ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಗಮನದಲ್ಲಿಟ್ಟುಕೊಂಡು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ನಿನ್ನೆ ಮತ್ತು ಇಂದು ಶನಿವಾರ ಬೆಂಗಳೂರಿನಿಂದ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸಣ್ಣ ಪಟ್ಟಣಗಳು ಸೇರಿದಂತೆ ಒಟ್ಟು 123 ಸ್ಥಳಗಳಿಗೆ 908 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಿದೆ.

ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣ ಹೊರತುಪಡಿಸಿ ನಗರದ 11 ಸ್ಥಳಗಳಲ್ಲಿ ಬಸ್‌ಗಳ ಪಿಕಪ್ ಪಾಯಿಂಟ್‌ಗಳು ಮತ್ತು ಟಿಕೆಟ್ ಕಾಯ್ದಿರಿಸುವ ಕೌಂಟರ್‌ಗಳನ್ನು ತೆರೆಯಲಾಗಿದೆ.

908 ಬಸ್‌ಗಳ ಪೈಕಿ ನಿನ್ನೆ ಶುಕ್ರವಾರ 549 ಬಸ್‌ಗಳು ಹಾಗೂ ಇಂದು ಶನಿವಾರ ಉಳಿದ 359 ಬಸ್‌ಗಳು ಸಂಚರಿಸಲಿವೆ ಎಂದು ಕೆಎಸ್‌ಆರ್‌ಟಿಸಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಅಂಕಿಅಂಶಗಳ ಪ್ರಕಾರ, ಮಂಗಳೂರಿಗೆ 49, ದಾವಣಗೆರೆಗೆ 42, ಹುಬ್ಬಳ್ಳಿ ಮತ್ತು ಕುಂದಾಪುರಕ್ಕೆ ತಲಾ 35, ಬೆಳಗಾವಿಗೆ 29, ಶಿವಮೊಗ್ಗ ಮತ್ತು ತಿರುಪತಿಗೆ ತಲಾ 24, ಹೊಸಪೇಟೆಗೆ 23, ವಿಜಯಪುರ ಮತ್ತು ತಿರುಚಿರಾಪಳ್ಳಿಗೆ ತಲಾ 22, ಗೋಕರ್ಣ, ಸಾಗರ ಮತ್ತು ಮಧುರೈಗೆ ತಲಾ 21 ವಿಶೇಷ ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಶಿರಸಿಗೆ 17, ಉಡುಪಿ ಮತ್ತು ಬಳ್ಳಾರಿಗೆ ತಲಾ 16, ಕಲಬುರಗಿಗೆ 15, ಕುಂಭಕೋಣಂಗೆ 14, ಪುತ್ತೂರು ಮತ್ತು ತಿರುಕ್ಕೋಯಿಲೂರಿಗೆ ತಲಾ 13, ಚಿಕ್ಕಮಗಳೂರಿಗೆ 12, ಸೇಲಂಗೆ 11, ಹರಿಹರ, ಶೃಂಗೇರಿ ಮತ್ತು ತಿರುವಣ್ಣಾಮಲೈಗೆ ತಲಾ 10, ಮಡಿಕೇರಿ, ಯಲ್ಲಾಪುರ ಮತ್ತು ಚಿಕ್ಕೋಡಿಗೆ ತಲಾ 9, ಹಗರಿಬೊಮ್ಮನಹಳ್ಳಿ, ಹೊರನಾಡು, ಹೂವಿನಹಡಗಲಿ ಮತ್ತು ಕಲ್ಲಕುರಿಚಿಗೆ ತಲಾ 8; ಭಟ್ಕಳ, ಬೀದರ್, ಕಾರವಾರ, ಸಂಕೇಶ್ವರ, ಸುಳ್ಯ, ಜಮಖಂಡಿ, ಪುದುಚೇರಿ ಮತ್ತು ವಿಲ್ಲುಪುರಂಗೆ ತಲಾ 7 ವಿಶೇಷ ಬಸ್‌ಗಳನ್ನು ಸಂಚರಿಸುತ್ತಿವೆ.

ನಿಪ್ಪಾಣಿ, ರಾಯಬಾಗ, ಅಥಣಿ ಮತ್ತು ಹುಮನಾಬಾದ್‌ಗೆ ತಲಾ 6; ಪುಣೆ, ಗದಗ, ಬಾಗಲಕೋಟೆ, ಬಿಳಗಿ, ಇಂಡಿ, ರಾಯಚೂರು, ರಾಯದುರ್ಗ, ಸೋಮವಾರಪೇಟೆ ಹಾಗೂ ಆಂಧ್ರಪ್ರದೇಶದ ಪುತ್ತೂರಿಗೆ ತಲಾ 5 ಬಸ್‌ಗಳು, ಚೆನ್ನೈ, ಪಣಜಿ, ಧಾರವಾಡ, ಕಡಲೂರು, ಕೊಪ್ಪಳ, ಮಂತ್ರಾಲಯ, ಆನವಟ್ಟಿ, ಬಿ.ಸಿ.ರೋಡ್, ಬೆಟಗೇರಿ, ಗೋಕಾಕ, ಹೊಸದುರ್ಗ, ಶಿವಮೊಗ್ಗ ಜಿಲ್ಲೆಯ ಹುಂಚ, ಮೂಡುಬಿದಿರೆ, ಮುದ್ದೇಬಿಹಾಳ, ಮುಂಡರಗಿ, ರಾಮದುರ್ಗ, ಸವದತ್ತಿ, ಸಿಂದಗಿ, ತಾಳಿಕೋಟೆ, ತೀರ್ಥಹಳ್ಳಿ, ವಿರಾಜಪೇಟೆ, ಯಾದಗಿರಿ, ಆಂಧ್ರಪ್ರದೇಶದ ಬಾಲಿಜಕಂಡ್ರಿಗ ಮತ್ತು ತಮಿಳುನಾಡಿನ ತಿರುಟ್ಟಣಿಗೆ ತಲಾ 4 ಬಸ್‌ಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಬೆಂಗಳೂರಿನ ವಿವಿಧ ಪಿಕಪ್ ಪಾಯಿಂಟ್‌ಗಳಿಂದ 532 ಬಸ್‌ಗಳಿಗೆ ಈಗಾಗಲೇ ಟಿಕೆಟ್ ಕಾಯ್ದಿರಿಸಲಾಗಿದೆ. ಕೆಂಪೇಗೌಡ ಬಸ್ ನಿಲ್ದಾಣದ ನಾಲ್ಕು ಟರ್ಮಿನಲ್‌ಗಳು, ವಿಜಯನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಮಲ್ಲೇಶ್ವರಂ 18ನೇ ಕ್ರಾಸ್, ಮೈಸೂರು ರಸ್ತೆ ಸ್ಯಾಟಲೈಟ್ ಬಸ್ ನಿಲ್ದಾಣ, ಯಲಹಂಕ ಸ್ಯಾಟಲೈಟ್ ಟೌನ್, ಬಸವೇಶ್ವರನಗರ ಟಿಟಿಎಂಸಿ, ಜಯನಗರ 4ನೇ ಬ್ಲಾಕ್, ಶಾಂತಿನಗರ ಬಸ್ ನಿಲ್ದಾಣ, ಐಟಿಐ ಮುಖ್ಯ ಗೇಟ್, ಚಿಕ್ಕಲಸಂದ್ರ ಮತ್ತು ನಾಯ್ಡು ಲೇಔಟ್‌ಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ.

ಬಸ್ ಪ್ರಯಾಣ ದರ ಶೇ.37ರಷ್ಟು ಹೆಚ್ಚಳ: ದೀಪಾವಳಿ ಹಬ್ಬದ ಪ್ರಯಾಣಿಕರ ದಟ್ಟಣೆಯಿಂದಾಗಿ ನಿನ್ನೆ ರಾಜ್ಯದ ಪ್ರಮುಖ ಸ್ಥಳಗಳಿಗೆ ಸಂಚರಿಸುವ ನಾಲ್ಕು ವಿಭಾಗಗಳ ಬಸ್‌ಗಳ ಪ್ರಯಾಣ ದರವು ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸರಾಸರಿ ಶೇ.37ರಷ್ಟು ಏರಿಕೆಯಾಗಿದೆ.

ಮಂಗಳೂರಿಗೆ ಸಂಚರಿಸುವ ಬೆನ್ಜ್ ಮಲ್ಟಿ ಆಕ್ಸಲ್ ಸ್ಲೀಪರ್ ಬಸ್‌ನ ಸರಾಸರಿ ಪ್ರಯಾಣ ದರ ಸಾಮಾನ್ಯ ದಿನಗಳಲ್ಲಿ 873 ರೂ. ಇದ್ದರೆ, ನಿನ್ನೆ 1,196 ರೂ.ಗೆ ಏರಿಕೆಯಾಗಿದೆ. ಎಸಿ ಸ್ಲೀಪರ್ ಬಸ್‌ನ ದರ 999 ರೂಪಾಯಿಗಳಿಂದ 1,529 ರೂ.ಗೆ ಹೆಚ್ಚಳವಾಗಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಬಸ್ ಪ್ರಯಾಣ ದರವೂ 579 ರೂ.ನಿಂದ 685 ರೂ.ಗೆ ಏರಿಕೆಯಾಗಿದೆ.

ಕೊಚ್ಚಿಗೆ ಸಂಚರಿಸುವ ಎಸಿ ಸ್ಲೀಪರ್ ಬಸ್‌ಗಳ ದರ 1,600 ರೂ.ನಿಂದ 2,600 ರೂ.ಗೆ ಏರಿಕೆಯಾಗಿದೆ. ಎಸಿ ಸೀಟರ್/ಸ್ಲೀಪರ್ ಬಸ್‌ಗಳ ದರ 859 ರೂ.ನಿಂದ 1,299 ರೂ.ಗೆ ಹೆಚ್ಚಳವಾಗಿದೆ. ಚೆನ್ನೈಗೆ ಸಂಚರಿಸುವ ಬಸ್‌ಗಳ ದರ 1,300ರಿಂದ 1,400 ರೂ.ಗಳಷ್ಟಿದ್ದು,  ಪ್ರಯಾಣ ದರ 1,797 ರೂ.ಗೆ ತಲುಪಿದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ