ಕಾಲೇಜಿನಲ್ಲಿ ಅಡ್ಮಿಶನ್ ಪಡೆಯಬೇಕಿದ್ದರೆ, ಅದಕ್ಕೆ ಮೊದಲು ಈ ವಿವರಗಳತ್ತ ಒಮ್ಮೆ ಕಣ್ಣಾಡಿಸಿ….
ಪ್ರಭಾ ಮತ್ತು ಪ್ರೀತಿ ಇಬ್ಬರೂ ಡಿಗ್ರಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು. ಪ್ರಭಾ ನಿತ್ಯ 2 ಗಂಟೆ ಕಾಲ ಪ್ರಯಾಣಿಸಿ ಕಾಲೇಜಿಗೆ ಬರುತ್ತಾಳೆ. ಪ್ರೀತಿ ಕಾಲೇಜ್ ಕ್ಯಾಂಪಸ್ ನಲ್ಲಿ ಇದ್ದುಕೊಂಡೇ ಕಲಿಯುತ್ತಿದ್ದಾಳೆ. ಇಬ್ಬರದೂ ಒಂದೇ ಪ್ರೋಗ್ರಾಂ ಸ್ಟಡಿ ಆದರೂ, ಇಬ್ಬರ ತೊಂದರೆಗಳೂ ಬೇರೆ ಬೇರೆ. ಪ್ರಭಾ ಬಲು ದೂರದಿಂದ ಬಂದು ಹೋಗುವ ಪ್ರಯಾಣದ ಮೇಜರ್ ತೊಂದರೆಗೆ ಸಿಲುಕಿದ್ದರೆ, ಪ್ರಯಾಣದ ಟೆನ್ಶನ್ ಗಳಿಂದ ಕಂಗೆಟ್ಟಿದ್ದರೆ, ಮನೆಯ ಕೌಟುಂಬಿಕ ವಾತಾವರಣವಿಲ್ಲದೆ ಪ್ರೀತಿ ಹಾಸ್ಟೆಲ್ ಲೈಫ್ ನಿಂದ ಕಂಗಾಲಾಗಿದ್ದಾಳೆ.
ಯಾವ ಕಾಲೇಜ್ ಆರಿಸಿಕೊಳ್ಳಬೇಕು ಎಂಬುದು ಒಂದು ಮಹತ್ವಪೂರ್ಣ ನಿರ್ಣಯ. ಇದು ವಿದ್ಯಾರ್ಥಿಯ ವ್ಯಕ್ತಿತ್ವ, ಯೋಗ್ಯತೆ, ಕೌಶಲ್ಯಗಳನ್ನು ಆಧರಿಸಿದೆ. ಇದರಿಂದ ಅವರ ಕೆರಿಯರ್ ಗೆ ಒಂದು ಸ್ಪಷ್ಟ ಆಕಾರ ಬರುತ್ತದೆ. ಹೀಗಾಗಿ ಕಾಲೇಜ್ ಆರಿಸಿಕೊಳ್ಳುವಾಗ ಪ್ರತಿ ಸಂಭವನೀಯತೆಯನ್ನೂ ಮತ್ತೆ ಮತ್ತೆ ವಿಶ್ಲೇಷಿಸಿರಿ. ಜೊತೆಗೆ ವಿದ್ಯಾರ್ಥಿನಿಯರು ಅಕ್ಯಾಡೆಮಿಕಲ್ ಮಾನದಂಡಗಳ ಜೊತೆ ಜೊತೆಗೆ ಇನ್ನೂ ಬೇಕಾದಷ್ಟು ಆವಶ್ಯಕ ಹಾಗೂ ಗಮನಹರಿಸಬೇಕಾದ ವಿಷಯಗಳಿವೆ. ಉದಾ : ಪರಿಸರ ಸುರಕ್ಷತೆ, ವಿಶೇಷ ಸಹಾಯಕ ಸೆಲ್, ಅನುಕೂಲ ವಾತಾವರಣ ಇತ್ಯಾದಿ. ಪ್ರತಿ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರಿಗೆ ಸುರಕ್ಷತೆ ಪ್ರಾಥಮಿಕ ಮಹತ್ವದ ಚಿಂತೆಯ ವಿಷಯ. ಹೀಗಾಗಿ ಸುರಕ್ಷಿತ ವಾತಾವರಣ ಒದಗಿಸುವ ಸಂಸ್ಥೆ ಮಾತ್ರ ಆರಿಸಿಕೊಳ್ಳಿ. ಹುಡುಗಿಯರು ತಾವು ಸೇರಬೇಕಾದ ಕಾಲೇಜ್ ಆರಿಸುವ ಮುನ್ನ ತಿಳಿದಿರಬೇಕಾದ ವಿಚಾರಗಳು :
ಜಾಗ ಮತ್ತು ಸನ್ನಿವೇಶ : ಕಾಲೇಜಿನ ಲೋಕೇಶನ್ ಎಲ್ಲಿದೆ ಎಂದು ತಿಳಿಯಿರಿ. ಅದು ಟೌನ್, ಸಿಟಿ ಯಾ ರಿಮೋಟ್ ಏರಿಯಾದಲ್ಲಿದೆಯೇ? ಅಲ್ಲಿಂದ ಬಂದು ಹೋಗುವುದು ಸುಲಭವೇ? ಜೊತೆಗೆ ಕಾಲೇಜಿನ ಆಸುಪಾಸಿನ ಪರಿಸರ, ಸನ್ನಿವೇಶ ಸುರಕ್ಷಿತವೇ? ಅಲ್ಲಿಂದ ಪ್ರಯಾಣ ಕ್ಷೇಮವೇ? ಹೊರಗಿನ ಚಟುವಟಿಕೆ ಹೇಗಿವೆ ಎಲ್ಲವನ್ನೂ ವಿಚಾರಿಸಿ.
ಟ್ರಾನ್ಸ್ ಪೋರ್ಟೇಶನ್ : ನೀವು ನಿಮ್ಮ ಮನೆಯಿಂದ ಪ್ರತಿ ದಿನ ಕಾಲೇಜಿಗೆ ಬಹಳ ದೂರದಿಂದ ಬಂದು ಹೋಗುತ್ತೀರಾದರೆ, ಮನೆಯಿಂದ ಕ್ಯಾಂಪಸ್ ನ ದಾರಿ ಎಷ್ಟು ದೂರ? ಎಷ್ಟು ಸುಗಮ? ಇದಕ್ಕಾಗಿ ಬಸ್, ವ್ಯಾನ್ ವ್ಯವಸ್ಥೆ ಸುಖಕರವಾಗಿದೆಯೇ? ಕಾಲೇಜಿನ ಲೋಕೇಶನ್ ಹೇಗಿದೆ? ಜನನಿಬಿಡ ವಾತಾವರಣದ ಮಧ್ಯೆ ಇದೆ ತಾನೇ ಯಾವ ಜನಸಂಚಾರವೇ ಇಲ್ಲದ ರಿಮೋಟ್ ಏರಿಯಾನೇ? ದಿನೇ ದಿನೇ ನೀವು ಅಲ್ಲಿಗೆ ಹೋಗಿಬರುವುದರಲ್ಲಿ ಟೆನ್ಶನ್ ಇಲ್ಲ ತಾನೇ? ಕಾಲೇಜ್ ನಿಮಗೆ ಟ್ರಾನ್ಸ ಪೋರ್ಟೇಶನ್ ವ್ಯವಸ್ಥೆ ಒದಗಿಸುತ್ತದೆಯೇ? ಅದು ಎಷ್ಟು ಸಮರ್ಪಕ?
ಲಿಂಗ ಸಮಾನತೆ : ಇಲ್ಲಿ ಸಮಾನತೆ ಅಂದ್ರೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಂಖ್ಯೆಯ ಅನುಪಾತವಲ್ಲ. ಅವರುಗಳಿಗೆ ನೀಡುವ ಹಕ್ಕು, ಸೌಲಭ್ಯ ಎಲ್ಲವೂ ಸಮಾನವಷ್ಟೆ? ಹುಡುಗರಿಗೆ ಮಾತ್ರ ಎಲ್ಲದಕ್ಕೂ ಮಣೆಹಾಕಿ, ಹುಡುಗಿಯರನ್ನು ನಿರ್ಲಕ್ಷಿಸುತ್ತಿಲ್ಲ ತಾನೇ? ಈ ಕಾಲೇಜಿನಲ್ಲಿ ಲಿಂಗ ತಾರತಮ್ಯ, ಭೇದಭಾದ ಕಿರುಕುಳ ಇಲ್ಲ ತಾನೇ? ಎಲ್ಲವನ್ನೂ ಖಚಿತಪಡಿಸಿಕೊಳ್ಳಿ.
ಹುಡುಗರ ಜೊತೆ ಹೊಂದಾಣಿಕೆ ಹಾಗೂ ಮೈತ್ರಿ : ಕಾಲೇಜ್ ಆರಿಸಿಕೊಳ್ಳುವಾಗ, ಅಲ್ಲಿ ಹುಡುಗ ಹುಡುಗಿಯರಲ್ಲಿ ಉತ್ತಮ ಹೊಂದಾಣಿಕೆ ಇದೆಯೇ? ಅನುಚಿತ ವ್ಯವಹಾರ ಇಲ್ಲವಷ್ಟೆ? ಇಬ್ಬರ ನಡುವೆ ಉತ್ತಮ ಹೊಂದಾಣಿಕೆ, ಗೌರವಾದರ, ಮೈತ್ರಿಯ ಅಂಶಗಳಿವೆ ತಾನೇ? ಅಲ್ಲಿ ಹುಡುಗರು ಹುಡುಗಿಯರನ್ನು ರಾಗಿಂಗ್ ಮಾಡುತ್ತಾ, ಕೀಳಾಗಿ ನೋಡುವುದು, ರೇಸಿಸಮ್, ಡಿಸ್ ಕ್ರಿಮಿನೇಶನ್ ಗಳ ಗೊಡವೇ ಇಲ್ಲ ತಾನೇ? ಇತ್ಯಾದಿ ಖಚಿತಪಡಿಸಿಕೊಳ್ಳಿ.
ಕ್ಯಾಂಪಸ್‌ಹಾಸ್ಟೆಲ್ ಸುರಕ್ಷತೆ : ಹೆಣ್ಣುಮಕ್ಕಳು ಕಾಲೇಜ್ ಕ್ಯಾಂಪಸ್ ನಲ್ಲೇ ಇದ್ದು ಕಲಿಯುವಂತಾದರೆ, ಅಲ್ಲಿನ ಸುರಕ್ಷಾ ಕ್ರಮಗಳು ಸಮರ್ಪಕವಾಗಿದೆಯೇ? 24 X 7 ಸುರಕ್ಷತೆಗೆ ಕೊರತೆ ಇಲ್ಲ ತಾನೇ? ಅಲ್ಲಿ ಇವರಿಗೆ ಮಹಿಳಾ ಸುರಕ್ಷಾ ಗಾರ್ಡ್ ಯಾ ವಾರ್ಡನ್ ಇದ್ದಾರೋ ಇಲ್ಲವೋ? ಇತ್ಯಾದಿ ಖಚಿತಪಡಿಸಿಕೊಳ್ಳಿ.
ಹಾಸ್ಟೆಲ್ ಸೌಲಭ್ಯ : ಹೆಣ್ಣುಮಕ್ಕಳು ಆಯಾ ಹಾಸ್ಟೆಲ್ ಗಳಲ್ಲಿ ತಂಗುವ ಮೊದಲು, ಅಲ್ಲಿ ಪ್ರತಿಯೊಂದಕ್ಕೂ ಉತ್ತಮ ಸೌಲಭ್ಯಗಳಿದೆಯೇ? ಸ್ವಚ್ಛತೆ, ಶುಭ್ರತೆ, ಸುರಕ್ಷತೆಗೆ ತೊಂದರೆ ಇಲ್ಲ ತಾನೇ? ಆಹಾರ ಪೂರೈಕೆ ಕ್ರಮ ಸರಿ ಇದೆಯೇ? ನೀರು, ಕರೆಂಟ್, ಬ್ಯಾಟರಿ ಬ್ಯಾಕಪ್, ಇನ್ ವರ್ಟರ್ ಸೌಲಭ್ಯಗಳಿವೆಯೇ? 3-4 ವರ್ಷಗಳ ಕಾಲ ಹಾಸ್ಟೆಲ್ ಮನೆಯಂತಾದಾಗ ಈ ಎಲ್ಲವನ್ನೂ ಕೂಲಂಕಷವಾಗಿ ವಿಚಾರಿಸಬೇಕು.
ಡೆಡಿಕೇಟೆಡ್ ಲೇಡಿ ಸೆಲ್ : ಕಾಲೇಜಿನಲ್ಲಿ ಜವಾಬ್ದಾರಿಯುತ ಆ್ಯಕ್ವಿವ್ ಮಹಿಳಾ ಸೆಲ್ ಯಾ ಆಂತರಿಕ ದೂರು ಸಮಿತಿ ಇದೆಯೇ ಇಲ್ಲವೇ? ಹೆಣ್ಣುಮಕ್ಕಳ ದೂರನ್ನು ಆಲಿಸಿ ನ್ಯಾಯ ಒದಗಿಸಲಾಗುತ್ತದೆ ತಾನೇ? ಇದೆಲ್ಲವನ್ನೂ ಸರಿಯಾಗಿ ವಿಚಾರಿಸಿಕೊಳ್ಳಿ.
ಆರೋಗ್ಯ ಸ್ವಚ್ಛತೆ ಶುಭ್ರತೆ : ಯಾವುದೇ ಹಾಸ್ಟೆಲ್ ಇರಲಿ, ಅಲ್ಲಿ ಆರೋಗ್ಯ ಸೇವೆ ಕಾಲಾನುಕಾಲಕ್ಕೆ ಸರಿ ಇದೆಯೇ? ಸುದೀರ್ಘ ಕಾಲ ಅಲ್ಲೇ ವಾಸಿಸಬೇಕಾದ ವಿದ್ಯಾರ್ಥಿಗಳಿಗೆ ಇದು ಬಲು ಮುಖ್ಯ. ಹೀಗಾಗಿ ದೈಹಿಕ ಆರೋಗ್ಯ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ ಪರಾಮರ್ಶೆಗೂ ಅನುಕೂಲವಿರಬೇಕು. ಮುಖ್ಯವಾಗಿ ಹೆಣ್ಣುಮಕ್ಕಳು, ಮನೆಗಳಿಂದ ದೂರವಾಗಿ ಇಲ್ಲಿ ನೀರ ಬಿಟ್ಟ ಮೀನಾಗುತ್ತಾರೆ. ಏಕಾಂಗಿತನದ ಬಾಧೆ ಡಿಪ್ರೆಶನ್ ಗೆ ತಳ್ಳಬಹುದು. ಇಂಥ ತೊಂದರೆ ಎದುರಾದಾಗ ಕನಿಷ್ಠ ಬ್ಲೂ ವೈನ್ ಮೆಡಿಕಲ್ ಸಿಸ್ಟಮ್ ಇರಲೇಬೇಕು.
– ರಜನೀ ಪ್ರಸಾದ್
ಈ ಸಲಹೆಗಳನ್ನು ಅನುಸರಿಸಿ
ರೋಹಿಣಿ ಬಾಲ್ಯದಿಂದ ಕಲಿಯುವುದರಲ್ಲಿ ಚುರುಕು. ಗಣಿತ ಇತರರಿಗೆ ಕಬ್ಬಿಣದ ಕಡಲೆಯಾದರೆ ಆಕೆಗೆ ಸರಾಗ. ಶಾಲೆಯಲ್ಲಿ ಸದಾ ಟಾಪರ್ ಆಗಿದ್ದು, ಪಿಯು ಪರೀಕ್ಷೆಯಲ್ಲೂ ಉತ್ತೀರ್ಣಳಾದಳು. ಹೀಗಾಗಿ ತನ್ನಿಷ್ಟದ ಕಾಲೇಜ್ ಆರಿಸುವ ಅವಕಾಶ ಸಿಕ್ಕಿದೆ. ಇದೇ ಅವಳಿಗೆ ತುಸು ಸಮಸ್ಯೆಯಾಗಿದೆ. ಅವಳಿಗೆ ಬೇಕಾದ 2 ಕಾಲೇಜುಗಳೂ ಪರಾಗಿಲ್ಲ, ಯಾವುದನ್ನು ಆರಿಸಲಿ ಎಂದು ಗೊಂದಲ.
ಇಂದಿನ ಕಾಲದಲ್ಲಿ ಒಬ್ಬ ವಿದ್ಯಾರ್ಥಿನಿಗೆ ಇಂಥ ಸದವಕಾಶ ಸಿಗುವುದು ವಿರಳ. ಏಕೆಂದರೆ ಇಂದಿನ ಕಾಲೇಜುಗಳಲ್ಲಿ ಕಟ್ ಆಫ್ ಎಷ್ಟು ಸ್ಟ್ರಿಕ್ಟ್ ಎಂದರೆ, ಮಾಮೂಲಿ ಡಿಗ್ರಿ ಕಾಲೇಜಿನಲ್ಲಿ ಅಡ್ಮಿಶನ್ ಸಿಗುವುದೂ ದುಸ್ತರ. ಪ್ರೀಮಿಯಂ ಕಾಲೇಜು ಅಂದಮೇಲೆ, ಹಲವು ಎಂಟ್ರೆನ್ಸ್ ಟೆಸ್ಟ್ ನಲ್ಲಿ ಪಾಸಾಗಬೇಕು. ತನ್ನ ಸಾಮರ್ಥ್ಯಕ್ಕೆ ತಕ್ಕಂತೆ, ಅಂಕಗಳ ಆಧಾರದಿಂದ ಆಯ್ಕೆ ಮಾಡಬೇಕಾದಲ್ಲಿ, ಅದು ಅವರ ಗೆಲುವೇ ಸರಿ. ಆದರೆ 2 ಉತ್ತಮ ಕಾಲೇಜುಗಳಲ್ಲಿ ಒಂದನ್ನು ಆರಿಸಿಕೊಳ್ಳುವುದು ಹೇಗೆ?
ಹಣಕಾಸಿನ ಬಂಡವಾಳ : ಫೀಸ್ ಎಲ್ಲಕ್ಕೂ ದೊಡ್ಡ ವಿಚಾರ. ಹೀಗಾಗಿ ನಿಮಗೆ ಬೇಕಾದ ಕಾಲೇಜ್, ನಿಮ್ಮ ಜೇಬಿಗೆ ಎಟುಕುವಂಥ ಫೀಸ್ ಕೇಳುತ್ತಿದೆಯೇ ಯಾ ಅತಿ ದುಬಾರಿಯೇ ಎಂದು ನೋಡಿಕೊಳ್ಳಿ. ಪ್ರೀಮಿಯಂ ಕಾಲೇಜಿಗಿಂತ ಉತ್ತಮ ಕಾಲೇಜಿನಲ್ಲಿ ನಿಮಗೆಟುಕುವ ಫೀಸ್ ಇದೆ ಎಂದಾದರೆ, ಚಿಂತಿಸದೆ ಅದಕ್ಕೆ ಸೇರಿರಿ. ಉತ್ತಮ ಶಿಕ್ಷಣ ಮುಖ್ಯ, ಪ್ರೀಮಿಯಂ ಕಾಲೇಜ್ ಹೆಸರಲ್ಲಿ ಪೋಷಕರ ಜೇಬಿಗೆ ಕನ್ನ ಹಾಕಬೇಡಿ. ಸಾಲದ ಗೊಡವೆ ಬೇಡ.
ಲೊಕೇಶನ್ : ಅದು ಅಲ್ಲಿದೆ ಎಂಬುದು ಬಲು ಮುಖ್ಯ. ಅದು ನಿಮ್ಮ ಮನೆಯಿಂದ ಬಲು ದೂರವೇ? ಕಾಲೇಜಿನ ಸುತ್ತಮುತ್ತಲ ವಾತಾವರಣ ಹೇಗಿದೆ? ನಗರದ ಮಧ್ಯೆ ಅಲ್ಲದೆ ರಿಮೋಟ್ ಏರಿಯಾ ಅಲ್ಲ ತಾನೇ? ಬಂದು ಹೋಗುವ ಖರ್ಚು ಹೆಚ್ಚಲ್ಲ ತಾನೇ…. ಎಲ್ಲವನ್ನೂ ವಿಚಾರಿಸಿ.
ಶೈಕ್ಷಣಿಕ ಗುಣಮಟ್ಟ : ವಿದ್ಯಾರ್ಥಿ ತಾನು ಬಯಸುವ ವಿಷಯ, ಕ್ಷೇತ್ರಕ್ಕೆ ತಕ್ಕಂತೆ, ಆರಿಸಿಕೊಳ್ಳಲಿರುವ ಕಾಲೇಜಿನ ಸ್ಟಡಿ ಮೆಟೀರಿಯಲ್, ಪ್ರಾಕ್ಟಿಕಲ್ ಫೆಸಿಲಿಟಿ, ಲ್ಯಾಬ್, ಲೈಬ್ರೆರಿ ಸೌಲಭ್ಯ, ಬೋಧಕರು, ಕಂಪ್ಯೂಟರ್ ಸೆಕ್ಷನ್ ಎಲ್ಲವನ್ನೂ ಗಮನಿಸತಕ್ಕದ್ದು.
ಕಾಲೇಜಿನ ಪ್ರವೇಶ : ಮನೆಯಿಂದ ಎಷ್ಟು ದೂರ? ಮನೆಯವರಿಂದ ದೂರಾಗಿ ಕ್ಯಾಂಪಸ್ ನಲ್ಲಿ ಬಹಳಷ್ಟು ಸಮಯ ಕಳೆಯುವುದು ಸುಲಭವಲ್ಲ. ದೂರದ ಬೆಟ್ಟ ನುಣ್ಣಗೆ ಎಂಬಂತೆ ಕ್ಯಾಂಪಸ್ ಲೈಫ್ ಬಲು ರೋಮಾಂಚಕಾರಿ ಎನಿಸಬಹುದು, ಆದರೆ ನೀವು ಆರಿಸಿಕೊಳ್ಳಲಿರುವ ಕಾಲೇಜಿನಲ್ಲಿ ಇವೆಲ್ಲ ಸೌಲಭ್ಯಗಳಿವೆಯೇ? ಶಿಕ್ಷಣದ ಹೊರತಾಗಿ ಪಠ್ಯೇತರ ಚಟುವಟಿಕೆಗಳಿಗೆ ಅವಕಾಶ ಇದೆಯೇ? ಕೆಲವು ಕಾಲದ ನಂತರ ನೀವು ಅಲ್ಲಿ ಒಬ್ಬಂಟಿ ಎನಿಸಬಾರದು. ಎಷ್ಟೋ ಸಲ ಗ್ರಾಮೀಣ ಕ್ಷೇತ್ರದಿಂದ ಬಂದಂಥ ವಿದ್ಯಾರ್ಥಿಗಳು ಹೀಗೆ ನೀರಿನಿಂದ ಬೇರಾದ ಮೀನಿನಂತೆ ಚಡಪಡಿಸುತ್ತಾರೆ. ಹೀಗಾಗದಂತೆ ಎಚ್ಚರವಹಿಸಿ.
ಪ್ಲೇಸ್ಮೆಂಟ್ ದರ ಅಲ್ಯುಮಿನಿ ನೆಟ್ ವರ್ಕ್ : ಅಲ್ಲಿನ ಪ್ಲೇಸ್ಮೆಂಟ್ ದರದತ್ತಲೂ ಗಮನ ಕೊಡಿ. ಅದೇ ರೀತಿ ಹಳೆಯ ವಿದ್ಯಾರ್ಥಿಗಳ ಸಂಪರ್ಕ ಸಾಧಿಸಿ, ಅರಿಂದ ಕಾಲೇಜಿನ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಿರಿ, ಈ ರೀತಿ ನಿಶ್ಚಿಂತೆ ಹೊಂದಿರಿ.





