ಟ್ರೈಲರ್ ಬಿಡುಗಡೆ ಮಾಡಿದ

 ಸುಪ್ರೀಂ ಹೀರೋ  ಶಶಿಕುಮಾರ್

ಈಗಾಗಲೇ ಜಿಗ್ರಿ ದೋಸ್ತ ಜಿಗ್ರಿ ದೋಸ್ತ, ಹುಟ್ಟಿಬಂದೆ ಹುಲಿಬೀರನಾಗಿ ಹಾಡುಗಳ ಮೂಲಕ ಸಖತ್ ಸೌಂಡ್ ಮಾಡುತ್ತಿರುವ,

ಉತ್ತರ ಕರ್ನಾಟಕದವರೇ ನಿರ್ಮಿಸಿರುವ ಚಿತ್ರ ಹುಲಿಬೀರ. ಅ. 2 ರಂದು ತೆರೆಕಾಣುತ್ತಿರುವ ಈ ಚಿತ್ರದ ಟ್ರೈಲರನ್ನು ಹಿರಿಯ ನಟ, ಸುಪ್ರೀಂ ಹೀರೋ ಶಶಿಕುಮಾರ್ ಬಿಡುಗಡೆ ಮಾಡಿದರು. ನಿರ್ದೇಶಕ ಎಪಿ.ಅರ್ಜುನ್ ಅತಿಥಿಗಳಾಗಿ ಆಗಮಿಸಿದ್ದರು.

ಮದರಂಗಿ ಮಲ್ಲಿಕಾರ್ಜುನ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ

ಯರ್ರಾಬಿರ್ರಿ ಖ್ಯಾತಿಯ ರೂರಲ್ ಅಂಜನ್ ನಾಯಕನಾಗಿ ನಟಿಸಿದ್ದು, ಚೈತ್ರ ತೋಟದ, ವನು ಪಾಟೀಲ್  ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕದ ಸೊಗಡಿನ ಈ ಚಿತ್ರಕ್ಕೆ ವೀರಸಮರ್ಥ  ಸಂಗೀತ ಸಂಯೋಜನೆ ಮಾಡಿದ್ದಾರೆ. ಸನಾತನ ಕ್ಯಾಮೆರಾ ವರ್ಕ್ ನಿಭಾಯಿಸುದ್ದಾರೆ. ಹಿರಿಯನಟ ರಂಗಾಯಣ ರಘು ಗ್ರಾಮದ ಹಿರಿಯನ ಪಾತ್ರ ಮಾಡಿದ್ದಾರೆ.

ಟ್ರೈಲರ್ ರಿಲೀಸ್ ಮಾಡಿದ ನಟ ಶಶಿಕುಮಾರ್ ಮಾತನಾಡಿ ಟ್ರೈಲರ್ ನೋಡಿದಾಗ ರಾ ಕಂಟೆಂಟ್ ಇದೆ ಅನ್ನಿಸುತ್ತೆ. ಜನರೇಶನ್ ಚೇಂಜ್ ಆದಂತೆ ಅವರ ಯೋಚನೆ ಬೇರೆ ಇರುತ್ತೆ. ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ, ಯಾವುದೇ ಆದರೂ ಕಲೆ, ಕಲಾವಿದ ಒಂದೇ, ಮಾತಾಡುವ ಶೈಲಿ ಬೇರೆ ಇರುತ್ತೆ ಅಷ್ಟೇ. ಕಂಟೆಂಟ್  ಬೇಸ್ ಸಿನಿಮಾ ಯಾವತ್ತೂ ಸೋತಿಲ್ಲ. ಹಳೆಯದನ್ನಿಟ್ಟುಕೊಂಡೇ ಹೊಸ ಸಿನಿಮಾ ಮಾಡುತ್ತ ಹೋಗಿ ಎಂದು ಈಗಿನವರಿಗೆ ಬುದ್ದಿಮಾತು ಹೇಳಿದರು.

1001105475

ಎಪಿ ಅರ್ಜುನ್ ಮಾತನಾಡಿ ಅಂಜನ್ ನನಗೆ ಜಿಮ್ ನಲ್ಲಿ ಪರಿಚಯ. ಫೂಟೇಜ್ ನೋಡಿದ್ದೇನೆ, ಚನ್ನಾಗಿ ಬಂದಿದೆ ಎಂದರು.

ವೇದಿಕೆಯಲ್ಲಿದ್ದ  ನಿ.ನ್ಯಾಯಾಧೀಶರಾದ ಎನ್.ಎಸ್.ಪಾಟೀಲ್ ಮಾತನಾಡಿ ನ್ಯಾಯಾಂಗಕ್ಕೂ ಸಿನಿಮಾಗೂ ಅಜಗಜಾಂತರ ವ್ಯತ್ಯಾಸವಿದೆ. ಈಗ ಸಿನಿಮಾ ಮಾಡೋದು ತುಂಬಾ ಕಷ್ಟವಿದೆ. ರೇಣುಕಾ ಎಲ್ಲಮ್ಮ ಇವರೆಲ್ಲರಿಗೂ ಒಳ್ಳೆಯದು ಮಾಡಲಿ ಎಂದರು.

ವಿತರಕ ಕೆ.ಮುನೀಂದ್ರ ಮಾತನಾಡಿ ನಾನೀಗಾಗಲೇ ಸಿನಿಮಾ ನೋಡಿದ್ದೇನೆ. ಕ್ಲೈಮ್ಯಾಕ್ಸ್ ಅಲ್ಟಿಮೇಟ್ ಆಗಿದೆ ಎಂದರು.

ಟ್ರೈಲರ್ ಗೆ ಹಿನ್ನೆಲೆ ಧ್ವನಿ ನೀಡಿದ ಸವಿತಕ್ಕ ಮಾತನಾಡುತ್ತ ನಾನು ರಂಗಭೂಮಿ ಕಲಾವಿದೆ. ನಾಟಕದಲ್ಲಿ ಮಾತಾಡಿದ್ದೇನೆ. ಆದರೆ ದೃಶ್ಯಕ್ಕೆ ಅನುಗುಣವಾಗಿ ವಾಯ್ಸ್ ಕೊಡೋದು ಸ್ವಲ್ಪ ಕಷ್ಟವಾಯ್ತು ಎಂದರು.

1001105470

ನಿರ್ಮಾಪಕ ದಾವಲ್ ಸಾಹೇಬ ಹುಣಶೀಮರದ ಮಾತನಾಡಿ ಟ್ರೈಲರ್ ನೋಡುವಾಗ ನನ್ನ ಕಣ್ಣಲ್ಲಿ ನೀರು ಬಂತು. ಇಷ್ಟೊಂದು ಜನ ಮೆಚ್ಚಿಕೊಂಡಿದ್ದಾರೆ. ನಾವೀಗಾಗಲೇ ಸಕ್ಸಸ್ ಆಗಿಬಿಟ್ಟಿದ್ದೇವೆ ಎಂದರು. ಮತ್ತೊಬ್ಬ ನಿರ್ಮಾಪಕ ಅಶೋಕ್ ಮಾತನಾಡಿ ಈ ಚಿತ್ರ ನಮ್ಮ ಸಾಯಿಸ್ಟಾರ್ ಸಿನಿಮಾಸ್ ಚೊಚ್ಚಲ ಕಾಣಿಕೆ. ಸಿನಿಮಾ ಖಂಡಿತ ಜನರಿಗೆ ಇಷ್ಟವಾಗುತ್ತೆ ಎಂದರು.

ಸುಜಾತ ಗಿರೀಶ್ ಮಾತನಾಡಿ ಈಗಾಗಲೇ ಮೂರು ಸಾಂಗ್ ಹಿಟ್ ಆಗಿವೆ. ನಮ್ಮ ಚಿತ್ರವನ್ನು ಬದಾಮಿ ಬನಶಂಕರಿ ಸನ್ನಿಧಿಯಲ್ಲಿ ಆರಂಭಿಸಿ, ಸವದತ್ತಿಯಲ್ಲಿ ಮುಗಿಸಿದೆವು. ಈ ಸಿನಿಮಾಗೆ ಮಲ್ಲಿಕಾರ್ಜುನ್ ಬೇರು, ನಾಯಕ ಅಂಜನ್ ದುಂಬಿಯಾದರೆ, ನಾಯಕಿಯರು ಹೂವುಗಳು, ನಾವೆಲ್ಲ ರೆಂಬೆ, ಕೊಂಬೆಗಳು ಎಂದು ಹೋಲಿಸಿಕೊಂಡರು.

ಸಂಗೀತ ನಿರ್ದೇಶಕ ವೀರ ಸಮರ್ಥ್ ಮಾತನಾಡಿ ಚಿತ್ರದಲ್ಲಿ ಜಾನಪದ ಶೈಲಿಯ, ಮಣ್ಣಿನ ಸೊಗಡಿನ ಹಾಡುಗಳೇ ಹೈಲೈಟ್. ಶಿವಮಣಿ, ಕಾರಂಜಿ ನಂತರ ನಾನು ಧರ್ಮವಿಷ್ ಮಾಡಿರುವ ಪ್ರಾಜೆಕ್ಟ್ ಇದು, ಒಂದೊಳ್ಳೆ ಸಿನಿಮಾ ಇದು ಸೋಲಬಾರದು ಎಂದರು

1001105481

ನಿರ್ದೇಶಕ ಮಲ್ಲಿಕಾರ್ಜುನ ಮಾತನಾಡಿ

ಟ್ರೈಲರ್ ಒಂದು ಸಿನಿಮಾದ ಆಮಂತ್ರಣ ಪತ್ರಿಕೆ ಇದ್ದಹಾಗೆ, ಉತ್ತರ ಕರ್ನಾಟಕದ ಸೊಗಡನ್ನು ಚಿತ್ರದಲ್ಲಿ ತೋರಿಸಿದ್ದೇವೆ.

ಹಾಡುಗಳನ್ನು ಈಗಾಗಲೇ ಇಷ್ಟಪಟ್ಟಿದ್ದೀರಿ, ಅದೇರೀತಿ ಚಿತ್ರವನ್ನೂ ಗೆಲ್ಲಿಸಿ ಎಂದರು.

ನಾಯಕ ಅಂಜನ್ ಮಾತನಾಡಿ 2019ರಲ್ಲಿ ಅಪಘಾತಕ್ಕೀಡಾಗಿ ತುಂಬಾ ಡಿಪ್ರೆಷನ್ ಗೆ ಹೋಗಿದ್ದೆ. ನಂತರ ನವಚೇತನ ನೀಡಿದ್ದೇ ಹುಲಿಬೀರ. ಶಶಿಕುಮಾರ್ ಅವರಿಗೆ ಟ್ರೈಲರ್ ತೋರಿಸಿದೆ, ಅದರಲ್ಲಿ ದೇವರು ಬರುವ ಕೊನೇ ಸೀನನ್ನು ಚಪ್ಪಲಿ ತೆಗೆದು ನೋಡಿದರು. ನನ್ನಮಗ ಬೇರೆ ಅಲ್ಲ, ನೀನು ಬೇರೆ ಅಲ್ಲ ಅಂತ ವಿಷ್ ಮಾಡಿದರು. ಪ್ರತಿ ಮನೆಯಲ್ಲಿ ಇಂಥ ಒಬ್ಬ ಹುಡುಗನಿರ್ತಾನೆ. ಲಾಸ್ಟ್ ಆಪ್ಷನ್ ನಲ್ಲಿರೋ ಆ ಹುಡುಗ ಇಡೀ ಊರನ್ನೇ ಹೇಗೆ ಉದ್ದಾರ ಮಾಡ್ತಾನೆ ಅನ್ನೋದೇ ಹುಲಿಬೀರ ಎಂದರು.

ಮಲ್ಲು ಬಾಗಲಕೋಟೆ ಮಾವನ‌ ಪಾತ್ರ ಮಾಡಿದ್ದಾರೆ. ನಾಯಕಿಯರಾದ ಚೈತ್ರ ತೋಟದ,ವನು ಪಾಟೀಲ್ ತಮ್ಮ ಪಾತ್ರಗಳ ಕುರಿತು ಮಾತನಾಡಿದರು.

ಸಾಯಿ ಸ್ಟಾರ್ ಸಿನಿಮಾಸ್ ಮೂಲಕ ದಾವಲ ಸಾಹೇಬ ಹುಣಶೀಮರದ, ಅಶೋಕ್ ಎನ್.(ತುರುವೇಕೆರೆ) ಹಾಗೂ ಸುಜಾತ ಗಿರೀಶ್ ಸೇರಿ ಈ ಚಿತ್ರ ನಿರ್ಮಿಸಿದ್ದಾರೆ. ಧರ್ಮ ವಿಶ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ