ಕವಿಯಿತ್ರಿ ಸಾಹಿತಿ

ಲಿಟರೆರಿ ಆರ್ಟ್ಸ್ ಅಚೀವರ್‌ ಅವಾರ್ಡ್‌

“ಹಿಂದಿ ಯಾ ಅವರವರ ಸ್ಥಳೀಯ ಭಾಷೆಯಲ್ಲಿ ಜನ ತಮ್ಮನ್ನು ತಾವು ಅಭಿವ್ಯಕ್ತಿಗೊಳಿಸಲು ಬಯಸುತ್ತಾರೆ…..”

ಹಿಂದಿ ಸಾಹಿತ್ಯದಲ್ಲಿ ಸ್ತ್ರೀವಾದಿ ಎಂದ ತಕ್ಷಣ ನೆನಪಾಗುವ ಪ್ರಭಾವಶಾಲಿ  ಹೆಸರು ಡಾ. ಅನಾಮಿಕಾ. ಬಿಹಾರ್‌ ತವರಿನಿಂದ ಈಗ ದೆಹಲಿಗೆ ಬಂದು ನೆಲೆಸಿರುವ ಈಕೆ ಕೇವಲ ಕವಿಯಿತ್ರಿ ಮಾತ್ರವಲ್ಲ, ಕಾಣದ ಲಕ್ಷಾಂತರ ಹೆಣ್ಣುಮಕ್ಕಳ ಧ್ವನಿಯಾಗಿದ್ದಾರೆ. 1978ರಿಂದ ಶುರುವಾದ ಇವರ ಬರವಣಿಗೆ ಸತತ ಇಂದಿನವರೆಗೆ ಮುಂದುವರಿದಿದೆ. ಜೊತೆಗೆ ಆಂಗ್ಲ ಭಾಷೆಯ ಪ್ರೊಫೆಸರ್‌ ಆಗಿ ದೆಹಲಿ ವಿ.ವಿ. ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

2020ರಲ್ಲಿ ಪ್ರಕಟವಾದ ಇವರ `ಟೋಕ್ರಿಮೇ ದಿಗಂತ್‌ ಥೇರಿ ಗಾಥಾ 2014’ಗಾಗಿ ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು. ಇಲ್ಲಿ ಬೌದ್ಧ ಭಿಕ್ಷುಣಿಯರ ಬವಣೆಗಳನ್ನು ಇಂದಿನ ಕಾಲಕ್ಕೆ ಅನ್ವಯಿಸಿ ಹೇಳಿದ್ದಾರೆ. ಅಂದಿನ ಕಾಲದ್ದನ್ನು ಇಂದಿಗೆ ತರುವುದೇ ಇವರ ವೈಶಿಷ್ಟ್ಯ.`ಖುರ್ದರಿ ಹಥೇಲಿಯಾಂ, ದೂಬ್‌ ಧಾನ್‌, ಅನುಷ್ಟುಪ್‌, ಬೀಜಾಕ್ಷರ್‌, ಗಲತ್‌ ಪತೇ ಕೀ ಚಿಟ್ಠೀ’ ಇತ್ಯಾದಿ ಕವನ ಸಂಕಲನಗಳೊಂದಿಗೆ `ದಸ್‌ ದ್ವಾರೆ ಕಾ ಪಿಂಜರಾ, ಅವಾಂತರ್‌ ಕಥಾ, ತಿನ್ಕಾ ತಿನ್ಕೇ ಪಾಸ್‌’ ಇತ್ಯಾದಿ ಕಾದಂಬರಿಗಳಿಂದ ಪ್ರಸಿದ್ಧರಾಗಿದ್ದಾರೆ. ಸ್ತ್ರೀವಾದಿ ಪ್ರಬಂಧಗಳನ್ನೂ ಮಂಡಿಸಿದ್ದಾರೆ. ಹೆಣ್ಣಿನ ಮನದಾಳದ ಏರಿಳಿತಗಳನ್ನು ಹೃದಯಸ್ಪರ್ಶಿಯಾಗಿ ಚಿತ್ರಿಸುವುದೇ ಇವರ ವೈಶಿಷ್ಟ್ಯ.

ಇವರಿಗೆ `ಭಾರತ್‌ ಭೂಷಣ್‌ ಅಗ್ರವಾಲ್‌, ಗಿರಿಜಾ ಕುಮಾರ್‌ ಮಾಥುರ್‌, ಸಾಹಿತ್ಯಕಾರ್‌ ಸಮ್ಮಾನ್‌, ಪರಂಪರಾ ಸಮ್ಮಾನ್‌, ಸಾಹಿತ್ಯ ಸೇತು ಸಮ್ಮಾನ್‌’ ಇತ್ಯಾದಿ ಪ್ರಶಸ್ತಿಗಳೂ ಲಭಿಸಿವೆ.

ಆಧುನಿಕ ಯುವ ಪೀಳಿಗೆಗೆ ಸಂದೇಶ : ಈಕೆ ಹೇಳುತ್ತಾರೆ, ಲೋಕದ ಯಾವುದೇ ಕ್ರಿಯೆಗೆ ತಕ್ಷಣ ಪ್ರಕ್ರಿಯೆ ನೀಡಬಾರದು. ಭಾವಾವೇಶ ನಿಯಂತ್ರಿಸಿ, ಆ ಕುರಿತು ನಿಧಾನವಾಗಿ ಯೋಚಿಸಿ, ವಿಶ್ಲೇಷಿಸಿ, ಪುಸ್ತಕ ರೂಪದಲ್ಲಿ ಬರೆದು ಹೇಳಬೇಕು. ಕೋಪಕ್ಕೆ ಬಲಿಯಾಗಬಾರದು.

ಬರವಣಿಗೆಗೆ ಹಿಂದಿ ಭಾಷೆಯೇ ಏಕೆ ಆಗಬೇಕು? : ಹಿಂದಿ ಯಾ ಆಯಾ ಸ್ಥಳೀಯ ಭಾಷೆ ಅವರವರ ಮಾತೃ ಭಾಷೆಯಾದ್ದರಿಂದ ಸುಲಲಿತವಾಗಿ, ಓತಪ್ರೋತವಾಗಿ ಅದರಲ್ಲಿ ಭಾವನೆಗಳನ್ನು ಅಭಿವ್ಯಕ್ತಿಗೊಳಿಸಬಹುದು. ಸಾಮಾನ್ಯ ಜನರ ಆಡುಭಾಷೆ ಮೂಲಕ ಅವರನ್ನು ತಲುಪಬೇಕೆನ್ನುವುದೇ ಇವರ ಗುರಿ.

ರೈಟಿಂಗ್‌ ಪ್ರೊಫೆಶನ್‌ : ಯಾವ ವ್ಯಕ್ತಿ ಯಾವ ಸನ್ನಿವೇಶದಲ್ಲೇ ಆಗಲಿ, ಅತಿ ಮಾರ್ಮಿಕವಾಗಿ, ಸಶಕ್ತನಾಗಿ, ಸುಂದರವಾಗಿ ಭಾಷೆ ಅಭಿವ್ಯಕ್ತಿಗೊಳಿಸಿದಾಗ ಎದುರಿನವರ ಹೃದಯ ಪರಿವರ್ತನೆ ಸಾಧ್ಯ. ದಲಿತರ ದನಿಯಾಗಿ ಮಿಡಿಯುವ ಈಕೆ ಅಪ್ಪಟ ಗಾಂಧಿವಾದಿ. ಶೋಷಿತರ ನುಡಿಯಾಗಿ ಬರೆಯುತ್ತಾರೆ.

ಶೋಷಿತ ವ್ಯಕ್ತಿ ಮಾತ್ರ ತನ್ನ ನೋವನ್ನು ಸ್ಪಷ್ಟವಾಗಿ ಬಿಚ್ಚಿಡಬಲ್ಲ. ಅದರಲ್ಲೂ ದೌರ್ಜನ್ಯಕ್ಕೆ ಒಳಗಾದ ಹೆಣ್ಣು, ಶೋಷಣೆ ಸಹಿಸುತ್ತಲೇ ಮೂರುಕಾಲ ಬಾಳಿದಳು, ಇನ್ನಾದರೂ ಮುಂದೆ ಬಂದು ಈ ಸಮಾಜವನ್ನು ಪ್ರತಿಭಟಿಸಿ ತನ್ನ ಭಾವನೆ ಹೇಳಿಕೊಳ್ಳಬೇಕು. ಹೃದಯವಂತರು ಮಾತ್ರ ಇಂಥ ಅಪ್ಪಟ ಸಾಹಿತ್ಯಕ್ಕೆ ಸ್ರೋತ ಆಗಬಲ್ಲರು.

ಇಂದು ಎಲ್ಲೆಡೆ `ಸ್ತ್ರೀ ಸಶಕ್ತೀಕರಣ’ದ ಮಾತು ಕೇಳಿ ಬರುತ್ತಿದೆ, ಅದಕ್ಕೆ ಅನಾಮಿಕಾ ಆ ಕಾಲದಿಂದಲೇ ಧ್ವನಿಯಾಗಿದ್ದಾರೆ. ಮನೆಯ ಒಳಾಂಗಣದಿಂದ ವಿಶಾಲ ಪ್ರಪಂಚದ ಎಲ್ಲೆಡೆ ಹೆಣ್ಣಿಗೆ ಹಕ್ಕು ಇದ್ದೇ ಇದೆ, ಹೋರಾಡಿಯಾದರೂ ಸರಿ, ಅವಳು ತನ್ನ ಐಡೆಂಟಿಟಿ ಸ್ಥಾಪಿಸಬೇಕು, ಇದೇ ಗೃಹಶೋಭಾ ಪತ್ರಿಕೆಯ ಗುರಿ, ಎಂದು ಶ್ಲಾಘಿಸುತ್ತಾರೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ