿ ಹೊರಬರುತ್ತಾರೆ. ಈ ನೂತನ ಆದೇಶವು ಇಂಜಿನಿಯರಿಂಗ್ ಸಮುದಾಯಕ್ಕೆ ಹೊಸ ಪ್ರೃತ್ತಿಪರ ಗುರುತು ನೀಡಿದಂತಾಗುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ