ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ 12 ದಸರಾ ಆನೆಗಳಿಗೆ ಒಟ್ಟಾಗಿ ಪಥ ಸಂಚಲನ ನಡೆಸಲಾಗುತ್ತಿದೆ.

ಬೆಳಗ್ಗೆಯಿಂದ ಅರಮನೆ ಆವರಣದಿಂದ ಬನ್ನಿಮಂಟಪದ ಮೈದಾನದವರೆಗೆ ಗಜಪಡೆಗೆ ತಾಲೀಮು ಆರಂಭಿಸಲಾಯಿತು.

ಮೊದಲ ಹಂತದಲ್ಲಿ 9 ಆನೆಗಳು ಆಗಸ್ಟ್ 26ರಂದು ವೀರನಹೊಸಹಳ್ಳಿಯಲ್ಲಿ ನಡೆದ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದವು. ಎರಡನೇ ಹಂತದ 3 ಆನೆಗಳು (ಸೆ.13) ಮಧ್ಯಾಹ್ನ ಅರಮನೆಗೆ ಆಗಮಿಸಿದ್ದವು.

ನಿನ್ನೆ ಒಂದು ದಿನ ವಿಶ್ರಾಂತಿ ಪಡೆದಿದ್ದ ಎಲ್ಲಾ 12 ಆನೆಗಳು ಇಂದಿನಿಂದ ಒಟ್ಟಾಗಿ ತಾಲೀಮಿನಲ್ಲಿ ಭಾಗವಹಿಸುತ್ತಿವೆ ಎಂದು ಡಿಸಿಎಫ್ ಪ್ರಭುಗೌಡ ತಿಳಿಸಿದ್ದಾರೆ.

ಈ ಬಾರಿ ದಸರಾಕ್ಕೆ ಆಯ್ಕೆಯಾಗಿರುವ 12 ಆನೆಗಳು – ಧನಂಜಯ, ಏಕಲವ್ಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಸುಗ್ರೀವ, ಲಕ್ಷ್ಮಿ, ಕಾವೇರಿ, ರೂಪಾ, ಚೈತ್ರ ಮತ್ತು ಶ್ರೀಕಂಠ. ಬ್ಯಾಕಪ್ ಆಗಿ ಭೀಮ ಮತ್ತು ಹರ್ಷ ಆನೆಗಳನ್ನು ಕಾಯ್ದಿರಿಸಲಾಗಿದೆ.

ಮೊದಲ ತಂಡ (9): ಶ್ರೀಕಂಠ, ಏಕಲವ್ಯ, ಧನಂಜಯ, ಮಹೇಂದ್ರ, ಪ್ರಶಾಂತ, ಗೋಪಿ, ಶ್ರೀರಾಮ, ಲಕ್ಷ್ಮಿ ಮತ್ತು ಕಾವೇರಿ.

ಎರಡನೇ ತಂಡ (3): ದುಬಾರೆ ಶಿಬಿರದಿಂದ ಸುಗ್ರೀವ, ದೊಡ್ಡ ಹಾರವೆ ಶಿಬಿರದಿಂದ ರೂಪಾ ಮತ್ತು ಬಂಡೀಪುರದ ರಾಂಪುರ ಶಿಬಿರದಿಂದ ಚೈತ್ರ.

ಈ ಬಾರಿ 60 ವರ್ಷ ಪೂರೈಸಿದ ಖ್ಯಾತ ಆನೆ ಅಭಿಮನ್ಯು ನಿವೃತ್ತಿಯಾದ ಹಿನ್ನೆಲೆಯಲ್ಲಿ ಹೊಸ ಅಂಬಾರಿ ಆನೆಯನ್ನು ಆಯ್ಕೆ ಮಾಡಬೇಕಿದೆ. ಅದಕ್ಕಾಗಿ ಗಂಡು ಆನೆಗಳಿಗೆ 750 ಕೆ.ಜಿ. ಚಿನ್ನದ ಅಂಬಾರಿ ಸೇರಿ ಒಟ್ಟು 1000 ಕೆ.ಜಿ. ತೂಕವನ್ನು ಹೊರುವ ತರಬೇತಿ ನೀಡಲಾಗುತ್ತಿದೆ. ಮಹೇಂದ್ರ ಮತ್ತು ಧನಂಜಯ ಆನೆಗಳು ಈಗಾಗಲೇ 700 ಕೆ.ಜಿ. ತೂಕ ಹೊರುವ ತರಬೇತಿ ಪಡೆದಿವೆ.

ಆನೆಗಳು ದಿನಕ್ಕೆ ಎರಡು ಬಾರಿ ಅರಮನೆಯಿಂದ ಬನ್ನಿಮಂಟಪದವರೆಗೆ 4 ಕಿ.ಮೀ. ಮೆರವಣಿಗೆ ಮಾರ್ಗದಲ್ಲಿ ನಡೆದು, ನಗರದ ಜನಜಂಗುಳಿ, ವಾಹನಗಳ ಸದ್ದು ಮತ್ತು ಪಟಾಕಿ ಶಬ್ದಕ್ಕೆ ಹೊಂದಿಕೊಳ್ಳುವ ತಾಲೀಮು ಪಡೆಯುತ್ತಿವೆ.

ಅರಮನೆ ಆವರಣದಲ್ಲಿ ಆನೆಗಳ ಆರೋಗ್ಯದ ಮೇಲೆ ನಿಗಾ ಇಡಲು 16 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. 30 ಟೆಂಟ್‌ಗಳಲ್ಲಿ ಮಾವುತರು ಮತ್ತು ಕಾವಾಡಿಗಳಿಗೆ ವಸತಿ ಕಲ್ಪಿಸಲಾಗಿದೆ. ಆನೆಗಳಿಗೆ ತೂಕ ಹೆಚ್ಚಿಸಲು ವಿಶೇಷ ಪೌಷ್ಟಿಕ ಆಹಾರ ನೀಡಲಾಗುತ್ತಿದೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ