Sj*

ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸಿರುವ ಮಮತ ಅಮಿನ್ ನಿರ್ಮಾಣದ ಹಾಗೂ ಅಜಯ್ ಸಾಗರ್ ನಿರ್ದೇಶನದ ಜೊತೆಗೆ ನಾಯಕನಾಗಿಯೂ ನಟಿಸಿರುವ “ಕೂಪ ಮಂಡೂಕ” ಚಿತ್ರದ ಮೋಷನ್ ಪೋಸ್ಟರ್ ದಸರಾ ಸಂದರ್ಭದಲ್ಲಿ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಇತ್ತೀಚೆಗೆ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದರು. ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಶಿವಣ್ಣ ಹಾರೈಸಿದ್ದಾರೆ.

ಟಿ.ಎನ್ ಸೀತಾರಾಮ್, ಪಿ.ಶೇಷಾದ್ರಿ, ರವಿ.ಆರ್ ಗರಣಿ, ಬಿ.ಸುರೇಶ್ ಮುಂತಾದವರ ನಿರ್ಮಾಣ ಹಾಗೂ ನಿರ್ದೇಶನದ ಜನಪ್ರಿಯ ಧಾರಾವಾಹಿಗಳಲ್ಲಿ ನಟಿಸುವುದರ ಜೊತೆಗೆ ಕನ್ನಡದ ಸುಪ್ರಸಿದ್ದ ನಟರ ಕೆಲವು ಚಿತ್ರಗಳಲ್ಲೂ ಅಭಿನಯಿಸಿರುವ ಅಜಯ್ ಸಾಗರ್ ನಿರ್ದೇಶನದ ಹಾಗೂ ನಾಯಕನಾಗಿ ನಟಿಸಿರುವ ಚೊಚ್ಚಲ ಚಿತ್ರ “ಕೂಪ ಮಂಡೂಕ”.

sagar1

ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಸೈಕಾಲಜಿ ಹಾಗೂ ಮೈಥಾಲಜಿ ಯ ಮಿಶ್ರಣದ ಜಾನರ್ ನಲ್ಲಿ ಈ ಚಿತ್ರ ಮೂಡಿಬಂದಿದೆ. ಆಸ್ತಿಕ ಹಾಗೂ ನಾಸ್ತಿಕನ ನಡುವೆ ನಡೆಯುವ ಕಥೆಯೂ ಇದಾಗಿದೆ. ಈಗಾಗಲೇ ಚಿತ್ರೀಕರಣ ಹಾಗೂ ನಂತರದ ಚಟುವಟಿಕೆಗಳು ಪೂರ್ಣವಾಗಿ ಚಿತ್ರ ತೆರೆಗೆ ಬರಲು ಸಿದ್ದಾವಾಗಿದೆ. ನಾನು ಡಾ||ರಾಜಕುಮಾರ್ ಅವರ ದೊಡ್ಡ ಅಭಿಮಾನಿ. ಅವರ ಪುತ್ರ ಶಿವರಾಜಕುಮಾರ್ ಅವರು ನಮ್ಮ ಚಿತ್ರಕ್ಕೆ ಪ್ರೋತ್ಸಾಹ ನೀಡಿದ್ದು, ಬಹಳ ಖುಷಿಯಾಗಿದೆ. ಅವರಿಗೆ ತುಂಬು ಹೃದಯದ ಧನ್ಯವಾದಗಳು ” ಕೂಪ ಮಂಡೂಕ” ಚಿತ್ರಕ್ಕೆ “ಒಂದು ದೃಷ್ಟಾಂತ ಕಥೆ” ಎಂಬ ಅಡಿಬರಹವಿದೆ. ಎಂದು ಚಿತ್ರದ ನಾಯಕ ಹಾಗೂ ನಿರ್ದೇಶಕ ಅಜಯ್ ಸಾಗರ್ ತಿಳಿಸಿದ್ದಾರೆ .

ಮನೀಶ್ ಬಂಗೇರ ಛಾಯಾಗ್ರಹಣ, ವಿಜಯ್ ಸಿಂಧಗಿ ಸಂಕಲನ ಹಾಗೂ ಪ್ರತಾಪ್ ಸಾಲಿಗ್ರಾಮ ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ಈ ಚಿತ್ರದ ತಾರಾಬಳಗದಲ್ಲಿ ಅಜಯ್ ಸಾಗರ್, ಚಿರಶ್ರಿ ಅಂಚನ್, ಕಾರ್ತಿಕ್ ರಾವ್, ಪ್ರಕಾಶ್ ತುಮಿನಾಡ್, ಚಂದ್ರಕಲಾ ಮೋಹನ್, ವಜ್ರಂಗ ಶೆಟ್ಟಿ ಮುಂತಾದವರಿದ್ದಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ