– ರಾಘವೇಂದ್ರ ಅಡಿಗ ಎಚ್ಚೆನ್ .

ಪ್ರಸಿದ್ಧ ತಾಯಿ ಹಾಸನಾಂಬೆ ಮತ್ತು ಶ್ರೀ ಸಿದ್ದೇಶ್ವರಸ್ವಾಮಿ ದೇವಾಲಯದ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ, ಸಾಲಗಾಮೆ ಹೋಬಳಿಯ ಸೀಗೆಗುಡ್ಡ ಮೀಸಲು ಅರಣ್ಯ ಪ್ರದೇಶದಲ್ಲಿರುವ ಪ್ರಸಿದ್ಧ ‘ಮಳೆ ಮಲ್ಲೇಶ್ವರ’ ದೇವಸ್ಥಾನದ ರಸ್ತೆಯಲ್ಲಿ ಖಾಸಗಿ ಹಾಗೂ ಪ್ರವಾಸಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಆದೇಶ ಹೊರಡಿಸಿದ್ದಾರೆ.

​ಈ ವಾಹನ ಸಂಚಾರ ನಿಷೇಧವು ಅಕ್ಟೋಬರ್ 25 ರಿಂದ ನವೆಂಬರ್ 11 ರವರೆಗೆ ಜಾರಿಯಲ್ಲಿರಲಿದೆ.

ನಿಷೇಧಕ್ಕೆ ಮುಖ್ಯ ಕಾರಣಗಳು:

  • ​ಭಕ್ತಾದಿಗಳ ಸಂಖ್ಯೆ ಹೆಚ್ಚಳ: ‘ಪ್ರೇಮದ ಊರಲ್ಲಿ’ ಕನ್ನಡ ಸಿನಿಮಾ ಬಿಡುಗಡೆಯಾದ ನಂತರ ದಿನಕ್ಕೆ ಕೇವಲ 50 ಜನರಷ್ಟೇ ಭೇಟಿ ನೀಡುತ್ತಿದ್ದ ಈ ದೇವಸ್ಥಾನಕ್ಕೆ ಪ್ರಸ್ತುತ ಪ್ರತಿದಿನ 5,000ಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ.
  • ​ಅಪಾಯಕಾರಿ ರಸ್ತೆ: ಮಳೆ ಮಲ್ಲೇಶ್ವರ ಬೆಟ್ಟಕ್ಕೆ ತೆರಳುವ ರಸ್ತೆಯು ಅತ್ಯಂತ ಕಿರಿದಾಗಿದ್ದು, ಕಡಿದಾದ ಇಳಿಜಾರಿನಿಂದ ಕೂಡಿದೆ. ಅಲ್ಲದೆ ರಸ್ತೆಯ ಬದಿಯಲ್ಲಿ ತಡೆಗೋಡೆ (ಕಂಚಿ) ಇಲ್ಲದಿರುವುದರಿಂದ ಸಾರಿಗೆ ಸಂಚಾರಕ್ಕೆ ಅತ್ಯಂತ ಅಪಾಯಕಾರಿಯಾಗಿದೆ.
  • ​ಸುರಕ್ಷತಾ ಕ್ರಮ: ಹಾಸನಾಂಬ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಮುಂಜಾಗೃತಾ ಕ್ರಮವಾಗಿ ಪೊಲೀಸ್ ಇಲಾಖೆ ಹಾಗೂ ಅರಣ್ಯ ಇಲಾಖೆಯ ಶಿಫಾರಸಿನ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.

banned

​ವಾಹನ ಸಂಚಾರ ನಿಷೇಧಿಸಲಾದ ಮಾರ್ಗಗಳು:

  1. ​ಬೇಲೂರು ಕಡೆಯಿಂದ: ಕಲ್ಕೆರೆ ಗ್ರಾಮದಿಂದ ವೀರಾಪುರ ಗ್ರಾಮದ ರಸ್ತೆ.
  2. ​ಹಳೇಬೀಡು ಕಡೆಯಿಂದ: ಸೀಗೆ ಮತ್ತು ವೀರಾಪುರ ಗ್ರಾಮದ ರಸ್ತೆ.
  3. ​ಗೋಳೇನಹಳ್ಳಿ ಮಾರ್ಗ: ಗೋಳೇನಹಳ್ಳಿ ಮಾರ್ಗವಾಗಿ ಸೀಗೆಗುಡ್ಡಕ್ಕೆ ಹೋಗುವ ರಸ್ತೆ.

​ಗಮನಿಸಿ (ಭಕ್ತಾದಿಗಳಿಗೆ ಸೂಚನೆ):

ವಾಹನ ಸಂಚಾರ ನಿಷೇಧಿಸಿರುವ ಅವಧಿಯಲ್ಲಿ ಮಳೆ ಮಲ್ಲೇಶ್ವರ ಸ್ವಾಮಿಯ ದರ್ಶನಕ್ಕೆ ತೆರಳುವ ಭಕ್ತಾದಿಗಳಿಗೆ ಕಾಲ್ನಡಿಗೆಯಲ್ಲಿ (By Walk) ತೆರಳಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.

  1. ​ಮೋಟಾರು ವಾಹನ ಕಾಯ್ದೆ 1988 ರ ಸೆಕ್ಷನ್ 115 ಹಾಗೂ 1989 ರ ನಿಯಮ 221ಎ(5) ರ ಅಡಿಯಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

#seegegudda #hassan #hassannews #hasanamba2026 #premadaurali hassandistrictadministration

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ