ಕಾಲೇಜಿನಲ್ಲಿ ಅಡ್ಮಿಶನ್ ಪಡೆಯಬೇಕಿದ್ದರೆ, ಅದಕ್ಕೆ ಮೊದಲು ಈ ವಿವರಗಳತ್ತ ಒಮ್ಮೆ ಕಣ್ಣಾಡಿಸಿ....
ಪ್ರಭಾ ಮತ್ತು ಪ್ರೀತಿ ಇಬ್ಬರೂ ಡಿಗ್ರಿ ಕಾಲೇಜಿನ ಮೊದಲ ವರ್ಷದ ವಿದ್ಯಾರ್ಥಿಗಳು. ಪ್ರಭಾ ನಿತ್ಯ 2 ಗಂಟೆ ಕಾಲ ಪ್ರಯಾಣಿಸಿ ಕಾಲೇಜಿಗೆ ಬರುತ್ತಾಳೆ. ಪ್ರೀತಿ ಕಾಲೇಜ್ ಕ್ಯಾಂಪಸ್ ನಲ್ಲಿ ಇದ್ದುಕೊಂಡೇ ಕಲಿಯುತ್ತಿದ್ದಾಳೆ. ಇಬ್ಬರದೂ ಒಂದೇ ಪ್ರೋಗ್ರಾಂ ಸ್ಟಡಿ ಆದರೂ, ಇಬ್ಬರ ತೊಂದರೆಗಳೂ ಬೇರೆ ಬೇರೆ. ಪ್ರಭಾ ಬಲು ದೂರದಿಂದ ಬಂದು ಹೋಗುವ ಪ್ರಯಾಣದ ಮೇಜರ್ ತೊಂದರೆಗೆ ಸಿಲುಕಿದ್ದರೆ, ಪ್ರಯಾಣದ ಟೆನ್ಶನ್ ಗಳಿಂದ ಕಂಗೆಟ್ಟಿದ್ದರೆ, ಮನೆಯ ಕೌಟುಂಬಿಕ ವಾತಾವರಣವಿಲ್ಲದೆ ಪ್ರೀತಿ ಹಾಸ್ಟೆಲ್ ಲೈಫ್ ನಿಂದ ಕಂಗಾಲಾಗಿದ್ದಾಳೆ.
ಯಾವ ಕಾಲೇಜ್ ಆರಿಸಿಕೊಳ್ಳಬೇಕು ಎಂಬುದು ಒಂದು ಮಹತ್ವಪೂರ್ಣ ನಿರ್ಣಯ. ಇದು ವಿದ್ಯಾರ್ಥಿಯ ವ್ಯಕ್ತಿತ್ವ, ಯೋಗ್ಯತೆ, ಕೌಶಲ್ಯಗಳನ್ನು ಆಧರಿಸಿದೆ. ಇದರಿಂದ ಅವರ ಕೆರಿಯರ್ ಗೆ ಒಂದು ಸ್ಪಷ್ಟ ಆಕಾರ ಬರುತ್ತದೆ. ಹೀಗಾಗಿ ಕಾಲೇಜ್ ಆರಿಸಿಕೊಳ್ಳುವಾಗ ಪ್ರತಿ ಸಂಭವನೀಯತೆಯನ್ನೂ ಮತ್ತೆ ಮತ್ತೆ ವಿಶ್ಲೇಷಿಸಿರಿ. ಜೊತೆಗೆ ವಿದ್ಯಾರ್ಥಿನಿಯರು ಅಕ್ಯಾಡೆಮಿಕಲ್ ಮಾನದಂಡಗಳ ಜೊತೆ ಜೊತೆಗೆ ಇನ್ನೂ ಬೇಕಾದಷ್ಟು ಆವಶ್ಯಕ ಹಾಗೂ ಗಮನಹರಿಸಬೇಕಾದ ವಿಷಯಗಳಿವೆ. ಉದಾ : ಪರಿಸರ ಸುರಕ್ಷತೆ, ವಿಶೇಷ ಸಹಾಯಕ ಸೆಲ್, ಅನುಕೂಲ ವಾತಾವರಣ ಇತ್ಯಾದಿ. ಪ್ರತಿ ವಿದ್ಯಾರ್ಥಿನಿ ಹಾಗೂ ಆಕೆಯ ಪೋಷಕರಿಗೆ ಸುರಕ್ಷತೆ ಪ್ರಾಥಮಿಕ ಮಹತ್ವದ ಚಿಂತೆಯ ವಿಷಯ. ಹೀಗಾಗಿ ಸುರಕ್ಷಿತ ವಾತಾವರಣ ಒದಗಿಸುವ ಸಂಸ್ಥೆ ಮಾತ್ರ ಆರಿಸಿಕೊಳ್ಳಿ. ಹುಡುಗಿಯರು ತಾವು ಸೇರಬೇಕಾದ ಕಾಲೇಜ್ ಆರಿಸುವ ಮುನ್ನ ತಿಳಿದಿರಬೇಕಾದ ವಿಚಾರಗಳು :
ಜಾಗ ಮತ್ತು ಸನ್ನಿವೇಶ : ಕಾಲೇಜಿನ ಲೋಕೇಶನ್ ಎಲ್ಲಿದೆ ಎಂದು ತಿಳಿಯಿರಿ. ಅದು ಟೌನ್, ಸಿಟಿ ಯಾ ರಿಮೋಟ್ ಏರಿಯಾದಲ್ಲಿದೆಯೇ? ಅಲ್ಲಿಂದ ಬಂದು ಹೋಗುವುದು ಸುಲಭವೇ? ಜೊತೆಗೆ ಕಾಲೇಜಿನ ಆಸುಪಾಸಿನ ಪರಿಸರ, ಸನ್ನಿವೇಶ ಸುರಕ್ಷಿತವೇ? ಅಲ್ಲಿಂದ ಪ್ರಯಾಣ ಕ್ಷೇಮವೇ? ಹೊರಗಿನ ಚಟುವಟಿಕೆ ಹೇಗಿವೆ ಎಲ್ಲವನ್ನೂ ವಿಚಾರಿಸಿ.
ಟ್ರಾನ್ಸ್ ಪೋರ್ಟೇಶನ್ : ನೀವು ನಿಮ್ಮ ಮನೆಯಿಂದ ಪ್ರತಿ ದಿನ ಕಾಲೇಜಿಗೆ ಬಹಳ ದೂರದಿಂದ ಬಂದು ಹೋಗುತ್ತೀರಾದರೆ, ಮನೆಯಿಂದ ಕ್ಯಾಂಪಸ್ ನ ದಾರಿ ಎಷ್ಟು ದೂರ? ಎಷ್ಟು ಸುಗಮ? ಇದಕ್ಕಾಗಿ ಬಸ್, ವ್ಯಾನ್ ವ್ಯವಸ್ಥೆ ಸುಖಕರವಾಗಿದೆಯೇ? ಕಾಲೇಜಿನ ಲೋಕೇಶನ್ ಹೇಗಿದೆ? ಜನನಿಬಿಡ ವಾತಾವರಣದ ಮಧ್ಯೆ ಇದೆ ತಾನೇ ಯಾವ ಜನಸಂಚಾರವೇ ಇಲ್ಲದ ರಿಮೋಟ್ ಏರಿಯಾನೇ? ದಿನೇ ದಿನೇ ನೀವು ಅಲ್ಲಿಗೆ ಹೋಗಿಬರುವುದರಲ್ಲಿ ಟೆನ್ಶನ್ ಇಲ್ಲ ತಾನೇ? ಕಾಲೇಜ್ ನಿಮಗೆ ಟ್ರಾನ್ಸ ಪೋರ್ಟೇಶನ್ ವ್ಯವಸ್ಥೆ ಒದಗಿಸುತ್ತದೆಯೇ? ಅದು ಎಷ್ಟು ಸಮರ್ಪಕ?
ಲಿಂಗ ಸಮಾನತೆ : ಇಲ್ಲಿ ಸಮಾನತೆ ಅಂದ್ರೆ ವಿದ್ಯಾರ್ಥಿ ವಿದ್ಯಾರ್ಥಿನಿಯರ ಸಂಖ್ಯೆಯ ಅನುಪಾತವಲ್ಲ. ಅವರುಗಳಿಗೆ ನೀಡುವ ಹಕ್ಕು, ಸೌಲಭ್ಯ ಎಲ್ಲವೂ ಸಮಾನವಷ್ಟೆ? ಹುಡುಗರಿಗೆ ಮಾತ್ರ ಎಲ್ಲದಕ್ಕೂ ಮಣೆಹಾಕಿ, ಹುಡುಗಿಯರನ್ನು ನಿರ್ಲಕ್ಷಿಸುತ್ತಿಲ್ಲ ತಾನೇ? ಈ ಕಾಲೇಜಿನಲ್ಲಿ ಲಿಂಗ ತಾರತಮ್ಯ, ಭೇದಭಾದ ಕಿರುಕುಳ ಇಲ್ಲ ತಾನೇ? ಎಲ್ಲವನ್ನೂ ಖಚಿತಪಡಿಸಿಕೊಳ್ಳಿ.





