– ರಾಘವೇಂದ್ರ  ಅಡಿಗ ಎಚ್ಚೆನ್.

ವಿಶ್ವ ಹೃದಯ ದಿನ 2026ರ ಅಭಿಯಾನವು ಬೆಂಗಳೂರಿನ ವಾಹನ ಸವಾರರಿಗೆ ಅನಗತ್ಯ ಶಬ್ದ ಮಾಡುವುದನ್ನು ಕಡಿಮೆ ಮಾಡಿ ಪ್ರತಿನಿತ್ಯದ ಸಂಚಾರದಲ್ಲಿ ಹಾರ್ನ್ ಶಬ್ದ ಕಡಿಮೆ ಮಾಡುವಂತೆ  ಕೋರುತ್ತದೆ

ಬೆಂಗಳೂರು, ಸೆಪ್ಟೆಂಬರ್ 21, 2026: ಬೆಂಗಳೂರಿನ ಸಂಚಾರ ವ್ಯವಸ್ಥೆ ನಿಧಾನಗತಿಯಲ್ಲಿರಬಹುದು, ಆದರೆ ಹಾರ್ನ್ ಶಬ್ದ ನಿಲ್ಲುವುದು ಮಾತ್ರ ಅಪರೂಪ. ಬಂಪರ್-ಟು-ಬಂಪರ್ ರಸ್ತೆಗಳವರೆಗೆ ಟ್ರಾಫಿಕ್ ಜಾಮ್ ಇರುವಾಗ, ಅನಗತ್ಯವಾಗಿ ಹಾರ್ನ್ ಮಾಡುವುದು ನಗರದ ದೈನಂದಿನ ಪ್ರಯಾಣದ ಭಾಗವಾಗಿಬಿಟ್ಟಿದೆ. ಈ ‘ವಿಶ್ವ ಹೃದಯ ದಿನ’ದಂದು, ಸ್ಪರ್ಶ್ ಆಸ್ಪತ್ರೆಯು ‘ಹಾರ್ನ್ ಡೋಂಟ್ ಮಾಡಿ’ ಎಂಬ ಬೆಂಗಳೂರು-ಕೇಂದ್ರಿತ ಅಭಿಯಾನವನ್ನು ಪ್ರಾರಂಭಿಸಿದೆ. ಇದು ವಾಹನ ಸವಾರರು ಅಭ್ಯಾಸಬಲದಿಂದ ಹಾರ್ನ್ ಮಾಡುವುದನ್ನು ಮರುಪರಿಶೀಲಿಸಲು ಮತ್ತು ದೈನಂದಿನ ಸಂಚಾರದ ಒತ್ತಡ ಹಾಗೂ ಆರೋಗ್ಯದ ಮೇಲಾಗುವ ಅದರ ಪ್ರಭಾವದ ಬಗ್ಗೆ ಜಾಗೃತಿ ಮೂಡಿಸಲು ಪ್ರೇರೇಪಿಸುತ್ತದೆ.

ಈ ಅಭಿಯಾನವನ್ನು ಒಂದು ಸರಳ ಚಿಂತನೆಯ ಸುತ್ತ ರೂಪಿಸಲಾಗಿದೆ: “ಹಾರ್ನ್ ಮಾಡುವುದರಿಂದ ಟ್ರಾಫಿಕ್  ಮುನ್ನಡೆಯುತ್ತದೆಯೇ? ಇಲ್ಲ ಎಂದಾದರೆ, ಈ ಎಲ್ಲಾ ಗದ್ದಲ ನಮಗೆ ಏನು ಮಾಡುತ್ತಿದೆ?” ಹಾರ್ನ್ ಬಳಕೆಯು ಸುರಕ್ಷತೆಗೆ ಅಗತ್ಯವಾದ ಒಂದು ಮುಖ್ಯ ಉಪಕರಣವಾಗಿದ್ದರೂ ಸಹ, ನಿರಾಶೆ, ಅಸಹನೆ ಅಥವಾ ಅಭ್ಯಾಸಬಲದಿಂದ ಮಾಡುವ ಅನಗತ್ಯ ಹಾರ್ನ್ ಶಬ್ದವನ್ನು ತಡೆಯುವುದು ‘ಹಾರ್ನ್ ಡೋಂಟ್ ಮಾಡಿ’ ಅಭಿಯಾನದ ಮುಖ್ಯ ಉದ್ದೇಶವಾಗಿದೆ.

1001838789

ದೈನಂದಿನ ಟ್ರಾಫಿಕ್ ಒತ್ತಡ, ಶಬ್ದ ಮಾಲಿನ್ಯ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ಚರ್ಚಿಸಲು ಸ್ಪರ್ಶ್ ಆಸ್ಪತ್ರೆಯ ನಾಯಕತ್ವ ಹಾಗೂ ಹೃದಯರೋಗ ತಜ್ಞರನ್ನು ತಂಡ  ಈ ಅಭಿಯಾನವನ್ನು ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅನಾವರಣಗೊಳಿಸಿದರು.

“ಹಾರ್ನ್ ಡೋಂಟ್ ಮಾಡಿ- ಅಭಿಯಾನದ ಮೂಲಕ, ನಾವು ಬೆಂಗಳೂರಿನ ಪರಿಚಿತ ಅನುಭವವನ್ನು ಜಾಗೃತಿಯ ಸರಳ ಕ್ಷಣವಾಗಿ ಬದಲಾಯಿಸಲು ಬಯಸುತ್ತೇವೆ. ಈ ಅಭಿಯಾನವು ಅಗತ್ಯವಿರುವಾಗ ಹಾರ್ನ್ ಮಾಡುವುದನ್ನು ತಡೆಯುವುದರ ಬಗ್ಗೆಯಲ್ಲ, ಬದಲಿಗೆ ಪ್ರತಿಯೊಂದು ಹಾರ್ನ್ ನಿಜವಾಗಿಯೂ ಅಗತ್ಯವಿದೆಯೇ ಎಂದು ಜನರು ಒಮ್ಮೆ ಆಲೋಚಿಸುವಂತೆ ಪ್ರೇರೇಪಿಸುವ ಕುರಿತಾಗಿದೆ.

ದೈನಂದಿನ ನಡವಳಿಕೆಯಲ್ಲಿನ ಸಣ್ಣ ಬದಲಾವಣೆಗಳು ಪ್ರಶಾಂತ ಮತ್ತು ಆರೋಗ್ಯಕರ ವಾತಾವರಣವನ್ನು ನಿರ್ಮಿಸಲು ನೆರವಾಗುತ್ತವೆ” ಎಂದು ಸ್ಪರ್ಶ್ ಆಸ್ಪತ್ರೆ ಸಮೂಹದ ಸಂಸ್ಥಾಪಕ, ಅಧ್ಯಕ್ಷ ಹಾಗೂ ಚೀಫ್ ಆರ್ಥೊಪೆಡಿಕ್ ಸರ್ಜನ್ ಡಾ. ಶರಣ್ ಶಿವರಾಜ್ ಪಾಟೀಲ್ ಹೇಳಿದರು .

ವೈದ್ಯಕೀಯ ದೃಷ್ಟಿಕೋನದಿಂದ, ದೊಡ್ಡ ಮತ್ತು ಅನಿರೀಕ್ಷಿತ ಶಬ್ದವು ದೇಹದಲ್ಲಿ ಒತ್ತಡದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಹಾಗೆಯೇ ಒತ್ತಡದ ವಾತಾವರಣಕ್ಕೆ ಪದೇ ಪದೇ ಒಡ್ಡಿಕೊಳ್ಳುವುದರಿಂದ ಕಾಲಕ್ರಮೇಣ ಶಾರೀರಿಕ ಒತ್ತಡ ಹೆಚ್ಚಾಗಬಹುದು. ನಿರಂತರವಾದ ಈ ಶಾರೀರಿಕ ಒತ್ತಡವು ಹೃದಯರೋಗದ ಆರೋಗ್ಯದ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಲ್ಲಿ ಒಂದಾಗಿದೆ.

“ಯಾವಾಗಲೋ ಒಮ್ಮೆ ಮಾಡುವ ಹಾರ್ನ್ ಶಬ್ದ ಕಳವಳಕಾರಿ ವಿಷಯವಲ್ಲ. ಆದರೆ, ಅನಗತ್ಯ ಹಾಗೂ ಒತ್ತಡದ ಶಬ್ದಕ್ಕೆ ಪದೇ ಪದೇ ಒಡ್ಡಿಕೊಳ್ಳುವುದು ದೇಹದ ಒತ್ತಡದ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ. ಇಂತಹ ಒತ್ತಡದ ವಾತಾವರಣವು ನಿರಂತರವಾಗಿ ಎದುರಾದಾಗ, ಅದು ದೀರ್ಘಕಾಲದ ಒತ್ತಡಕ್ಕೆ ಕಾರಣವಾಗಬಹುದು. ಇದು ಹೃದಯದ ಆರೋಗ್ಯದ ಮೇಲೆ ಪ್ರಭಾವ ಬೀರುವ ಹಲವಾರು ಅಂಶಗಳಲ್ಲಿ ಒಂದಾಗಿದೆ,” ಎಂದು ಸ್ಪರ್ಶ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್,  ಹೃದಯರೋಗ ತಜ್ಞ ಹಾಗೂ ಸಮೂಹದ ವೈದ್ಯಕೀಯ ನಿರ್ದೇಶಕರಾದ ಡಾ. (ಪ್ರೊ.) ರಂಜನ್ ಶೆಟ್ಟಿ ಅಭಿಪ್ರಾಯ ಪಟ್ಟರು .

ಈ ಅಭಿಯಾನದ ಭಾಗವಾಗಿ, ಸ್ಪರ್ಶ್ ಆಸ್ಪತ್ರೆಯು ಸಾರ್ವಜನಿಕ ಸಹಿ ಸಂಗ್ರಹ, ಆಸ್ಪತ್ರೆ ಹಾಗೂ ಸಮುದಾಯಗಳ ಸಹಭಾಗಿತ್ವ, ರೇಡಿಯೋ ಮತ್ತು ಸಾಮಾಜಿಕ ಮಾಧ್ಯಮಗಳ ಚಟುವಟಿಕೆಗಳು, ಸ್ಟ್ರೀಟ್ ವಾಕ್ಸ್ ಪಾಪ್ಸ್, ಸಂಚಾರ ಕುರಿತ ಸಂವಾದಾತ್ಮಕ ಸಮೀಕ್ಷೆಗಳು ಮತ್ತು ವೈದ್ಯರ ನೇತೃತ್ವದ ಚರ್ಚೆಗಳ ಮೂಲಕ ‘ಹಾರ್ನ್ ಡೋಂಟ್ ಮಾಡಿ’ ಅಭಿಯಾನವನ್ನು ಬೆಂಗಳೂರಿನ ರಸ್ತೆಗಳು ಹಾಗೂ ಸಮುದಾಯಗಳಿಗೆ ಕೊಂಡೊಯ್ಯಲಿದೆ. ಜೊತೆಗೆ, ‘ಹಾರ್ನ್ ನಾಟ್ ಓಕೆ ಪ್ಲೀಸ್’ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾ ಪ್ರಭಾವಿಗಳು ನಡೆಸಿಕೊಡುವ ಕಾರ್ಯಕ್ರಮಗಳನ್ನೂ ಈ ಅಭಿಯಾನ ಒಳಗೊಂಡಿರಲಿದೆ.

ಈ ಉಪಕ್ರಮದ ಉದ್ದೇಶವು ಬೆಂಗಳೂರಿನ ರಸ್ತೆಗಳಲ್ಲಿ ಹಾರ್ನ್ ಸೌಂಡ್ ಸಂಪೂರ್ಣವಾಗಿ ಇಲ್ಲದಂತೆ ಮಾಡುವುದಲ್ಲ. ಬದಲಿಗೆ, ಸುರಕ್ಷತೆಗೆ ಅಗತ್ಯವಿದ್ದಾಗ ಹಾರ್ನ್ ಬಳಸುವುದನ್ನು ಪ್ರತಿಪಾದಿಸುತ್ತಾ, ಅನಗತ್ಯ ಹಾಗೂ ಅಭ್ಯಾಸಬಲದಿಂದ ಮಾಡುವ ಹಾರ್ನ್ ಶಬ್ದವನ್ನು ಸಹಜ ಎಂಬಂತೆ ನೋಡುವುದನ್ನು ಕಡಿಮೆ ಮಾಡುವುದು ಸ್ಪರ್ಶ್ ಆಸ್ಪತ್ರೆಯ ಆಶಯವಾಗಿದೆ.

‘ಹಾರ್ನ್ ಡೋಂಟ್ ಮಾಡಿ’ ಅಭಿಯಾನದ ಮೂಲಕ, ಬೆಂಗಳೂರಿಗರಿಗೆ ಪರಿಚಿತವಾಗಿರುವ ಕಿರಿಕಿರಿ, ಜಾಗರೂಕತೆಯ ಪ್ರಯಾಣ, ದೈನಂದಿನ ಒತ್ತಡ ಹಾಗೂ ಹೃದಯದ ಆರೋಗ್ಯದ ಕುರಿತಾದ ಸಾರ್ವಜನಿಕ ಚರ್ಚೆಯಾಗಿ ಪರಿವರ್ತಿಸುವುದು ಸ್ಪರ್ಶ್ ಆಸ್ಪತ್ರೆಯ ಮುಖ್ಯ ಉದ್ದೇಶವಾಗಿದೆ.

ಸುರಕ್ಷತೆಗೆ ಅಗತ್ಯವಿದ್ದಾಗ ಮಾತ್ರ ಹಾರ್ನ್ ಬಳಸಿ, ಟ್ರಾಫಿಕ್ ನಲ್ಲಿದ್ದಾಗ ಅಭ್ಯಾಸಬಲದ ಪ್ರತಿಕ್ರಿಯೆಯಾಗಿ ಅಲ್ಲ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ