Sj*

ಈಗ ಎಲ್ಲಾ ಕಡೆ 1980s ದೆ ಹವಾ. ಅದೇ ಕಾಲಘಟ್ಟದಲ್ಲಿ ನಡೆಯುವ ಸಿನಿಮಾ "ಬೊಮ್ ಭಾಯ್". ಈ ಚಿತ್ರದ ಮುಹೂರ್ತ ಸಮಾರಂಭ ಗಣಪತಿ ಹಬ್ಬದ ಶುಭದಿನದಂದು ನಡೆದಿದೆ. ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಶಶಿಧರ್ ನಿರ್ದೇಶಿಸುತ್ತಿದ್ದಾರೆ.

ಗಣೇಶನ ಹಬ್ಬದ ಶುಭದಿನದಂದು ಈ ಚಿತ್ರ ಆರಂಭವಾಗಿದೆ. "ಬೊಮ್ ಭಾಯ್" ಚಿತ್ರದ ಪೋಸ್ಟರ್ ತುಂಬಾ ಚೆನ್ನಾಗಿದೆ. ನನ್ನ ಹಿಂದಿನ ಯಾವ ಚಿತ್ರಗಳಲ್ಲಿ ಅಭಿನಯಿಸಿರದ ಪಾತ್ರ ಇದಾಗಿದೆ‌. ಶಶಿಧರ್ ಅವರ ಜೊತೆಗೆ ಬಹಳ ದಿನಗಳಿಂದ ಚರ್ಚಿಸುತ್ತಿದ್ದೆ. ಶಶಿಧರ್ ಒಂದೊಳ್ಳೆ ಕಥೆ ಮಾಡಿದ್ದಾರೆ. ಈ ಚಿತ್ರದಲ್ಲಿ ನಗುವೇ ಪ್ರಧಾನ. ಈಗ 1980s ಟ್ರೆಂಡ್ ಜೋರಾಗಿದೆ. ಆದರೆ, ಈ ಟ್ರೆಂಡ್ ಶುರುವಾಗುವುದಕ್ಕೂ ಮುನ್ನ ಈ ಚಿತ್ರದ ಕಥೆ ಸಿದ್ದಾವಾಗಿದೆ. ನಿರ್ಮಾಪಕರಿಗೆ ಇದು ಮೊದಲ ಚಿತ್ರ. ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ ಎಂದು ನಟ ಶರಣ್ ತಿಳಿಸಿದರು.

"ಬೊಮ್ ಭಾಯ್" ರೆಟ್ರೊ ಶೈಲಿಯ ಕಥೆ. ನನ್ನ ಪಾತ್ರ ಕೂಡ ತುಂಬಾ ಚೆನ್ನಾಗಿದೆ. ನಾನು ಕೂಡ ಈವರೆಗೂ ಈ ತರಹದ ಪಾತ್ರ ಮಾಡಿಲ್ಲ. ಶಶಿಧರ್ ಅವರು ಹೇಳಿದ ಕಥೆ ಬಹಳ ಇಷ್ಟವಾಯಿತು. ಚಿತ್ರ ಎಲ್ಲರಿಗೂ ಇಷ್ಟವಾಗುವ ಭರವಸೆ ಇದೆ ಎಂದರು ನಟ ದಿಗಂತ್. ‌ ‌‌

bombai1

ಇಂದು ನನಗೆ ಎರಡೆರಡು ಖುಷಿ. ಒಂದು ಗಣಪತಿ ಹಬ್ಬ ಮತ್ತೊಂದು ನನ್ನ ಹೊಸ ಸಿನಿಮಾ ಮುಹೂರ್ತ. ಶಶಿಧರ್ ಉತ್ತಮ ಮನೋರಂಜನೆಯ ಕಥೆಯನ್ನು ಸಿದ್ದ ಮಾಡಿಕೊಂಡಿದ್ದಾರೆ. ಕಥೆ ನನಗೂ ಬಹಳ ಇಷ್ಟವಾಯಿತು. "ಗುರು ಶಿಷ್ಯರು" ಚಿತ್ರದ ನಂತರ ಶರಣ್ ಅವರ ಜೊತೆಗೆ ಅಭಿನಯಿಸುತ್ತಿದ್ದೇನೆ. ಶರಣ್ ಹಾಗೂ ದಿಗಂತ್ ಅವರ ಜೊತೆಗೆ ನಟಿಸುತ್ತಿರುವುದು ಖುಷಿಯಾಗಿದೆ ಎಂದು ನಟಿ ನಿಶ್ವಿಕಾ ನಾಯ್ಡು ಹೇಳಿದರು.

ಇದು ನನ್ನ ನಿರ್ದೇಶನದ ಮೂರನೇ ಚಿತ್ರ. ವಿಂಧ್ಯಾ ಬಾಲಾಜಿ ಪೋತರಾಜ್ ಹಾಗೂ ಕಾಂತರಾಜ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಶರಣ್, ದಿಗಂತ್ ಹಾಗೂ ನಿಶ್ವಿಕಾ ನಾಯ್ಡು ಮೂರು ಮುಖ್ಯ ಪಾತ್ರಗಳ ಸುತ್ತ ಈ ಚಿತ್ರದ ಕಥೆ ಸಾಗುತ್ತದೆ. ಕನ್ನಡದ ಜನಪ್ರಿಯ ಕಲಾವಿದರು ಈ ಚಿತ್ರದಲ್ಲಿ ನಟಿಸಲಿದ್ದಾರೆ‌. ಸದ್ಯದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಇದು 1980 ರ ರೆಟ್ರೊ ಶೈಲಿಯ ಕಥಾಹಂದರ ಹೊಂದಿದೆ. ಸಂಪೂರ್ಣ ಮನರಂಜನೆಯಿಂದ ಕೂಡಿರುವ ಈ ಕಥೆನ ಸಿನಿಮಾ ಮಾಡೋ ಕನಸು ನನ್ನದಾಗಿತ್ತು. ಈ ನನ್ನ ಕನಸಿಗೆ ಆರ್ಥಿಕವಾಗಿ ಬೆನ್ನೆಲುಬಾಗಿ ಪಿ ಆರ್ ಎಫ್ ಸ್ಟುಡಿಯೋಸ್ ನನ್ನ ಹಿಂದೆ ನಿಂತಿದೆ.. ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುವುದಾಗಿಯೂ ತೀರ್ಮಾನಿಸಿದೆ. ಸಂಪೂರ್ಣ ಕಾಮಿಡಿ ಜಾನರ್ ನ ಚಿತ್ರ ಇದಾಗಿದೆ. ದೀಪಕ್ ಈ ಚಿತ್ರದ ಛಾಯಾಗ್ರಹಕರು. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡುವುದಾಗಿ ನಿರ್ದೇಶಕ ಶಶಿಧರ್ ಹೇಳಿದರು‌.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ