ಕೆಲ ವರ್ಷಗಳಿಂದ ನಮ್ಮ ರಾಜ್ಯದಲ್ಲಿ ಅತಿಯಾದ ಓಲೈಕೆಯ ರಾಜಕಾರಣ ಆರಂಭವಾಗಿದೆ. ಆರಂಭದಲ್ಲಿ ಸಾಮಾನ್ಯ ಮತದಾರರನ್ನು ಓಲೈಸಿಕೊಳ್ಳುವ ಸಲುವಾಗಿ ವಿವಿಧ ಭಾಗ್ಯಗಳ ಆಮಿಷವನ್ನು ತಂದು ಅಧಿಕಾರಕ್ಕೆ ಬಂದು ಆತ್ತ ಅಭಿವೃದ್ಧಿಯೂ ಇಲ್ಲದೇ ಇತ್ತ ಸರಿಯಾಗಿ ಭಾಗ್ಯಗಳನ್ನೂ ಕೊಡಲಾಗದೇ ಇರುವ ಈ ಸರ್ಕಾರಕ್ಕೆ ಇತ್ತೀಚೆಗೆ ಯಾವುದೇ ನಯಾ ಪೈಸೆಯೂ ಇಲ್ಲದಂತೆ ವಿದ್ಯಾವಂತರನ್ನು ಓಲೈಸಿಕೊಳ್ಳುವ ಸಲುವಾಗಿ Dr. ಇರುವಂತೆ ಸದ್ಯಕ್ಕೆ Tr. ಮತ್ತು Er. ಭಾಗ್ಯಗಳನ್ನು ಕರುಣಿಸುತ್ತಿರುವ ಸಂಧರ್ಭದಲ್ಲಿ ಅಲ್ಪನಿಗೆ ಐಶ್ವರ್ಯ ಬಂದರೆ, ಅರ್ಧರಾತ್ರಿಯಲ್ಲಿ ಕೊಡೆ ಹಿಡಿದನಂತೆ ಎಂಬ ಗಾದೆ ಮಾತು ನೆನಪಾಗಿ ಈ ಕುರಿತಾಗಿ ಸಮಗ್ರವಾಗಿ ಚರ್ಚೆ ಮಾಡಬೇಕಿನಿಸಿದೆ
ಹೌದು. ಇದು ನೋಡಲು ಕೇವಲ ಎರಡು ಅಕ್ಷರಗಳಾದ “Dr.”, “Er.” “Tr.” ವಿಷಯದಂತೆ ಕಂಡರೂ, ಇದರ ಹಿಂದೆ ಶಿಕ್ಷಣ, ವೃತ್ತಿಪರ ಮಾನ್ಯತೆ, ಸಾಮಾಜಿಕ ಗೌರವ ಮತ್ತು ಕಾನೂನು—ಈ ನಾಲ್ಕೂ ಅಂಶಗಳಿವೆ ಎನಿಸುತ್ತದೆಯಾದರೂ, ಕರ್ನಾಟಕ ಸರ್ಕಾರ 2026ರ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಶಿಕ್ಷಕರಿಗೆ ತಮ್ಮ ಹೆಸರಿನ ಮುಂದೆ “Tr.” ಮತ್ತು ಸೆಪ್ಟೆಂಬರ್ 15ರ ಇಂಜಿನೀಯರ್ಸ್ ದಿವಸದಂದು ಎಂಜಿನಿಯರ್‌ಗಳ ಹೆಸರಿನ ಮುಂದೆ “Er.” ಬಳಸಲು ಅನುಮತಿ ನೀಡಿರುವುದು ನಿಜಕ್ಕೂ ಒಂದು ರೀತಿಯ ಹಾಸ್ಯಾಸ್ಪದ ಎನಿಸುತ್ತಿದ್ದು, ಇಷ್ಟು ವರ್ಷಗಳ ಅದಿಲ್ಲದೆಯೇ ಸಮಾಜದಲ್ಲಿ ಉತ್ತಮ ಮಟ್ಟದಲ್ಲಿ ಜೀವನ ನಡೆಸುತ್ತಿರುವವರಿಗೆ ಈ ಸರ್ಕಾರದ ಪ್ರಚಾರ ಪ್ರಿಯತೆ ಮತ್ತು ಓಲೈಸಿಕೊಳ್ಳುವುದಕ್ಕಾಗಿ ಇಂತಹ ಗಿಮಿಕ್ ಗಳು ಬೇಕೇ ? ಎಂದು ಜನರು ಕೇಳುತ್ತಿರುವುದರಲ್ಲಿ ಸತ್ಯಾಂಶವಿದೆ ಎಂದೆನಿಸುತ್ತಿದೆ.
ಹಾಗಾಗಿಯೇ ಈ “Dr.” ಬಳಕೆಯ ಸಂಪ್ರದಾಯ ಹೇಗೆ ಮತ್ತು ಏತಕ್ಕಾಗಿ ಬಂದಿತು ಅದು ವೃತ್ತಿಪರ ಗೌರವದ ಮಾನ್ಯತೆಯೇ? ಎಂಬೆಲ್ಲದರ ಕುರಿತಾಗಿ ತಿಳಿಸುಕೊಳ್ಳುವುದು ಅತ್ಯಾವಶ್ಯಕವಾಗಿದೆ,
“Dr.” ಎನ್ನುವುದು ಮೊದಲು ವೈದ್ಯರಿ ಗಾಗಿಯೇ ಹುಟ್ಟಿದ್ದೇ?
ಈ ಮೇಲಿನ ಪ್ರಶ್ನೆಗೆ ಇಲ್ಲ ಎನ್ನುವ ಉತ್ತರ ನಿಜಕ್ಕೂ ಅಚ್ಚರಿ ಎನಿಸಿದರೂ ಅದೇ ಸತ್ಯವಾಗಿದೆ. Doctor ಎಂಬ ಪದ ಲ್ಯಾಟಿನ್‌ನ “docere” — ಕಲಿಸುವುದು/ಬೋಧಿಸುವುದು ಎಂಬ ಕ್ರಿಯಾಪದದಿಂದ ಬಂದಿದೆ. ಅಂದರೆ ಮೂಲ ಅರ್ಥವೇ “ಬೋಧಕ” ಅಥವಾ “ಶಿಕ್ಷಕ”.
ಮಧ್ಯಯುಗದ ಯುರೋಪಿನ ವಿಶ್ವವಿದ್ಯಾಲಯಗಳಲ್ಲಿ Doctor ಎಂಬುದು ಅತ್ಯುನ್ನತ ಶೈಕ್ಷಣಿಕ ಅರ್ಹತೆಯೊಂದಿಗಿನ ಬೋಧನಾ ಅಧಿಕಾರದ ಪ
ಹೀಗಾಗಿ ಮೂಲತಃ: Doctor ಎನ್ನುವುದು ಕೇವಲ ವೈ
ಹಾಗಾದರೆ ವೈದ್ಯರಿಗೆ Dr. ಹೇಗೆ ಬಂ ತು?
ವೈದ್ಯಕೀಯ ಶಿಕ್ಷಣ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶೈಕ್ಷಣಿಕ ಕ್ಷೇತ್ರವಾಗಿ ಬೆಳೆಯುತ್ತಿದ್ದಂತೆ, ವೈದ್ಯಕೀಯದಲ್ಲಿ ಉನ್ನತ ಪದವಿ ಪಡೆದವರಿಗೂ “Doctor” ಎಂಬ ಪದ ಬಳಕೆಯಾಗತೊಡಗಿತು. ಕಾಲಕ್ರಮೇಣ ವೈದ್ಯರು ಸಮಾಜದಲ್ಲಿ ರೋಗವನ್ನು ಗುರುತಿಸಿ ಚಿಕಿತ್ಸೆ ನೀಡುವ ಅಧಿಕೃತ ಜ್ಞಾನ ಹೊಂದಿದ ವೃತ್
ಅಂದರೆ ಇಂದು ನಾವು “Dr. Ravi” ಎಂದಾಗ ವೈದ್ಯರನ್ನು ನೆನಪಿಸಿಕೊಳ್ಳುವುದು ಸಾವಿರ ವರ್ಷಗಳ
ಹಾಗಾದರೆ MBBS ಮಾಡಿದವರೂ Dr. ಏಕೆ?
ಇಲ್ಲಿಯೇ ಮತ್ತೊಂದು ಕುತೂಹಲಕಾರಿ ವ್ಯತ್ಯಾಸವಿದೆ. ಇಂದಿನ ಅರ್ಥದಲ್ಲಿ ಪ್ರತಿಯೊಬ್ಬ ವೈದ್ಯರೂ “Doctorate” ಅಂದರೆ PhD ಅಥವಾ MD ಸಂಶೋಧನಾ ಡಾಕ್ಟರೇಟ್ ಪಡೆದಿರಬೇಕೆಂದಿಲ್ಲ. MBBS ಪದವೀಧರ
ಭಾರತದಲ್ಲಿ ವೈದ್ಯಕೀಯ ಅರ್ಹತೆ ಮತ್ತು ವೈದ್ಯಕೀಯ ವೃತ್ತಿಯ ನಿಯಂತ್ರಣಕ್ಕೆ ಕಾನೂನುಬದ್ಧ ವ್ಯವಸ್ಥೆಗಳಿವೆ. Indian Medical Degrees Act, 1916 ಮುಂತಾದ ಕಾನೂನುಗಳು ಮಾನ್ಯ ವೈದ್ಯಕೀಯ ಅರ್ಹತೆಯನ್ನು ಸೂಚಿಸುವ ಪದವಿ/ಪದವಿಸೂಚಕಗಳ ತಪ್ಪು ಬಳಕೆಯನ್ನು ನಿಯಂತ್ರಿಸುವ ಉದ್ದೇಶ ಹೊಂದಿದ್ದವು.
ಇತ್ತೀಚಿನ 2026ರ ಕೇರಳ ಹೈಕೋರ್ಟ್ ತೀರ್ಪೊಂದೂ ಒಂದು ಆಸಕ್ತಿದಾಯಕ ವಿಷಯವನ್ನು ಸ್ಪಷ್ಟಪಡಿಸಿದೆ: “Doctor” ಎಂಬ ಪದ
ಹೆಸರಿನ ಮುಂದೆ Dr. ಏಕಾಗಿ ಬೇಕು?
ಸಾಮಾನ್ಯವಾಗಿ ಯಾರ ಹೆಸರಿನ ಮುಂದೆ Dr. ಎಂಬ ಪದವಿದ್ದರೆ ಅವರನ್ನು ವೈದ್ಯಕೀಯ ಪದವಿಯನ್ನು ಪಡೆದ ವ್ಯಕ್ತಿಯಾಗಿದ್ದು, ಅಗತ್ಯ ಸಂಧರ್ಭ ಬಂದಲ್ಲಿ ಅವರನ್ನು ಬಳಸಿಕೊಳ್ಳುವ ಉದ್ದೇಶದಿಂದ ಇದರ ಬಳಕೆ ಆರಂಭವಾಯಿತು ಎನ್ನುವುದು ಸಮರ್ಥನೀಯವಾಗುತ್ತದೆ. ಉದಾಹರಣೆಗೆ, ಕೆಲವರು ವಿಮಾನದಲ್ಲಿ ಅಥವಾ ರೈಲಿನಲ್ಲಿ ಪ್ರಯಾಣಮಾಡುತ್ತಿರುವಾಗ, ಪ್ರಯಾಣಿಕರಲ್ಲಿ ಯಾರಿಗಾದರೂ, ಇದ್ದಕ್ಕಿದ್ದಂತೆ ಆರೋಗ್ಯದಲ್ಲಿ ಏರುಪೇರಾದಾಗ, ವಿಮಾನದ ಗಗನ ಸಖಿಯರಿಗೆ ಪ್ರಥಮ ಚಿಕಿತ್ಸೆಯ ಕುರಿತಾದ ತರಭೇತಿ ನೀಡಿದ್ದರೂ ಅದಕ್ಕಿಂತಲೂ ಹೆಚ್ಚಿನ ಅವಶ್ಯತೆ ಇದ್ದಾಗ, ಅವರು ಮೊದಲು ಪ್ರಯಾಣಿಕರ ಪಟ್ಟಿಯಲ್ಲಿ ಯಾರಾದರೂ Dr. ಗಳು ಇದ್ದಾರೆಯೇ? ಎಂದು ಪರೀಕ್ಷಿಸಿ ಅವರನ್ನು ತುರ್ತಾಗಿ ಸಂಪರ್ಕಿಸಿ, ವಿಮಾನ ನಿಲ್ದಾಣದಲ್ಲಿ ಇಳಿದು ಹತ್ತಿರದ ಆಸ್ಪತ್ರೆಯವರೆಗೂ ಕರೆದುಕೊಂಡು ಹೋಗುವ ಸಮಯದವರೆಗೂ ಆ ಡಾಕ್ಟರ್ ಗಳಿಂದ ಪ್ರಥಮ ಚಿಕಿತ್ಸೆಯನ್ನು ಮಾಡಿಸುವ ಮೂಲಕ ಅವರ ಆರೋಗ್ಯವನ್ನು ಕಾಪಾಡಬಹುದು ಎಂಬ ಸದುದ್ದೇಶದಿಂದ ವೈದ್ಯಕೀಯ ಪದವಿಯನ್ನು ಪಡೆದಿರುವವರ ಹೆಸರಿನ ಮುಂದೆ Dr.. ಎಂಬುದನ್ನು ಬಳೆಸುವ ಸಂಪ್ರದಾಯ ಆರಂಭವಾಯಿತು.
ಅದೇ ರೀತಿಯಲ್ಲಿ ದಾರಿಯಲ್ಲಿ ಹೋಗುವಾಗ ಯಾರಿಗಾದರೂ ಅಪಘಾತವಾಗಲೀ ಅಥವಾ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಾದಲ್ಲಿ ಆ ರಸ್ತೆಯಲ್ಲಿರುವ ಮನೆಗಳ ಮೇಲಿರುವ ನಾಮಫಲಕಗಳಲ್ಲಿ Dr. ಇದ್ದಲ್ಲಿ ಅಂತಹವರಿಂದ ಪ್ರಥಮ ಚಿಕಿತ್ಸೆ ಪಡೆಯುವ ಸದ್ದುದ್ದೇಶದಿಂದ ಹೆಸರಿನ ಹಿಂದೆ Dr.ಬಳಸುವ ಸಂಪ್ರದಾಯ ಬಂದಿತು.
ಗೌರವ ಡಾಕ್ಟರೇಟ್ ಎಂದರೇನು? ಅದು ಏಕೆ ಹುಟ್ಟಿಕೊಂಡಿತು?
ಡಾಕ್ಟರ್ ಓದದೇ ಇಲ್ಲವೇ ಅಧ್ಯಯನದ ಮೂಲಕ ಡಾಕ್ಟರೇಟ್ ಪಡೆಯದೇ ತಮ್ಮ ಹೆಸರಿನ ಮುಂದೆ ಡಾ. ಸೇರಿಸಿಕೊಳ್ಳುವ ಮತ್ತೊಂದು ಅವಕಾಶವೇ, ಗೌರವ ಡಾಕ್ಟರೇಟ್. ಅದಕ್ಕೆ ಸೂಕ್ತ ಉದಾರಣೆಯೆಂದರೆ ವರನಟ ಡಾ. ರಾಜಕುಮಾರ್. ಕನ್ನಡ ಚಲನಚಿತ್ರರಂಗದಲ್ಲಿನ ಸಾಧನೆಯ ಗೌರವಾರ್ಥ 1976ರಲ್ಲಿ ಮೈಸೂರು ವಿಶ್ವವಿದ್ಯಾನಿಲಯವು ರಾಜ್‌ಕುಮಾರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡುವ ಮೂಲಕ ಅದಕ್ಕೊಂದು ಸಾರ್ಥಕತೆಯನ್ನು ಮೂಡಿಸುವುದರಲ್ಲಿ ಸಫಲವಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಗೌರವ ಡಾಕ್ಟರೇಟ್ ಎನ್ನುವುದು ತನ್ನ ಘನತೆ ಮತ್ತು ಗಾಂಭೀರ್ಯವನ್ನು ಕಳೆದುಕೊಂಡಿದ್ದು, ರಸ್ತೆಯ ಬದಿಯಲ್ಲಿ ನಾಯಿ ಕೊಡೆಗಳು ಹುಟ್ಟುವಂತೆ ಗೌರವ ಡಾಕ್ಟರೇಟ್ ಕೊಡುವ ನಕಲೀ ಸಂಸ್ಥೆಗಳು ಆ ಗೌರವ ಡಾಕ್ಟರೇಟ್ ಪದವಿಗೆ ಇರಬೇಕಾದ ಮಾನ ಮಾರ್ಯಾದೆಗಳನ್ನು ಹಾಳು ಮಾಡಿಬಿಟ್ಟಿರುವುದು ನಿಜಕ್ಕೂ ದುರ್ದೈವದ ಸಂಗತಿಯಾಗಿದೆ.
PhD ಪಡೆಯಲು ಸಂಶೋಧನೆ ಮಾಡಬೇಕು, ಪ್ರಬಂಧ ಸಲ್ಲಿಸಬೇಕು, ತಜ್ಞರಿಂದ ಮೌಲ್ಯಮಾಪನವಾಗಬೇಕು ಮತ್ತು ವಿಶ್ವವಿದ್ಯಾಲಯದ ಶೈಕ್ಷಣಿಕ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆದರೆ, ಕೆಲವು ವಿಶ್ವವಿದ್ಯಾಲಯಗಳು ತಮ್ಮ ಸಂಸ್ಥೆಯ ವತಿಯಿಂದ ವ್ಯಕ್ತಿಯ ಅಸಾಧಾರಣ ಸಾಧನೆ ಅಥವಾ ಸಮಾಜಕ್ಕೆ ನೀಡಿದ ಮಹತ್ವದ ಕೊಡುಗೆಗೆ ನೀಡುವ ಗೌರವವಾಗಿ ನೀಡುವ ಸಂಪ್ರದಾಯವನ್ನು ರೂಢಿಸಿಕೊಂಡಿದ್ದು ಇದರ ಮೂಲ ಉದ್ದೇಶವು, ನೀವು ನಮ್ಮ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ಮಾಡಿ ಈ ಪದವಿ ಗಳಿಸಿಲ್ಲ. ಆದರೆ ನೀವು ನಿಮ್ಮ ವೃತ್ತಿ ಬದುಕಿನಲ್ಲಿ ಮಾಡಿರುವ ಸಾಧನೆ ಬಹಳವಾಗಿರುವ ಕಾರಣ, ನಮ್ಮ ವಿಶ್ವವಿದ್ಯಾಲಯವೇ ನಿಮ್ಮನ್ನು ಗೌರವಿಸಲು ಬಯಸುತ್ತದೆ ಎಂಬುದಾಗಿತ್ತು. ಹಾಗಾಗಿಯೇ, ರಾಜ ಮಹಾರಾಜರುಗಳು, ಚಿಂತಕರು, ವಿಜ್ಞಾನಿಗಳು, ಕಲಾವಿದರು, ಸಮಾಜಸೇವಕರು, ರಾಜತಾಂತ್ರಿಕರು ಮತ್ತು ವಿವಿಧ ಕ್ಷೇತ್ರಗಳ ಗಣ್ಯರಿಗೆ ಇಂತಹ ಗೌರವ ನೀಡುವ ಪದ್ಧತಿ ಬೆಳೆಯಿತು. ಕೇಂಬ್ರಿಡ್ಜ್ ಕೂಡ ಕೊಡುವ honorary degreesಗೆ ಸುಮಾರು 500 ವರ್ಷಗಳ ಇತಿಹಾಸವಿದೆ ಎಂದು ಹೇಳುತ್ತದೆ. ಈ ರೀತಿಯಾಗಿ ಗೌರವ ಡಾಕ್ಟರೇಟ್ ಅದನ್ನು ಸ್ವೀಕರಿಸುವ ವ್ಯಕ್ತಿಗೆ ಗೌರವ ತರುವುದಕ್ಕಿಂತಲೂ, ಗೌರವ ಡಾಕ್ಟರೇಟ್ ಕೊಡುವ ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠೆ ತರುತ್ತದೆ.
ಆದರೆ, ಇತ್ತೀಚಿನ ದಿನಗಳಲ್ಲಿ ನಿಮಗೆ Honorary Doctorate ಬೇಕೇ? ಇಷ್ಟು ಹಣ ಕೊಡಿ ಎಂಬ ದಂದೆಯು ಆರಂಭವಾಗಿದ್ದು, New Indian Express ವರದಿಯ ಪ್ರಕಾರ, ಕೆಲವು consultancyಗಳು ವಿದೇಶಿ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ₹1.20 ಲಕ್ಷದಿಂದ ₹2.50 ಲಕ್ಷದವರೆಗೆ ಹಣ ಪಡೆದು, ಸ್ಥಳೀಯ ಹೋಟೆಲ್ಲುಗಳಲ್ಲಿ ಅದೇ ಖರ್ಚಿನಲ್ಲಿ ಸಮಾರಂಭ ಆಯೋಜಿಸಿ ಸುಮಾರು 100 ರಿಂದ 150ಕ್ಕೂ ಹೆಚ್ಚು ಹಣ ಕೊಟ್ಟವರಿಗೆ Honorary Doctorate ಕೊಟ್ಟಿದ್ದವು.
ಹಾಗಾದರೆ “Er.” ಎಲ್ಲಿಂದ ಬಂತು? ಕರ್ನಾಟಕ ಸರ್ಕಾರ ಈ ನಿರ್ಧಾರ ಏಕೆ?
ಸರ್ಕಾರದ ವಿವರಣೆಯ ಪ್ರಕಾರ, ಎಂಜಿನಿಯರ್‌ಗಳು ಕೇವಲ ಕಟ್ಟಡ, ರಸ್ತೆ, ಸೇತುವೆ ಅಥವಾ ಯಂತ್ರಗಳನ್ನು ನಿರ್ಮಿಸುವವರು ಮಾತ್ರವಲ್ಲ. ಅವರು ನೀರಾವರಿ ವ್ಯವಸ್ಥೆ ರೂಪಿಸುತ್ತಾರೆ, ವಿದ್ಯುತ್ ವ್ಯವಸ್ಥೆ ನಿರ್ಮಿಸುತ್ತಾರೆ, ಕೈಗಾರಿಕೆಗಳನ್ನು ಬೆಳೆಸುತ್ತಾರೆ, ಡಿಜಿಟಲ್ ಮೂಲಸೌಕರ್ಯ ನಿರ್ಮಿಸುತ್ತಾರೆ, ಸಾರಿಗೆ ವ್ಯವಸ್ಥೆ ರೂಪಿಸುತ್ತಾರೆ, ನೀರು ಮತ್ತು ತ್ಯಾಜ್ಯ ನಿರ್ವಹಣೆಗೆ ಪರಿಹಾರ ಕಂಡುಕೊಳ್ಳುತ್ತಾರೆ, ಆಸ್ಪತ್ರೆ, ವಿಶ್ವವಿದ್ಯಾಲಯ, ಡೇಟಾ ಸೆಂಟರ್‌ಗಳಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನವರೆಗೆ ಕೆಲಸ ಮಾಡುತ್ತಾರೆ.
ಇದೇ ಹಿನ್ನೆಲೆಯಲ್ಲಿ ಸರ್ ಎಂ. ವಿಶ್ವೇಶ್
“Tr.” ಏಕೆ ?
2026ರ ಸೆಪ್ಟೆಂಬರ್ 5ರ ಶಿಕ್ಷಕರ ದಿನಾಚರಣೆಯಂದು ಕರ್ನಾಟಕ ಸರ್ಕಾರವು ಶಿಕ್ಷಕರ ಹೆಸರಿನ ಮುಂದೆ “Tr.” ಎಂಬ ಪೂರ್ವಪ್ರತ್ಯಯವನ್ನು ಬಳಸಲು ಅಧಿಕೃತವಾಗಿ ಅವಕಾಶ ನೀಡಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರಿ ಆದೇಶ ಸಂಖ್ಯೆ 216 E SLB 2026, ದಿನಾಂಕ 05-09-2026 ಮೂಲಕ ಅನುಮತಿ ನೀಡಲಾಗಿದೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿವರಣೆಯ ಪ್ರಕಾರ, ವೈದ್ಯರಿಗೆ Dr., ಎಂಜಿನಿಯರ್‌ಗಳಿಗೆ Er., ಪ್ರಾಧ್ಯಾಪಕರಿಗೆ Prof. ಎಂಬ ವೃತ್ತಿಪರ ಗುರುತು ಇರುವಂತೆ, ಶಿಕ್ಷಕರಿಗೂ ಪ್ರತ್ಯೇಕ ಗುರುತು ನೀಡುವ ಉದ್ದೇಶದಿಂದ “Tr.” ಪರಿಚಯಿಸಲಾಗಿದೆ. ಕರ್ನಾಟಕದಲ್ಲಿರುವ ಸುಮಾರು 4.5 ಲಕ್ಷ ಶಿಕ್ಷಕರ ಸೇವೆಯನ್ನು ಗುರುತಿಸುವುದು ಇದರ ಉದ್ದೇಶ ಎಂದು ಸರ್ಕಾರ ಹೇಳಿದೆ. ಇದು ಹೊಸ ಶೈಕ್ಷಣಿಕ ಪದವಿ ಅಥವಾ ಅರ್ಹತೆಯಲ್ಲ. ಗೌರವ ಸೂಚಿಸುವ honorific ಮಾತ್ರ ಎಂದು ಸರ್ಕಾರದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಅಂದರೆ “Tr.” ಬರೆದಿರುವುದರಿಂದ ಶಿಕ್ಷಕರಿಗೆ ಹೆಚ್ಚುವರಿ ವಿದ್ಯಾರ್ಹತೆ ದೊರೆಯುವುದಿಲ್ಲ.
ಶಿಕ್ಷಕರ ಕೆಲ ಸಂಘಟನೆಗಳು ಈ ಕುರಿತಾಗಿ ತಮ್ಮ ವೃತ್ತಿಗೆ ಸಿಗುತ್ತಿರುವ ಗೌರವದ ಸಂಕೇತವೆಂದು ಸ್ವಾಗತಿಸಿವೆಯಾದರೂ, ಹೆಚ್ಚಿನವರು, ಶಿಕ್ಷಣ ತಜ್ಞರ ಹೆಸರಿನ ಮುಂದೆ ಎರಡು ಅಕ್ಷರಗಳಿಗಿಂತ ಶಿಕ್ಷಕರ ವೇತನ, ಕೆಲಸದ ಪರಿಸ್ಥಿತಿ, ಮೂಲಸೌಕರ್ಯ, ತರಬೇತಿ ಮತ್ತು ವೃತ್ತಿಪರ ಬೆಳವಣಿಗೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ ಎಂದು ಹೇಳುವ ಮೂಲಕ ಪರೋಕ್ಷವಾಗಿ ಇದರಿಂದ ತಮಗೆ ಯಾವುದೇ ರೀತಿಯ ಉಪಯೋಗವಿಲ್ಲಾ ಎಂದು ಅಭಿಪ್ರಾಯಪಟ್ಟಿರುವುದು ಗಮನಾರ್ಹವಾಗಿದೆ.
ಆದರೆ ಶೀರ್ಷಿಕೆಗಿಂತ ವೃತ್ತಿಪರ ಮಾ ನದಂಡ ಮುಖ್ಯ
ಇದು ಇನ್ನೂ ಮುಖ್ಯವಾದ ಪ್ರಶ್ನೆ. ಒಬ್ಬ ವ್ಯಕ್ತಿಯ ಹೆಸರಿನ ಮುಂದೆ Er. ಎಂದು ಬರೆದ ಮಾತ್ರಕ್ಕೆ ಅವರು ಉತ್ತಮ ಎಂಜಿನಿಯರ್ ಆಗುವುದಿಲ್ಲ. ಅದೇ ರೀತಿ: Dr. ಎಂದು ಬರೆದ ಮಾತ್ರಕ್ಕೆ ಉತ್ತಮ ವೈದ್ಯರಾಗುವುದಿಲ್ಲ. ವೃತ್ತಿಯ ನಿಜವಾದ ಗೌರವ ಇರುವುದು, ಅರ್ಹತೆ + ನೋಂದಣಿ + ವೃ
ಸಮಾಜದ ಗೌರವವನ್ನು “prefix”ಗಳ ಮೂಲಕ ಅಳಯಬೇಕೇ?
ನಾಳೆ—
Dr. – ವೈದ್ಯರು
Er. – ಎಂಜಿನಿಯರ್‌ಗಳು
Ar. – ಆರ್ಕಿಟೆಕ್ಟ್‌ಗಳು
CA – ಚಾರ್ಟರ್ಡ್ ಅಕೌಂಟೆಂಟ್‌ಗಳು
Adv. – ವಕೀಲರು
Prof. – ಪ್ರಾಧ್ಯಾಪಕರು
Tr. – ಶಿಕ್ಷಕರು
ಎಂದು ಪ್ರತಿಯೊಂದು ವೃತ್ತಿಗೂ ಹೆಸರಿನ ಮುಂದೆ ಪ್ರತ್ಯೇಕ ಗುರುತು ನೀಡಲು ಆರಂಭಿಸಿದರೆ, ಸಮಾಜದ ಗೌರವವನ್ನು ನಾ
ನಿಜವಾದ ಗೌರವ ಎಲ್ಲಿದೆ?
ನನ್ನ ಪ್ರಕಾರ ಈ ಚರ್ಚೆಯ ಅತ್ಯಂತ ಮುಖ್ಯ ಅಂಶ ಇದು: ಹೆಸರಿನ ಮುಂದೆ ಎರಡು ಅಕ್
ಸರ್ ಎಂ. ವಿಶ್ವೇಶ್ವರಯ್ಯ ಅವರ ಹೆಸರಿನ ಮುಂದೆ “Er.” ಎಂದು ಬರೆಯುವುದಕ್ಕಿಂತ, ಅವರ ಕೆ.ಆರ್.ಎಸ್., ನೀರಾವರಿ, ಕೈಗಾ
ವೈದ್ಯರಿಗೆ “Dr.” ಇರುವುದಕ್ಕಿಂತ ರೋಗಿಯ ಜೀವವನ್ನು ಪ್
ಕೊನೆಯ ಮಾತು
Dr., Er., Ar., Prof., Tr. ಇವು ಹೆಸರುಗಳ ಮುಂದೆ ಬರುವ ಎರಡು–ಮೂರು ಅಕ್ಷರಗಳು ಮಾತ್ರ. ಆದರೆ ಆ ಅ
ಕರ್ನಾಟಕದ ಸರ್ಕಾರದ ಇತ್ತೀಚಿನ Tr, Er. ನಿರ್ಧಾರವು ಶಿಕ್ಷಕರಿಗೆ ಮತ್ತು ಎಂಜಿನಿಯರ್‌ಗಳಿಗೆ ಗೌರವದ ನೀಡುವುದಕ್ಕಿಂತಲೂ ಅವರನ್ನು ಓಲೈಸಿಕೊಳ್ಳುವುದಕ್ಕಾಗಿ ಎಲ್ಲಾ ಬಿಟ್ಟ ಭಂಗಿ ನೆಟ್ಟ ಎನ್ನುವಂತೆ ಆಗಿರುವುದು ಸ್ಪಷ್ಟವಾಗಿದೆ ಅಲ್ವೇ?





