ಚಿತ್ರ: ಹೆಗ್ಗಣ ಮುದ್ದು
ನಿರ್ದೇಶನ: ಅವಿನಾಶ್
ನಿರ್ಮಾಣ: ಡಾಲಿ ಪಿಕ್ಚರ್
ತಾರಾಗಣ: ಪೂರ್ಣಚಂದ್ರ ಮೈಸೂರು, ಅದಿತಿ ಸಾಗರ್
ರೇಟಿಂಗ್: 3/5 ***
– ರಾಘವೇಂದ್ರ ಅಡಿಗ ಎಚ್ಚೆನ್.

ಅಜಿತ್( ಪೂರ್ಣಚಂದ್ರ ಮೈಸೂರು) ಒಬ್ಬ ನೆಟ್ವರ್ಕಿಂಗ್ ಕಂಪನಿ ಉದ್ಯೋಗಿ. ಅವನಿಗೆ ಹಳ್ಳಿಯ ಹುಡುಗಿ ಪ್ರೇರಣಾ (ಅದಿತಿ ಸಾಗರ್) ಜೊತೆ ಮದುವೆ ಆಗುತ್ತದೆ. ಪ್ರೀತಿಯ ಅಲೆಯಲ್ಲಿ ಜೀವನ ಸಾಗಿಸುತ್ತಿದ್ದ ವೇಳೆ ಅನುಮಾನ ಸುಳಿದಾಡುತ್ತದೆ. ಈ ನಡುವೆ ಪ್ರೇರಣಾಳ ಹಳೆ ಪ್ರೇಮ ಪ್ರಕರಣ ಸಹ ಬರುತ್ತದೆ ಮುಂದೆ ಏನಾಗುತ್ತದೆ ಎಂಬುದನ್ನು ತಿಳಿಯಲು ನೀವು ಈ ಸಿನಿಮಾವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಬೇಕು.

1001850516

ನಿಧಾನಗತಿಯ ನಿರೂಪಣೆ ಜೊತೆಗೆ ಆರಂಭದಿಂದ ಸಹಜ ಕುತೂಹಲ ಉಳಿಸಿಕೊಂಡು ಹೋಗುವ ಕಥೆ ಇದು. ಭಾವನೆಗಳ ಏರಿಳಿತ ಹದವಾಗಿದ್ದು ಬರಹದಲ್ಲಿ ಇರುವ ಕೆಲವು ಚಿಕ್ಕ ತಪ್ಪುಗಳನ್ನು ಕಲಾವಿದರ ಅಭಿನಯ ಮರೆಮಾಚಿದೆ.
ಪ್ರೇರಣಾ ಪಾತ್ರದಲ್ಲಿ ಅದಿತಿ ಸಾಗರ್ ಮಿಂಚಿದ್ದಾರೆ. ಎರಡು ಹಾಡುಗಳು ಸೊಗಸಾಗಿ ಮೂಡಿ ಬಂದಿದೆ. ಛಾಯಾಗ್ರಾಹಣ ಸಹ ಆಪ್ತವಾಗಿದೆ. ಒಟ್ಟಿನಲ್ಲಿ ಎಲ್ಲರೂ ಒಮ್ಮೆ ನೋಡಬಹುದಾದ ಚಿತ್ರ ಇದಾಗಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ