ಹುಡುಗಿಯರು ಧರ್ಮದ ಬ್ರೇನ್ ವಾಶಿಂಗ್ ನ ಅಸಹಾಯಕ ಬೇಟೆಗಳು
ಬಡತನದ ಗೋಳನ್ನು ಶ್ರೀಮಂತರೂ ತೋಡಿಕೊಳ್ಳುತ್ತಾರೆ. ಅಮೆರಿಕಾದಂಥ ಕಡು ಶ್ರೀಮಂತ ದೇಶದಲ್ಲೂ ಇದಕ್ಕೆ ಕೊರತೆಯಿಲ್ಲ. ಅಲ್ಲಿ ವಾರ್ಷಿಕ 35 ಕೋಟಿ ರೂ. ಗಳಿಸುವವರೂ ಸಹ ಇದಕ್ಕೆ ಹೊರತಲ್ಲ. ಅದರಲ್ಲೂ ಮುಖ್ಯವಾಗಿ ಅವರಲ್ಲಿ 40% ಮಂದಿ ಸದಾ ಗೋಳಾಡುವುದೆಂದರೆ, ತಾವು ಜೀವನವಿಡೀ ಚೆಕ್ ನಿಂದ ಚೆಕ್ ಗೆ ಕಾಯುವುದರಲ್ಲಿ ಆಗಿಹೋಗುತ್ತದೆ ಎನ್ನುತ್ತಾರೆ. ವ್ಯವಹಾರದಿಂದ ಇವರುಗಳಿಗೆ ಸಿಗುವ ಚೆಕ್ ಪಾಸಾದರೆ ಮಾತ್ರ ತಮಗೆ ಲಾಭ ಎಂದು ಬೊಬ್ಬಿಡುತ್ತಾರೆ. ಹೀಗಾಗಿ ತಮ್ಮ ಬಳಿ ಉಳಿತಾಯವೇನೂ ಇಲ್ಲ ಎಂದು ಕೊರಗುತ್ತಾರೆ. ಇಲ್ಲಿನ ವಿಡಂಬನೆ ಎಂದರೆ, ಯಾವ ಮಂದಿ ಪ್ರತಿ ವರ್ಷ 5 ಕೋಟಿಗೂ ಅಧಿಕ ಗಳಿಸುತ್ತಿದ್ದಾರೋ, ಅವರಲ್ಲೂ 40% ಮಂದಿಯ ದೂರವೆಂದರೆ, ತಿಂಗಳ ಕೊನೆ ಆಯ್ತು ಅಂದ್ರೆ ಕೈ ಖಾಲಿಯಂತೆ!
ಈ ಗೋಳು ನಮ್ಮಲ್ಲೂ ತಪ್ಪಿದ್ದಲ್ಲ. ನಮ್ಮಲ್ಲಿನ ಶ್ರೀಮಂತರ ಮನೆ ಮುಂದೆ ಡ್ರೈವರ್ ಸಹಿತ 2-3 ಐಷಾರಾಮೀ ಕಾರುಗಳೇ ನಿಂತಿದ್ದರೂ ಸಹ, ಹಲವು ಐಫೋನುಗಳಿದ್ದರೂ, ಆ್ಯಪಲ್ ಲ್ಯಾಪ್ ಟಾಪಿದ್ದರೂ, ಎಸಿ ಬೆಡ್ ರೂಮಿನಲ್ಲಿ 50 ಇಂಚಿನ ಆ್ಯಂಡ್ರಾಯ್ಡ್ ಟಿವಿಗಳಿದ್ದರೂ ಗೋಳಿಗೆ ಕಡಿಮೆ ಇಲ್ಲ. ಇವರ ಮಕ್ಕಳು ಅತಿ ದುಬಾರಿ ಕಾನ್ವೆಂಟ್ ಗೇ ಹೋಗುವುದು, ಮನೆಯಲ್ಲಿ ವಾರದಲ್ಲಿ 4 ದಿನ ಹೊರಗೇ ಪಂಚತಾರಾ ಹೋಟೆಲ್ ಗಳಲ್ಲಿ ಊಟತಿಂಡಿಗಳಾದರೆ, ಇನ್ನುಳಿದ ದಿನ ಸ್ವಿಗ್ಗಿ, ಝೋಮೆಟೋಗಳಿಗೆ ಶರಣಾಗುತ್ತಾರೆ. ಇಂಥವರೂ ಸಹ ದೂರುವುದೆಂದರೆ, ಎಲ್ಲಾ ಇಎಂಐಗಳನ್ನೂ ತೀರಿಸಿದ ನಂತರ ಕೈಲೇನೂ ಉಳಿಯುವುದೇ ಇಲ್ಲ. ಈ ರೀತಿ ಶ್ರೀಮಂತರೂ ಗೋಳಾಡಬೇಕಾದ್ದೇ, ಆಗ ಮಾತ್ರ ಅವರು ಬಡವರ ಬಾಯಿ ಬಡಿಯಲು ಸಾಧ್ಯ! ಆಗ ಮಾತ್ರ ಬಡವರು ಬೆಲೆಗಳು ಗಗನಕ್ಕೇರಿವೆ ಎಂದು ಬೊಬ್ಬಿಡುವುದಿಲ್ಲ, ಎಥೆನಾಲ್ ಕಾರಣ ಗಾಡಿಗಳ ಮೈಲೇಜ್ ಕಡಿಮೆ ಆಗಿದೆ, ಮನೆ ಬಾಡಿಗೆ ಹೆಚ್ಚಾಗಿದೆ, ಮಕ್ಕಳ ಶಿಕ್ಷಣದ ಖರ್ಚು, ಮನೆ ನಡೆಸುವುದು, ಪೆಟ್ರೋಲ್ ದುಬಾರಿ ಇತ್ಯಾದಿ ಗೊಣಗಲಾರರು.
ಈ ರೀತಿ ಶ್ರೀಮಂತರು ಸದಾ ಗೋಳಿಡುವುದು ಇದ್ದದ್ದೇ. ಎಷ್ಟೇ ಆರ್ಥಿಕ ನೀತಿ ಸಾರು ಎಕನಾಮಿಕ್ ನ್ಯೂಸ್ ಪೇಪರ್ಸ್ ಇರಲಿ, ಅವುಗಳ ತಲೆಬರಹದಲ್ಲಿ, ಸೆನ್ಸೆಕ್ಸ್ ನ 100 ಪಾಯಿಂಟ್ಸ್ ಬಿದ್ದುಹೋದ್ದರಿಂದ 2 ಲಕ್ಷ ಕೋಟಿಗಳಷ್ಟು ವಾಸ್ ಶೇರ್ಹೂಡಿಕೆದಾರರದಾಗಿದೆ. ಸರ್ಕಾರವೇ ಏನಾದರೂ ಮಾಡಬೇಕು…. ಇತ್ಯಾದಿ. ಇವರು ತಮ್ಮ ಹೈಫೈ ಕಾರು ಚಲಿಸುವ ರಸ್ತೆಗಳ ಕುರಿತು ಮಾತ್ರ ಮಾತನಾಡುತ್ತಾರೆಯೇ ಹೊರತು, ಬ್ಯಾಟರಿ ರಿಕ್ಷಾಗಳು ಏಕೆ ಒಂದು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಮಾಡುತ್ತವೆಂದು ಶಾಪ ಹಾಕುತ್ತಿರುತ್ತಾರೆ.
ಶ್ರೀಮಂತರ ಈ ಗೋಳಾಟ ತಪ್ಪಲ್ಲ ಸರಿ, ಆದರೆ ಬಡರವನ್ನು ತುಳಿದು ಹೀಗೆ ಬೊಬ್ಬಿಡವುದು ಎಷ್ಟು ಸರಿ? ತಮ್ಮ ಪರಿಶ್ರಮದಿಂದ ಮೇಲೇರಿ ಶ್ರೀಮಂತರಾಗುವುದು ನಿಜಕ್ಕೂ ಪ್ರಶಂಸನೀಯ ವಿಷಯ. ಸಮಾಜಕ್ಕೆ ಅವರೇನೋ ನೀಡಿದ್ದಾರೆ ಎಂಬುದಕ್ಕೆ ಇದು ಸಮಾಜದ ಸರ್ಟಿಫಿಕೇಟ್ ಆಗಿದೆ. ಆದರೆ ಭಾರತ ಯಾ ಅಮೆರಿಕಾ ಇರಲಿ, ಎಲ್ಲಾ ಕಡೆ ಅಸಲಿಗೆ ಹಣ ದೊರಕುವುದೇ ವಸೂಲು ಮಾಡಲಾದ ತೆರಿಗೆ, ಚಂದಾ ಹಂಚಿಕೊಳ್ಳುವುದರಿಂದ. ಯಾರು ಶ್ರೀಮಂತರೋ ಅವರಲ್ಲಿ ಬಹುತೇಕರಿಗೆ ಸರ್ಕಾರಿ ಟೆಂಡರ್ ಸಿಗುತ್ತದೆ. ಕೆಲವರಿಗೆ ಡಿಫೆನ್ಸ್ ಕಾಂಟ್ರಾಕ್ಟ್ ಸಿಕ್ಕರೆ, ಹಲವರಿಗೆ ಸರ್ಕಾರಿ ಭವನಗಳ ಕಾಂಟ್ರಾಕ್ಟ್. ಇನ್ನುಳಿದವರಿಗೆ ಸರ್ಕಾರದ ಸರ್ವಿಲೆನ್ಸ್ ಗಾಗಿ ಕ್ಯಾಮೆರಾ ಸಪ್ಲೈ ಮಾಡುವುದರಿಂದ, ಭ್ರಷ್ಟಾಚಾರಿಗಳನ್ನು ಹಿಡಿಯುವ ಏಜೆನ್ಸಿಗಳಲ್ಲಿ ಕೆಲಸ ಮಾಡುವುದರಿಂದ…. ಇತ್ಯಾದಿ.
ಸಾಫ್ಟ್ ವೇರ್ ಕಂಪನಿಗಳು ಕೋಟ್ಯಂತರ ಗಳಿಸುತ್ತವೆ. ಏಕೆಂದರೆ ಅದು ಸರ್ಕಾರಕ್ಕೆ ಕಂಪ್ಯೂಟರ್, ಸಾಫ್ಟ್ ವೇರ್ ಸಿಸ್ಟಂ, ಪೋರ್ಟೆಲ್ ತಯಾರಿಸಿ ಕೊಡುತ್ತಿವೆ, ಎರಡೂ ಕೈಲಿ ಬಾಚಿಕೊಳ್ಳುತ್ತಿವೆ. ಈ ಎಲ್ಲಾ ಶ್ರೀಮಂತರ ಜೊತೆಗೂಡಿ ಮಂದಿರಗಳ ಪೂಜಾಪಾಠ ನಡೆಸುವ ಮಾಲೀಕರು ಒಂದಾಗಿದ್ದಾರೆ, ಇವರು ಕೊಟ್ಯಂತರ ರೂ.ಗಳ ಮಂದಿರದ ಉದ್ಯಮ ನಡೆಸುತ್ತಾರೆ. ಹೀಗಾಗಿ ಈ ಶ್ರೀಮಂತರ ಜೊತೆ ವ್ಯವಹಾರ ನಡೆಸುತ್ತಾರೆ. ಮುಕೇಶ್ ಅಂಬಾನಿ ಮನೆಯಲ್ಲಿ ನಡೆದ ಮದುವೆಗಳಲ್ಲಿ ಹೆಚ್ಚುಕಡಿಮೆ ಪ್ರತಿ ತ್ಯಾಗಿ, ಪ್ರಪಂಚದಿಂದ ವಿರಕ್ತರು ಸ್ಪೆಷಲ್ ಚಾರ್ಟರ್ ಪ್ಲೇನ್ ನಿಂದ ಬಂದಿಳಿದರು, 3-4 ಕೋಟಿಗಳ ಗಾಡಿಗಳಲ್ಲಿ ಕುಳಿತು ಸಂಯಮ, ಸಂಸ್ಕಾರ, ಸಂಸ್ಕೃತಿಗಳ ಸಂದೇಶ ನೀಡುತ್ತಾ, ಈ ಸಾಮೂಹಿಕ ಮದುವೆಗಳಲ್ಲಿ ಪಾಲ್ಗೊಂಡರು.
ಭಾರತ ಅಮೆರಿಕಾ ಎರಡೂ ಕಡೆ ಒಂದೇ ತರಹದ ವಾತಾವರಣವಿದೆ. ಅಲ್ಲಿನ ಶ್ರೀಮಂತರು ಮತ್ತಷ್ಟು ಭಾರಿ ಶ್ರೀಮಂತರಾಗಲು ಬಯಸುತ್ತಾರೆ. ಹಾಗೆಯೇ ಬಡವರನ್ನು ಕಡು ಬಡವರಾಗಿಸುತ್ತಾರೆ. ಭಾರತದಲ್ಲಿ ಹಿಂದುಳಿದವರು, ದಲಿತರು, ಮುಸ್ಲಿಂ, ಹೆಂಗಸರನ್ನು ಅಟ್ಟಕ್ಕೇರಿಸಿ ಇವರು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಾರೆ. ಅಮೆರಿಕಾದಲ್ಲಿ ಕರಿಯರು, ಇಮಿಗ್ರೆಂಟ್ಸ್ ರನ್ನು ಹೀಗೇ ತುಳಿಯುತ್ತಾರೆ. ಎರಡೂ ಕಡೆ ಈ ಬಡವರ ಹಕ್ಕುಗಳನ್ನು ಕಾನೂನು ಇಂದಲ್ಲ, ಅನಾದಿ ಕಾಲದಿಂದಲೂ ಕಿತ್ತಿಟ್ಟುಕೊಂಡಿದೆ.
ಸವರ್ಣೀಯ ಹೆಂಗಸರು ಬಡತನ, ಅನ್ಯಾಯ ಭೇದಭಾವದ ವಿರುದ್ಧ ಹೋರಾಡಲು ಎಲ್ಲಕ್ಕೂ ಹೆಚ್ಚು ಕಾಂಪಿಟೆಂಟ್ ಆಗಿದ್ದಾರೆ. ಈ ಆಸ್ತಿಕ ಹೆಂಗಸರು ತಮ್ಮ ಪತಿಯ ದೃಷ್ಟಿಯಲ್ಲೇ ಗುಲಾಮಗಿರಿಗಿಂತ ಮೇಲೇರಿಲ್ಲ. ಟೋಕನ್ ರೂಪದಲ್ಲಿ ಅಂದ್ರೆ ಅಮೆರಿಕಾದಲ್ಲಿ ಕರಿಯರು, ಇಂಡಿಯನ್, ಸ್ಪ್ಯಾನಿಷ್, ಚೈನೀಸ್ ಉತ್ತಮ ಜಾಗಗಳಲ್ಲಿ ಕಂಡುಬರುವಂತೆಯೇ ಇಲ್ಲಿಯೂ ಹೆಂಗಸರು ಉನ್ನತ ಜಾಗದಲ್ಲಿರುವಂತೆ ಕಂಡುಬರುತ್ತಾರಷ್ಟೆ. ಆದರೆ ಹಿಲೆರಿ ಕ್ಲಿಂಟನ್/ಕಮಲಾ ಹ್ಯಾರಿಸ್ ರನ್ನು ರಾಷ್ಟ್ರಪತಿ ಆಗಿಸುವ ಪ್ರಸಂಗ ಬಂದಾಗ, ಅಲ್ಲಿನ ಬಿಳಿಯರು ಬಿಲ್ ಕುಲ್ ಗಪ್ ಚುಪ್ ಆಗಿಹೋಗುತ್ತಾರೆ, ಒಟ್ಟಾಗಿ ಅದನ್ನು ಬಗ್ಗುಬಡಿಯುತ್ತಾರೆ. ಬರಾಕ್ ಒಬಾಮಾ ತಮ್ಮ ವಿಶೇಷ ಗುಣಗಳಿಂದಾಗಿ 2 ಬಾರಿ ಆ ಪದವಿಗೆ ಬಂದಾಗ, ಬಿಳಿಯರು ಅಲ್ಲಿನ ತಲೆಕೆಟ್ಟ ಶ್ರೀಮಂತರು, ನಾರಿವಿರೋಧಿ ಗುಣಗಳಿಂದ, ಮಹಾನ್ ಟ್ರಂಪ್ ನ್ನು ಒಂದಲ್ಲ 2 ಸಲ ಪಟ್ಟಕ್ಕೆ ಕೂರಿಸಿದರು.
ಇದೇ ತರಹ ಭಾರತದಲ್ಲೂ ಆಗುತ್ತಿದೆ. ಇಲ್ಲಿ ಹೆಂಗಸರು, ಶ್ರೀಮಂತ ಮನೆತನಗಳ ಉನ್ನತ ವರ್ಗದ ಹೆಂಗಸರಿಗೆ ಉತ್ಕೃಷ್ಟ ಉಡುಗೆ ಉಡಿಸಿ, ಸ್ವರ್ಣಾಭರಣಗಳಿಂದ ಅಲಂಕರಿಸಿ, ಅವರೇನೋ ದೊಡ್ಡ ಸ್ಪೆಷಲ್ ಎಂಬಂತೆ ಬಿಂಬಿಸಲಾಗುತ್ತದೆ. ಆದರೆ ಅಸಲಿಗೆ ಅವರು ರಾಜಕೀಯ, ಸಮಾಜ, ಉದ್ಯಮ, ವ್ಯವಹಾರ, ಶಿಕ್ಷಣ ಯಾವುದೇ ಕ್ಷೇತ್ರವಿರಲಿ, ಎಲ್ಲ ಕಡೆ ಟೋಕನ್ ಆಗಿ ಬಳಸಿಕೊಳ್ಳುತ್ತಾರೆ. ಶ್ರೀಮಂತರ ಮನೆತನದ ಹೆಂಗಸರನ್ನು ಪೂಜೆ ಪುನಸ್ಕಾರಗಳ ಹೆಸರಲ್ಲಿ ಗಂಟೆಗಟ್ಟಲೆ ಕೂಡಿಹಾಕಿ, ಸ್ವಾಮಿಬಾಬಾಗಳ ಪಾದಸೇವೆಗೆ ಅಟ್ಟುತ್ತಾರೆ. ಹಲವು ವಾರ ತಿಂಗಳುಗಳ ಯಾತ್ರೆ ಮಾಡಿಸಿ, ಸುಸ್ತಾಗಿಸಿ, ಮುಕ್ತಿ ಕೊಡಿಸುವ ಹುನ್ನಾರ ನಡೆಸುತ್ತಾರೆ. ಅರ್ಥಾತ್, ಇಂಥ ವ್ಯರ್ಥ ಕಲಾಪಗಳಲ್ಲಿ ತೊಡಗಿಕೊಂಡು ತೆಪ್ಪಗಿರಿ, ಅಂತ.
ಇಂದು ಶ್ರೀಮಂತ ಮನೆತನಗಳ, ಸವರ್ಣೀಯ ಮನೆತನಗಳ, ಉನ್ನತ ವರ್ಗದ ಹುಡುಗಿಯರು ಗಂಡು ಹುಡುಗರಷ್ಟೇ ಸಮರ್ಥವಾಗಿ ಆಧುನಿಕ ಶಿಕ್ಷಣ ಹೊಂದುತ್ತಿದ್ದಾರೆ. ಆದರೆ ಗಂಡಸರ ಧರ್ಮದ ಹೆಸರಿನಲ್ಲಿ ಬ್ರೇನ್ ವಾಶ್ ಬೇಟೆಗೆ ಬಲಿಯಾಗುತ್ತಿದ್ದಾರೆ. ಇವರುಗಳ ಸ್ಥಿತಿ ಪುರಾಣ ಕಾಲದ ಸೀತಾ, ದ್ರೌಪತಿಯರಂತೆಯೇ ಇದೆ. ಅಂದಿನ ಕಾಲದಲ್ಲಿ ಅವರ ಶಕ್ತಿ ಸಾಮರ್ಥ್ಯ, ಶೀಲಗಳ ಕುರಿತು ಪ್ರಶ್ನಿಸಲಾಗಿತ್ತು. ಆದರೆ ಇವರೆಲ್ಲ ಧಾರ್ಮಿಕ ಕಥೆಗಳಲ್ಲಿ ಸ್ಪರ್ಧಾಳುಗಳು, ಅಪಾಯ ಎದುರಿಸುವರು, ವಾಕ್ಪಟುಗಳು, ವಿದ್ಯಾವತಿಯರು. ಇಂದಿನ ಅತ್ಯಾಧುನಿಕ ಸುಶಿಕ್ಷಿತ ಯುವತಿಯರ ಪಾಡು ಇವರಿಗಿಂತ ಭಿನ್ನವಲ್ಲ. ಹೀಗಾಗಿ ಪತಿಯ ಪಾದಗಳ ಬಳಿ ಬಿದ್ದಿರುತ್ತಾರೆ, ಸಮಾನರಾಗಿರುವುದಿಲ್ಲ.
ಆದರೆ ಇದು ಬಡ ಹೆಂಗಸರಿಗೆ ಅನ್ವಯಿಸದು. ವಿದ್ಯಾವಂತರಾಗಿ, ಪರಿಶ್ರಮದಿಂದ ಮೇಲೇರಿದರೂ, ಧರ್ಮದ ಗುಲಾಮಗಿರಿಯಿಂದ ಇವರೂ ಹೊರತಲ್ಲ. ಈ ಸಮಾಜ ಎಂದೂ ಬದಲಾಗದು, ಏಕೆಂದರೆ ಗಂಡಸರು ಧರ್ಮವನ್ನು ತಮ್ಮ ಸ್ವಾರ್ಥಕ್ಕೆ ಬಳಸದೆ ಬಿಡುವವರಲ್ಲ. ಅಸಮಾನತೆಯ ಅತಿ ದೊಡ್ಡ ಆಯುಧವೆಂದರೆ ಧರ್ಮ. ಸವರರ್ಣೀಯ ಹೆಂಗಸರೂ ಸಹ ದಲಿತರು, ಹಿಂದುಳಿದರು, ಬಡವರ ತರಹವೇ ಉಳಿದುಬಿಟ್ಟಿದ್ದಾರೆ, ಧರ್ಮವೇ ಅವರ ದೊಡ್ಡ ಪ್ರಯಾರಿಟಿಯಾಗಿದೆ.
ಮೇಲ್ ಡಾಮಿನೇಶನ್ ವಿಚಾರ ಎಂದಿಗೂ ಮುಗಿಯುವಂಥದ್ದಲ್ಲ
ಉದ್ಯೋಗಸ್ಥ ವನಿತೆಯರ ಸಂಖ್ಯೆ ಕ್ರಮೇಣ ಹೆಚ್ಚತೊಡಗಿದಂತೆ ಭಾರತೀಯ ಸಮಾಜ ಹೊಸ ಸವಾಲುಗಳನ್ನು ಎದುರಿಸುತ್ತಿದೆ. ಇಂದಿಗೂ ನಮ್ಮ ಸಮಾಜದಲ್ಲಿ ಮಗನ ಮದುವೆ ಎಂದ ತಕ್ಷಣ, ಸೊಸೆ ಮನೆಗೆ ಬರುತ್ತಾಳೆ, ಸೇವೆ ಮಾಡುತ್ತಾಳೆ, ಮೊಮ್ಮಕ್ಕಳು ಹುಟ್ಟುತ್ತಲೆ, ವಂಶ ಬೆಳೆಯುತ್ತದೆ….. ಇತ್ಯಾದಿ. ಹೊಸ ಮದುಮಗ, ಹೇಗೂ ಆಧುನಿಕ ಪತ್ನಿ ಸಂಪಾದಿಸುತ್ತಿದ್ದಾಳೆ, ಮನೆಯನ್ನೂ ನಡೆಸುತ್ತಾಳೆ, ಅತ್ತೆಮಾವಂದಿರ ಸೇವೆ ಮಾಡುತ್ತಾಳೆ. ಜೊತೆಗೆ ತನ್ನ ಪಾರ್ಟ್ ನರ್ ಆಗಿ ಎಲ್ಲಾ ಪಾರ್ಟಿಗಳಿಗೂ ಬರುತ್ತಾಳೆ. ಅಲ್ಲಿ ತಡರಾತ್ರಿಯ ಡಿನ್ನರ್, ಡ್ಯಾನ್ಸ್ ಇತ್ಯಾದಿ ಇರುತ್ತದೆ. ಜೀನೀ ಸುಖಪಯಣ ಎಂದೆಲ್ಲ ಸಂಭ್ರಮಿಸುತ್ತಾನೆ.
ಈ ರೀತಿ ಮೇಲ್ ಡಾಮಿನೇಶನ್ ವಿಚಾರಗಳು ಇಂದಿಗೂ ಹಾಗೇ ಉಳಿದಿವೆ. ಅವು ಮುಗಿಯುವಂಥದ್ದಲ್ಲ. ಆದರೆ ಹುಡುಗಿಯರು ಇಂದು ಸುಶಿಕ್ಷಿತರಾಗಿ, ಎಲ್ಲಾ ಕ್ಷೇತ್ರಗಳಲ್ಲೂ ತಾವು ಹುಡುಗರಿಗೆ ಸರಿಸಮ ಎಂದೇ ಭಾವಿಸುತ್ತಿದ್ದಾರೆ. ಈಗಿನ ಪೋಷಕರು ತಮ್ಮ ಹೆಣ್ಣುಮಕ್ಕಳ ಕುರಿತಾಗಿ ತುಸು ಉದಾರನೀತಿ ಅನುಸರಿಸಬಹುದೇನೋ…. ಆದರೆ ಬೇರೆಯವರ ಮಗಳು ತಮ್ಮ ಮನೆಗೆ ಸೊಸೆಯಾಗಿ ಎಂಟ್ರಿ ನೀಡಿದಾಗ ಮಾತ್ರ, ಅವಳು ಅವಿಭಕ್ತ ಕುಟುಂಬಕ್ಕೆ ಸೇರಿರಲಿ, ಯಾವ ಗಂಡನೊಂದಿಗೆ ಬೇರೆ ದೂರದಲ್ಲಿರಲಿ, ಅವಳು ಸಮಾನತೆಯ ಅಹಂ ಬಿಟ್ಟು, 1950ರ ಆದರ್ಶ ಸೊಸೆಯಾಗಿ ಹಾಗೆಯೇ ಇದ್ದುಬಿಡಬೇಕು ಎಂದು ಅನಾದಿ ಕಾಲದ ಅಪೇಕ್ಷೆ ಮುಂದಿಡುತ್ತಾರೆ.
ಇನ್ನು ಈ ಹೆಣ್ಣುಮಕ್ಕಳೋ, ಗಂಡನನ್ನು ಹಬಿ ಎಂದು ಫೋನ್ ನಲ್ಲಿ ಸೇವ್ ಮಾಡಿರಿಸಿಕೊಂಡು, ಆತನನ್ನು ತನ್ನ ನೇರಕ್ಕೆ ಸರಿಸಮಾನವಾಗಿಸಿಕೊಳ್ಳಲು ಧಾವಿಸುವರು. ಹೀಗಾಗಿ ಈ ಕೆಲಸಕ್ಕೆ ಹೋಗುವ ಪತ್ನಿ, ಮನೆಗೆಲಸದಲ್ಲಿ ಪತಿ ಸರಿಸಮನಾಗಿ ಸಹಾಯ ಮಾಡಲಿ ಎಂದು ಬಯಸುತ್ತಾಳೆ. ಅತ್ತೆಮಾವಂದಿರನ್ನು ನೋಡಿಕೊಳ್ಳುವ ಹಾಗೆಯೇ ತನ್ನ ತಾಯಿತಂದೆಯರನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನದೇ ಎನ್ನುತ್ತಾಳೆ.
ಇದೀಗ ಈ ಹೊಸ ಪತಿರಾಯ ಹಿಂದಿನಂತೆ ಪತ್ನಿ ಮೇಲೆ ಕೂಗಾಡಿ, ರೇಗಾಡಿ ಏನೂ ಮಾಡುವ ಹಾಗಿಲ್ಲ. ಹಾಗೆಲ್ಲ ದಬ್ಬಾಳಿಕೆ ನಡೆಸಬಯಸುವವರು ಅವಳನ್ನು ಕಳೆದುಕೊಳ್ಳುತ್ತಾರಷ್ಟೆ. ಹಬಿ ಎಂಥ ಪ್ರೀತಿ ಪಾತ್ರವೇ ಆದರೂ, ಒಂದೇ ಕ್ಷಣದಲ್ಲಿ ಅವನ ಸಂಬಂಧ ಮುರಿದು ಹೊರಗೆ ಹೊರಡಲು ಅವರು ರೆಡಿ! ಅವಳಿಗೆ ಈಗ ತನ್ನ ತವರಿನ ಬಾಗಿಲು ಹೆಚ್ಚು ವಿಶಾಲವಾಗಿ ತೆರೆದಿರುತ್ತದೆ. ಏಕೆಂದರೆ ಹಿಂದಿನಂತೆ ಈಗ ಅವಳು ಸದಾ ಆಶ್ರಿತ ಅಬಲೆಯಲ್ಲ, ಸಂಪಾದಿಸುವವಳು! ಎಷ್ಟೋ ಮನೆಗಳಲ್ಲಿ ಹೀಗೆ ಪತಿಯ ತೊರೆದು ತವರನ್ನು ಅರಸಿ ಬರುವ ಹೆಣ್ಣುಮಕ್ಕಳಿಗೆ ಭವ್ಯ ಸ್ವಾಗತ ಇರುತ್ತದೆ, ಏಕೆಂದರೆ ಒಬ್ಬಳೇ ಮಗಳಾದ್ದರಿಂದ, ಇವರ ಒಂಟಿತನ ನೀಗಿತು, ಮಗಳ ಗಳಿಕೆಯೂ ಕೈ ಸೇರಿತು.
ಅಸಲಿಗೆ ಭಾರತೀಯ ಸಮಾಜದಲ್ಲಿ ಟೆಕ್ಟಾನಿಕ್ ಶಿಫ್ಟ್ ಆಗುತ್ತಿದೆ. ಈ ಕಾರಣದಿಂದಲೇ ಮನೆಗಳಲ್ಲಿ ಆಗಾಗ ಭೂಕಂಪ ಮಾಮೂಲಿ. ಭೂಮಿಯ ಅಂತರಾಳದಲ್ಲೂ ಹೀಗೇ ಆಗಿ, ಲಕ್ಷಾಂತರ ಮೈಲುಗಳ ಕೆಳಗಿನ ಭೂಪದರ ಅದುರಿದರೆ, ಅದು ಮೇಲಿನ ಪದರನ್ನು ಅಲ್ಲಾಡಿಸಿ ಉರುಳಿಸಿಬಿಡುತ್ತದೆ! ಇದನ್ನೇ ಭೂಮಿ ಮೇಲಿನ ಜನ ಭೂಕಂಪ ಅಂತಾರೆ. ಭಾರತೀಯ ಸಮಾಜದಲ್ಲೂ ಹೀಗೇ ಪದರ ಪದರವಾಗಿ ಧರ್ಮ ಕೃತಕ ಹೊದಿಕೆಗಳನ್ನು ಹೊದಿಸಿದೆ. ಅವು ಈಗ ಆಧುನಿಕ ಹೆಣ್ಣಿನ ಶಿಕ್ಷಣ, ಮೊಬಿಲಿಟಿ, ನಾಲೆಜ್ ನ ಹರಿವುಗಳ ಕಾರಣ ಹೆಚ್ಚು ತೀವ್ರವಾಗಿ ಕಂಪನಗೊಳ್ಳುತ್ತಿದೆ. ಹಳೆಯ ಕಾಲದವರು ಈ ಹೊಸ ಪೀಳಿಗೆಯನ್ನು ಬೆಳೆಸಿ ದೊಡ್ಡವರನ್ನಾಗಿ ಏನೋ ಮಾಡಿದರು, ಆದರೆ ಈ ಪದರಗಳನ್ನು ಬೇರ್ಪಡಿಸುವುದು, ಅರ್ಥೈಸಿಕೊಳ್ಳುವುದು ಹೇಗೆ ಎಂಬುದು ಮಾತ್ರ ತಿಳಿಯುತ್ತಿಲ್ಲ.
ಇಂದಿನ ಪತಿಗೆ ತಾನು ಮನೆಗೆ ಪತ್ನಿಯನ್ನಲ್ಲ, ಪಾರ್ಟ್ ನರ್ ನ್ನು ಕರೆತಂದಿದ್ದೇನೆ ಎಂದು ಗೊತ್ತಾಗುತ್ತಿಲ್ಲ. ಅದು ಹೊರೋ, ರೋಬೋಟೋ ಒಂದೂ ತಿಳಿಯುತ್ತಿಲ್ಲ.
ಇಂದು ಮನೆಗೆ ಹೊಸ ಸೊಸೆಯಾಗಿ ಬಂದಳು, ಅವಳು ತನ್ನ ಟ್ರಾಲಿ ಬ್ಯಾಗಿನಲ್ಲಿ ಇಂಡಿಪೆಂಡೆನ್ಸ್, ಕಾನ್ಛಿಡೆನ್ಸ್, ಬೋಲ್ಡ್ ನೆಸ್, ಈಕ್ವಾಲಿಟಿ ಇತ್ಯಾದಿ ತುಂಬಿಸಿಕೊಂಡೇ ಬಂದಿರುತ್ತಾಳೆ. ಇವೆಲ್ಲ ಅವಳಿಗೆ ತನ್ನ ಶಿಕ್ಷಣ, ಕೆಲಸದ ಆತ್ಮವಿಶ್ವಾಸದಿಂದ ಬಂದಿರುತ್ತದೆ. ಮೂಲಭೂತ ಸೌಲಭ್ಯಗಳನ್ನು ತಾನು ಕಾನೂನಿನಿಂದ ಪಡೆದು ಎಚ್ಚೆತ್ತಿದ್ದೇನೆ ಎಂದವಳಿಗೆ ಗೊತ್ತು. ಹಿಂದಿನ ಕಾಲದ ಕಂದಾಚಾರಗಳ ಮೆಟ್ಟಿಲೇರುತ್ತಿಲ್ಲ, ಅಂದಿನ ಸಾಂಪ್ರದಾಯಿಕತೆಗೆ ತಾನು ಬದ್ಧಳಲ್ಲ ಎಂದು ಸಾರುತ್ತಿದ್ದಾಳೆ.
ಇದೀಗ ಕೆಲವು ಹೊಸ ವಿಚಾರಗಳನ್ನು ತಿಳಿದರೆ ಹಿಂದಿನ ಪೀಳಿಗೆಗೆ ಶಾಕ್ ಆಗಬಹುದು. ಇಂದಿನ ಆಧುನಿಕ ಪತ್ನಿ ಎಗ್ಗಿಲ್ಲದೆ ಪತಿಗೆ ಬಾರಿಸಲಿಕ್ಕೂ ಹೇಸುವವಳಲ್ಲ, ಈಗಲೇ ಮಗು ಹೆರಲಾರೆ ಎಂದು ವಿರೋಧಿಸುತ್ತಾಳೆ, ಪತಿಗೆ ತಿಳಿಸದೆ ತಾನೇ ನಿರ್ಧಾರ ಕೈಗೊಳ್ಳುತ್ತಾಳೆ… ಇತ್ಯಾದಿ. ಇದರಲ್ಲಿ ಶಾಕ್ ಆಗುವಂಥ ವಿಚಾರವೇನಿಲ್ಲ. ಇದು ಹಿಂದಿನಂತೆ ಉರಿಯುವ ಹಣತೆಯಲ್ಲ, ಕಣ್ಕುಕ್ಕುವ ಫ್ಲಡ್ ವೈಟ್ಸ್! ಹೀಗಾಗಿ ಇದರಿಂದ ಇಡೀ ಕುಟುಂಬ ಬ್ರೈಟ್, ಹ್ಯಾಪಿ, ಸಾಲಿಡ್ ಗ್ರೌಂಡ್ಸ್ ಮೇಲೆ ನಡೆಯಲಿದೆ. ಈ ಬದಲಾವಣೆ ಹೆದರಿಸಲಿಕ್ಕಲ್ಲ, ಹೊಸ ಬಿತ್ತನೆ ಮಾಡುವ ಮೊದಲು ಭೂಮಿ ಹಸನು ಮಾಡಿಕೊಳ್ಳುವ ವಿಚಾರವಿದು. ಅದರಲ್ಲಿ ಹೊಸ ಬಿತ್ತನೆ ನಡೆದ ನಂತರವೇ, ಉತ್ತಮ ಫಸಲಿನ ಬಗ್ಗೆ ತಿಳಿಯಲು ಸಾಧ್ಯ.
ಇನ್ ಶ್ಯೂರೆನ್ಸ್ ಕಂಪನಿಗಳು ತಮ್ಮ ಮಾತು ಉಳಿಸಿಕೊಳ್ಳಲಿ
ಇನ್ ಶ್ಯೂರೆನ್ಸ್ ಕಂಪನಿಗಳ ಸೇಲ್ಸ್ ಮೆನ್ ಸೇಲ್ಸ್ ಗರ್ಲ್ಸ್ ಮತ್ತೆ ಮತ್ತೆ, ತಮಗೆ ನೀಡಲಾದ ಪಟ್ಟಿಯಲ್ಲಿನ ಹೆಸರುಗಳಿಗೆ ಫೋನಾಯಿಸಿ, ಹೊಸ ಗ್ರಾಹಕರ ಹುಡುಕಾಟದಲ್ಲಿ ಜನತೆಯನ್ನು ಕಾಡುತ್ತಲೇ ಇರುತ್ತಾರೆ. ಇವರ ಅತ್ಯಾಕರ್ಷಕ ಮಾತುಗಳಿಗೆ ಮರುಳಾಗಿ ಜನ ಖರೀದಿಯ ಜಾಲಕ್ಕೆ ಸಿಲುಕುತ್ತಾರೆ. ಅಗ್ರೆಸಿವ್ ಸೆಲ್ಲಿಂಗ್ ನಿಂದ ಬಹಳಷ್ಟು ಜನ ಇಂಥ ಇನ್ ಶ್ಯೂರೆನ್ಸ್ ಮಾಡಿಸಿದ ನಂತರ ಫ್ರೀ ಚೆಕ್ ಅಪ್, ಟ್ರೀಟ್ ಮೆಂಟ್ ಗಳ ಸುಳಿಗೆ ಸಿಲುಕುತ್ತಾರೆ. ನಂತರ ಈ ಕಂಪನಿಗಳು ತಮ್ಮ ಆ್ಯಪ್ಸ್ ನ್ನು ಹೇಗೆ ಬದಲಿಸುತ್ತವೆ, ತಾವೇ ನೀಡಿದ ಸೌಲಭ್ಯ ಹೇಗೆ ಬದಲಾಯಿಸುತ್ತವೆ ಎಂದರೆ, ಗ್ರಾಹಕರು ತಲೆ ಮೇಲೆ ಕೈ ಹೊತ್ತು ಕೂರುತ್ತಾರೆ.
7.3 ಲಕ್ಷ ಕೋಟಿ ರೂ.ಗಳ ಪ್ರೀಮಿಯಂ ಪಡೆಯುವಂಥ ಕಂಪನಿಗಳು ಕ್ಲೇಮ್ ರಿಜೆಕ್ಟ್ ಮಾಡಲು ಇದೀಗ ಪ್ರಸಿದ್ಧಿ ಪಡೆದಿವೆ. ಎಂಎನ್ಸಿಯಂಥ ಕಂಪನಿಗಳು, ಮೆಚ್ಯೂರಿಟಿ ನಂತರ ಹಣ ನೀಡುತ್ತವೆ. ಆದರೆ ಅವು ಈಗ ಕಂಡುಕೊಂಡಿರುವುದೆಂದರೆ, ನಡುವಿನ 3 ವರ್ಷಗಳ ಪ್ರೀಮಿಯಂ ತುಂಬಿಸಿದ ನಂತರ ವಿತ್ ಡ್ರಾ ಮಾಡಿಕೊಳ್ಳುವವರೇ ಹೆಚ್ಚು ಅಂತ. ಇನ್ ಶೂರೆನ್ಸ್ ಕಂಪನಿ ಒಟ್ಟು ಪಾವತಿಯ 36.9% ಮೆಚ್ಯೂರಿಟಿ ನಂತರ ನೀಡುತ್ತಿವೆ. 38.3% ನಡುವಿನಲ್ಲೇ ಈ ಕಂಪನಿಗಳ ನಿಯಮಗಳ ಪ್ರಕಾರ ತೆರುತ್ತಿವೆ.
ಡೆತ್ ನಂತರ ಕ್ಲೇಮ್ ಒಟ್ಟು ಪಾವತಿಯ 8.1% ಮಾತ್ರವೇ ಆಗಿದೆ. ಖಾಸಗಿ ಕಂಪನಿಗಳಲ್ಲಿ ಈ ರೋಗ ಹೆಚ್ಚು. ಏಕೆಂದರೆ ಅವು ಬಹಳ ಅಗ್ರೆಸಿವ್ ಸೆಲ್ಲಿಂಗ್ ಮಾಡುತ್ತವೆ. ಇದನ್ನೇ ಅತ್ಯಾಕರ್ಷಕವಾಗಿ ಪಲುಕು ಸೇಲ್ಸ್ ಮೆನ್, ಎಷ್ಟೋ ಸುಶಿಕ್ಷಿತರನ್ನೂ ಮರಳುಗೊಳಿಸಿ ಬಿಡುತ್ತಾರೆ. ಎಷ್ಟೋ ದಿನಗಳ ನಂತರ ಇದೆಲ್ಲ ಬೋಗಸ್ ಎಂದು ತಿಳಿಯುತ್ತದೆ. ಫೋನಿನಲ್ಲಿ ಇವರು ತಿಳಿಸುವುದೆಲ್ಲ ಪಾಲಿಸಿಯಲ್ಲಿ ಇದೆ ಎಂಬುದೇನೋ ನಿಜ, ಆದರೆ ಎಷ್ಟೋ ಕಂಡೀಶನ್ಸ್ ಒಪ್ಪಿದರೆ ಮಾತ್ರ. ಸೇಲ್ಸ್ ನವರು ಕೇವಲ ಮೇಲಿನ ತಿಳಿಯದ ವಿಚಾರ ಫೋನಿನಲ್ಲಿ ಹೇಳುತ್ತಾರಷ್ಟೆ, ಒಳಗಿನ ಆಂತರ್ಯ ಗೊತ್ತಾಗಲು ತಡವಾಗುತ್ತದೆ.
ಇಂಥ ಕಂಪನಿಗಳಿಗೆ ಫೋನ್ ಮಾಡಿದರೆ, ಪತ್ರ ಬರೆದರೆ ಸಿಗುವ ಜಾಬವಂತೂ ಬಲು ರೊಟೀನಿನದು. ಪಾಲಿಸಿಗಳ ಕಂಡೀಶನ್ಸ್ ವ್ಯಾಮೋಹ ತೋರಿಸಿ, ಗ್ರಾಹಕರ ಬಾಯಿ ಬಡಿಯುತ್ತಾರೆ.
ಹ್ಞಾಂ, ಪ್ರೀಮಿಯಂ ಇನ್ ಸ್ಟಾಲ್ ಮೆಂಟ್ ಸಂದರ್ಭದಲ್ಲಿ ಸಕಾಲಕ್ಕೆ ಪಾವತಿ ಮಾಡದಿದ್ದರೆ, ಸಾವಿರಾರು ಫೋನ್ ಕರೆಗಳು ಗ್ರಾಹಕರನ್ನು ಗೋಳುಗುಟ್ಟಿಸುತ್ತವೆ. ಅದೇ ಪರಿಸ್ಥಿತಿ ಆ್ಯಕ್ಸಿಡೆಂಟ್ ಹೆಲ್ತ್ ಇನ್ ಶ್ಯೂರೆನ್ಸ್ ಗಳದ್ದೂ ಹೌದು.
ಇನ್ ಶ್ಯೂರೆನ್ಸ್ ಎಂಬುದು ಒಂದು ಕೋಆಪರೇಟಿವ್ ಸಿಸ್ಟಂ ಆಗಿದ್ದು, ಇದಕ್ಕೆ ಸಾರ್ವಜನಿಕರು ಪ್ರತಿ ವರ್ಷ ಒಂದಿಷ್ಟು ಹಣ ತೆರುತ್ತಿರುತ್ತಾರೆ. ಆ ಒಟ್ಟು ಮೊತ್ತದಿಂದ, ತ್ರಸ್ತ ವ್ಯಕ್ತಿಗೆ ದೊಡ್ಡ ಮೊತ್ತದ ಹಣ ಸಿಗುತ್ತದೆ. ಇಂಥ ಕಂಪನಿಗಳು ಅಸಲಿಗೆ, ಜನತೆಯ ಸೇವೆಗೋಸ್ಕರ ಎಂದೇ ಮಾಡಲಾಗಿತ್ತು. ಆದರೆ ಇಂದಿನ ಓಡುಯುಗದ ಮಾರುಕಟ್ಟೆಯಲ್ಲಿ, ಇದು ಅಕ್ಷರಶಃ ಲಾಭದ ಧಂಧೆಯಾಗಿದೆ. ಹೀಗಾಗಿಯೇ 1-2 ವರ್ಷಗಳ ನಂತರ ಗ್ರಾಹಕರು ಬೇಸತ್ತು, ತಾವು ಹಣ ಕಟ್ಟುವುದನ್ನು ನಿಲ್ಲಿಸಿ, ರೀಫಂಡ್ ಕೇಳತೊಡಗುತ್ತಾರೆ.
ಈ ಇಂಡಸ್ಟ್ರಿ ಒಂದು ಮಾಡೆಲ್ ಸರ್ವಿಸ್ ಇಂಡಸ್ಟ್ರಿ ಆಗಿದ್ದು, ವಿದ್ಯುತ್/ಟೆಲಿಫೋನ್ ಕಂಪನಿಗಳ ತರಹ ಇವು ಲಾಂಗ್ ಟರ್ಮ್ ಪ್ರಾಫಿಟ್ ಎಕ್ಸ್ ಟ್ರಾ ಆರ್ಡಿನರಿ ಪ್ರಾಫಿಟ್ ಗಳ ದುರಾಸೆ ಬಯಸಬಾರದು. ಸೇಲ್ಸ್ ಟೀಂ ಯಾ ಕ್ಲೇಮ್ ಸೇಲ್ಸ್ ಟೀಂ, ಈ ಕಂಪನಿ ಇರುವುದೇ ಜನತೆಯ ಸೇವೆಗಾಗಿ ಎಂಬ ದೊಡ್ಡ ವಿಚಾರವನ್ನು ತಲೆಯಲ್ಲಿಟ್ಟುಕೊಳ್ಳಬೇಕು.
ಗ್ರಾಹಕರು ಒಂದೆಡೆ ಇಂಥ ಕಂಪನಿಗಳನ್ನು ಅವಲಂಬಿಸಿಯೇ ಇರಬೇಕಾಗುತ್ತದೆ, ಅದೇ ಸಮಯದಲ್ಲಿ ಇವುಗಳ ಮೇಲೆ ಸತತ ಒತ್ತಡ ಹೇರುತ್ತಾ, ಈ ಕಂಪನಿಗಳು ತಮ್ಮ ವಾಗ್ದಾನ ಉಳಿಸಿಕೊಳ್ಳಿ ಎಂಬುದನ್ನು ನೆನಪಿಸುತ್ತಿರಬೇಕು. ಪಾಲಿಸಿಯ ಸ್ಕ್ರಿಪ್ಟ್ ಕಡೆ ಗಮನವಿರಬೇಕೇ ಹೊರತು ಬರಿದೇ ಬೊಗಳೆ ಮಾತುಗಳ ಕಡೆಗಲ್ಲ!





