ನೇಲ್ ಎಕ್ಸ್ ಟೆನ್ಶನ್ಗಳ ಲಾಭದ ಬಗ್ಗೆ ನಿಮಗೆ ಗೊತ್ತುಂಟೇ…?

ಇಂದಿನ ಆಧುನಿಕ ದಿನಗಳಲ್ಲಿ ಬ್ಯೂಟಿಫುಲ್ ಸ್ಟೈಲಿಶ್‌ ಉಗುರು ಹೊಂದಿರಬೇಕಾದುದು ಪ್ರತಿ ಹೆಣ್ಣಿನ ಆಸೆ ಆಗಿದೆ. ಆದರೆ ಎಷ್ಟೋ ಸಲ ಉಗುರು ತಂತಾನೇ ಬೇಗ ಮುರಿದು ಹೋಗುತ್ತದೆ ಅಥವಾ ಅದರ ಬೆಳವಣಿಗೆ ಬಲು ನಿಧಾನ ಆಗುತ್ತದೆ. ಹೀಗಾದಾಗ ನೇಲ್ ಎಕ್ಸ್ ಟೆನ್ಶನ್‌ ಒಂದು ಬೆಟರ್‌ ಆಪ್ಶನ್‌ ಆಗುತ್ತದೆ. ಇದರಿಂದ ನಿಮ್ಮ ಉಗುರು ಉದ್ದ, ಸಶಕ್ತ ಹಾಗೂ ಅತ್ಯಾಕರ್ಷಕವಾಗಿ ಕಂಡುಬರುತ್ತದೆ. ಆದರೆ ನೇಲ್ ‌ಎಕ್ಸ್ ಟೆನ್ಶನ್‌ ಕೇವಲ ಸೌಂದರ್ಯ ಹೆಚ್ಚಿಸಿಕೊಳ್ಳುವುದಕ್ಕೆ ಮಾತ್ರವಲ್ಲ, ಅದರಿಂದ ಇನ್ನಿತರ ಲಾಭಗಳೂ ಉಂಟು. ಮುಖ್ಯವಾಗಿ ಯುಗಾದಿಯಂಥ ದೊಡ್ಡ ಹಬ್ಬ, ಶುಭ ಸಮಾರಂಭಗಳಿಗೆ ನೀವು ಹೋಗಬೇಕಾದಾಗ, ನಿಮ್ಮ ಸೌಂದರ್ಯ ನಾಲ್ವರಲ್ಲಿ ಎದ್ದು ಕಾಣುವಂತಿರಬೇಕಲ್ಲವೇ?

ಯಾರ ಉಗುರು ಬೇಗ ಮುರಿದು ಹೋಗುತ್ತದೋ ಯಾ ಅದರ ಬೆಳವಣಿಗೆ ಬಲು ಮಂದವೋ, ಅಂಥವರಿಗೆ ಈ ನೇಲ್ ‌ಎಕ್ಸ್ ಟೆನ್ಶನ್‌ ಬಿಲ್ ‌ಕುಲ್ ‌ಒಂದು ಬೆಟರ್‌ ಆಯ್ಕೆ ಎನಿಸುತ್ತದೆ. ಬ್ಯೂಟಿಫುಲ್ ಉಗುರು ನಿಮ್ಮ ಲುಕ್ಸ್ನ್ನು ಇನ್ನಷ್ಟು ಅತ್ಯಾಕರ್ಷಕ ಗೊಳಿಸುವಲ್ಲಿ ಪ್ರಧಾನ ಪಾತ್ರ ವಹಿಸುತ್ತವೆ, ಇದರಿಂದ ಸಹಜವಾಗಿ ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ.

ಒಮ್ಮೊಮ್ಮೆ ಸ್ಪೆಷ್‌ ಇವೆಂಟ್‌ ಗಳಿಗೆ ಹೋಗಬೇಕಾದಾಗ, ಯಾವುದೋ ಒಂದು ಉಗುರು ತುಂಡರಿಸಿತು ಎಂದಿಟ್ಟುಕೊಳ್ಳಿ, ಆಗ ವಿಧಿಯಿಲ್ಲದೆ ಬೇರೆಲ್ಲ ಉಗುರುಗಳನ್ನು ತಕ್ಷಣ ಕತ್ತರಿಸಿ ಏಕರೂಪವಾಗಿ ತೋರಿಸಬೇಕಾಗುತ್ತದೆ. ಹೀಗಾದಾಗ, ಎಲ್ಲಾ ಉಗುರು ಕತ್ತರಿಸುವ ಬದಲು, ನೇಲ್ ‌ಎಕ್ಸ್ ಟೆನ್ಶನ್‌ ಬಳಸಿ, ಅದು ಉದ್ದಕ್ಕಿರುವಂತೆ ತೋರಿಸಿಕೊಳ್ಳಬಹುದು.

ಹೀಗೆ ನೇಲ್ ‌ಎಕ್ಸ್ ಟೆನ್ಶನ್‌ ಅಳವಡಿಸಿಕೊಳ್ಳುವುದರಿಂದ ನಿಮ್ಮ ನ್ಯಾಚುರಲ್ ಉಗುರು ಹೊರಗಿನ ಡ್ಯಾಮೇಜ್‌ (ಅಂದ್ರೆ ನೀರು, ಕೊಳಕು, ಧೂಳಿನ ಸಂಪರ್ಕ)ಗಳಿಂದ ಎಷ್ಟೋ ಸುರಕ್ಷಿತ ಆಗುತ್ತದೆ. ಉದ್ದನೆಯ ಉಗುರಿನ ಮೇಲೆ ಎಷ್ಟೋ ಸುಂದರ ನೇಲ್ ಆರ್ಟ್‌ ಮಾಡಬಹುದಾಗಿದೆ.

ಹೀಗಾಗಿ ಪ್ರತಿ ಸಮಾರಂಭಕ್ಕೂ ನೀವು ಬೇರೆ ಬೇರೆ ಡಿಸೈನಿನ ನೇಲ್ ‌ಆರ್ಟ್‌ ಟ್ರೈ ಮಾಡಬಹುದು. ಇದು ನಿಮಗೆ ಯುನಿಕ್‌ಟ್ರೆಂಡಿ ಲುಕ್ಸ್ ಒದಗಿಸುತ್ತದೆ. ನೇಲ್ ಎಕ್ಸ್ ಟೆನ್ಶನ್‌ ನಲ್ಲಿ ವಿವಿಧ ಬಗೆಗಳು ಉಂಟು. ಒಂದೊಂದಾಗಿ ಗಮನಿಸೋಣ.

ಆ್ಯಕ್ರಿಲಿಕ್ನೇಲ್ ಎಕ್ಸ್ ಟೆನ್ಶನ್‌ : ಇದರಲ್ಲಿ ಆ್ಯಕ್ರಿಲಿಕ್‌ ಪೌಡರ್‌ ಹಾಗೂ ಮಾನೋಮರ್‌ ಲಿಕ್ವಿಡ್‌ ನ್ನು ಬೆರೆಸಿ, ನೇಲ್ಸ್ ಮೇಲೆ ಅಳವಡಿಸಬಹುದು. ಇದು ಎಲ್ಲದಕ್ಕಿಂತ ಸಶಕ್ತ ಎಕ್ಸ್ ಟೆನ್ಶನ್‌ ಎಂದೆನಿಸಿದೆ, ದೀರ್ಘಕಾಲ ಬಾಳಿಕೆ ಬರುತ್ತದೆ.

ಜೆಲ್ ನೇಲ್ ಎಕ್ಸ್ ಟೆನ್ಶನ್‌ : ಇದು ಜೆಲ್ ಬೇಸ್ಡ್ ಫಾರ್ಮುಲಾದಿಂದ ರೂಪುಗೊಂಡಿರುತ್ತದೆ. ಇದನ್ನು ಲೈಟ್‌ ನಿಂದ ಹಾರ್ಡ್ ಗೊಳಿಸಲಾಗುತ್ತದೆ. ಇದು ನ್ಯಾಚುರಲ್ ಲುಕ್‌ ನೀಡುತ್ತದೆ ಹಾಗೂ ಹೆಚ್ಚು ಗ್ಲಾಸಿ ಫಿನಿಶ್‌ ಗಾಗಿ ಪ್ರಸಿದ್ಧವಾಗಿದೆ. ಜೊತೆಗೆ ಇದು ಲೈಟ್‌ ವೆಯ್ಟ್ ಆಗಿದ್ದು, ಉಗುರು ಹೆಚ್ಚು ಭಾರಿ ಎಂದೇನೂ ಅನಿಸುವುದಿಲ್ಲ.

ಫೈಬರ್ಗ್ಲಾಸ್ಯಾ ಸಿಲ್ಕ್ ನೇಲ್ ಎಕ್ಸ್ ಟೆನ್ಶನ್‌ : ಈ ಟೆಕ್ನಿಕ್‌ ನಲ್ಲಿ ಉಗುರಿನ ಮೇಲೆ ತೆಳುವಾದ ಫೈಬರ್‌ ಗ್ಲಾಸ್‌ ಯಾ ಸಿಲ್ಕ್ ಶೀಟ್‌ ಅಳವಡಿಸಲಾಗಿರುತ್ತದೆ. ಇದರಿಂದ ಉಗುರು ಹೆಚ್ಚು ಸಶಕ್ತಗೊಳ್ಳುತ್ತದೆ. ಯಾರಿಗೆ ನ್ಯಾಚುರಲ್ ಫಿನಿಶ್‌ ಇಷ್ಟವೇ ಹಾಗೂ ಹಾರ್ಡ್‌ ಎಕ್ಸ್ ಟೆನ್ಶನ್‌ ಇಷ್ಟವಿಲ್ಲವೇ ಅಂಥವರಿಗೆ ಇದು ಉತ್ತಮ ಆಯ್ಕೆಯಾಗುತ್ತದೆ.

ಡೀಪ್ಪೌಡರ್ನೇಲ್ ಎಕ್ಸ್ ಟೆನ್ಶನ್‌: ಈ ಟೆಕ್ನಿಕ್‌ ನಲ್ಲಿ ನೇಲ್ ‌ಟಿಪ್‌ ಅಳವಡಿಸಿ, ಬೇಸ್‌ ಕೋಟ್‌ಹಚ್ಚಿದ ನಂತರ, ನೇಲ್ಸ್ ನ್ನು ಒಂದು ವಿಶಿಷ್ಟ ಪೌಡರ್‌ ನಲ್ಲಿ ಡಿಪ್‌ ಮಾಡಿಸಲಾಗುತ್ತದೆ. ನಂತರ ಇದರ ಮೇಲೆ ಒಂದು ಸೀಲಿಂಗ್‌ ಟಾಪ್‌ ಹಾಕಲಾಗುತ್ತದೆ. ಇದರಲ್ಲಿ ಲೈಟ್‌ ನ ಅಗತ್ಯವಿಲ್ಲ. ಹೀಗಾಗಿ ಇದು ಬಹು ಸುಲಭವಾದ, ಬೇಗ ಬೇಗ ಪ್ರೋಸೆಸ್‌ ಮಾಡಬಹುದಾದ ಪ್ರಕ್ರಿಯೆಯವಾಗಿದೆ. ಇದು ದೀರ್ಘಕಾಲ ಬಾಳಿಕೆ ಬರುತ್ತದೆ. ಜೆಲ್ ನೇಲ್ಸ್ ಗಿಂತ ಹೆಚ್ಚು ಡ್ಯೂರೆಬಲ್ ಎನಿಸಿದೆ.

ನೋಡಲಿಕ್ಕೂ ಇದು ಹೆಚ್ಚು ದಪ್ಪವಿಲ್ಲ, ಹೀಗಾಗಿ ಉಗುರು ಹೆಚ್ಚು ಸಹಜವಾಗಿ ಕಂಡುಬರುತ್ತದೆ, ಬೇಗ ಬೇಗ ಒಣಗುತ್ತದೆ ಸಹ. ಏಕೆಂದರೆ ಇದರಲ್ಲಿ ಲೈಟ್‌ ಕ್ಯೂರಿಂಗ್‌ ನ ರಗಳೆ ಇಲ್ಲ. ಹಾಗಾಗಿ ಬೇಗ ರೆಡಿ ಆಗುತ್ತದೆ. ಯಾರಿಗೆ ಬೇಗ ಕೃತಕ ಹಾಗೂ ಸಶಕ್ತ ಉಗುರಿನ ಅಳವಡಿಕೆ ಬೇಕೋ, ಆದರೆ ಜೆಲ್ ‌ಯಾ ಆ್ಯಕ್ರಿಲಿಕ್‌ ನ ಉದ್ದನೇ ಪ್ರಕ್ರಿಯೆಯಿಂದ ಪಾರಾಗಬಯಸುತ್ತಾರೋ, ತಮ್ಮ ಅಸಲಿ ಉಗುರಿನ ಮೇಲೆ ಹೆಚ್ಚು ಭಾರಿ ಕೃತಕ ಉಗುರು ಬೇಡ ಎನಿಸುತ್ತದೋ, ಅಂಥವರಿಗೆ ಇದು ಬೆಸ್ಟ್ ಆಯ್ಕೆ.

ಪ್ರೆಸ್ಆನ್ನೇಲ್ ‌: ಎಕ್ಸ್ ಟೆನ್ಶನ್‌ ಪ್ರೆಸ್‌ ಆನ್‌ ನೇಲ್ಸ್ ಮೊದಲೇ ತಯಾರಿಸಿಟ್ಟಂಥ ಕೃತಕ ಉಗುರಾಗಿದೆ. ಇದನ್ನು ನೇಲ್ ‌ಗ್ಲೂ ಯಾ ಡಬಲ್ ಸೈಡೆಡ್‌ ನೇಲ್ ‌ಟೇಪ್‌ ನ ನೆರವಿನಿಂದ ಅಸಲಿ ಉಗುರಿನ ಮೇಲೆ ಅಂಟಿಸಲಾಗುತ್ತದೆ. ಇವು ಹಲವು ಡಿಸೈನ್‌ಶೇಪ್ಸ್ ನಲ್ಲಿ ಲಭ್ಯ. ಇದನ್ನು ಸುಲಭವಾಗಿ ಮನೆಯಲ್ಲೇ ಅಳವಡಿಸಬಹುದು. ಇದು ಎಲ್ಲಕ್ಕಿಂತ ಸುಲಭಕರ ಹಾಗೂ ಅಗ್ಗದ ಆಯ್ಕೆ. ಇದಕ್ಕಾಗಿ ಪಾರ್ಲರ್‌ ಗೆ ಹೋಗಬೇಕಾದ ಅಗತ್ಯವಿಲ್ಲ.

ಮನೆಯಲ್ಲೇ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಇದರಲ್ಲಿ ಪ್ರತಿ ಸಲ ಹೊಸ ಲುಕ್‌, ಬೇರೆ ಬೇರೆ ಡಿಸೈನ್‌ ಗಳಲ್ಲಿ ಲಭ್ಯ. ಇದರಿಂದ ಪ್ರತಿ ಸಲ ಹೊಸ ಹೊಸ ಸ್ಟೈಲ್ ‌ಟ್ರೈ ಮಾಡಬಹುದು. ಯಾರು ಟೆಂಪರರಿ ಪೀರಿಯಡ್‌ ಗೆ ಸ್ಟೈಲಿಶ್‌ ಕೃತಕ ಉಗುರು ಬಯಸುತ್ತಾರೋ, ಆದರೆ ಸದಾಕಾಲ ಎಕ್ಸ್ ಟೆನ್ಶನ್‌ ಬಯಸುವುದಿಲ್ಲವೋ ಯಾ ಯಾರ ಉಗುರು ಬೇಗ ಬೇಗ ಬೆಳೆಯುತ್ತದೋ ಹಾಗೂ ಯಾರು ಮತ್ತೆ ಮತ್ತೆ ನೇಲ್ ‌ಎಕ್ಸ್ ಟೆನ್ಶನ್‌ ಮಾಡಿಸಲು ಬಯಸುವುದಿಲ್ಲವೋ, ಅಂಥವರಿಗೆ ಈ ಆಯ್ಕೆ ದಿ ಬೆಸ್ಟ್!

ಪಾಲೀ ಜೆಲ್ ನೇಲ್ ಎಕ್ಸ್ ಟೆನ್ಶನ್‌ : ಇದು ಆ್ಯಕ್ರಿಲಿಕ್‌ ಹಾಗೂ ಜೆಲ್ ‌ನೇಲ್ ‌ಎಕ್ಸ್ ಟೆನ್ಶನ್‌ ಎರಡರ ಮಿಕ್ಸ್ ಎನ್ನಬಹುದು. ಪಾಲೀ ಜೆಲ್ ‌ಒಂದು ಟ್ಯೂಬಿನಲ್ಲಿ ಬರುತ್ತದೆ, ಇದನ್ನು ನೇಲ್ ‌ಫಾರ್ಮ್ಸ್ ಜೊತೆ ಯಾವ ನೇಲ್ ‌ನ ಸ್ಪೆಷಲ್ ಅಚ್ಚುಗಳಲ್ಲಿ ಅಳವಡಿಸಿ, ನಂತರ ನಿಮ್ಮ ಅಸಲಿ ಉಗುರಿನ ಮೇಲೆ ಪ್ರೆಸ್‌ ಮಾಡಲಾಗುತ್ತದೆ. ಇದನ್ನು UV ಲ್ಯಾಂಪ್‌ ಲೈಟ್‌ ನಲ್ಲಿ ಬೇಕ್‌ ಮಾಡಲಾಗುತ್ತದೆ  ಎಂಬುದೇ ಇದರ ವೈಶಿಷ್ಟ್ಯ.

ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ