ಭಾರತದ ಮೊದಲ ಸೌರ ಮಿಷನ್‌, ಪ್ರಾಜೆಕ್ಟ್ ಡೈರೆಕ್ಟರ್‌ ಎಐ

ಖಂಡಿತವಾಗಿಯೂ ಬದಲಾವಣೆ ತರುತ್ತದೆ. ಆದರೆ ಅದರೊಂದಿಗೆ ಅನೇಕ ಅವಕಾಶಗಳೂ ಸೃಷ್ಟಿಯಾಗುತ್ತವೆ…..

ರೈತನ ಮಗಳಾದ ನಿಗರ್‌, ಬಾಲ್ಯದಲ್ಲಿ ತನ್ನ ಪುಟ್ಟ ಕಣ್ಣುಗಳಿಂದ ಆಕಾಶವನ್ನೇ ಅಚ್ಚರಿಯಿಂದ ದಿಟ್ಟಿಸಿ ನೋಡುತ್ತಿದ್ದಳು. ಸೂರ್ಯ, ಚಂದ್ರ ಮತ್ತು ನಕ್ಷತ್ರಗಳನ್ನು ಒಳಗೊಂಡ ಆಕಾಶ ತನ್ನನ್ನು ಮೌನವಾಗಿಯೇ ಕರೆಯುತ್ತಿರುವಂತೆ ಆಕೆಗೆ ಭಾಸವಾಗುತ್ತಿತ್ತು. ದಿನಗಳು ಕಳೆದ, ತಿಂಗಳುಗಳು ಕಳೆದ, ವರ್ಷಗಳು ಉರುಳಿದವು. ಅಂತಿಮವಾಗಿ ನಿಗರ್‌ ಶಾಜಿರನ್ನು ಭಾರತದ ಮೊದಲ ಸೌರ ಮಿಷನ್‌ ಆದಿತ್ಯ ಪ್ರಾಜೆಕ್ಟ್ ಡೈರೆಕ್ಟರ್‌ ಆಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ನೇಮಿಸಿದ ದಿನ ಬಂತು. ಈ ಮಿಷನ್‌ ನ್ನು 2023ರಲ್ಲಿ  ರಾಕೆಟ್‌ ನಲ್ಲಿ ಸೂರ್ಯನ ವಾತಾವರಣವನ್ನು ಅಧ್ಯಯನ ಮಾಡಲು, ಸೌರ ಬಿರುಗಾಳಿಯನ್ನು ಊಹಿಸಲು ಹಾಗೂ ಸೌರಮಂಡಲವನ್ನು ಮತ್ತಷ್ಟು ಅನ್ವೇಷಿಸಲು ಬಳಸಲಾಗುತ್ತದೆ. ಪ್ರಯೋಗಾಲಯದಲ್ಲಿ ಬಗೆಹರಿಯದ ಅನೇಕ ರಹಸ್ಯಗಳನ್ನು ಬಿಡಿಸುವ ಪ್ರಯತ್ನಗಳು ಮುಂದುವರಿದಿವೆ.

ಈ ಮಹತ್ವದ ಪ್ರಾಜೆಕ್ಟ್ ಡೈರೆಕ್ಟರ್‌ ಆಗಿ ವಿಜ್ಞಾನಿ ನಿಗರ್‌ ಶಾಜಿಯವರ ಆಯ್ಕೆಯು ಈ ದೇಶದ ಲಕ್ಷಾಂತರ ಹುಡುಗಿಯರು, ಮಹಿಳಾ ವಿಜ್ಞಾನಿಗಳು ಮತ್ತು ವಿಜ್ಞಾನಿ ವಿದ್ಯಾರ್ಥಿಗಳಿಗೆ ಸ್ಛೂರ್ತಿದಾಯಕ ಕ್ಷಣವಾಗಿತ್ತು.

ಗೃಹಶೋಭಾ ನಿಗರ್‌ ಶಾಜಿಯವರೊಂದಿಗೆ ಶಿಕ್ಷಣ, ಯುವಜನರ ವೃತ್ತಿಜೀವನ, ವಿಜ್ಞಾನದಲ್ಲಿ ಸಾಧ್ಯತೆಗಳು, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮತ್ತು ಉದ್ಯೋಗಗಳ ಕುರಿತು ವಿಶೇಷ ಸಂವಾದ ನಡೆಸಿತು. ಅವುಗಳಲ್ಲಿ ಕೆಲವು ಆಯ್ದ ಭಾಗವನ್ನು ಇಲ್ಲಿ ಪ್ರಕಟಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಗಣಿತ ಮತ್ತು ಭೌತಶಾಸ್ತ್ರವನ್ನು ಕಠಿಣ ವಿಷಯಗಳೆಂದು ಪರಿಗಣಿಸಲಾಗುತ್ತದೆ. ಇದನ್ನು ನೀವು ಒಪ್ಪುತ್ತೀರಾ?

ಇಲ್ಲ, ನಾನು ಇದನ್ನು ಒಪ್ಪುವುದಿಲ್ಲ. ಇದು ವರ್ಷಗಳಿಂದಲೂ ಇವರು ಒಂದು ಮಿಥ್. ಅಷ್ಟೇ. ಗಣಿತ ಇತರ ವಿಷಯಗಳಿಗಿಂತ ಸುಲಭ ಎಂದು ನಾನು ಭಾವಿಸುತ್ತೇನೆ. ಶಾಲೆಯಲ್ಲಿ ಗಣಿತ ಪರೀಕ್ಷೆಗಳನ್ನು ತೆಗೆದುಕೊಳ್ಳಲು ನನಗೆ ನಿಜವಾಗಿಯೂ ಇಷ್ಟವಾಗಿತ್ತು. ಏಕೆಂದರೆ ಅದಕ್ಕೆ ಹೆಚ್ಚು ಕಂಠಪಾಠ ಅಥವಾ ಅಧ್ಯಯನದ ಅಗತ್ಯವಿರಲಿಲ್ಲ. ನೀವು ಗಣಿತದ ತರ್ಕವನ್ನು ಅರ್ಥ ಮಾಡಿಕೊಂಡರೆ, ಅದು ತುಂಬಾ ಸುಲಭದ ವಿಷಯ ಎಂಬುದನ್ನು ಕಂಡುಕೊಳ್ಳಬಹುದು.

nigar-saâ__„ji

ಇಂದು ಪೋಷಕರು ಮನೆಯಲ್ಲಿ ಗಣಿತ ಮತ್ತು ಭೌತಶಾಸ್ತ್ರದಂತಹ ವಿಷಯಗಳನ್ನು ಕಲಿಸಲು ಸಾಧ್ಯವಿಲ್ಲ. ಆದ್ದರಿಂದ ಕೋಚಿಂಗ್ ಸೆಂಟರ್‌ ಗಳು ಇದಕ್ಕೆ ಸಹಾಯಕವಾಗಬಹುದೇ?

ನಿರ್ದಿಷ್ಟ ರೀತಿಯ ಪರೀಕ್ಷೆಗಳಿಗೆ ತಯಾರಿ ನಡೆಸಲು ತರಬೇತಿ ಸಂಸ್ಥೆಗಳು ಸೂಕ್ತವಾಗಿರುವುದರಿಂದ ಮೂಲಭೂತ ಸಿದ್ಧತೆಗಳನ್ನು ಪೋಷಕರೇ ಮಾಡಬೇಕು.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನಕ್ಕೆ ಸಂಬಂಧಿಸಿದಂತೆ ಲಿಂಗ ತಾರತಮ್ಯಗಳು ಕಡಿಮೆಯಾಗಿವೆಯೇ?

ನಮ್ಮ ಶಾಲಾ ಶಿಕ್ಷಣದ ನಂತರ ಹಲವಾರು ಬದಲಾವಣೆಗಳಾಗಿವೆ. ಆದರೆ ಅದು ಸಾಕಾಗುವುದಿಲ್ಲ. ಕೆಲವು ನಗರಗಳಲ್ಲಿ ಈ ಬದಲಾವಣೆಗಳು ಆಗಿರಬಹುದು. ಆದರೆ ದೂರದ ಹಳ್ಳಿಗಳಲ್ಲಿ, ವಿಷಯಗಳು ಇನ್ನೂ ಲಿಂಗಕ್ಕೆ ಸಂಬಂಧಿಸಿವೆ. ಹೆಣ್ಣುಮಕ್ಕಳ ಬಗ್ಗೆ ಕುಟುಂಬ ಮತ್ತು ಸಮಾಜದ ವರ್ತನೆಗಳು ಬದಲಾಗಿವೆ. ಆದರೆ, ಅದು ಅಷ್ಟು ಮಾತ್ರ ಸಾಕಾಗುವುದಿಲ್ಲ. ಶತಮಾನದ ನಂತರ ಹುಡುಗರು ಮತ್ತು ಹುಡುಗಿಯರ ನಡುವಿನ ತಾರತಮ್ಯ ಕೊನೆಗೊಳ್ಳುವ ಮತ್ತು ಇಬ್ಬರನ್ನೂ ಸಮಾನವಾಗಿ ಪರಿಗಣಿಸುವ ದಿನಗಳು ಬಂದೇ ಬರುತ್ತವೆ.

ಇಂದು ವಿದ್ಯಾರ್ಥಿಗಳು ಕಂಪ್ಯೂಟರ್‌ ಸೈನ್ಸ್ ನಲ್ಲಿ ಆಸಕ್ತಿ ವಹಿಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ಮೂಲಭೂತ ವಿಜ್ಞಾನದಿಂದ ವಿದ್ಯಾರ್ಥಿಗಳು ದೂರವಾಗುತ್ತಿರುವುದು ಕಳವಳಕಾರಿ ವಿಷಯವೇ?

ಹೌದು, ಇದು ಕಳವಳಕಾರಿ ವಿಷಯ. ತಂತ್ರಜ್ಞಾನ ಅದರಿಂದ ಹುಟ್ಟುವುದರಿಂದ ಮೂಲಭೂತ ವಿಜ್ಞಾನ ನಿರ್ಣಾಯಕವಾಗಿದೆ. ಆದ್ದರಿಂದ ತಂತ್ರಜ್ಞಾನದ ಅಭಿವೃದ್ಧಿಗೆ ಫಂಡಮೆಂಟಲ್ ಸೈನ್ಸ್ ಅಥವಾ ಮೂಲಭೂತ ವಿಜ್ಞಾನದ ಅಭಿವೃದ್ಧಿ ಅತ್ಯಗತ್ಯ.

ಇಂದಿಗೂ ಹೆಣ್ಣುಮಕ್ಕಳ ಶಿಕ್ಷಣದಲ್ಲಿ ಇವರು ದೊಡ್ಡ ಅಡಚಣೆ ಯಾವುದು?

ಗ್ರಾಮೀಣ ಪ್ರದೇಶದ ಅನೇಕ ಮನೆಗಳಲ್ಲಿ ಸಾಮಾಜಿಕ ಪೂರ್ವಾಗ್ರಹ ಇನ್ನೂ ಮುಂದುವರಿದಿದೆ. ಪೋಷಕರು ತಮ್ಮ ಹೆಣ್ಣುಮಕ್ಕಳನ್ನು ಒಳ್ಳೆಯ ವ್ಯಕ್ತಿಗೆ ಮದುವೆ ಮಾಡಿದರೆ ಸಾಕು ಎಂದು ಅಂದುಕೊಳ್ಳುತ್ತಾರೆ. ಅಂತಹ ಸಂದರ್ಭಗಳಲ್ಲಿ ತನ್ನ ಗಂಡು ಮತ್ತು ಹೆಣ್ಣುಮಕ್ಕಳಲ್ಲಿ ಪರಸ್ಪರ ಸಮಾನ ಗೌರವ ಭಾವನೆಯನ್ನು ಮೂಡಿಸುವುದು ತಾಯಿಯ ಪಾತ್ರವಾಗಿರುತ್ತದೆ. ಪ್ರತಿಯೊಂದು ಕುಟುಂಬ ಈ ರೀತಿ ಯೋಚಿಸಿದರೆ ಸಮಾಜದಲ್ಲಿ ಗಂಡು ಮತ್ತು ಹೆಣ್ಣುಮಕ್ಕಳ ನಡುವಿನ ತಾರತಮ್ಯ ಕೊನೆಗೊಳ್ಳುತ್ತದೆ ಹಾಗೂ ಬದಲಾವಣೆ ಬರುತ್ತದೆ.

ಒಬ್ಬ ವಿದ್ಯಾರ್ಥಿಯು ವೈಫಲ್ಯಗಳಿಗೆ ಹೆದರಿ ಯಾವುದೇ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಾಗದಿದ್ದರೆ, ಅವನಿಗೆ ನಿಮ್ಮ ಸಂದೇಶವೇನು?

ಯಾರಾದರೂ ಯಶಸ್ಸು ಸಾಧಿಸಿದ್ದಾರೆ ಎಂದರೆ, ಅವರು 100 ಬಾರಿ ವಿಫಲರಾದ ನಂತರ ಅದನ್ನು ಸಾಧಿಸಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಕೆಲವರು ಲೆಕ್ಕವಿಲ್ಲದಷ್ಟು ಬಾರಿ ಪ್ರಯತ್ನಿಸಿದರೂ ಯಶಸ್ವಿಯಾಗಲು ವಿಫಲರಾಗುತ್ತಾರೆ ಎಂಬುದು ನಿಜ. ಆ ಸಮಯ ಕಳೆದು ಹೋಗುವವರೆಗೆ ನಿಮ್ಮನ್ನು ಶಾಂತವಾಗಿ ಇರಿಸಿಕೊಳ್ಳುವುದು ಬಹಳ ಒಳ್ಳೆಯದು. ಸ್ವಯಂ ಪ್ರೇರಣೆಗಿಂತ ಉತ್ತಮವಾದದ್ದು ಯಾವುದೂ ಇಲ್ಲ ಎಂಬುದನ್ನು ನೆನಪಿಡಿ. ಇಂದು ಕೆಟ್ಟದ್ದಾಗಿರಬಹುದು, ಆದರೆ ನಾಳೆ ಖಂಡಿತವಾಗಿಯೂ ಒಳ್ಳೆಯದಾಗುತ್ತದೆ ಎಂಬುದನ್ನು ಯೋಚಿಸಿ. ಯಾವುದೇ ಬೆಲೆ ತೆತ್ತಾದರೂ ಸರಿ ಪ್ರಯತ್ನವನ್ನು ಮಾತ್ರ ನಿಲ್ಲಿಸಬೇಡಿ. ಏಕೆಂದರೆ, `ಬಿಟ್ಟುಕೊಡುವುದು’ ಅಥವಾ` ಬಿಟ್ಟುಬಿಡುವುದು’ ಪರಿಹಾರವಲ್ಲ. ನಿಮ್ಮ ಗುರಿಯನ್ನು ನೀವು ಉತ್ಸಾಹವೆಂದು ಪರಿಗಣಿಸಿದರೆ, ಕೆಲಸ ಎಂದಿಗೂ ಹೊರೆಯಾಗಿ ಕಾಣುವುದಿಲ್ಲ. ನಿಮ್ಮೊಳಗಿನ ಉತ್ಸಾಹವನ್ನು ಜೀವಂತವಾಗಿರಿಸಿಕೊಳ್ಳಿ. ಅದನ್ನು ಎಂದಿಗೂ ಸಾಯಲು ಬಿಡಬೇಡಿ. ಒಂದು ದಿನ ನೀವು ಖಂಡಿತವಾಗಿಯೂ ಯಶಸ್ಸು ಸಾಧಿಸುವಿರಿ. ನೀವು ನಿರಾಶೆಗೊಂಡರೆ, ಸ್ವಲ್ಪ ವಿರಾಮ ತೆಗೆದುಕೊಂಡು ಮತ್ತೆ ಕೆಲಸ ಮಾಡಲು ಪ್ರಾರಂಭಿಸಿ.

ಎಂಜಿನಿಯರಿಂಗ್‌ ಆಯ್ಕೆ ಮಾಡಿಕೊಂಡು ಇಸ್ರೋ ಸೇರಲು ನಿಮಗೆ ಪ್ರೇರಣೆ ಏನು? ಅದೊಂದು ನಿರ್ಣಾಯಕ ಕ್ಷಣವಾಗಿತ್ತೇ?

ಆ ಸಮಯದಲ್ಲಿ ಎಂಜಿನಿಯರಿಂಗ್‌ ವೇಗವಾಗಿ ಬೆಳೆಯುತ್ತಿದ್ದ ಕ್ಷೇತ್ರವಾಗಿತ್ತು. ಅನೇಕ ಅವಕಾಶಗಳನ್ನೂ ಹೊಂದಿತ್ತು. ಎಂಜಿನಿಯರಿಂಗ್‌ ನಲ್ಲಿ ಮಹಿಳೆಯರ ಸಂಖ್ಯೆ ಬಹಳ ಕಡಿಮೆ ಇತ್ತು. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರದಲ್ಲಿ ನನಗೆ ಬಹಳ ಆಸಕ್ತಿಯೂ ಇತ್ತು. ಇದು ನನ್ನ ನಿರ್ಧಾರಕ್ಕೆ ಮತ್ತಷ್ಟು ಬಲ ನೀಡಿತು. ಇಸ್ರೋಗೆ ಸೇರುವುದು ಆರಂಭದಲ್ಲಿ ನನ್ನ ಬಾಲ್ಯದ ಕನಸಾಗಿರಲಿಲ್ಲ. ಎಂಜಿನಿಯರಿಂಗ್‌ ಮುಗಿಸಿದ ನಂತರ ನಾನು ಹಲವಾರು ಸಂಸ್ಥೆ ಮತ್ತು ಕಂಪನಿಗಳಿಗೆ ಅರ್ಜಿ ಸಲ್ಲಿಸಿದೆ. ಇಸ್ರೋದಲ್ಲಿ ಅವಕಾಶ ಬಂದಾಗ, ನಾನು ಅದನ್ನು ಬಳಸಿಕೊಂಡೆ. ಅವಕಾಶ ಸಿಕ್ಕಾಗ ಬಾಹ್ಯಾಕಾಶ ಸಂಶೋಧನಿ ಯಾವಾಗಲೂ ನನ್ನ ಮೊದಲ ಆಯ್ಕೆಯಾಗಿದ್ದರಿಂದ ನಾನು ಅದನ್ನು ಆರಿಸಿಕೊಂಡೆ.

ಸಾಮಾಜಿಕ ನಿರೀಕ್ಷೆಗಳು ಅಥವಾ ಪ್ರತಿಬಂಧಗಳಿಂದಾಗಿ ವಿಜ್ಞಾನ ಕ್ಷೇತ್ರದಲ್ಲಿ ವೃತ್ತಿ ಜೀವನವನ್ನು ಆಯ್ಕೆ ಮಾಡುವಾಗ ಯುವತಿಯರು ಮಾಡುವ ಸಾಮಾನ್ಯ ತಪ್ಪುಗಳು ಯಾವುವು?

ಇಂದಿನ ಪೀಳಿಗೆಗೆ ಮಾಹಿತಿಯ ಸಂಪತ್ತು ಲಭ್ಯವಿದ್ದು, ಇದು ಒಂದು ಅನುಕೂಲ. ಆದಾಗ್ಯೂ, ಕನಸುಗಳನ್ನು ನಿಮ್ಮ ಸಾಮರ್ಥ್ಯಗಳೊಂದಿಗೆ ಸಮತೋಲನಗೊಳಿಸುವುದು ಬಹಳ ಮುಖ್ಯ. ವೃತ್ತಿ ಜೀವನದ ಆಯ್ಕೆಗಳನ್ನು ಕೇವಲ ಸಾಮಾಜಿಕ ನಿರೀಕ್ಷೆಗಳನ್ನು ಅನುಸರಿಸುವ ಬದಲು ಆತ್ಮಾವಲೋಕನ, ನಿಮ್ಮ ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಳ್ಳುವುದು ಮತ್ತು ತಿಳಿವಳಿಕೆಯುಳ್ಳ ನಿರ್ಧಾರ ತೆಗೆದುಕೊಳ್ಳುವ ಮೂಲಕ ಮಾಡಬೇಕು.

ಹುಡುಗಿಯರು ವಿಜ್ಞಾನ ಮತ್ತು ಸಂಶೋಧನಾ ವೃತ್ತಿಗಳನ್ನು ಮುಂದುವರಿಸಲು ಪ್ರೋತ್ಸಾಹಿಸುವಲ್ಲಿ ಪೋಷಕರು ಹಾಗೂ ಶಿಕ್ಷಕರ ಪಾತ್ರವೇನು?

ಆತ್ಮವಿಶ್ವಾಸವನ್ನು ಬೆಳೆಸುವಲ್ಲಿ ಪೋಷಕರು ಹಾಗೂ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ. ಗಣಿತ ಅಥವಾ ವಿಜ್ಞಾನದಂತಹ ವಿಷಯಗಳಲ್ಲಿ ಭಯ ಹುಟ್ಟಿಸುವುದನ್ನು ಅವರು ತಪ್ಪಿಸಬೇಕು. ಬದಲಾಗಿ, ಅವರು ಅವುಗಳ ಬಗ್ಗೆ ಕುತೂಹಲ ಹುಟ್ಟಿಸುವ ಮೂಲಕ ಪ್ರೋತ್ಸಾಹಿಸಬೇಕು. ವಿಷಯಗಳು ಹುಡುಗಿಯರಿಗೆ ಕಷ್ಟಕರ ಅಥವಾ ಸೂಕ್ತವಲ್ಲ ಎಂಬ ಮನೋಭಾವ ಹೋಗಲಾಡಿಸಬೇಕು. ಚಿಕ್ಕ ವಯಸ್ಸಿನಲ್ಲಿಯೇ ನಿರ್ಮಿಸಲಾದ ಆತ್ಮವಿಶ್ವಾಸ ದೊಡ್ಡ ವ್ಯತ್ಯಾಸವನ್ನು ಉಂಟು ಮಾಡುತ್ತದೆ.

ವೃತ್ತಿ ಆಯ್ಕೆ ಮಾಡಿಕೊಳ್ಳುವ ಮೊದಲು ಪ್ರತಿ ಹುಡುಗಿಯೂ ನೆನಪಿನಲ್ಲಿಟ್ಟುಕೊಳ್ಳಬಹುದಾದ ಸಂದೇಶವೇನು?

ಕನಸು ಕಾಣಬೇಕು, ಧೈರ್ಯ ಮಾಡಬೇಕು ಹಾಗೂ ಬಂಡಾಯವೆದ್ದು  ಮುನ್ನುಗ್ಗಬೇಕು.

ಕ್ವಿಕ್‌ ಇಂಟ್ರೊ 

ಜನ್ಮಸ್ಥಳ :  ಸೆಂಗೋಟ್ಟೈ, ತಮಿಳುನಾಡು.

ಶಿಕ್ಷಣ :  ಸರ್ಕಾರಿ ಹೈಯರ್‌ ಸೆಕೆಂಡರಿ ಸ್ಕೂಲ್‌, ಸೆಂಗೋಟ್ಟೈ, ಸರ್ಕಾರಿ ಎಂಜಿನಿಯರಿಂಗ್‌ಕಾಲೇಜು, ತಿರುನಲ್ವೇಲಿ, ಬಿರ್ಲಾ ಇನ್‌ ಸ್ಟಿಟ್ಯೂಟ್‌ಆಫ್‌ ಟೆಕ್ನಾಲಜಿ.

ವೃತ್ತಿ :  ಭಾರತದ ಮೊದಲ ಸೌರಮಿಷನ್‌ಪ್ರಾಜೆಕ್ಟ್ ಡೈರೆಕ್ಟರ್‌.

ಲರ್ನಿಂಗ್‌ : ಗಣಿತ ಮತ್ತು ಭೌತಶಾಸ್ತ್ರ ವಿಷಯಗಳು ಉತ್ತಮ ವೃತ್ತಿ ಆಯ್ಕೆಗಳನ್ನು ನೀಡುತ್ತವೆ. ಆದರೆ ಅವುಗಳನ್ನು ಅರ್ಥ ಮಾಡಿಕೊಳ್ಳಲು ಅಭ್ಯಾಸ ಮತ್ತು ಸತತ ಪರಿಶ್ರಮ ಅಗತ್ಯ.

ಮೂಲಭೂತ ಅಧ್ಯಯನದ ನಂತರ, ವೃತ್ತಿಪರ ಜ್ಞಾನಕ್ಕಾಗಿ ಉತ್ತಮ ತರಬೇತಿ ಸಂಸ್ಥೆಗಳನ್ನು ಆಯ್ಕೆ ಮಾಡಿ.

ಡೇಟಾ ಸೈನ್ಸ್ ಎಐ ಜೊತೆಗೆ ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್‌ ಎಂಜಿನಿಯರಿಂಗ್‌ ನಲ್ಲಿ ಉತ್ತಮ ಅವಕಾಶವಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ